ಅಹಂಕಾರ ಬಿಟ್ಟು 'ಪಠಾಣ್'ನಲ್ಲಿ ಆ್ಯಕ್ಟ್​ ಮಾಡು: ಅಮ್ಮನಿಗೇ ಬುದ್ಧಿ ಹೇಳಿದ್ದ ಟ್ವಿಂಕಲ್​ ಖನ್ನಾ!

By Suvarna NewsFirst Published Jun 13, 2023, 6:07 PM IST
Highlights

16ನೇ ವಯಸ್ಸಿನಲ್ಲಿ ಮದ್ವೆಯಾಗಿ ಚಿತ್ರರಂಗದಿಂದ ದೂರವಾಗಿದ್ದ ನಟಿ ಡಿಂಪಲ್​  ಕಪಾಡಿಯಾ ಪಠಾಣ್​ಗೆ ಬಂದದ್ದು ಮಗಳು ಟ್ವಿಂಕಲ್​ ಖನ್ನಾರಿಂದ. ಅದ್ಹೇಗೆ?
 

80-90ರ ದಶಕದಲ್ಲಿ ಬಾಲಿವುಡ್​ ಆಳಿದ್ದ ನಟಿಯರಲ್ಲಿ ಒಬ್ಬರಾಗಿರೋ ಬಾಬಿ ಖ್ಯಾತಿಯ ಡಿಂಪಲ್​ ಕಪಾಡಿಯಾ (Dimple Kapadia) ಮೊನ್ನೆ ತಾನೇ ಅಂದರೆ  8ನೇ ತಾರೀಖಿನಂದು  66ನೇ ಹುಟ್ಟುಹಬ್ಬ ಆಚರಿಸಿಕೊಂಡರು. 1973ರಲ್ಲಿ ಬಿಡುಗಡೆಯಾಗಿದ್ದ ಬಾಬಿ ಚಿತ್ರದ ಸಂದರ್ಭದಲ್ಲಿ ಡಿಂಪಲ್​ ಅವರಿಗೆ ಇನ್ನೂ 16 ವರ್ಷ ವಯಸ್ಸು.  ಕುತೂಹಲದ ಸಂಗತಿ ಏನೆಂದರೆ, 16ನೇ ವಯಸ್ಸಿನಲ್ಲಿಯೇ ಖ್ಯಾತಿಯ ಉತ್ತುಂಗಕ್ಕೆ ಏರಿದ್ದ ಡಿಂಪಲ್ ಆಗಲೇ​ ಪ್ರೀತಿಯ ಬಲೆಗೆ ಬಿದ್ದು  ಮದ್ವೆಯಾದವರು.   ಬಾಬಿ ಚಿತ್ರೀಕರಣ ಸಂಪೂರ್ಣಗೊಂಡು ಅದರ ಬಿಡುಗಡೆಗೆ ಇನ್ನೂ ಆರು ತಿಂಗಳ ಮೊದಲು ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಡಿಂಪಲ್ ಕಪಾಡಿಯಾ ಬಾಬಿ ಚಿತ್ರೀಕರಣದಲ್ಲಿದ್ದಾಗ, ರಾಜೇಶ್ ಖನ್ನಾ (Rajesh Khanna) ಅವರೇ ಮದುವೆಗೆ ಪ್ರಸ್ತಾಪಿಸಿದರು. ಅಂತಹ ದೊಡ್ಡ ಸೂಪರ್ ಸ್ಟಾರ್ ಅನ್ನು ಡಿಂಪಲ್ ನಿರಾಕರಿಸಲು ಸಾಧ್ಯವಾಗಲಿಲ್ಲ.  

