
ಬಾಲಿವುಡ್ ನಟ ಗೋವಿಂದ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಭಾರಿ ಹಲ್ಚಲ್ ಸೃಷ್ಟಿಸುತ್ತಿದೆ. 37 ವರ್ಷಗಳ ತಮ್ಮ ದಾಂಪತ್ಯದ ನಂತರ ಈ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಬರಸಿಡಿಲಿನಂತೆ ಎರಗಿದೆ. ಗೋವಿಂದ ಮತ್ತು ಸುನೀತಾ ಎಂದಿಗೂ ಬೇರೆಯಾಗಲು ಸಾಧ್ಯವಿಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಲೇ ಇದ್ದಾರೆ. ಆದರೆ, ಈ ಸುದ್ದಿ ಮಾತ್ರ ನಿಜ ಎನ್ನುವಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈವರೆಗೂ ಗೋವಿಂದ ಆಗಲೀ, ಸುನೀತಾ ಅವರಾಗಿಯೇ ಏನೂ ಹೇಳಲಿಲ್ಲ.
ಇದರ ನಡುವೆಯೇ, ಇದೇ ಪ್ರೇಮಿಗಳ ದಿನದಂದು ಪಾಪರಾಜಿಗಳ ಪ್ರಶ್ನೆಗೆ ಸುನೀತಾ ಅವರು ಕೊಟ್ಟ ಉತ್ತರ ವೈರಲ್ ಆಗಿದೆ. ಇದರಲ್ಲಿ ಹ್ಯಾಪ್ಪಿ ವೆಲಂಟೈನ್ಸ್ ಡೇ ಎಂದಿರುವ ಪಾಪರಾಜಿಗಳು, ಗೋವಿಂದ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಮಗನ ಜೊತೆಗಿದ್ದ ಸುನೀತಾ ಅವರು, ಗೋವಿಂದ ಅವರ ಪ್ರೇಯಸಿಯ ಜೊತೆಗೆ ಇದ್ದಾರೆ ಎಂದಿದ್ದಾರೆ. ಇದಿಷ್ಟೇ ವಿಡಿಯೋ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈ ಮೂಲಕ ಗೋವಿಂದ ಅವರಿಗೆ ಅಕ್ರಮ ಸಂಬಂಧ ಇರುವುದರಿಂದ ವಿಚ್ಛೇದನ ನೀಡಲಾಗುತ್ತಿದೆ ಎಂದೇ ಕಮೆಂಟ್ ತುಂಬ ಬರೆಯಲಾಗಿದ್ದು, ಇಷ್ಟೇ ವಿಡಿಯೋ ಎಲ್ಲೆಡೆ ಶೇರ್ ಆಗುತ್ತಿದೆ. ಆದರೆ ಅಸಲಿಗೆ ಸುನೀತಾ ಅವರು ಅಷ್ಟಕ್ಕೇ ಮಾತು ಮುಗಿಸದೇ ಮುಂದೆ ಮಾತನಾಡಿದ್ದಾರೆ. ಆದರೆ ಅದನ್ನು ಕಟ್ ಮಾಡಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಅಷ್ಟೆಲ್ಲಾ ಗಮನಿಸುವಷ್ಟು ತಾಳ್ಮೆ ನೆಟ್ಟಿಗರಿಗೆ ಎಲ್ಲಿ ಇದೆ ಅಲ್ಲವೆ?
ನಟ ಗೋವಿಂದ ಡಿವೋರ್ಸ್ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್ ಬಾತ್?
ಅಷ್ಟಕ್ಕೂ, ಇದರಲ್ಲಿ ಸುನೀತಾ ಅವರು, ಗೋವಿಂದ ಪ್ರೇಯಸಿಯ ಜೊತೆಗೆ ಇದ್ದಾರೆ. ಹಾಗೆಂದು ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ. ಅವರಿಗೆ ಕೆಲಸನೇ ಪ್ರೇಯಸಿಯ ಹಾಗೆ. ಅವರು ಕೆಲಸವನ್ನು ತುಂಬಾ ಪ್ರೀತಿಸುತ್ತಾರೆ. ಈಗಲೂ ಕೆಲಸದಲ್ಲಿಯೇ ಇದ್ದಾರೆ ಎಂದಿದ್ದಾರೆ. ಆದರೆ ಆ ವಿಡಿಯೋ ಮಾತ್ರ ಕಟ್ ಮಾಡಲಾಗಿದೆ. ಇದರ ಮಧ್ಯೆಯೇ, ಗೋವಿಂದ ಅವರ ವಕೀಲ ಮತ್ತು ಕುಟುಂಬ ಸ್ನೇಹಿತ ಲಲಿತ್ ಬಿಂದಾಲ್ ಅವರ ಹೇಳಿಕೆಯೊಂದು ಹೊರಬಂದಿದ್ದು, ಇದರಲ್ಲಿ ಡಿವೋರ್ಸ್ ಸುದ್ದಿ ಹರಡಿದ್ದು ಹೇಗೆ ಎಂಬ ಬಗ್ಗೆ ತಿಳಿಯಬಹುದಾಗಿದೆ.
ಇಂಡಿಯಾ ಟುಡೇ ಜೊತೆಗಿನ ಸಂಭಾಷಣೆಯಲ್ಲಿ ವಕೀಲರು ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸುನೀತಾ ಅವರು ಕೆಲವು ತಪ್ಪುಗ್ರಹಿಕೆಯಿಂದಾಗಿ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ದಂಪತಿ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಸಂತೋಷವಾಗಿದ್ದಾರೆ. ಹೊಸ ವರ್ಷದಲ್ಲಿ ದಂಪತಿ ನೇಪಾಳಕ್ಕೂ ಭೇಟಿ ಕೊಟ್ಟಿದ್ದಾರೆ. ಆದರೆ ಈಗ ಡಿವೋರ್ಸ್ ಸುದ್ದಿ ಹೊರಬಂದಿದೆಯಷ್ಟೇ, ಮತ್ತೇನೂ ಇಲ್ಲ. ಎಲ್ಲಾ ದಂಪತಿ ನಡುವೆ ಇಂತಹ ವಿಷಯಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯ ಬಂದಿತ್ತಷ್ಟೇ ಎಂದಿದ್ದಾರೆ. ಹಾಗೆಯೇ, ಗೋವಿಂದ ಮತ್ತು ಸುನೀತಾ ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಲಲಿತ್ ಬಿಂದಾಲ್ ನಿರಾಕರಿಸಿದ್ದಾರೆ.
ತುಟಿಗೆ ಚುಂಬಿಸಿದ ಬೆನ್ನಲ್ಲೇ ಉದಿತ್ ನಾರಾಯಣ್‌ಗೆ ಪತ್ನಿಯಿಂದ ಸಂಕಷ್ಟ! ಜೀವನಾಂಶಕ್ಕಾಗಿ ದೂರು ದಾಖಲು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.