Pathaan: ನನಗೆ ನಂಬರ್ ತುಂಬಾ ಮುಖ್ಯ: ನಿರ್ದೇಶಕ ಸಿದ್ಧಾರ್ಥ್ ಆನಂದ್

Published : Jan 28, 2023, 11:17 AM IST
Pathaan: ನನಗೆ ನಂಬರ್ ತುಂಬಾ ಮುಖ್ಯ: ನಿರ್ದೇಶಕ ಸಿದ್ಧಾರ್ಥ್ ಆನಂದ್

ಸಾರಾಂಶ

ಪಠಾಣ್ ಸಿನಿಮಾದ ಸಕ್ಸಸ್ ಬಳಿಕ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮಾತನಾಡಿದ್ದು ತನಗೆ ನಂಬರ್ ತುಂಬಾ ಮುಖ್ಯ ಎಂದು ಹೇಳಿದ್ದಾರೆ.   

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ತೆರೆಮೇಲೆ ಅಬ್ಬರಿಸಿದ್ದಾರೆ. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ.  ಹಿಂದಿಯಲ್ಲಿ ಪಠಾಣ್ ಸಿನಿಮಾ ದಾಖಲೆ ಬರೆದಿದದೆ. ಅತೀ ವೇಗದಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಇದಾಗಿದೆ. ವಿಶ್ವದಾದ್ಯಂತ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅತೀ ಹೆಚ್ಚು ಕಲೆಕ್ಷನ್ ಮಾಡುತ್ತಾ ಚಿತ್ರಮಂದಿರಗಲ್ಲಿ ರಾರಾಜಿಸುತ್ತಿರುವ ಪಠಾಣ್ ಸಿನಿಮಾದ ಸಕ್ಸಸ್ ಬಗ್ಗೆ ನಿರ್ದೇಶಕ ಸಿದ್ಧಾರ್ತ್ ಆನಂದ್ ಮಾತನಾಡಿದ್ದಾರೆ. ಮೊದಲ ಬಾರಿಗೆ ಪಠಾಣ್ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಾರುಖ್ ಮತ್ತು ತಂಡ ಪಠಾಣ್ ಸಿನಿಮಾದ ಬಗ್ಗೆ ಯಾವುದೇ ಪ್ರಮೋಷನ್ ಮಾಡಿಲ್ಲ. ಪ್ರಚಾರವಿಲ್ಲದೇ ಪಠಾಣ್ ಸಕ್ಸಸ್ ಕಂಡಿದೆ.  

ಇದೀಗ ಸಿನಿಮಾದ ಬಗ್ಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮಾತನಾಡಿದ್ದಾರೆ. ಸ್ಕ್ರಿಪ್ಟಿಂಗ್ ಇತಿಹಾಸ. ಪ್ರತಿಯೊಬ್ಬರೂ ಅದನ್ನು ಬಯಸುತ್ತಾರೆ, ಆದರೆ ಒಬ್ಬರೂ ಅದನ್ನು ಯೋಜಿಸಲು ಸಾಧ್ಯವಿಲ್ಲ. ಇದು ಕೇವಲ ಸಂಭವಿಸುತ್ತದೆ. ನಾನು ಇದೀಗ ಉತ್ಸುಕನಾಗಿದ್ದೇನೆ ಮತ್ತು ಸಿನಿಮಾ ಸೆಟ್‌ಗೆ ಹಿಂತಿರುಗಲು ಸ್ಫೂರ್ತಿ ಪಡೆದಿದ್ದೇನೆ ಮತ್ತು ಮತ್ತೆ ಪ್ರೇಕ್ಷಕರಿಗೆ ನಿಜವಾಗಿಯೂ ವಿಶೇಷವಾದದ್ದನ್ನು ಕೊಡಲು ಪ್ರಯತ್ನಿಸುತ್ತೇನೆ. ಸದ್ಯ ಇದು ನನ್ನ ಮನಸ್ಥಿತಿ' ಎಂದು ಹೇಳಿದ್ದಾರೆ. 

