ಕಾಜಲ್ ಪಾತ್ರ ತೆಗೆದು ಹಾಕಿದ್ವಿ; ಕೊನೆಗೂ ಸ್ಪಷ್ಟನೆ ನೀಡಿದ 'ಆಚಾರ್ಯ' ನಿರ್ದೇಶಕ

By Shruiti G KrishnaFirst Published Apr 25, 2022, 6:27 PM IST
Highlights

ನಿರ್ದೇಶಕ ಕೊರಟಾಲ ಶಿವ, ಕಾಜಲ್ ಪಾತ್ರವನ್ನು ಸಿನಿಮಾದಿಂದ ತೆಗೆದುಹಾಕಿರುವುದಾಗಿ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ಕಾಜಲ್ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕಾಜಲ್ ಪ್ರಗ್ನೆನ್ಸಿ ಆಗುವ ಮೊದಲು ಚಿತ್ರೀಕರಣ ಮಾಡಿದ್ದ ಭಾಗವನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದ್ದಾರೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಅಭಿನಯದ ಆಚಾರ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 29ರಂದು ಸಿನಿಮಾ ತೆರೆಗೆ ಬರುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಡೆದಿದ್ದು ಸಿನಿಮಾದ ಬಗ್ಗೆ ಅನೇಕ ವಿಚಾರಗಳು ಬಹಿರಂಗವಾಗಿದೆ. ಈ ನಡುವೆ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕಾಜಲ್ ಅಗರ್ವಾಲ್(Kajal Aggarwal) ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಆಚಾರ್ಯ ಸಿನಿಮಾದಿಂದ ಕಾಜಲ್ ಪಾತ್ರವನ್ನು ಕಿತ್ತೆಸೆಯಲಾಗಿದೆ, ಚಿತ್ರತಂಡದ ಜೊತೆ ಕಾಜಲ್ ಮುನಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ಕಾಜಲ್ ಆಗಲಿ ಅಥವಾ ಚಿತ್ರತಂಡದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದೀಗ ಮೊದಲ ಬಾರಿಗೆ ನಿರ್ದೇಶಕ ಕೊರಟಾಲ ಶಿವ ಪ್ರತಿಕ್ರಿಯೆ ನೀಡಿದ್ದಾರೆ.

ಕಾಜಲ್ ಪಾತ್ರವನ್ನು ಸಿನಿಮಾದಿಂದ ತೆಗೆದುಹಾಕಿರುವುದಾಗಿ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ಕಾಜಲ್ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕಾಜಲ್ ಪ್ರಗ್ನೆನ್ಸಿ ಆಗುವ ಮೊದಲು ಚಿತ್ರೀಕರಣ ಮಾಡಿದ್ದ ಭಾಗವನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಕೊರಟಾಲ ಶಿವ, 'ಮೊದಲ ಭಾಗದ ಚಿತ್ರೀಕರಣ ಮುಗಿದ ಬಳಿಕ ನಾನು ವಿಡಿಯೋ ನೋಡಿದೆ. ಆದರೆ ನನಗೆ ಮನವರಿಕೆಯಾಗಿಲ್ಲ. ಈ ಬಗ್ಗೆ ನಾನು ಚಿರಂಜೀವಿ ಅವರ ಬಳಿ ಹೇಳಿದೆ. ಕೊನೆಯ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದರು. ಈ ಬಗ್ಗೆ ಕಾಜಲ್ ಬಳಿ ಮಾತನಾಡಿದೆ. ಅವರು ನಕ್ಕರು. ಕಾಜಲ್ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ಚಿತ್ರದಲ್ಲಿ ಪೂಜಾ ಹೆಗ್ಡೆ ನೀಲಾಂಬರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಪಾತ್ರಕ್ಕೆ ನಾಯಕಿ ಇಲ್ಲ' ಎಂದು ಹೇಳಿದ್ದಾರೆ.

'ಆಚಾರ್ಯ' ಹಿಂದಿಯಲ್ಲಿ ಯಾಕೆ ರಿಲೀಸ್ ಆಗ್ತಿಲ್ಲ; ಕಾರಣ ಬಿಚ್ಚಿಟ್ಟ ರಾಮ್ ಚರಣ್

ಆಚಾರ್ಯ ಸಿನಿಮಾಗೆ ನಾಯಕಿ ಆಯ್ಕೆ ವಿಚಾರದಲ್ಲಿ ಸಿನಿಮಾತಂಡ ಹೆಚ್ಚು ತಲೆಕೆಡಿಸಿಕೊಂಡಿತ್ತು. ಸುದೀರ್ಘ ಹುಡುಕಾಟದ ಬಳಿಕ ಸಿನಿಮಾತಂಡ ಕಾಜಲ್ ಅವರನ್ನು ನಾಯಕಿಯಾಗಿ ಆಯ್ಕೆಯಾಗಿದ್ದರು. ಮೊದಲ ಭಾಗದ ಚಿತ್ರೀಕರಣ ಸಹ ಮುಗಿಸಿದ್ದರು. ಗರ್ಭಿಣಿ ಆಗುತ್ತಿದ್ದಂತೆ ಕಾಜಲ್ ಅನೇಕ ಸಿನಿಮಾಗಳಿಂದ ಹೊರನಡೆದಿದ್ದರು. ಅಂದರಂತೆ ಆಚಾರ್ಯದಿಂದನೂ ದೂರ ಆಗದ್ದರು. ಈ ಬಗ್ಗೆ ಸಿನಿಮಾ ತಂಡ ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಟ್ರೈಲರ್ ಬಿಡುಗಡೆ ಬಳಿಕ ಅನುಮಾನ ಮೂಡಿಸಿತ್ತು. ಯಾಕಂದರೆ ಕಾಜಲ್ ಚಿತ್ರದ ಟ್ರೇಲರ್ ನಲ್ಲಿ ಕಾಣಿಸಿಕೊಂಡಿಲ್ಲ.

ಪ್ರಿ-ರಿಲೀಸ್ ಈವೆಂಟ್ ನಲ್ಲೂ ಯಾರು ಕಾಜಲ್ ಬಗ್ಗೆ ಮಾತನಾಡಿರಲಿಲ್ಲ. ಹಾಗಾಗಿ ಕಾಜಲ್ ಸಿನಿಮಾದಿಂದ ಹೊರನಡೆದಿರುವುದು ಬಹುತೇಕ ಖಚಿತವಾಗಿತ್ತು. ಇದೀಗ ಸ್ವತಃ ನಿರ್ದೇಶಕ ಕೊರಟಾಲ ಶಿವ ಅವರೇ ಬಹಿರಂಗ ಪಡಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸೈನಿಕರ ಜತೆ ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್!

ಆಚಾರ್ಯ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರುತ್ತಿದ್ದು ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರ ತೆರೆಗೆ ಬರುತ್ತಿದೆ. ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಈ ಬಗ್ಗೆ ರಾಮ್ ಚರಣ್ ಪ್ರತಿಕ್ರಿಯೆ ನೀಡಿ, ಇದು ದಕ್ಷಿಣ ಭಾರತದ ಸಿನಿಮಾ. ಹಿಂದಿಯಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇರಲಿಲ್ಲ. ಈಗ ಸಮಯವಿಲ್ಲ. ಹಿಂದಿಯಲ್ಲಿ ಬಿಡುಗಡೆ ಮಾಡದೇ ಇರಲು ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ.

 

click me!