ನಟಿ ರಶ್ಮಿಕಾ ಮಂದಣ್ಣ ಅವರು ಜಪನೀಸ್ ಫ್ಯಾಷನ್ ಬ್ರಾಂಡ್ ಒನಿಟ್ಸುಕಾ ಟೈಗರ್‌ಗೆ ಭಾರತದ ಮೊದಲ ಬ್ರಾಂಡ್ ಅಡ್ವೊಕೇಟ್ ಆಗಿ ಆಯ್ಕೆ ಆಗಿದ್ದಾರೆ. ಅವರು ಹೇಳಿದ್ದೇನು?
ಹೆಚ್ಚಾಗಿ ನೆಗೆಟಿವ್ ಸುದ್ದಿಗಳಿಂದಲೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ನ್ಯಾಷನಲ್ ಕ್ರಷ್ ಎಂದು ಎನಿಸಿಕೊಂಡಿರೋ ಈ ಬೆಡಗಿ ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
ಈ ನಟಿಗೆ ಈಗ ಶುಕ್ರದೆಸೆ ಬಂದಿದೆ. ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ (Lakme Fashion Week 2023) ಕೊನೆ ದಿನ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಥಿಯಾ ಶೆಟ್ಟಿ , ತಾಪ್ಸಿ ಪನ್ನು, ಶನಯಾ ಕಪೂರ್ (Shanaya Kapoor), ಅಂಶುಲಾ ಕಪೂರ್ ಅವರ ಜೊತೆ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡರು. ರಶ್ಮಿಕಾ ವಿಭಿನ್ನ ಗೆಟಅಪ್ನಲ್ಲಿ ಭಾರಿ ಮಿಂಚಿದ್ದರು. ಇದರ ಜೊತೆಗೆ ಇದೀಗ ಮತ್ತೊಂದು ಗರಿ ಇವರಿಗೆ ದಕ್ಕಿದೆ. ಅದೇನೆಂದರೆ, ವಿದೇಶಿ ಬ್ರಾಂಡ್ ಒಂದರ ಅಂಬಾಸಿಡರ್ ಆಗಿದ್ದು ಖುದ್ದು ಈ ವಿಷಯವನ್ನು ರಶ್ಮಿಕಾ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Pushpa 2: ಬಿಡುಗಡೆಗೂ ಮುನ್ನವೇ ಸಾವಿರ ಕೋಟಿ ರೂ. ಬಾಚಿದ ಚಿತ್ರ
'ಹೊಸ ಆರಂಭ, ಐಕಾನಿಕ್ ಜಪನೀಸ್ ಫ್ಯಾಷನ್ ಬ್ರಾಂಡ್ (Japnese Fashion Brand), ಒನಿಟ್ಸುಕಾ ಟೈಗರ್‌ಗೆ (Onitsuka Tiger) ನಾನು ಭಾರತದ ಮೊದಲ ಬ್ರಾಂಡ್ ಅಡ್ವೊಕೇಟ್ ಆಗಿ ಆಯ್ಕೆ ಆಗಿದ್ದೇನೆ ಎಂದು ಈ ಮೂಲಕ ಹೇಳುತ್ತಿದ್ದೇನೆ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಒನಿಟ್ಸಕಾ ಟೈಗರ್, ಜಪಾನಿನ ಸ್ಪೋರ್ಟ್ಸ್ ಫ್ಯಾಷನ್ ಬ್ರಾಂಡ್ ಆಗಿದೆ. 1949ನಿಂದ ಈ ಬ್ರಾಂಡ್ ಅಸ್ತಿತ್ವದಲ್ಲಿದೆ. ರಶ್ಮಿಕಾ, ಹಂಚಿಕೊಂಡಿರುವ ಈ ಪೋಸ್ಟ್‌ಗೆ ನೆಟಿಜನ್ಸ್ ಖುಷಿಯ ಜೊತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಈ ಗೌರವ ಪಡೆದ ನೀವು ನಿಜಕ್ಕೂ ಗ್ರೇಟ್ (Great) ಎಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ. ನೀವು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದು ಅಭಿಮಾನಿಗಳು ಹಾರೈಕೆ ಮಾಡುತ್ತಿದ್ದಾರೆ.
ರಶ್ಮಿಕಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಅನಿಮಲ್' (Animal) ಬಾಲಿವುಡ್ ಚಿತ್ರ ಹಾಗೂ ಸುಕುಮಾರ್ ನಿರ್ದೇಶನದ ತೆಲುಗಿನ 'ಪುಷ್ಪ' ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ. 'ಅನಿಮಲ್'ನಲ್ಲಿ ರಣಬೀರ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಪರಿಣತಿ ಚೋಪ್ರಾ, ಅನಿಲ್ ಕಪೂರ್, ಬಾಬ್ಬಿ ಡಿಯೋಲ್ ಕೂಡಾ ನಟಿಸುತ್ತಿದ್ದಾರೆ. 'ಪುಷ್ಪ' (Pushpa) ಸೀಕ್ವೆಲ್‌ನಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.
Lakme Fashion Week: ಶೋಸ್ಟಾಪರ್ ಆಗಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