'ಹೌದು ನನಗೆ ಸಂಖ್ಯೆಗಳು ಮುಖ್ಯವಾಗಿವೆ. ಇದು ಎಲ್ಲಾ ಕಠಿಣ ಪರಿಶ್ರಮದ ಮೌಲ್ಯೀಕರಣವಾಗಿದೆ ಆದರೆ ಸಿನಿಮಾ ಮಾಡುವುದು ಸಹ ಒಂದು ರೀತಿ ಟೀಮ್ ಗೇಮ್ ಆಗಿದೆ. ಆದ್ದರಿಂದ ನಾನು ಈ ಅದ್ಭುತ ಕ್ಷಣವನ್ನು ಪಠಾಣ್‌ನ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ. 

Pathaan ಸೂಪರ್ ಸಕ್ಸಸ್ ಬೆನ್ನಲ್ಲೇ 'ಮತ್ತೆ ಹಿಂದಕ್ಕೆ ಹೋಗುವ ಆಸಕ್ತಿ ಉಳಿದಿಲ್ಲ' ಎಂದಿದ್ದೇಕೆ ಶಾರುಖ್ ಖಾನ್?

'ಇದು ಭಾರತೀಯ ಚಿತ್ರರಂಗದ ಗೆಲುವು ಏಕೆಂದರೆ ನಾವೆಲ್ಲರೂ ಮೊದಲು ಭಾರತೀಯರು. ಇದು ನಮ್ಮ ದೇಶಕ್ಕೆ ರೋಮಾಂಚನಕಾರಿ ಹಂತವಾಗಿದೆ. ಭಾರತದಾದ್ಯಂತದ ಸಿನಿಮಾಗಳು ದಾಖಲೆಗಳನ್ನು ಮಾಡುತ್ತಿವೆ, ದಾಖಲೆಗಳನ್ನು ಮುರಿಯುತ್ತಿವೆ ಮತ್ತು ಮುಖ್ಯವಾಗಿ ಜಾಗತಿಕವಾಗಿ ನಮ್ಮ ದೇಶದ ಜನರು ರಂಜಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಸಿದ್ಧಾರ್ಥ್ ಆನಂದ್ ಪ್ರತಿಕ್ರಿಯೆ ನೀಡಿದ್ದು ಸಿದ್ಧಾರ್ಥ್ ಮಾತುಗಳು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. 

ಶಾರುಖ್ ಖಾನ್ ಪ್ರತಿಕ್ರಿಯೆ 

ಶಾರುಖ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದು ತಾನು ಮತ್ತೆ ಹಿಂದಿರುಗಲು ಬಯಸಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಾರುಖ್, ‘ಹಿಂದಕ್ಕೆ ಹೋಗಲು ಯಾವ ಆಸಕ್ತಿಯೂ ಉಳಿದಿಲ್ಲ. ನನ್ನ ಪ್ರಕಾರ ಜೀವನ ಯಾವಾಗಲೂ ಹಾಗೆಯೇ. ಜೀವನದಲ್ಲಿ ಮತ್ತೆ ಹಿಂದೆ ಹೋಗುವ ಬಗ್ಗೆ ಆಲೋಚಿಸಲು ನೀವು ಬಯಸಲ್ಲ. ನೀವು ಮುಂದೆ ಸಾಗುತ್ತಾ ಇರಬೇಕು. ನೀವು ಏನನ್ನು ಆರಂಭಿಸಿದ್ದೀರೋ ಅದನ್ನು ಪೂರ್ಣಗೊಳಿಸಬೇಕು. ಇದು ಕೇವಲ 57 ವರ್ಷದವರ ಸಲಹೆಗಳು’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ. 

ಪಠಾಣ್‌ಗೂ ಮೊದಲೂ ಬಾಕ್ಸ್ ಆಫೀಸ್ ಅಲುಗಾಡಿಸಿದ ಶಾರುಖ್‌ ಸಿನಿಮಾಗಳಿವು!

ಪಠಾಣ್ ಸಿನಿಮಾದಲ್ಲಿ ಶಾರುಖ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ, ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಾಹಂ ವಿಲನ್ ಆಗಿ ಮಿಂಚಿದ್ದಾರೆ. ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿರುವ ಪಠಾಣ್ ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಶಾರುಖ್ ಖಾನ್ ಅವರನ್ನು ಅನೇಕ ವರ್ಷಗಳ ಬಳಿಕ ತೆರೆಮೇಲೆ ನೋಡಿ ಆನಂದಿಸುತ್ತಿದ್ದಾರೆ, ಸಂಭ್ರಮಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?