ಏನ್ರೀ ನಿಮ್ಮ ಹಣೆಬರಹ?; 37 ವರ್ಷಗಳ ನಂತರ ಇಂಜಿನಿಯರಿಂದ ಪದವಿ ಪಡೆದ ರಾಮ್‌ ಗೋಪಾಲ್‌ ವರ್ಮಾ ಕಾಲೆಳೆದ ನೆಟ್ಟಿಗರು

Published : Mar 16, 2023, 02:26 PM IST
ಏನ್ರೀ ನಿಮ್ಮ ಹಣೆಬರಹ?; 37 ವರ್ಷಗಳ ನಂತರ ಇಂಜಿನಿಯರಿಂದ ಪದವಿ ಪಡೆದ ರಾಮ್‌ ಗೋಪಾಲ್‌ ವರ್ಮಾ ಕಾಲೆಳೆದ ನೆಟ್ಟಿಗರು

ಸಾರಾಂಶ

5.8 ಮಿಲಿಯನ್ ಫ್ಯಾನ್‌ಗಳ ಜೊತೆ ಪದವಿ ಪಡೆದಿರುವ ಸಂತೋಷದ ವಿಚಾರ ಹಂಚಿಕೊಂಡ ಆರ್‌ಜಿವಿ...ಕಾಲೆಳೆಯುತ್ತಿರುವ ನೆಟ್ಟಿಗರು....

ತಮಿಳು ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ರಾಮ್‌ ಗೋಪಾಲ್ ವರ್ಮಾ ಸುಮಾರು 37 ವರ್ಷಗಳ ನಂತರ ಬ್ಯಾಚುಲರ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ. ಕೊನೆಗೂ ಡಿಗ್ರಿ ಪಡೆದುಕೊಂಡಿರುವೆ ಎಂದು ಟ್ವಿಟರ್‌ನಲ್ಲಿರುವ 5.8 ಮಿಲಿಯನ್ ಫಾಲೋವರ್ಸ್‌ಗಳಿಗೆ ತಿಳಿಸಿದ್ದಾರೆ.

'37 ವರ್ಷಗಳ ನಂತರ ಬ್ಯಾಚುಲರ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿರುವುದಕ್ಕೆ ಸಖತ್ ಥ್ರಿಲ್ ಆಗಿರುವೆ. ನಿಜ ಹೇಳಬೇಕು ಅಂದ್ರೆ 1985ರಿಂದ ನಾನು ಪರೀಕ್ಷೆ ಬರೆದು ಬರೆದು ಎಲ್ಲಾ ಸಬ್ಜೆಕ್‌ಗಳಲ್ಲಿ ಪಾಸ್ ಆಗಿ ಪದವಿ ಸಿಗಲು ಇಷ್ಟ ವರ್ಷ ಹಿಡಿಯಿತ್ತು. ನನಗೆ ಸಿವಿಲ್ ಎಂಜಿನಿಯರಿಂಗ್ ಇಷ್ಟಾನೇ ಇರಲಿಲ್ಲ. ಕೊನೆಗೂ ಮುಗಿಯಿತ್ತು. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯಕ್ಕೆ ನನ್ನ ವಂದನೆಗಳು' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಬಿ-ಟೌನ್‌ಗೆ ಅಪರಿಚಿತನಾಗಿದ್ದ ಯಶ್‌ 500 ಕೋಟಿ ರೂ. ಮಾಡಿದ್ರೆ ಶಾರುಖ್ ಪಠಾಣ್‌ಗೆ ಬೆಲೆ ಬೇಡ್ವಾ?; ಕಾಲೆಳೆದ ಅರ್‌ಜಿವಿ

