ಮೊದಲ ಸಿನಿಮಾ ರಿಲೀಸ್‌ಗೂ ಮುನ್ನ ಯುವ ನಿರ್ದೇಶಕ ಜೋಸೆಫ್ ಮನು ಹಠಾತ್ ನಿಧನ

By Shruthi KrishnaFirst Published Feb 27, 2023, 10:41 AM IST
Highlights

ಮಲಯಾಳಂನ ಯುವ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ಕೊನೆಯುಸಿರೆಳೆದಿದ್ದಾರೆ.

ಮಲಯಾಳಂನ ಯುವ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ಕೊನೆಯುಸಿರೆಳೆದಿದ್ದಾರೆ. ತನ್ನ ಚೊಚ್ಚಲ ನಿರ್ದೇಶನದ ಸಿನಿಮಾ ರಿಲೀಸ‌್‌ಗೂ ಮುನ್ನವೇ ಜೋಸೆಫ್ ನಿಧನ ಹೊಂದಿರುವುದು ದುರಂತ. 31 ವರ್ಷದ ಜೋಸೆಫ್  ಮನು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ನ್ಯುಮೋನಿಯಾ ಕಾರಣ ಕೇರಳದ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜೋಸೆಫ್ ನಿರ್ದೇಶನದ ಮೊದಲ ಸಿನಿಮಾ ನ್ಯಾನ್ಸಿ ರಾಣಿ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಎದುರು ನೋಡುತ್ತಿದ್ದರು. ಈ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

ಜೋಸೆಫ್ ಅಂತ್ಯಕ್ರಿಯೆ ಕುರವಿಲಂಗಾಡ್‌ನ ಮೇಜರ್ ಆರ್ಕಿಪಿಸ್ಕೋಪಲ್ ಮಾರ್ತ್ ಮರಿಯಮ್ ಆರ್ಚ್‌ಡೀಕನ್ ಚರ್ಚ್‌ನಲ್ಲಿ ನಡೆಸಲಾಯಿತು. ಜೋಸೆಫ್ ಹಠಾತ್ ನಿಧನ ಮಲಯಾಳಂ ಸಿನಿಮಾರಂಗಕ್ಕೆ ಶಾಕ್ ನೀಡಿದೆ. ಅನೇಕರು ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಹೊತ್ತಿದ್ದ ಜೋಸೆಫ್ ಅರ್ಧಕ್ಕೆ ಜೀವನ ನಿಲ್ಲಿಸಿ ಹೊರಟು ಹೋಗಿದ್ದು ಬೇಸರದ ಸಂಗತಿ. 

ಫಲಿಸಲಿಲ್ಲ ಪ್ರಾರ್ಥನೆ, 39ರ ಹರೆಯದ ತೆಲಗು ನಟ ತಾರಕರತ್ನ ಬೆಂಗಳೂರಲ್ಲಿ ನಿಧನ!

Latest Videos

ಜೋಸೆಫ್ ಮೊದಲ ಸಿನಿಮಾ ನ್ಯಾನ್ಸಿ ರಾಣಿಯಲ್ಲಿ ಅಹಾನಾ ಕೃಷ್ಣ  ಮತ್ತು ಅರ್ಜುನ್ ಅಶೋಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೇನು ಕೆಲವೆ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ನಟಿ ಅಹಾನಾ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ, ಆತ್ಮಕ್ಕೆ ಶಾಂತಿ ಸಿಗಲಿ ಮನು. ಇದು ನಡೆಯಬಾರದಿತ್ತು' ಎಂದು ಹೇಳಿದ್ದಾರೆ. ಇನ್ನು ಅಜು ವರ್ಗೀಸ್ ಟ್ವೀಟ್ ಮಾಡಿ ತುಂಬಾ ಬೇಗ ಹೋದೆ ಸಹೋದರ ಎಂದು ಹೇಳಿದ್ದಾರೆ.    

Subi Suresh: ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ

ಜೋಸೆಫ್ ಮನು ಬಗ್ಗೆ 

ಜೋಸೆಫ್ ಮನು ಐ ಆಮ್ ಕ್ಯೂರಿಯಸ್ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಮಿಂಚಿದರು. 2004ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಬಳಿಕ ಜೋಸೆಫ್ ಮನು ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮಲಯಾಳಂ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನ್ಯಾನ್ಸಿ ರಾಣಿ ಮೂಲಕ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಜೋಸೆಫ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.    

click me!