ಹಳೆಯ ಲವ್​ ಬರ್ಡ್ಸ್​ ಮತ್ತೆ ಒಂದಾದ್ರಾ? ಸಲ್ಮಾನ್​- ಐಶ್ವರ್ಯಾ ತಬ್ಬಿಕೊಂಡ ವಿಡಿಯೋ ರಹಸ್ಯವೇನು?

By Suvarna News  |  First Published Nov 8, 2023, 1:14 PM IST

ಹಳೆಯ ಲವ್​ ಬರ್ಡ್ಸ್​ ಸಲ್ಮಾನ್​ ಖಾನ್​ ಮತ್ತು ಐಶ್ವರ್ಯಾ ರೈ ತಬ್ಬಿಕೊಂಡಿದ್ದಾರೆ ಎನ್ನಲಾದ  ವಿಡಿಯೋ ವೈರಲ್​ ಆಗಿದ್ದು, ಇದರ ಸತ್ಯವೇನು?
 


ಬಾಲಿವುಡ್​ ಸ್ಟಾರ್ಸ್​ ಐಶ್ವರ್ಯ ರೈ ಬಚ್ಚನ್​ ಮತ್ತು ಸಲ್ಮಾನ್​ ಖಾನ್​ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೇ.  ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು.  90ರ ದಶಕದಲ್ಲಿ ಸಲ್ಮಾನ್ ಖಾನ್  (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು.  ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್​ ಖಾನ್​ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ.  ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್​ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.

ಆದರೆ ಇವೆಲ್ಲದರ ನಡುವೆ ಈಗ ಇವರಿಬ್ಬರೂ ತಬ್ಬಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ.  ಇತ್ತೀಚೆಗೆ, ಹೆಸರಾಂತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಕಾರ್ಯಕ್ರಮದಲ್ಲಿ  ಹಲವಾರು ಜನಪ್ರಿಯ ಬಾಲಿವುಡ್ ಸೆಲೆಬ್ರಿಟಿಗಳು ಹಾಜರಾಗಿದ್ದರು. ಇವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಕೃತಿ ಸನೋನ್, ಶಾಹಿದ್ ಕಪೂರ್, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ಜಾನ್ವಿ ಕಪೂರ್, ಮಾಧುರಿ ದೀಕ್ಷಿತ್, ರೇಖಾ, ಆದಿತ್ಯ ರಾಯ್ ಕಪೂರ್, ವಿಜಯ್ ವರ್ಮಾ, ತಮನ್ನಾ ಭಾಟಿಯಾ, ಐಶ್ವರ್ಯ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಸೇರಿದ್ದಾರೆ.  ಈ ಪಾರ್ಟಿಯಲ್ಲಿ  ಸಲ್ಮಾನ್ ಮತ್ತು ಐಶ್ವರ್ಯ ರೈ ಅವರು ಅಪ್ಪಿಕೊಂಡಿದ್ದಾರೆ ಎನ್ನುವ ಮಸುಕಾದ ಫೋಟೋ ಸಕತ್​ ಸದ್ದು ಮಾಡುತ್ತಿದೆ.

Tap to resize

Latest Videos

Aishwarya Rai@50: ಅಭಿಷೇಕ್​ಗೆ ಮದ್ವೆಯಾದ್ರೆ ನಟಿಗಿತ್ತು ಅಪಾಯ! ಜಾತಕ ದೋಷದ ಪರಿಹಾರ ಮಾಡಿದ್ದು ಹೇಗೆ?
 
