ಶಾರುಖ್ ಮುಂದಿನ ಸಿನಿಮಾದ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ

Published : Feb 27, 2023, 11:38 AM IST
ಶಾರುಖ್ ಮುಂದಿನ ಸಿನಿಮಾದ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ

ಸಾರಾಂಶ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮುಂದಿನ ಸಿನಿಮಾದ ಬಗ್ಗೆ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. 

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪಠಾಣ್ ಸಿನಿಮಾದ ಸಕ್ಸಸ್ ನಲ್ಲಿರುವ ಸಾರುಖ್ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಿಂಗ್ ಖಾನ್ ಸದ್ಯ ಡಂಕಿ ಮತ್ತು ಜವಾನ್ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಠಾಣ್ ರಿಲೀಸ್ ಆಗಿ ಸಕ್ಸಸ್ ಆಗುತ್ತಿದ್ದಂತೆ ಶಾರುಖ್ ಮುಂದಿನ ಸಿನಿಮಾದ ಕಡೆ ಗಮನ ಹರಿಸಿದ್ದಾರೆ. ಶಾರುಖ್ ಖಾನ್ ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಜೊತೆ ಡಂಕಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. 

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾ ಮತ್ತು ಶಾರುಖ್ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ಸ್ಕ್ರಿಪ್ಟ್‌ಗೆ ಅನುಗುಣವಾಗಿ ನಟಿಸುತ್ತಾರೆ ಎಂದು ಹೇಳಿದ್ದಾರೆ.  'ನಾನು ಮತ್ತು ಶಾರುಖ್ ಇಬ್ಬರೂ ಸಂಜು ಸಿನಿಮಾದ ಸಮಯದಲ್ಲಿ (2018) ಮಾತನಾಡಿದ್ದೆವು. ಆಗ ಶಾರುಖ್ ಹೇಳಿದ್ರು ನಮ್ಮಿಬ್ಬರಿಗೂ ವಯಸ್ಸಾಗುತ್ತಿದೆ, ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದಿದ್ದರು. ಇಬ್ಬರಿಗೂ ಪರಸ್ಪರ ಅಭಿಮಾನವಿದೆ' ಎಂದು ಹೇಳಿದರು. 

ಶಾರುಖ್ ಖಾನ್ ಸೆಟ್ ನಲ್ಲಿ ಸಕಾರಾತ್ಮಕ ಶಕ್ತಿ ತಂದರು, ಸೆಟ್ ನಲ್ಲಿ ಇದ್ದವರನ್ನೆಲ್ಲರನ್ನೂ ಸಂತೋಷದಿಂದ ಇರುವಂತೆ ಮಾಡುತ್ತಿದ್ದರು ಎಂದು ರಾಜ್ ಕುಮಾರ್ ಹಿರಾನಿ ಹೇಳಿದರು. ಸೆಟ್‌ಗೆ ಬರುವ ಮುನ್ನ ಶಾರುಖ್ ತಯಾರಿ ಮಾಡಿಕೊಂಡು ಬರುತ್ತಾರೆ, ಇದನ್ನು ನೋಡಿ  ದಿಗ್ಭ್ರಮೆಗೊಂಡೆ ಎಂದು ರಾಜ್ ಕುಮಾರ್ ಹಿರಾನಿ ಹೇಳಿದರು. 'ಡಂಕಿ ಸಿನಿಮಾದಲ್ಲಿ ಬಹಳಷ್ಟು ದೀರ್ಘ ದೃಶ್ಯಗಳನ್ನು ಹೊಂದಿರುವ ಅತ್ಯಂತ ಹೆಚ್ಚಿನ ಪರ್ಫಾಮೆನ್ಸ್ ಇರುವ ಚಿತ್ರವಾಗಿದೆ, ಆದರೆ ಶಾರುಖ್ ಸಂಪೂರ್ಣ ಸ್ಕ್ರಿಪ್ಟ್ ಅನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡಿದ್ದಾರೆ. ಪ್ರತಿ ಪದವೂ ಅವರಿಗೆ ಗೊತ್ತಿದೆ. ಅವರು ಎಲ್ಲರ ಸಾಲುಗಳನ್ನು ಸಹ ನೆನಪಿಸಿಕೊಳ್ಳುತ್ತಾರೆ' ಎಂದು ರಾಜ್ ಕುಮಾರ್ ಹಿರಾನಿ ಹೇಳಿದರು. 

Video Viral: ಝೂಂ ದೇ ಪಠಾಣ್​ಗೆ ಸೀರೆಯುಟ್ಟು ಚಿಂದಿ ಉಡಾಯಿಸಿದ ಉಪನ್ಯಾಸಕಿಯರು!

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಅಮೀರ್ ಖಾನ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 3 ಈಡಿಯಟ್ಸ್ (2009), ಪಿಕೆ (2014). ಹಾಗಾಗಿ ಇಬ್ಬರೂ ಖಾನ್ ಗಳ ನಡುವಿನ ವ್ಯತ್ಯಾಸದ ಬಗ್ಗೆ ಹಿರಾನಿಗೆ ಪ್ರಶ್ನೆ ಮಾಡಲಾಯಿತು. ಕೆಲಸದ ಶೈಲಿ ವಿಭಿನ್ನವಾಗಿದೆ ಎಂದು ಹೇಳಿದರು. 'ಅವರ ಕೆಲಸದ ನೀತಿಯು ನಂಬಲಸಾಧ್ಯವಾಗಿದೆ' ಎಂದು ಹೇಳಿದರು. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಇಬ್ಬರೂ ನಿರ್ಮಾಪಕರು ಮತ್ತು ನಟರು. ಹಾಗಾಗಿ ನಟರಿಗಿಂತ ಈ ಪ್ರಾಜೆಕ್ಚ್ ದೊಡ್ಡದಾಗಿದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು. 

Pathaan: ಸುಳ್ಳು ಹೇಳ್ತೀರಾ? ಕೇಸ್​ ದಾಖಲಿಸ್ತೇನೆ ಎಂದು ಶಾರುಖ್​ ಖಾನ್​ಗೆ ಬೆದರಿಕೆ!

ಶಾರುಖ್ ಖಾನ್ ನಟನೆಯ ಡುಂಕಿಯಲ್ಲಿ ತಾಪ್ಸಿ ಪನ್ನು ಮತ್ತು ಬೊಮನ್ ಇರಾನಿ ಕೂಡ ನಟಿಸಿದ್ದಾರೆ. ಮೊದದಲ ಬಾರಿಗೆ ತಾಪ್ಸಿ ಮತ್ತು ಶಾರುಖ್ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಬಹುನಿರೀಕ್ಷೆಯ ಸಿನಿಮಾ ಡಿಸೆಂಬರ್ 22, 2023 ರಂದು ಬಿಡುಗಡೆ ಆಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?
2025ರಲ್ಲಿ ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್ ನಟಿಯರು ಯಾರು? ಇಬ್ಬರಿಗೆ ಮೂರು ಡಿಸಾಸ್ಟರ್!