ಅಪ್ಪ ಮದ್ವೆಗೆ ಒಪ್ಪಲಿಲ್ಲ- ಟೆರೇಸ್​ ಮೇಲೆ ಹಾರಿ ತಾಳಿ ಕಟ್ಟಿಸ್ಕೊಂಡೆ: ಕಾಜೋಲ್​ ಮದ್ವೆ ಸೀಕ್ರೇಟ್​ ಕೇಳಿ...

Published : Apr 22, 2025, 09:53 PM ISTUpdated : Apr 23, 2025, 10:38 AM IST
ಅಪ್ಪ ಮದ್ವೆಗೆ ಒಪ್ಪಲಿಲ್ಲ- ಟೆರೇಸ್​ ಮೇಲೆ ಹಾರಿ ತಾಳಿ ಕಟ್ಟಿಸ್ಕೊಂಡೆ: ಕಾಜೋಲ್​ ಮದ್ವೆ ಸೀಕ್ರೇಟ್​ ಕೇಳಿ...

ಸಾರಾಂಶ

26 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿರುವ ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಮದುವೆಯ ಕುತೂಹಲಕಾರಿ ಘಟನೆ ಹಂಚಿಕೊಂಡಿದ್ದಾರೆ. ತಂದೆಯ ವಿರೋಧದ ನಡುವೆಯೂ, ತಾಯಿ ತನುಜಾ ಬೆಂಬಲದೊಂದಿಗೆ ಅಜಯ್ ಮನೆಯ ಟೆರೇಸ್ ಮೇಲೆ ಮದುವೆಯಾದರು. ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಈ ಯೋಜನೆ ರೂಪಿಸಲಾಗಿತ್ತು. ಕಾಜೋಲ್ ತಂದೆ ಚಿಕ್ಕ ವಯಸ್ಸಿನ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ಸಿನಿ ತಾರೆಯರು  ಬಹುಕಾಲ ಒಟ್ಟಿಗೇ ಇರುವುದು ಅಪರೂಪದ ಎಂದೇ ಹೇಳಬೇಕು. ಈ ಬಣ್ಣದ ಲೋಕದಲ್ಲಿ ಅಕ್ರಮ ಸಂಬಂಧ, ಒಂದಕ್ಕಿಂತ ಹೆಚ್ಚು ಮದುವೆ, ವಿಚ್ಛೇದನ ನೀಡದೇ ಮದುವೆಯಾಗುವುದು, ದೀರ್ಘ ಕಾಲ ಲಿವ್​ ಇನ್​ ಸಂಬಂಧದಲ್ಲಿ ಇದ್ದು ಕೈಕೊಡುವುದು, ಮಗಳ ವಯಸ್ಸಿನವಳ ಜೊತೆ ಮದುವೆಯಾಗುವುದು, ಇನ್ನೊಬ್ಬಳು ನಟಿ ಸಿಕ್ಕಳೆಂದು ಪತ್ನಿಯನ್ನು ಬಿಡುವುದು ಇವೆಲ್ಲವೂ ಮಾಮೂಲು. ಆದರೆ ಕೆಲವೇ ಕೆಲವು ತಾರಾ ಜೋಡಿಗಳು ಮಾತ್ರ ಆದರ್ಶವಾಗಿವೆ. ಮದುವೆಯಾಗಿ ಹತ್ತಾರು ವರ್ಷಗಳಾದರೂ ಸುಖದಿಂದ ಬಾಳುತ್ತಿರುವ ಜೋಡಿಗಳ ನಿದರ್ಶನ ಅಪರೂಪ. ಅಂಥ ತಾರಾ ಜೋಡಿಯಲ್ಲೊಂದು ಅಜಯ್​ ದೇವಗನ್​ ಮತ್ತು ಕಾಜೋಲ್​ ಜೋಡಿ. 1999ರ ಫೆಬ್ರುವರಿ 24ರಂದು ಮದುವೆಯಾಗಿರುವ ಈ ಜೋಡಿ   ಮದುವೆಯಾಗಿ 26 ವರ್ಷಗಳಾಗಿವೆ.  

