ಬಾಲಿವುಡ್ ನಟಿ ಐಶ್ವರ್ಯ ರೈಯನ್ನು ಈ ಹಿಂದೆ ಪ್ಲಾಸ್ಟಿಕ್ ಅಂತನೂ ಕರೆಯಲಾಗಿತ್ತು! ಹೀಗೆ ಅಂದೋರು ಯಾರು ಗೊತ್ತಾ?
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ನಟಿ ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರನ್ನು ಟೀಕೆ ಮಾಡಿರುವುದು ಸದ್ಯ ಭಾರಿ ವಿವಾದ ಸೃಷ್ಟಿಸಿದೆ. ತಮ್ಮ ಭಾರತ್ ನ್ಯಾಯ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಐಶ್ವರ್ಯ ಅವರನ್ನು ನಾಚ್ ನೇ ವಾಲಿ ಎನ್ನುವ ಮೂಲಕ ರಾಹುಲ್ ಗಾಂಧಿ ಕೆಟ್ಟಿ ಪದ ಪ್ರಯೋಗ ಮಾಡಿರುವುದಾಗಿ ಹಲವಾರು ಮಂದಿ ಇವರ ಮೇಲೆ ಮುಗಿಬಿದ್ದಿದ್ದಾರೆ. ಅಯೋಧ್ಯೆಯ ರಾಮ ಮಂದಿರದ ಹಿನ್ನೆಲೆಯಲ್ಲಿ ಪ್ರಧಾನಿಯವರನ್ನು ಟೀಕಿಸುವ ಭರದಲ್ಲಿ ಐಶ್ವರ್ಯ ರೈ ಮತ್ತು ಅಮಿತಾಭ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿರುವ ಆರೋಪ ರಾಹುಲ್ ಅವರ ಮೇಲಿದೆ. ತಮ್ಮ ಪೂರ್ವಪರಗಳನ್ನು ತಿಳಿದುಕೊಳ್ಳದೇ, ಅಯೋಧ್ಯೆಗೆ ಐಶ್ವರ್ಯ ರೈ ಅವರು ಹೋಗದೇ ಇರುವ ವಿಷಯವನ್ನೂ ತಿಳಿದುಕೊಳ್ಳದೇ ನಾಚ್ ನೇ ವಾಲಿ ಎನ್ನುವ ಪದಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಟಿ ಐಶ್ವರ್ಯ ರೈ ಅವರಿಗೆ ಈ ಹಿಂದೆಯೂ ಒಬ್ಬರು ಪ್ಲಾಸ್ಟಿಕ್ ಎನ್ನುವ ಪದ ಬಳಕೆ ಮಾಡಿ ವಿವಾದ ಸೃಷ್ಟಿಸಿರುವುದು ಮತ್ತೆ ಮುನ್ನೆಲೆಗೆ ಬಂದಿದೆ.
