ದಿನಕ್ಕೆ 100 ಸಿಗರೇಟ್​- ಕ್ಯಾನ್ಸರ್​ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್​ ಖಾನ್​!

By Suvarna News  |  First Published Jun 13, 2023, 6:03 PM IST

ಶಾರುಖ್​ ಖಾನ್​ ತಮ್ಮ ಸ್ಮೋಕಿಂಗ್​ ಹ್ಯಾಬಿಟ್​ ಕುರಿತು ಮಾತನಾಡಿದ್ದು ಇದನ್ನು ಕೇಳಿದ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಶಾರುಖ್​ ಹೇಳಿದ್ದೇನು?
 


'ಪಠಾಣ್'​ ಭರ್ಜರಿ ಯಶಸ್ಸಿನ ಬಳಿಕ ಜವಾನ್​ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದಾರೆ ಬಾಲಿವುಡ್​ ಬಾದ್​ಶಾ ಶಾರುಖ್ ಖಾನ್​. ಇದರ ನಡುವೆಯೇ ಫ್ಯಾನ್ಸ್​ ಪ್ರಶ್ನೆಗಳಿಗೆ ಉತ್ತರಿಸುವ 'ಆಸ್ಕ್ ಎಸ್‌ಆರ್‌ಕೆ' (askSRK) ಸೆಷನ್ ಆಗ್ಗಾಗ್ಗೆ ನಡೆಸುತ್ತಿರುತ್ತಾರೆ. ಟ್ವಿಟರ್​ನಲ್ಲಿ ಫ್ಯಾನ್ಸ್​ ಕೇಳುವ ಹಲವಾರು ಪ್ರಶ್ನೆಗಳಿಗೆ ಶಾರುಖ್​ ಉತ್ತರಿಸುತ್ತಾರೆ. ಇವುಗಳಲ್ಲಿ ಹಲವು ಹಾಸ್ಯದ ರೂಪದ ಉತ್ತರಗಳಾಗಿರುತ್ತವೆ, ಇನ್ನು ಕೆಲವು ಸೀರಿಯಸ್​ ಪ್ರಶ್ನೆಗಳಿಗೆ ಸ್ವಲ್ಪ ಖಡಕ್​ ಆಗಿಯೇ  ಉತ್ತರಿಸುತ್ತಾರೆ ಶಾರುಖ್​. ಈಗ ಮತ್ತೊಮ್ಮೆ ಅವರ ಇದೇ ಸೆಷನ್​ನಲ್ಲಿ ನಡೆದ ಪ್ರಶ್ನೋತ್ತರವೊಂದು ಭಾರಿ ವೈರಲ್​ ಆಗಿದೆ. ಅದೇನೆಂದರೆ, ಅಭಿಮಾನಿಯೊಬ್ಬರು ಶಾರುಖ್‌ಗೆ (Shah Rukh Khan) ನೀವು ಧೂಮಪಾನವನ್ನು ತ್ಯಜಿಸಿದ್ದೀರಾ ಎಂಬ ಪ್ರಶ್ನೆ ಕೇಳಿದರು.  ಅದಕ್ಕೆ ಶಾರುಖ್​  ಮೊದಲು ಹೌದು ಎಂದಿದ್ದರು. ನಂತರ ಈಗ ನಿಜ ಹೇಳುತ್ತಿದ್ದೇನೆ ಎನ್ನುವ ಮೂಲಕ ಆಗ ನಾನು ಸುಳ್ಳು ಹೇಳಿದ್ದೆ. ಕ್ಯಾನ್ಸರ್​ ಸ್ಟಿಕ್​ನ ಕಡ್ಡಿಯ ಹೊಗೆ ನನ್ನ ಸುತ್ತಲೂ ಆವರಿಸಿಕೊಂಡಿದೆ ಎಂದರು. ಇದನ್ನು ಕೇಳಿದ ಫ್ಯಾನ್ಸ್​ ತುಂಬಾ ಭಾವುಕರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ದಯವಿಟ್ಟು ಹೀಗೆಲ್ಲಾ ಹೇಳಬೇಡಿ. ನೀವು ಬಹು ವರ್ಷ ಬಾಳುತ್ತೀರಿ. ನಿಮ್ಮ ಪ್ರೀತಿ ಜಗತ್ತಿಗೆ ಅಗತ್ಯವಾಗಿದೆ. ನಿಮ್ಮನ್ನು ಪ್ರೀತಿಸುವವರು ಬಹಳ ಮಂದಿ ಇದ್ದಾರೆ. ದಯವಿಟ್ಟು ಹೀಗೆಲ್ಲಾ ಮಾತನಾಡಬೇಡಿ ಎಂದಿದ್ದಾರೆ. 