16 ನೇ ವಯಸ್ಸಿನಲ್ಲಿ ರಾಜೇಶ್ ಖನ್ನಾ ಅವರನ್ನು ಮದುವೆಯಾದ ನಂತರ, ಡಿಂಪಲ್ ಕಪಾಡಿಯಾ 17 ನೇ ವಯಸ್ಸಿನಲ್ಲಿ ಟ್ವಿಂಕಲ್ ಖನ್ನಾಗೆ (Twinkle Khanna) ಜನ್ಮ ನೀಡಿದರು. 1977ರಲ್ಲಿ ಮತ್ತೊಬ್ಬ ಮಗಳು ರಿಂಕೆ ಖನ್ನಾ ಈ ಲೋಕಕ್ಕೆ ಬಂದಳು. ಬಾಬಿ ಬಿಡುಗಡೆಯಾದ ನಂತರ ಡಿಂಪಲ್ ಕಪಾಡಿಯಾ ರಾತ್ರೋರಾತ್ರಿ ಸ್ಟಾರ್ ಆದರು. ಆದರೆ, ರಾಜೇಶ್ ಖನ್ನಾ ಅವರ ಒತ್ತಾಯದಿಂದಾಗಿ ಅವರು ಚಲನಚಿತ್ರಗಳಿಂದ ನಿವೃತ್ತಿ ಹೊಂದಬೇಕಾಯಿತು. ಏಕೆಂದರೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಪತ್ನಿ ಚಿತ್ರದಲ್ಲಿ ನಟಿಸುವುದನ್ನು ರಾಜೇಶ್​ ಸಹಿಸಲಿಲ್ಲ. ಆದ್ದರಿಂದ 12 ವರ್ಷಗಳ ಡಿಂಪಲ್​ ಚಿತ್ರದಲ್ಲಿ ಪಾಲ್ಗೊಳ್ಳಲಿಲ್ಲ. ನಂತರ ಅವರು  ಸಾಗರ್ ಚಿತ್ರದ ಮೂಲಕ ಪುನರಾಗಮನ ಮಾಡಿದರು.   ಇದಾಗಲೇ ಡಿಂಪಲ್​ ಅವರಿಗೆ ದಾಂಪತ್ಯದಿಂದ ಸುಸ್ತಾಗಿ ಹೋಗಿದ್ದರು. ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಯಶಸ್ವಿ ನಟಿಯಾಗಿರುವ ಸಮಯದಲ್ಲಿಯೇ ಚಿತ್ರರಂಗದಿಂದ ದೂರ ಉಳಿಯಬೇಕಾದದ್ದೂ ಅವರನ್ನು ಖಿನ್ನತೆಗೆ ತಳ್ಳಿತ್ತು. ಆಕೆ ಎಲ್ಲವನ್ನೂ ಪತಿ ರಾಜೇಶ್​ ಖನ್ನಾ ಅವರನ್ನು ಕೇಳಿಯೇ ಮಾಡಬೇಕಿತ್ತು. ಇದರಿಂದ ಆಕೆಗೆ  ಜೈಲುವಾಸ ಎನ್ನಿಸಲು ಶುರುವಾಯಿತು.  ಅಂತಿಮವಾಗಿ, 1982 ರಲ್ಲಿ, ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಬೇರೆಯಾಗಲು ನಿರ್ಧರಿಸಿದರು.  

Latest Videos

Dimple Kapadia Birthday: 16ಕ್ಕೆ ಮದ್ವೆ, 17ಕ್ಕೆ ಮಗು: ಡಿಂಪಲ್​, ರಾಜೇಶ್​ ಖನ್ನಾ ದಾಂಪತ್ಯದ ಕಥೆ-ವ್ಯಥೆ!

ಬಹುವರ್ಷಗಳ ಬಳಿಕ ಡಿಂಪಲ್​ ಖನ್ನಾ  ಬ್ಲಾಕ್​ಬಸ್ಟರ್​ ಪಠಾಣ್​ ಚಿತ್ರದಲ್ಲಿ ನಟಿಸಿದರು. ಪಠಾಣ್​ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ 65 ವರ್ಷ ಪೂರ್ಣಗೊಂಡಿತ್ತು. ಈ ಚಿತ್ರಕ್ಕೆ ಬರಲು ಮಗಳು, ನಟಿ ಟ್ವಿಂಕಲ್​ ಖನ್ನಾ ಹೇಗೆ ತಮಗೆ ಪ್ರೋತ್ಸಾಹ (encocuragement) ನೀಡಿದರು ಎಂಬ ಬಗ್ಗೆ ಡಿಂಪಲ್​  ಮಾತನಾಡಿದ್ದಾರೆ.  'ನಾನು ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡೆ. ಜೀವನದ ಯಾವುದೋ ಹಂತದಲ್ಲಿ ಚಿತ್ರರಂಗವನ್ನು ಬಿಡಬೇಕಾಗಿ ಬಂತು. ಅದಾದ ಎಷ್ಟೋ ವರ್ಷಗಳ ಬಳಿಕ ಪಠಾಣ್ ಚಿತ್ರದಲ್ಲಿನಟಿಸುವ ಅವಕಾಶ ದೊರಕಿತು. ಆದರೆ ಈ ವಯಸ್ಸಿನಲ್ಲಿ ನಟಿಸುವುದು ಹೇಗೆ ಎನ್ನುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ ನನಗೆ ಪ್ರೋತ್ಸಾಹ ನೀಡಿದ್ದೇ ಮಗಳು ಟ್ವಿಂಕಲ್​ ಖನ್ನಾ ಎಂದಿದ್ದಾರೆ ಡಿಂಪಲ್​.

