Hema Malini's Beauty Secrets: ಹೇಮಾ ಮಾಲಿನಿ ಬ್ಯೂಟಿ ಹಿಂದಿರೋ ಕಡ್ಲೆಹಿಟ್ಟು, ನಿಂಬೆಹಣ್ಣಿನ ಸೀಕ್ರೆಟ್​ ಹೇಳಿದ ಪುತ್ರಿ ಇಶಾ!

Published : Apr 23, 2025, 04:37 PM ISTUpdated : Apr 23, 2025, 04:46 PM IST
Hema Malini's Beauty Secrets: ಹೇಮಾ ಮಾಲಿನಿ ಬ್ಯೂಟಿ ಹಿಂದಿರೋ ಕಡ್ಲೆಹಿಟ್ಟು, ನಿಂಬೆಹಣ್ಣಿನ ಸೀಕ್ರೆಟ್​ ಹೇಳಿದ ಪುತ್ರಿ ಇಶಾ!

ಸಾರಾಂಶ

76ರ ಹರೆಯದಲ್ಲೂ ಯಂಗ್​ ಆ್ಯಂಡ್​ ಎನರ್ಜೆಟಿಕ್​ ಆಗಿರುವ ನಟಿ, ಸಂಸದೆ ಹೇಮಾಮಾಲಿನಿ ಇಂದಿಗೂ ಡ್ರೀಮ್​ಗರ್ಲ್​ ಆಗಿದ್ದಾರೆ. ನಟನೆ, ನೃತ್ಯ, ನಿರ್ದೇಶನ, ನಿರ್ಮಾಣದ ಜೊತೆಗೆ ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ. ಚರ್ಮದ ಆರೈಕೆಗೆ ಕಡಲೆಹಿಟ್ಟು, ಗ್ಲಿಸರಿನ್ ಮತ್ತು ನಿಂಬೆ ಬಳಸುತ್ತಾರೆ. 1963ರಲ್ಲಿ ಚಿತ್ರರಂಗ ಪ್ರವೇಶಿಸಿ, ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

ನಟಿ, ಸಂಸದೆ ಡ್ರೀಮ್​ಗರ್ಲ್​ ಖ್ಯಾತಿಯ ಹೇಮಾ ಮಾಲಿನಿ ಅವರಿಗೆ ಈಗ 76 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಅವರು ಯಂಗ್​ ಆ್ಯಂಡ್​ ಎನರ್ಜೆಟಿಕ್​ ಆಗಿದ್ದಾರೆ. ಕಳೆದ ವರ್ಷವಷ್ಟೇ ಭರತನಾಟ್ಯ ಕಾರ್ಯಕ್ರಮ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ವಯಸ್ಸೆನ್ನುವುದು ಒಂದು ಲೆಕ್ಕವಷ್ಟೇ ಎನ್ನುವ ಮಾತಿದ್ದರೂ ಅದನ್ನು ಸಾಧಿಸಿ ತೋರಿಸುವವರು ಬೆರಳೆಣಿಕೆಯಷ್ಟು ಮಂದಿ. ಕೆಲವೇ ಕೆಲವು ಜನರು ಮಾತ್ರ ವಯಸ್ಸನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಅವಿತರವಾಗಿ ದುಡಿಯುತ್ತಾರೆ. ಅವರ ದಿನನಿತ್ಯ ಕಾರ್ಯವೈಖರಿ, ದಿನಚರಿ ನೋಡಿದರೆ ಉಳಿದವರು ಹುಬ್ಬೇರಿಸಬೇಕಷ್ಟೇ. ನಿಜವಾಗಿಯೂ ಇವರಿಗೆ ವಯಸ್ಸಾಗಿದ್ದು ಹೌದಾ ಎನ್ನುವ ಹಾಗೆ ಅಚ್ಚರಿ ಪಡುವಷ್ಟು ರೀತಿಯಲ್ಲಿ ನಡೆದುಕೊಳ್ಳುವ ಕೆಲವೇ ಕೆಲವು ಜನರಿದ್ದಾರೆ. ಅದರಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಸೆಲೆಬ್ರಿಟಿಗಳನ್ನು ನೋಡಿದಾಗ ಯುವಕ-ಯುವತಿಯರೂ ನಾಚಿಕೊಳ್ಳಬೇಕು, ಹಾಗಿರುತ್ತದೆ ಅವರ ಕಾರ್ಯ ಚಟುವಟಿಕೆ. ಅಂಥ ಅಪರೂಪದ ಕಲಾವಿದರಲ್ಲಿ ಒಬ್ಬರು  ಹೇಮಾ ಮಾಲಿನಿ.

ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದ ವೇಳೆಯಿಂದಲೂ ಬಿ-ಟೌನ್​ ಆಳಿ, ಕನಸಿನ ಕನ್ಯೆ (Dream Girl) ಎಂದೇ ಬಿರುದು ಪಡೆದಿರುವ, ಇಂದಿಗೂ ಅದೇ ಬಿರುದನ್ನು ಉಳಿಸಿಕೊಂಡಿರುವ ನಟಿ ಹೇಮಾ ಮಾಲಿನಿ.  ವಯಸ್ಸು ದೇಹಕ್ಕೆ ಮಾತ್ರ ಎನ್ನುವ ಮಾತಿಗೆ ಅನ್ವರ್ಥರಾಗಿರುವವರಲ್ಲಿ 1948ರ ಅಕ್ಟೋಬರ್‌ 16ರಂದು ಜನಿಸಿರುವ ಹೇಮಾ ಮಾಲಿನಿ ಕೂಡ ಒಬ್ಬರು. ಈ ವಯಸ್ಸಿನಲ್ಲಿಯೂ ಅವರು ಅದ್ಭುತವಾಗಿ ಶಾಸ್ತ್ರೀಯ ನೃತ್ಯ ಮಾಡಬಲ್ಲರು. ಬಣ್ಣ ಹಚ್ಚಿ ವೇದಿಕೆಯ ಮೇಲಿಳಿದರೆ ಇವರಿಗೆ ನಿಜಕ್ಕೂ ಇಷ್ಟು ವಯಸ್ಸಾಗಿದ್ದು ಹೌದಾ ಎನ್ನುವಂಥ ಸೌಂದರ್ಯ.  ಹೇಮಾ ಮಾಲಿನಿ ಅವರು ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ರಾಜಕಾರಣಿಯೂ ಹೌದು. 2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬಿಜೆಪಿ ಆಡಳಿತದಲ್ಲಿ ಲೋಕಸಭೆ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2011ರಿಂದ 2012ರವರೆಗೆ ಕರ್ನಾಟಕ ರಾಜ್ಯಸಭೆಯ ಸದಸ್ಯೆಯಾಗಿದ್ದರು.

ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್​ ಪ್ಯಾಕ್​, ಬಾಡಿ ಮಸಾಜ್​! ನಟಿ ತಿಳಿಸಿರೋ ಟಿಪ್ಸ್​ ಕೇಳಿ

ಇವರ ಬ್ಯೂಟಿಯ ಹಿಂದಿರುವ ರಸಹ್ಯವನ್ನು ತೆರೆದಿಟ್ಟಿದ್ದಾರೆ ಬಾಲಿವುಡ್​​ ನಟಿ, ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್​. ಅಮ್ಮ ಮೊದಲಿನಿಂದಲೂ ಕಡಲೆಹಿಟ್ಟು ಹಚ್ಚುತ್ತಿದ್ದರು. ನಮಗೂ ಹಚ್ಚುತ್ತಿದ್ದರು. ಅದ್ಯಾಕೆ ಎನ್ನುವುದು ಗೊತ್ತಿಲ್ಲ. ಇದರ ಜೊತೆಗೆ ಸದಾ ಅವರ ಬಳಿ ಗ್ಲಿಸರಿನ್ ಮತ್ತು ಲಿಂಬೆ ಹಣ್ಣು ಇರುತ್ತಿತ್ತು. ಇದು ಯಾಕೆ ಎಂದು ಕೇಳಿದಾಗ, ಟ್ಯಾನ್​ ಆಗದಂತೆ ಇದು ತಡೆಯುತ್ತದೆ ಎನ್ನುತ್ತಿದ್ದರು. ಸದಾ ಅವರು ಅದನ್ನು ಲೇಪಿಸಿಕೊಳ್ಳುತ್ತಿದ್ದರು. ಶೂಟಿಂಗ್​  ಸಮಯದಲ್ಲಿ ಭಾರಿ ಭಾರಿ ಲೈಟಿಂಗ್​ ಎದುರಿಸಬೇಕಾಗುವ ಕಾರಣ, ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಅದನ್ನು ತಡೆಯುವಲ್ಲಿ ಗ್ಲಿಸರಿನ್​ ಮತ್ತು ಲಿಂಬೆ ಹಣ್ಣಿನ ಲೇಪನ ಸಹಾಯ ಮಾಡುತ್ತದೆ ಎಂದು ಅಮ್ಮ ಹೇಳುತ್ತಿದ್ದರು ಎನ್ನುತ್ತಲೇ ಇದರ ಬಗ್ಗೆ ಸಂದರ್ಶನವೊಂದರಲ್ಲಿ  ಮಾಹಿತಿ ನೀಡಿದ್ದಾರೆ ಇಶಾ. 

ಇನ್ನು ಹೇಮಾ ಮಾಲಿನಿಯವರ ಸಿನಿ ಕರಿಯರ್​ ಕುರಿತು ಹೇಳುವುದಾದರೆ,  1963ರಲ್ಲಿ ತಮಿಳು ಚಿತ್ರ ಇಧು ಸತ್ಯಂ ಮೂಲಕ ಇವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 1968ರಲ್ಲಿ ಬಿಡುಗಡೆಗೊಂಡ ಸಪ್ನೋ ಕಾ ಸೌದಾಗರ್ ಚಿತ್ರದಿಂದ ಬಾಲಿವುಡ್​ನಲ್ಲಿ ಕಾಣಿಸಿಕೊಂಡರು.  ಧರ್ಮೇಂದ್ರ ಅವರ ಜೊತೆ 1980ರಲ್ಲಿ ವಿವಾಹವಾಯಿತು. ಇವರಿಗೆ  ಹಲವು ಫಿಲ್ಮ್‌ಫೇರ್‌ ಪ್ರಶಸ್ತಿಗಳು ದೊರಕಿವೆ. 2000ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ.  

ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್​ ಹೇಗೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್