ಚಿತ್ರದಲ್ಲಿ, ಸಲ್ಮಾನ್ ಕೆಂಪು ಬಣ್ಣದ ಬಟ್ಟೆ ತೊಟ್ಟ ಮಹಿಳೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ನೋಡಬಹುದು, ಅನೇಕರು ಐಶ್ವರ್ಯಾ ಎಂದು ಹೇಳಿದ್ದರು. ಏಕೆಂದರೆ ಅವರು ಇದೇ ರೀತಿಯ ಕೆಂಪು ಉಡುಪನ್ನು ಕಾರ್ಯಕ್ರಮದಲ್ಲಿ ಐಶ್ವರ್ಯ ಧರಿಸಿದ್ದರು. ಹಳೆಯ ಲವ್​ ಬರ್ಡ್ಸ್​ ಮತ್ತೆ ಒಂದಾದರು ಎಂದು ಸಕತ್​ ಸುದ್ದಿಯಾಗಿತ್ತು. ಆದರೆ ಅಸಲಿಗೆ ಈಕೆ ಐಶ್ವರ್ಯ ರೈ ಅಲ್ಲ. ಬದಲಿಗೆ   ಆದಿತ್ಯ ಪಾಂಚೋಲಿ ಅವರ ಪುತ್ರಿ ಸನಾ ಪಂಚೋಲಿ ಅವರು ಎನ್ನುವುದು ತಿಳಿದು ಬಂದಿದೆ. ಸನಾ ಕೂಡ  ಕೆಂಪು ಬಟ್ಟೆಯನ್ನು  ಧರಿಸಿದ್ದರಿಂದ ಈ ರೀತಿಯ ಊಹಾಪೋಹ ಎದ್ದಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಪುರುಷರು ಮತ್ತು ಮಹಿಳೆಯರು ಹೀಗೆ ಹಗ್​ ಮಾಡುವುದು ದೊಡ್ಡ ವಿಷಯವೇನಲ್ಲ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ಯಾರು, ಯಾರನ್ನು ಬೇಕಾದರೂ ಹಗ್​ ಮಾಡುವುದು ಮಾಮೂಲು. ಯಾವುದಾದರೂ ಕಾರ್ಯಕ್ರಮಗಳಲ್ಲಿ ಅಥವಾ ಹೀಗೆ ಭೇಟಿಯಾದಾಗ ನಮಸ್ತೆ ಎನ್ನುವ ಬದಲು ವಿದೇಶಿ ಸಂಸ್ಕೃತಿಯಂತೆ ತಬ್ಬಿಕೊಳ್ಳುವುದು ಸಾಮಾನ್ಯ. ಆದರೆ ಸಲ್ಮಾನ್​ ಖಾನ್​ ಮತ್ತು ಐಶ್ವರ್ಯ ರೈ ಅವರು ಹಳೆಯ ಪ್ರೇಮಿಗಳಾಗಿದ್ದರಿಂದ ಈ ವಿಷ್ಯ ಸಕತ್​ ಚರ್ಚೆಗೆ ಗ್ರಾಸವಾಗಿತ್ತು.

ಈಗ ಅಸಲಿಯತ್ತು ಹೊರಬಂದಿದೆ. ಇದರ ವಿಡಿಯೋ ಶೇರ್​  ಮಾಡಿಕೊಂಡು ಕೆಟ್ಟದಾಗಿ ಕಮೆಂಟ್ಸ್​ ಮಾಡುತ್ತಿದ್ದವರ ವಿರುದ್ಧ ನೆಟ್ಟಿಗರು ಅದರಲ್ಲಿಯೂ ಮುಖ್ಯವಾಗಿ ಐಶ್ವರ್ಯ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.  ಇನ್ನು ಸಲ್ಮಾನ್ ಖಾನ್ ಟೈಗರ್ 3 ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, YRF ನ ಸ್ಪೈ ಯೂನಿವರ್ಸ್‌ನಲ್ಲಿ ಐದನೇ ಚಿತ್ರ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ ಮತ್ತು ಶಾರುಖ್ ಖಾನ್ ಪಠಾನ್ ಆಗಿ ಮತ್ತು ಹೃತಿಕ್ ರೋಷನ್ ಕಬೀರ್ ಪಾತ್ರದಲ್ಲಿ ಅತಿಥಿ ಪಾತ್ರಗಳನ್ನು ಹೊಂದಿರುತ್ತಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಇದೇ  ನವೆಂಬರ್ 12ರಂದು ಬಿಡುಗಡೆಯಾಗಲಿದೆ. ಇನ್ನು ಐಶ್ವರ್ಯಾ ರೈ ಅವರು ಮಣಿರತ್ನಂ ಅವರ ತಮಿಳು ಹಿಟ್ ಪೊನ್ನಿಯಿನ್ ಸೆಲ್ವನ್: II ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ.

ಐಶ್ವರ್ಯ @50: ನಕಲಿ ಉಂಗುರ ಕೊಟ್ಟು ಪ್ರಪೋಸ್​ ಮಾಡಿದ್ದ ಅಭಿಷೇಕ್​- ಇಂಟರೆಸ್ಟಿಂಗ್​ ವಿಷ್ಯ ವೈರಲ್

Salman Khan and Aishwarya Rai 😳😳😳 pic.twitter.com/nyZlrGx4Qq

— BHAI (@salmanbhaijaann)
click me!