ಆಚಾರ್ಯ ನಾಗಾರ್ಜುನ್ ವಿಶ್ವವಿದ್ಯಾಲಯ ಕೊಟ್ಟಿರುವ ಪದವಿ ಫೋಟೋವನ್ನು ವರ್ಮಾ ಅಪ್ಲೋಡ್ ಮಾಡಿದ್ದಾರೆ. ಅರ್ಟಿಫಿಕೇಟ್‌ನಲ್ಲಿ 1985ರಲ್ಲಿ ಪಾಸ್ ಅಗಿರುವುದು ಎಂದು ಹೇಳಲಾಗಿದೆ ಹಾಗೂ ವರ್ಮಾ ಸೆಂಡ್‌ ಕ್ಲಾಸ್‌ನಲ್ಲಿ ಪಾಸಾಗಿರುವುದು. ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ 10 ಸಾವಿರ ಲೈಕ್ಸ್ ಪಡೆದುಕೊಂಡು ನೂರಾರು ಕಾಮೆಂಟ್‌ಗಳು ಬಂದಿದೆ. 'ವಾವ್‌  ಈ ವಯಸ್ಸಿನಲ್ಲೂ ಡಿಗ್ರಿ ಬೇಕು ಅನಿಸಿರುವುದು ಗ್ರೇಟ್‌ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಏನ್ರೀ ನಿಮ್ಮ ಹಣೆ ಬರಹ ಡಿಗ್ರಿ ಇಲ್ಲ ದೇಶದ ಬಗ್ಗೆ ಊರುದ್ದ ಮಾತನಾಡುತ್ತಿದ್ರಾ ಎಂದು ಕಾಲೆಳೆದಿದ್ದಾರೆ.

ತಾಯಿ ಜೊತೆ ಅಡಲ್ಟ್‌ ಸಿನಿಮಾ ನೋಡಿದ ಆರ್‌ಜಿವಿ; ತಾಯಿ ಕಾಮೆಂಟ್‌ ಕೇಳಿ ನೆಟ್ಟಿಗರು ಶಾಕ್

ಹುಡುಗಿ ಪಾದ ಹಿಡಿದು ಟ್ರೋಲ್:

ತೆಲುಗು ಜೊತೆಗೆ ಕನ್ನಡ ಮತ್ತು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿ  ಪ್ರೇಕ್ಷಕರ ಹೃದಯ ಗೆದ್ದಿರುವ ರಾಮ್ ಗೋಪಾಲ್ ವರ್ಮಾ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಸದಾ ನಾಯಕಿಯರ ಮಧ್ಯೆಯೇ ಕಾಣಿಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಇತ್ತೀಚಿಗಷ್ಟೆ ನಟಿ ಇನಾಯಾ ಸುಲ್ತಾನ್‌ ಜೊತೆ ಪಾರ್ಟಿಯಲ್ಲಿ ಕುಣಿದ ವಿಡಿಯೋ ಶೇರ್ ಮಾಡಿ ನೆಟ್ಟಿಗರು ಹುಬ್ಬೇರಿಸಿದ್ದರು.ನಟಿಯ ಪಾದ ಹಿಡಿದು ಕುಳಿತಿರುವ ಫೋಟೋವನ್ನು ರಾಮ್ ಗೋಪಾಲ್ ವರ್ಮಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಕಾಲು ಬುಡದಲ್ಲಿ ಕುಳಿತು ಆಕೆಯ ಪಾದ ಹಿಡಿದು ಗುರಾಸಿಯಿ ನೋಡುತ್ತಿರುವ ಫೋಟೋವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಹಾಗೆ ರಾಮ್ ಗೋಪಾಲ್ ವರ್ಮಾ ಪಾದ ಹಿಡಿದು ಕುಳಿತಿರುವ ನಟಿ ಮತ್ಯಾರು ಅಲ್ಲ ಬಿಗ್ ಬಾಸ್ ಖ್ಯಾತಿಯ ಅಶು ರೆಡ್ಡಿ. 

ರಾಷ್ಟ್ರಪತಿ ಬಗ್ಗೆ ಅಪಹಾಸ್ಯ:

ಸಿನಿಮಾ ವಿಚಾರವಾಗಿ ಆರ್‌ಜಿವಿ ಏನೇ ಹೇಳಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅವಹೇಳಕಾರಿ ಟ್ವೀಟ್ ಮಾಡಿರುವುದಕ್ಕೆ ಬಿಜೆಪಿ ಲೀಡರ್‌ಗಳು ದೂರು ದಾಖಲಿಸಿದ್ದಾರೆ. 'ದ್ರೌಪತಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಅದಕ್ಕೂ ಮುಖ್ಯವಾಗಿ ಕೌರವರು ಯಾರು?' ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಅಭ್ಯಾರ್ಥಿ ಬಗ್ಗೆ ಈ ರೀತಿ ಕಾಮೆಂಟ್ ಮಾಡುವುದಕ್ಕೆ ಆರ್‌ಜಿವಿ ಯೋಗ್ಯತೆ ಇದ್ಯಾ ಇಲ್ವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?