ಎಸ್‌ಎಸ್ ರಾಜಮೌಳಿ ಹಾಗೂ ಸ್ನೇಹಿತನ ಮಧ್ಯೆ ಹೆಣ್ಣಿನ ಪ್ರವೇಶ; ಡೆತ್ ನೋಟ್ ಪತ್ತೆ, ತನಿಖೆ ಶುರು..?

Published : Feb 27, 2025, 04:39 PM ISTUpdated : Feb 27, 2025, 08:03 PM IST
ಎಸ್‌ಎಸ್ ರಾಜಮೌಳಿ ಹಾಗೂ ಸ್ನೇಹಿತನ ಮಧ್ಯೆ ಹೆಣ್ಣಿನ ಪ್ರವೇಶ; ಡೆತ್ ನೋಟ್ ಪತ್ತೆ, ತನಿಖೆ ಶುರು..?

ಸಾರಾಂಶ

ಎಲ್ಲರ ಜೀವನದಲ್ಲಿ ನಡೆಯುವಂತೆ ನಮ್ಮ ಜೀವನದಲ್ಲಿ ಒಬ್ಬ ಮಹಿಳೆಯ ಪ್ರವೇಶ ಆಯ್ತು. ಮೊದಲು ರಾಜಮೌಳಿ, ಆಮೇಲೆ ನಾನು. ನಮ್ಮದು ಒಂಥರಾ ತ್ರೀಕೋನ ಪ್ರೇಮಕಥೆ.. ರಾಜಮೌಳಿ ನನಗೆ ನಿನ್ನ ಪ್ರೀತಿಯನ್ನು ತ್ಯಾಗ ಮಾಡು ಎಂದು ಹೇಳಿದ.. ನಾನು ಮಾಡಿದೆ.. ಈಗ ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ..

ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ವಿರುದ್ದ ಗಂಭೀರ ಆರೋಪ.. ಡೆತ್ ಬರೆದು, ಆತ್ಮಹತ್ಯೆ ಮಾಡಿಕೊಳ್ಳುವದಾಗಿ ವಿಡಿಯೋ ಮಾಡಿರುವ ರಾಜಮೌಳಿ ಸ್ನೇಹಿತ.. ಯಮದೊಂಗ ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿದ್ದ ಯು. ಶ್ರೀನಿವಾಸ್ ರಾವ್ (Srinivas Rao) .. ತಮ್ಮ ಡೆತ್ ನೋಟ್‌ನಲ್ಲಿ (Death Note) ಸ್ನೇಹಿತ ಶ್ರೀನಿವಾಸ್ ರಾವ್ ಅವರು 'ನಿರ್ದೇಶಕ ರಾಜಮೌಳಿಯಿಂದ ತನ್ನ ಬದುಕು ಹಾಳಾಗಿದೆ. ಆತನೇ ನನ್ನ ಸಾವಿಗೆ ಕಾರಣ..' ಎಂದು ಆರೋಪ ಮಾಡಿದ್ದಾರೆ ಶ್ರೀನಿವಾಸ್ ರಾವ್.

ಒಬ್ಬ ಯುವತಿಯ ವಿಚಾರಕ್ಕೆ ರಾಜಮೌಳಿ ಜೊತೆಗೆ ಮನಸ್ತಾಪ.. 55 ವರ್ಷದ ಶ್ರೀನಿವಾಸ್ ರಾವ್ ಏಕಾಂಗಿಯಾಗಿ ಉಳಿಯಲು ಕಾರಣವೇ ರಾಜಮೌಳಿ.. ಶ್ರೀನಿವಾಸ್ ರಾವ್ ಆರೋಪಗಳ ಕುರಿತು ಪೊಲೀಸ್ ತನಿಖೆಯ ಸಾಧ್ಯತೆ.. ನಿರ್ದೇಶಕ ರಾಜಮೌಳಿಗೆ ವಿಚಾರಣೆ ಕಂಟಕ ಎದುರಾಗುವ ಸಾಧ್ಯತೆ.. ಡೆತ್ ನೋಟ್ ಬರೆದು ನಾಪತ್ತೆಯಾಗಿರುವ ಶ್ರೀನಿವಾಸ್ ರಾವ್​​ ಗಾಗಿ ಪೊಲೀಸರ ಹುಡುಕಾಟ ನಡೆದಿದೆ.