Tap to resize

Latest Videos

 ಅಸಲಿಗೆ ಸ್ಮೋಕಿಂಗ್​ ಕುರಿತು ಶಾರುಖ್​ ಅವರಿಗೆ ಅಭಿಮಾನಿಯೊಬ್ಬ ಈ ಪ್ರಶ್ನೆ ಕೇಳುವ ಹಿಂದೆಯೂ ಒಂದು ಕಥೆ ಇದೆ. ಅದೇನೆಂದರೆ, ವಾಸ್ತವವಾಗಿ, 2011 ರಲ್ಲಿ ಶಾರುಖ್ ಖಾನ್ ಅವರು ಸಂದರ್ಶನವೊಂದರಲ್ಲಿ  ತಮ್ಮ ಧೂಮಪಾನದ ಅಭ್ಯಾಸದ ಬಗ್ಗೆ ಮಾತನಾಡಿದ್ದರು.  ‘ನನಗೆ ನಿದ್ದೆ ಬರುತ್ತಿಲ್ಲ’ ಎಂದಿದ್ದರು. ಆ ಸಮಯದಲ್ಲಿ ತಮಗಿದ್ದ ಸ್ಮೋಕಿಂಗ್​ ಅಭ್ಯಾಸದ ಕುರಿತು ಮಾತನಾಡಿದ್ದರು. ನಾನು ಸುಮಾರು 100 ಸಿಗರೇಟ್ (cigarette) ಸೇದುತ್ತೇನೆ. ಅದು ಎಷ್ಟರ ಮಟ್ಟಿಗೆ ತೀವ್ರವಾಗಿರುತ್ತದೆ ಎಂದರೆ, ಸ್ಮೋಕಿಂಗ್​ ಮಾಡುತ್ತಾ  ತಿನ್ನುವುದನ್ನೂ  ಸಹ ಮರೆತುಬಿಡುತ್ತೇನೆ. ಅಷ್ಟೇ ಅಲ್ಲ ನಾನು ನೀರು ಕೂಡ ಕುಡಿಯುವುದಿಲ್ಲ. ಒಟ್ಟಾರೆಯಾಗಿ ನಾನು ಮೂವತ್ತು ಕಪ್ ಕಪ್ಪು ಕಾಫಿ ಕುಡಿಯುತ್ತೇನೆ. ಇದೇ ವೇಳೆ ನನ್ನ  ಸಿಕ್ಸ್ ಪ್ಯಾಕ್ ಕಾಪಾಡಿಕೊಳ್ಳುವ ಅಗತ್ಯವೂ ಇದೆ. ಆದರೆ  ನಾನು ನನ್ನ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತೇನೆ ಎಂದಿದ್ದರು. 

ಶಾರುಖ್​ ಖಾನ್​ ಚಿತ್ರದ ರೆಕಾರ್ಡ್​ ಬ್ರೇಕ್​ ಮಾಡಿದ ಸನ್ನಿ ಡಿಯೋಲ್​ 'ಗದರ್'​!

 ಈಗ ಅದನ್ನೇ ಮತ್ತೆ ಅಭಿಮಾನಿ ನೆನಪಿಸಿ ಆ ಅಭ್ಯಾಸ ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆದರೆ ಇನ್ನೂ ಸ್ಮೋಕಿಂಗ್​ ಅಭ್ಯಾಸವನ್ನು ಬಿಡದ್ದದ್ದನ್ನು  ಶಾರುಖ್​ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ತಮ್ಮ ಸುತ್ತಲೂ ಕ್ಯಾನ್ಸರ್​ ಕಡ್ಡಿಯ ಹೊಗೆ (ಸಿಗರೇಟ್​) ಸುತ್ತುತ್ತಲೇ ಇದೆ ಎಂದಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ದಯವಿಟ್ಟು ಇದನ್ನು ಬಿಟ್ಟುಬಿಡಿ ಸರ್​ ಎನ್ನುತ್ತಲಿದ್ದಾರೆ. ಇನ್ನು ಹಲವರು ದಿನವೊಂದಕ್ಕೆ 100 ಸಿಗರೇಟ್​ ಸ್ಮೋಕ್​ (smoking) ಮಾಡುವ ತಮ್ಮ ನೆಚ್ಚಿನ ತಾರೆಯ ವಿಷಯ ಕೇಳಿ ದಂಗಾಗಿ ಹೋಗಿದ್ದಾರೆ. ನಿಜವಾಗಿಯೂ ಶಾರುಖ್​ ಈ ಪರಿಯ ಧೂಮಪಾನ ವ್ಯಸನಿಯೇ ಅಥವಾ ಇದನ್ನು ತಮಾಷೆಯಾಗಿ ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.  ಆದರೆ ಹಿಂದಿನ ಸಂದರ್ಶನವನ್ನು ನೋಡಿದರೆ ಶಾರುಖ್​ ಅವರು ನಿಜವಾಗಿಯೂ ಈ ಪರಿಯ ಧೂಮಪಾನ ವ್ಯಸನಿ ಎನ್ನುವುದು ತಿಳಿದಿದೆ ಎಂದು ಇನ್ನು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೊಂದು ಬಿಜಿ ಶೆಡ್ಯೂಲ್​ ನಡುವೆ ಅಷ್ಟೆಲ್ಲಾ ಸ್ಮೋಕ್​ ಮಾಡಲು ಟೈಮ್​ ಎಲ್ಲಿರುತ್ತದೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. 

ಇನ್ನು ಶಾರುಖ್​ ಅವರ ಕೆಲಸದ ಬಗ್ಗೆ ಹೇಳುವುದಾದರೆ,  ಶಾರುಖ್ ಖಾನ್ ಕೊನೆಯದಾಗಿ 'ಪಠಾಣ್' (Pathaan) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದೇ ಸಮಯದಲ್ಲಿ ಅಟ್ಲಿ ಕುಮಾರ್ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೌತ್‌ನ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಅವರ ಈ ಚಿತ್ರ 7 ಸೆಪ್ಟೆಂಬರ್ 2023 ರಂದು ಬಿಡುಗಡೆಯಾಗಲಿದೆ. 'ಪಠಾಣ್' ಚಿತ್ರದ ನಂತರ ಇದೀಗ ಈ ಚಿತ್ರಕ್ಕೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

ಶಾರುಖ್​ ಬಂಗ್ಲೆ ಎದುರು 300 ಫ್ಯಾನ್ಸ್ ಗಿನ್ನೆಸ್​ ವಿಶ್ವ ದಾಖಲೆ! ಏನಿದು?

Yes he lied, surrounded by a thick plume of smoke from his cancer stick!!! https://t.co/GmKlXV296K

— Shah Rukh Khan (@iamsrk)
click me!