Pathaan OTT ಡೇಟ್​ ಫಿಕ್ಸ್​- ಚಿತ್ರ ನೋಡಲು ಮಾಡಬೇಕಿರುವುದು ಇಷ್ಟೇ...

Published : Mar 16, 2023, 12:03 PM IST
Pathaan OTT ಡೇಟ್​ ಫಿಕ್ಸ್​- ಚಿತ್ರ ನೋಡಲು ಮಾಡಬೇಕಿರುವುದು ಇಷ್ಟೇ...

ಸಾರಾಂಶ

ಬ್ಲಾಕ್​ಬಸ್ಟರ್​ ಪಠಾಣ್​ ಚಿತ್ರವನ್ನು ಓಟಿಟಿಯಲ್ಲಿ  ಯಾವಾಗ ವೀಕ್ಷಿಸಬಹುದು ಎಂದು ಕಾಯುತ್ತಿರುವವರಿಗೆ ಇಲ್ಲಿದೆ ಗುಡ್​ ನ್ಯೂಸ್​. ಚಿತ್ರ ಓಟಿಟಿಯಲ್ಲಿ ಯಾವಾಗ ಬರುತ್ತದೆ ಗೊತ್ತಾ?  

ಕಳೆದ ಜನವರಿ 26ರಂದು ಬಿಡುಗಡೆಗೊಂಡ ನಟ ಶಾರುಖ್ ಖಾನ್ ( Shahrukh Khan), ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ 'ಪಠಾಣ್' (Pathaan) ಸಿನಿಮಾ ಇಂದಿಗೂ ಭರ್ಜರಿಯಾಗಿಯೇ ಓಡುತ್ತಿದೆ.  ಬಿಡುಗಡೆಗೆ ಮುನ್ನವೇ ಪಠಾಣ್​ ಭಾರಿ ವಿವಾದ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿತ್ರದಲ್ಲಿ ಕೇಸರಿ ಬಿಕಿನಿ ತೊಟ್ಟು ನಟಿ ದೀಪಿಕಾ ಪಡುಕೋಣೆ ಬೇಷರಂ ರಂಗ್‌ ಹಾಡಿಗೆ ಸ್ಟೆಪ್‌ ಹಾಕಿ, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಪಠಾಣ್‌ ಬೈಕಾಟ್‌ ಟ್ರೆಂಡ್‌ (Boycott trend) ಶುರುವಾಗಿತ್ತು. ಇದರ ಬಳಿಕ ಕೇಸರಿ ಬಿಕಿನಿ ಬದಲು ಕೇಸರಿ ಲುಂಗಿ ತೊಟ್ಟು ರೀಶೂಟ್‌ ಮಾಡಲಾಗಿತ್ತು. ಇವೆಲ್ಲವೂ ಈಗ ಹಳೆಯ ಸುದ್ದಿ. ಇವೆಲ್ಲವುಗಳ ಹೊರತಾಗಿಯೂ ಪಠಾಣ್‌ ಮಕಾಡೆ ಮಲಗಿದ್ದ ಬಾಲಿವುಡ್‌ ಅನ್ನು ಮತ್ತೆ ಚಿಗುರಿಸಿದೆ. ಹಲವಾರು ದಾಖಲೆಗಳನ್ನು ಮುರಿದು ಇನ್ನೂ ಮುನ್ನುಗ್ಗುತ್ತಿದೆ. ಈಗಾಗಲೇ ಸೂಪರ್ ಹಿಟ್ (Superhit) ಚಿತ್ರಗಳ ಸಾಲಿಗೆ ಸೇರಿ, ಬಾಲಿವುಡ್ (Bollywood) ವೈಭವವನ್ನು ಮರುಕಳಿಸುವಂತೆ  ಮಾಡಿದೆ. 510.99 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ 'ಬಾಹುಬಲಿ 2' ಚಿತ್ರಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆ ಇತ್ತು. 434.70 ಕೋಟಿ ರೂಪಾಯಿ ಗಳಿಸುವ ಮೂಲಕ ಆ ನಂತರದ ಸ್ಥಾನವನ್ನು 'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಕೆಜಿಎಫ್: ಚಾಪ್ಟರ್ 2' (KGF 2) ಸಿನಿಮಾ ಆಕ್ರಮಿಸಿಕೊಂಡಿತ್ತು. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಿದ್ದ ‘ಪಠಾಣ್‌’  ಎಲ್ಲಾ ದಾಖಲೆಗಳನ್ನು  ಮುರಿದಿದೆ. 'ಪಠಾಣ್' ಸಿನಿಮಾ ಈಗಾಗಲೇ 1000 ಕೋಟಿ ರೂಪಾಯಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ, ಗಳಿಕೆಯಲ್ಲಿ ಇನ್ನೂ ಮುನ್ನುಗ್ಗುತ್ತಲೇ ಇದೆ. 