 'ಒಮ್ಮೆ, ನಾನು ಟ್ವಿಂಕಲ್‌ಗೆ, 'ನಾನು ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ. ಈಗಾಗಲೇ ಕೆಲಸ ಮಾಡಿದ್ದು ಹೆಚ್ಚಾಗಿದೆ ಎಂದಿದ್ದೆ. ಯಾಕೋ ಜೀವನದಲ್ಲಿ ಸಿಕ್ಕಾಪಟ್ಟೆ ಜಿಗುಪ್ಸೆ ಬಂದು ಈ ಮಾತನ್ನು ಹೇಳಿದೆ. ಅದು ಟ್ವಿಂಕಲ್​ಗೂ ಅರ್ಥವಾಗಿತ್ತು. ನಾನು ಇನ್ನೂ ನಟನೆಯಲ್ಲಿ ಉತ್ಸುಕಳಾಗಿರುವ ಆಸೆ ಹೊಂದಿದ್ದು ಅವಳಿಗೂ ತಿಳಿದಂತಿತ್ತು. ಆದರೆ ಯಾಕೋ ಕೆಲಸ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ.  ಜೊತೆಗೆ  ನನ್ನ ಆರೋಗ್ಯವು ಕುಸಿಯುತ್ತಿದೆ ಎನ್ನಿಸುತ್ತಿತ್ತು. ಟೆನ್ಷನ್ (tension) ಆಗುತ್ತಿತ್ತು. ಈ ವಯಸ್ಸಿನಲ್ಲಿ  ತೆರೆಯ ಮೇಲೆ ನನ್ನನ್ನೇ ಯಾಕೆ ಹೀಗೆ ನೋಡಬೇಕು ಎಂಬ ಪ್ರಶ್ನೆಗಳೂ ಕಾಡುತ್ತಿದ್ದವು. ಈಗ ನಟನೆ ಮಾಡಿ ಆಗಬೇಕಾದದ್ದು ಏನಿದೆ ಎಂದೆಲ್ಲಾ ಪ್ರಶ್ನೆಗಳು ನನ್ನಲ್ಲಿ ಎದ್ದಿದ್ದವು. ಆದರೆ ನನ್ನ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಟ್ವಿಂಕಲ್​,  ‘ನಿಮಗೆ ಹಣ ಬೇಕೇ?’ ಎಂದು ಕೇಳಿದಳು, ನಾನು ‘ಹೌದು’ ಎಂದೆ. ‘ಹಾಗಾದರೆ ದುರಹಂಕಾರವನ್ನು ಮನೆಯಲ್ಲಿಟ್ಟುಕೊಂಡು ಕೆಲಸಕ್ಕೆ ಹೋಗು’ ಎಂದಳು. ಆ ಕ್ಷಣದಲ್ಲಿ ಅದು ಮೊಂಡು ವಾದ ಎನ್ನಿಸಿತು. ಆದರೆ ಆಕೆ ಹೇಳಿದ್ದರಲ್ಲಿ ಅರ್ಥವಿತ್ತು. ಅದಕ್ಕಾಗಿ ನಾನು ಪಠಾಣ್​ ಚಿತ್ರ ಮಾಡಿದೆ. ಅದರಲ್ಲಿ ಭರ್ಜರಿ ಯಶಸ್ಸೂ ಸಿಕ್ಕಿತು ಎಂದಿದ್ದಾರೆ ಡಿಂಪಲ್​. 

ಶಾರುಖ್​ ಬಂಗ್ಲೆ ಎದುರು 300 ಫ್ಯಾನ್ಸ್ ಗಿನ್ನೆಸ್​ ವಿಶ್ವ ದಾಖಲೆ! ಏನಿದು?

click me!