ಇದೀಗ ಕಾಜೋಲ್​ ಅವರು ತಮ್ಮ ಮದುವೆಯ ಇಂಟರೆಸ್ಟಿಂಗ್​ ವಿಷಯವೊಂದನ್ನು ರಿವೀಲ್​ ಮಾಡಿರುವ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.  ಕಾಜೋಲ್​ (Kajol) ಮತ್ತು ಅಜಯ್​ ದೇವಗನ್​ (Ajay Devagan) ಅವರ ಮದುವೆಯ ಹಿಂದೆ ದೊಡ್ಡ ಕಥೆಯೇ ಇದೆ. ಇದು ಹೇಳಿಕೊಳ್ಳುವಷ್ಟು ಸುಲಭವಾಗಿರಲಿಲ್ಲ. ಕಾಜೋಲ್​ ತಮ್ಮ ತಂದೆಯ ವಿರುದ್ಧ ಕಟ್ಟಿಕೊಂಡು ಈ ಮದುವೆಯಾಗಿದ್ದಾರೆ.  ಹುಲ್​ಚಲ್ (Hulchal) ಚಿತ್ರದ ವೇಳೆ ಇಬ್ಬರ ಮನದಲ್ಲೂ ಹಲ್​ಚಲ್​ (ಕೋಲಾಹಲ) ಉಂಟಾಗಿ ಪ್ರೀತಿ ಅರಳಿತ್ತು. ಇದರ ನಂತರ, ಅಜಯ್ ಮತ್ತು ಕಾಜೋಲ್ ಅನೇಕ ಚಿತ್ರಗಳಲ್ಲಿ ರೋಮಾಂಟಿಕ್​ ಪಾತ್ರಗಳನ್ನು ನಿರ್ವಹಿಸಿದರು. ಅದಾದ ಮೇಲೆ ಇವರ ಮದುವೆಯಾಗಿದ್ದು. ಆದರೆ ಸಿನಿ ರಂಗದಲ್ಲಿ ಮಾಮೂಲು ಎನ್ನುವಂತೆ ಅಜಯ್​ ದೇವಗನ್​ ಅವರ ಸುತ್ತಲೂ ಕೆಲ ನಟಿಯರ ಹೆಸರು ಸುತ್ತುತ್ತಿತ್ತು. ಅವರು, ಕಾಜೋಲ್​ರನ್ನು ಭೇಟಿಯಾಗುವ ಮೊದಲು  ರವೀನಾ ಟಂಡನ್, ಕರಿಷ್ಮಾ ಕಪೂರ್ ಮತ್ತು ಟಬು ಅವರೊಂದಿಗೆ ಅಜಯ್​ ಸಂಬಂಧ ಹೊಂದಿದ್ದರು ಎಂದೇ ಸುದ್ದಿಯಾಗಿತ್ತು. ಆದರೆ ಕೊನೆಗೆ ಅಜಯ್​ ಅವರು ಕಾಜೋಲ್​ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದರು.

ಟೆರರಿಸ್ಟ್​ ಎಂದು ಬಂಧಿಸಿದ್ರು, ರೇ* ಮಾಡಿದ್ರು, ವಾಂತಿ ಮಾಡಿಕೊಂಡೆ: ಘನಘೋರ ಘಟನೆ ತೆರೆದಿಟ್ಟ ನಟಿ ದಿಯಾ