SS Rajamouli: ರಾಜಮೌಳಿ ವಿರುದ್ದ ಗಂಭೀರ ಆರೋಪ; ಆತನಿಂದ ಬದುಕು ಹಾಳಾಯ್ತು, ಸಾವಿಗೆ ಅವನೇ ಕಾರಣ..!

ಗೆಳೆಯನ ನಾಪತ್ತೆ ಬಗ್ಗೆ ಮತ್ತು ಆತನ ಆರೋಪಗಳ ಬಗ್ಗೆ ರಾಜಮೌಳಿ ವಿಚಾರಣೆ ಮಾಡುವ ಸಾಧ್ಯತೆ ಈಗ ದಟ್ಟವಾಗಿದೆ. 

ಶ್ರೀನಿವಾಸ ರಾವ್ ಹೇಳಿದ್ದೇನು..?
'ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ. 55 ವರ್ಷವಾದರೂ ನಾನು ಸಿಂಗಲ್ ಆಗಿರೋದಕ್ಕೆ ರಾಜಮೌಳಿಯೇ ಕಾರಣ. ನಾವಿಬ್ಬರು 'ಯಮದೊಂಗ' ಚಿತ್ರದವರೆಗೂ ಒಟ್ಟಿಗೆ ಕಲಸ ಮಾಡಿದ್ದೇವೆ. ನಾನು ಮತ್ತು ರಾಜಮೌಳಿ ಎಂಥ ಸ್ನೇಹಿತರು ಎಂಬುದು ಚಿತ್ರರಂಗದ ಬಹಳಷ್ಟು ಮಂದಿಗೆ ಗೊತ್ತು. ಆದರೆ ಓರ್ವ ಮಹಿಳೆಯಿಂದಾಗಿ ನನ್ನ ಬದುಕನ್ನೇ ರಾಜಮೌಳಿ ಸರ್ವನಾಶ ಮಾಡಿದ. 

ರಜನಿಕಾಂತ್ ಸ್ಟಾರ್‌ಡಂ ಸೀಕ್ರೆಟ್‌ ಕೊನೆಗೂ ಗೊತ್ತಾಯ್ತು! ಯೋಗ-ಪ್ರಾಣಾಯಾಮ ಅಲ್ಲ, ಆದ್ರೆ ಮತ್ತೊಂದು...

1990ರಿಂದಲೂ ನಾವು ಸ್ನೇಹಿತರು. ಎಲ್ಲರ ಜೀವನದಲ್ಲಿ ನಡೆಯುವಂತೆ ನಮ್ಮ ಜೀವನದಲ್ಲಿ ಒಬ್ಬ ಮಹಿಳೆಯ ಪ್ರವೇಶ ಆಯ್ತು. ಮೊದಲು ರಾಜಮೌಳಿ, ಆಮೇಲೆ ನಾನು. ನಮ್ಮದು ಒಂಥರಾ ತ್ರೀಕೋನ ಪ್ರೇಮಕಥೆ; 'ಆರ್ಯ 2' ಸಿನಿಮಾ ರೀತಿ! ಆಗ ರಾಜಮೌಳಿ ನನಗೆ ನಿನ್ನ ಪ್ರೀತಿಯನ್ನು ತ್ಯಾಗ ಮಾಡು ಎಂದು ಹೇಳಿದ. ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ..' ಎಂದು ತಮ್ಮ ಡೆತ್ ನೋಟ್ ವಿಡಿಯೋದಲ್ಲಿ ಶ್ರೀನಿವಾಸ್ ರಾವ್ ಹೇಳಿಕೆ ನೀಡಿದ್ದಾರೆ. 

ಆಂಧ್ರದ ಮೆಟ್ಟು ಪೊಲೀಸ್ ಠಾಣೆಗೆ ಈ ಡೆತ್ ನೋಟ್ ಕಳುಹಿಸಲಾಗಿದೆ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಗೆ ಭಾರೀ ಸಂಕಷ್ಟ ಎದುರಾಗಿದೆ.

ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
ಇದು ನಿಜ.. ಸದ್ಯವೇ ತಮಿಳು ಸಿನಿಮಾದಲ್ಲಿ ನಟಿಸಲಿರುವ ಶಾರುಖ್ ಖಾನ್; ನಿರ್ದೇಶಕರು ಯಾರು?