ಅಷ್ಟಕ್ಕೂ ಐಶ್ವರ್ಯ ರೈ ಅವರನ್ನು ಪ್ಲಾಸ್ಟಿಕ್ ಎಂದು ಕರೆದದ್ದು ಬೇರಾರೂ ಅಲ್ಲ, ಕಿಸ್ಸಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟ ಇಮ್ರಾನ್ ಹಶ್ಮಿ. ಇಮ್ರಾನ್ ಸುಮಾರು 20 ವರ್ಷಗಳ ಕಾಲ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಚಲನಚಿತ್ರಗಳಿಗಿಂತ ಹೆಚ್ಚಾಗಿ ಕಿಸ್ಸಿಂಗ್ ದೃಶ್ಯಗಳಿಗೆ ಫೇಮಸ್. ಬಹಳ ದಿನಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಇಮ್ರಾನ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ಸೆಲ್ಫಿ ಚಿತ್ರದ ಮೂಲಕ ಮತ್ತೆ ಬಂದರು. ಇದಲ್ಲದೆ, ಅವರು ಸಲ್ಮಾನ್ ಖಾನ್ (Salman Khan) ಜೊತೆ ಟೈಗರ್ 3 ಚಿತ್ರದಲ್ಲೂ ಕಾಣಿಸಿಕೊಂಡರು. ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಐಶ್ವರ್ಯ ರೈ ಅವರನ್ನು ಪ್ಲಾಸ್ಟಿಕ್ ಎಂದು ಕರೆಯುವ ಮೂಲಕ ಭಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್ನಲ್ಲಿ! ರಾಜಕಾರಣಿ ವಿರುದ್ಧ ನಟಿ ತ್ರಿಷಾ ಕೇಸ್- ನೆಟ್ಟಿಗರಿಗೂ ಎಚ್ಚರಿಕೆ
ಬಹು ವಿವಾದಿತ ರಿಯಾಲಿಟಿ ಷೋ ಎಂದೇ ಫೇಮಸ್ ಆಗಿರೋ ಕಾಫಿ ವಿತ್ ಕರಣ್ ಷೋದಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಈ ರಿಯಾಲಿಟಿ ಷೋನ ರ್ಯಾಪಿಕ್ ಫೈರ್ ಸುತ್ತಿನಲ್ಲಿ, ಈ ಮಾತನ್ನು ಹೇಳಿದ್ದರು. 2014 ರಲ್ಲಿ ನಡೆದ ಘಟನೆ ಇದು. ಕಾಫಿ ವಿತ್ ಕರಣ್‌ಗೆ ಬಂದಿದ್ದ ಇಮ್ರಾನ್ ಅವರಿಗೆ ಕರಣ್ ಅವರು, ಕೆಲವು ನಿರ್ದಿಷ್ಟ ಪದಗಳನ್ನು ಕೇಳಿದಾಗ ಅವರ ಮನಸ್ಸಿಗೆ ಬರುವ ನಟ, ನಟಿಯನ್ನು ಹೆಸರಿಸಲು ಇಮ್ರಾನ್ ಅವರನ್ನು ಕೇಳಿದ್ದರು. ಕರಣ್ ‘ಪ್ಲಾಸ್ಟಿಕ್’ ಎಂದು ಹೇಳಿದಾಗ ಇಮ್ರಾನ್ ಹಶ್ಮಿ ಐಶ್ವರ್ಯ ರೈ ಎಂದು ಹಿಂದೆ ಮುಂದೆ ಯೋಚಿಸದೇ ಹೇಳಿದರು. ಇದು ಭಾರಿ ವಿವಾದಕ್ಕೆ ಗುರಿಯಾಗಿತ್ತು. ಇದೀಗ ರಾಹುಲ್ ಗಾಂಧಿಯವರು ಐಶ್ವರ್ಯ ಬಗ್ಗೆ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಇನ್ನು ಇಮ್ರಾನ್ ಹಶ್ಮಿ ಕುರಿತು ಹೇಳುವುದಾದರೆ, ‘ಮರ್ಡರ್’, ‘ಝೆಹರ್’, ‘ಅಕ್ಸರ್’ ಮುಂತಾದ ಚಿತ್ರಗಳಲ್ಲಿ ನಟ ಇಮ್ರಾನ್ ಹಶ್ಮಿ ಅವರದ್ದು ರೊಮಾನ್ಸ್ (Romance)ಪಾತ್ರವಾಗಿತ್ತು. ನಾಯಕಿಯರ ಜೊತೆ ನಟನ ಪ್ರಣಯ ದೃಶ್ಯಗಳು ಬಹಳ ಜನಪ್ರಿಯವಾದವು. ಜೊತೆಗೆ ಅವರಿಗೆ ಸೀರಿಯಲ್ ಕಿಸ್ಸರ್ ಎಂದು ಫ್ಯಾನ್ಸ್ ಪ್ರೀತಿಯಿಂದಲೂ ಕರೆದರು. ಅದರಲ್ಲಿಯೂ ಹೆಚ್ಚಾಗಿ ಇಮ್ರಾನ್ ಹಶ್ಮಿ ಮತ್ತು ಉದಿತಾ ಗೋಸ್ವಾಮಿ ಕೆಮೆಸ್ಟ್ರಿಯನ್ನು ಫ್ಯಾನ್ಸ್ ತುಂಬಾ ಮೆಚ್ಚಿಕೊಂಡರು. ಇವರಿಬ್ಬರ ರೊಮಾನ್ಸ್‌ಗೆ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಿದ್ದರು. ಬೋಲ್ಡ್ ದೃಶ್ಯಗಳಲ್ಲಿ ಸೈ ಎನಿಸಿಕೊಂಡ ಮೇಲೆ ಕೇಳಬೇಕೆ? ನಟಿ ಉದಿತಾ ಕೂಡ ಇಮ್ರಾನ್ ಹಶ್ಮಿ ಜೊತೆ ಸ್ವಲ್ಪ ಹೆಚ್ಚಿಗೇನೇ ಬೋಲ್ಡ್ ಆಗಿ ರೊಮಾನ್ಸ್ ದೃಶ್ಯಗಳನ್ನು ಮಾಡಿದರು. ಅದರಲ್ಲಿಯೂ ಹೆಚ್ಚಾಗಿ 'ಜೆಹರ್' (Jehar) ಚಿತ್ರದಲ್ಲಿ ಇವರ ರೊಮಾನ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಇವರ ಪ್ರಣಯ ದೃಶ್ಯಗಳು ಬಹಳ ಜನಪ್ರಿಯವಾಯಿತು. ಆದರೆ ಕುತೂಹಲದ ಸಂಗತಿ ಎಂದರೆ ಅತಿ ಹೆಚ್ಚು ಬೋಲ್ಡ್ ಆಗಿ ನಟಿಸಿರುವ ನಟಿ ಉದಿತಾ ಗೋಸ್ವಾಮಿ ಈಗ ಇಮ್ರಾನ್ ಹಶ್ಮಿ ಅವರ ಅತ್ತಿಗೆ.
ಶಾರುಖ್ಗೆ ಕರಣ್ ಜೋಹರ್, ಪ್ರಿಯಾಂಕಾ ಜೊತೆ ಸಂಬಂಧವಿತ್ತಾ? ನಿರ್ಮಾಪಕ ವಿವೇಕ್ ವಾಸ್ವಾನಿ ಹೇಳಿದ್ದೇನು?
ಇಮ್ರಾನ್ ಹಶ್ಮಿ 2003ರಲ್ಲಿ ಕ್ರೈಮ್ ಥ್ರಿಲ್ಲರ್ ಚಲನಚಿತ್ರ ಫುಟ್‌ಪಾತ್‌ನೊಂದಿಗೆ ಪದಾರ್ಪಣೆ ಮಾಡಿದರು. ಬಳಿಕ ಅವರು ಮರ್ಡರ್ (2004), ಕಲಿಯುಗ್ (2005), ಗ್ಯಾಂಗ್‌ಸ್ಟರ್ (2006) ಸೇರಿದಂತೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಅವರ ಪಾನ್ (2007) ಎಂಬ ಆಕ್ಷನ್ ಚಲನಚಿತ್ರ ಮೂಲಕ ಭಾರಿ ಪ್ರಸಿದ್ಧಿ ಗಳಿಸಿದರು. ಇಮ್ರಾನ್ ಹಶ್ಮಿ ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿ ನಾಮನಿರ್ದೇಶನ ಕೂಡ ಪಡೆದಿದ್ದಾರೆ. ಇವರು ಹೆಚ್ಚಾಗಿ ಕಿಸ್ಸಿಂಗ್ ಸೀನ್‌ಗಳಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇವರನ್ನು ಸೀರಿಯಲ್ ಕಿಸ್ಸರ್' ಎಂದೇ ಹೇಳಲಾಗುತ್ತದೆ.