ಅಜಯ್ ಮತ್ತು ಕಾಜೋಲ್ ಉತ್ತಮ ಸ್ನೇಹಿತರಾಗಿದ್ದರು, DDLJ ನಟಿ ಆಗಾಗ್ಗೆ ಅಜಯ್ ದೇವಗನ್ ಅವರ ಪ್ರೀತಿಯ ಜೀವನದ ಬಗ್ಗೆ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇವರ ಈ ಸಲುಗೆ ಮುಂದೊಂದು ದಿನ ಪ್ರೀತಿಯಲ್ಲಿ ಬದಲಾಗಿ, ಮದುವೆಯಾಗುವ ಮಟ್ಟಿಗೂ ಹೋಗುತ್ತದೆ ಎಂದು ಅಂದುಕೊಂಡಿರಲಿಲ್ಲವಂತೆ. ಈ ಬಗ್ಗೆ ಅವರೇ ಖುದ್ದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕಾಜೋಲ್​ ತಂದೆಗೆ ಈ ಮದುವೆ ಇಷ್ಟವಿಲ್ಲದೇ ಇರಲು ಕಾರಣ ಏನೆಂದರೆ, ಕಾಜೋಲ್​ ಅದಾಗಲೇ 24 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳ ಮದುವೆ ಬೇಡ ಎನ್ನುವುದು ಅಪ್ಪನ ಸಲಹೆ. ಅದರಲ್ಲಿಯೂ ತಾವು ಅಜಯ್​ ದೇವಗನ್​ ಅವರನ್ನು ಮದುವೆಯಾಗುವ ವಿಷಯ ಪ್ರಸ್ತಾಪಿಸಿದಾಗ ಬೇಡವೇ ಬೇಡ ಎಂದರಂತೆ. ಆಗ ಅಜಯ್​ ಅವರಿಗೆ 29 ವರ್ಷ ವಯಸ್ಸು. ಇಬ್ಬರ ನಡುವೆ ಐದು ವರ್ಷ ಅಂತರವಷ್ಟೇ. ಆದರೆ ಈ ಮದುವೆಗೆ ತಂದೆ ಅದ್ಯಾಕೋ ಇಷ್ಟಪಟ್ಟಿರಲಿಲ್ಲ. 

ಅದಕ್ಕಾಗಿಯೇ ಕಾಜೋಲ್​ ಮತ್ತು ಅಜೆಯ್​ ದೇವಗನ್​ ಅಜೆಯ್​ ಮನೆಯ ಮೇಲಿನ ಟೆರೇಸ್​ ಹೋಗಿ ಮದ್ವೆಯಾಗಿದ್ದರು. ವಿಶೇಷವಾಗಿ ಮಾಧ್ಯಮಗಳ ಕಣ್ಣಿನಿಂದ ತಪ್ಪಿಸಿಕೊಳ್ಳೋದು ಇವರ ಉದ್ದೇಶವಾಗಿತ್ತು. ತಮ್ಮ ಮದುವೆಯ ಜಾಗವನ್ನು ಬೇರೆ ಕಡೆ ಹೇಳಿದ್ದ ಜೋಡಿ, ಮದ್ವೆಯಾದದ್ದು ಟೆರೇಸ್​ ಮೇಲೆ. ಕೊನೆಗೆ,  ಕಾಜೋಲ್ ಅವರ ಪರ ವಹಿಸಿಕೊಂಡು ಬಂದದ್ದು ತಾಯಿ ತನುಜಾ. ಅವರು ಮಗಳ ಇಷ್ಟದಂತೆ ಮದುವೆಯಾಗು ಎಂದು ಗ್ರೀನ್​ ಸಿಗ್ನಲ್​ (Green Signal) ಕೊಟ್ಟರು. ಆದರೆ ಭಾವಿ ಅಳಿಯನಿಗೆ ದೀರ್ಘ ಕಾಲ ಈ ಭಾವಿ ಅತ್ತೆ ಪಾಠವನ್ನೂ ಮಾಡಿದರಂತೆ! ಜೋಲ್ ಮತ್ತು ಅಜಯ್ ದೇವಗನ್ 24 ಫೆಬ್ರವರಿ 1999 ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಮದುವೆಯಾದ ಮೇಲೆ ಕಾಜೋಲ್​ ಅವರ ತಾಯಿಯನ್ನು  ಅಜಯ್ ಅತ್ತೆ ಎಂದು ಕರೆಯುತ್ತಿರಲಿಲ್ಲವಂತೆ. ಕೊನೆಗೆ ತನುಜಾ ಅವರೇ ಸಿಟ್ಟಿನಿಂದ ಜೋರು ಮಾಡಿ ಅತ್ತೆ ಎಂದು ಹೇಳುವಂತೆ ಹೇಳಿಸಿರುವುದಾಗಿ ಕಾಜೋಲ್​ ಹೇಳಿದ್ದಾರೆ. 
 

Reality Check: ಗುಟ್ಟಾಗಿ ಮದ್ವೆಯಾಗಿ ದುಬೈಗೆ ಹಾರಿದ ಹಾರ್ದಿಕ್​ ಪಾಂಡ್ಯ- ರಶ್ಮಿಕಾ ಮಂದಣ್ಣ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್