ಈ ಚಿತ್ರ ಬಿಡುಗಡೆಯಾಗಿ  50ನೇ ದಿನ ಪೂರ್ಣಗೊಂಡಿದೆ.  ಬಿಡುಗಡೆಯಾಗಿ 49ನೇ ದಿನಕ್ಕೆ ಭಾರತದಲ್ಲಿ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 25 ಲಕ್ಷ ಗಳಿಕೆ ಕಂಡಿದೆ. ಹೀಗೆ ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಏರಿಕೆ ಕಾಣುತ್ತಿರುವ ಪಠಾಣ್​  ಇದೀಗ ಓಟಿಟಿ ಅಂಗಳಕ್ಕೆ ಆಗಮಿಸಲಿದೆ. ಸಾಮಾನ್ಯವಾಗಿ ಯಾವುದೇ ಚಿತ್ರಗಳು ಬಿಡುಗಡೆಯಾದ 30 ದಿನಗಳ ಒಳಗೆ ಓಟಿಟಿಯಲ್ಲಿ ರಿಲೀಸ್‌ ಆಗುತ್ತವೆ. ಆದರೆ ಪಠಾಣ್​ ಮಾತ್ರ ಇದುವರೆಗೆ ಗೌಪ್ಯತೆ ಕಾಪಾಡಿಕೊಂಡು ಬಂದಿದೆ.  ಸಹಜವಾಗಿ ಸಿನಿಮಾ ಬಿಡುಗಡೆಯಾದ 30-49ನೇ ದಿನಕ್ಕೆ ಬಹುತೇಕ ಚಿತ್ರಗಳು ಓಟಿಟಿಯಲ್ಲಿ ರಿಲೀಸ್‌ ಆಗುತ್ತವೆ. ಆದರೆ, ‘ಪಠಾಣ್‌’ ಮಾತ್ರ ಓಟಿಟಿ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ.  ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಹಿಂದಿ, ತಮಿಳು, ತೆಲುಗು ವರ್ಷನ್ ಮಾರ್ಚ್ 17ಕ್ಕೆ ಸ್ಟ್ರೀಮಿಂಗ್ ಆಗುತ್ತೆ ಎನ್ನುವ ಮಾತುಗಳು ಕೇಳಿಬಂದಿತ್ತು.  ಕೆಲವರು ಏಪ್ರಿಲ್‌ನಲ್ಲಿ ಸಿನಿಮಾ ಓಟಿಟಿ ಬರುತ್ತೆ ಎನ್ನುತ್ತಿದ್ದರು. ಆದರೆ ಇದೀಗ ಕೊನೆಗೂ ಡೇಟ್​ ಫಿಕ್ಸ್​ ಆಗಿದೆ ಎಂಬ ಸುದ್ದಿ ಇದೆ.

PATHAAN​ ಯಶಸ್ಸು ವೈಯಕ್ತಿಕ ಎಂದ ಶಾರುಖ್ ಖಾನ್ ಟ್ವೀಟ್​ನಲ್ಲಿ ಏನಿದೆ?
 
ಪಠಾಣ್‌’ ಸಿನಿಮಾ ಅಮೆಜಾನ್‌ ಪ್ರೈಂ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್‌ 22ಕ್ಕೆ ‘ಪಠಾಣ್‌’ ಚಿತ್ರ ಸ್ಟ್ರಿಮಿಂಗ್‌ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ನೀವು OTT ನಲ್ಲಿ 'ಪಠಾಣ್' ಅನ್ನು ವೀಕ್ಷಿಸಲು ಬಯಸಿದರೆ, ನೀವು Amazon Prime ವೀಡಿಯೊಗೆ ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ. ಅಮೆಜಾನ್ ಪ್ರೈಮ್ ವೀಡಿಯೊದ ವಾರ್ಷಿಕ ಯೋಜನೆ 1,499 ರೂ. ನೀವು ಮಾಸಿಕ ಚಂದಾದಾರಿಕೆಯನ್ನು ಬಯಸಿದರೆ, ನೀವು ಅದಕ್ಕೆ 179 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರ ನಂತರವೇ ನೀವು OTT ನಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್‌’ ಚಿತ್ರದಲ್ಲಿ ಶಾರುಖ್ ಖಾನ್ (Shah Rukh Khan) ಜತೆಗೆ ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಶುತೋಷ್ ರಾಣಾ, ಡಿಂಪಲ್ ಕಪಾಡಿಯಾ ನಟಿಸಿದರೆ, ಸ್ಪೈ ಥ್ರಿಲ್ಲರ್‌ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿಭಾಯಿಸಿದ್ದಾರೆ. 

Besham Rang: ಮೊದಲ ಬಾರಿಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!