
ಬಾಲಿವುಡ್ ಸಿನಿಮಾಗಳು ಥಿಯೇಟರ್‌ನಲ್ಲಿ ಸೂಪರ್‌ಹಿಟ್ ಆದರೆ ಮಾತ್ರ ಚಿತ್ರ ಸಕ್ಸಸ್‌ಫುಲ್ ಅನ್ನೋ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಬಾಲಿವುಡ್‌ನ ಆದಾಯದ ರೀತಿಯು ತೀವ್ರವಾಗಿ ಬದಲಾಗಿದೆ. ಈ ಹಿಂದೆ, ಥಿಯೇಟರ್‌ಗಳಲ್ಲಿ ಚಿತ್ರ ಹೆಚ್ಚು ದಿನಗಳ ಕಾಲ ಓಡಿದರೆ ಮಾತ್ರ ನಿರ್ಮಾಪಕನಿಗೆ ಸಿನಿಮಾಕ್ಕಾಗಿ ಹಾಕಿದ ದುಡ್ಡು ವಾಪಾಸ್ ಸಿಗುತ್ತಿತ್ತು. ಆದರೆ ಈಗ ಸಿನಿಮಾದಿಂದ ಆದಾಯ ಗಳಿಸಲು ಇತರ ಹಲವು ಮೂಲಗಳಿವೆ. ಮ್ಯೂಸಿಕಲ್ ರೈಟ್ಸ್, ಡಿಜಿಟಲ್ ಹಕ್ಕುಗಳು ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ದುಡ್ಡು ಬರುವ ಕಾರಣ ಥಿಯೇಟರ್ ಆದಾಯವು ನಿರ್ಮಾಪಕರಿಗೆ ಹೆಚ್ಚು ಕಾಳಜಿಯಲ್ಲದ ವಿಷಯವಾಗಿದೆ.
ಹೀಗಾಗಿಯೇ ನಿರ್ಮಾಪಕ, ನಿರ್ದೇಶಕರ ಅಸಡ್ಡೆಯಿಂದ ಇತ್ತೀಚಿಗೆ ಕೆಲ ಸಿನಿಮಾಗಳು ಥಿಯೇಟರ್‌ನಲ್ಲಿ ಸಂಪೂರ್ಣವಾಗಿ ಸೋತು ಬಿಡುತ್ತವೆ. ಥಿಯೇಟರ್‌ನಲ್ಲಿ ಮೂವಿ ಬಿಡುಗಡೆಗೆ ಚಿತ್ರತಂಡ ಹೆಚ್ಚು ಆಸಕ್ತಿ ತೋರದ ಕಾರಣ ಮೂವಿ ಫ್ಲಾಪ್ ಆಗಿ ಬಿಡುತ್ತದೆ. ಅದೇ ರೀತಿ ಬಾಲಿವುಡ್‌ನ ಈ ಸಿನಿಮಾ ಬರೋಬ್ಬರಿ 45 ಕೋಟಿಯಲ್ಲಿ ನಿರ್ಮಾಣವಾಗಿದ್ದರೂ ಥಿಯೇಟರ್‌ನಲ್ಲಿ ಬಿಡುಗಡೆಗೆ ನಿರ್ಮಾಪಕರು ಹೆಚ್ಚು ಆಸಕ್ತಿ ತೋರದ ಕಾರಣ ಸೂಪರ್ ಫ್ಲಾಪ್ ಸಿನಿಮಾವೆಂದು ಗುರುತಿಸಿಕೊಂಡಿದೆ. 45 ಕೋಟಿ ಬಜೆಟ್‌ನ ಸಿನಿಮಾ ಕೇವಲ ಒಂದು ಲಕ್ಷ ರೂ. ಗಳಿಸಿದೆ.
ಅಂದು ಬಾಲಿವುಡ್ ಕ್ಯೂಟ್ ನಟಿ, ಇಂದು ಭಿಕ್ಷುಕಿ: ತುತ್ತು ಅನ್ನಕ್ಕೂ ಪರದಾಡಿದ ಸುಂದರಿಯ ಕರಾಳ ಸ್ಟೋರಿ ಇದು!
ಅಜಯ್ ಬಹ್ಲ್ ಅವರ ಕ್ರೈಮ್ ಥ್ರಿಲ್ಲರ್ 'ದಿ ಲೇಡಿ ಕಿಲ್ಲರ್', ಅತಿ ಹೆಚ್ಚು ನಷ್ಟವನ್ನುಂಟು ಮಾಡಿದ ಸಿನಿಮಾವಾಗಿದೆ. ಇದರಲ್ಲಿ ಅರ್ಜುನ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2023ರಲ್ಲಿ ನಿರ್ಮಾಣವಾಗಿದೆ. ವರದಿಗಳ ಪ್ರಕಾರ 45 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ 'ದಿ ಲೇಡಿ ಕಿಲ್ಲರ್' ಸಿನಿಮಾವನ್ನು ನಿರ್ಮಿಸಲಾಗಿದೆ. ಆದರೆ 'ದಿ ಲೇಡಿ ಕಿಲ್ಲರ್' ಸಿನಿಮಾಕ್ಕೆ ಹೆಚ್ಚು ಪ್ರಚಾರ ನೀಡಲ್ಲಿಲ್ಲ. ಹೀಗಾಗಿ ಇದು ಶೂನ್ಯ ಪ್ರಚಾರದೊಂದಿಗೆ ಬಿಡುಗಡೆಗೊಡಿತು.
ಆದರೆ ಚಿತ್ರದ ನಿರ್ಮಾಪಕರು ಒಟಿಟಿ ರಿಲೀಸ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಕಾರಣ, ಚಿತ್ರದ ಸೀಮಿತ ಥಿಯೇಟರಿಕಲ್ ಬಿಡುಗಡೆಯನ್ನು ಘೋಷಿಸಿದರು. 'ದಿ ಲೇಡಿ ಕಿಲ್ಲರ್' ಭಾರತದಾದ್ಯಂತ ಕೇವಲ ಒಂದು ಡಜನ್ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಯಿತು, ಮೊದಲ ದಿನದಲ್ಲಿ ಕೇವಲ 293 ಟಿಕೆಟ್ ಮಾರಾಟಗೊಂಡಿತು. ಮತ್ತು ಕೇವಲ 38,000 ಗಳಿಸಿತು. ಸಿನಿಮಾದ ಒಟ್ಟು ಗಳಿಕೆಯು ಸಹ 1 ಲಕ್ಷಕ್ಕಿಂತ ಕಡಿಮೆಯಿತ್ತು ಎಂದು ತಿಳಿದುಬಂದಿದೆ.
ಬಾಲಿವುಡ್‌ನ ಅತಿದೊಡ್ಡ ಫ್ಲಾಪ್ ನಟ; ಬ್ಯಾಕ್ ಟು ಬ್ಯಾಕ್ 9 ಮೂವಿ ಸೋತ್ರೂ ಕೈಯಲ್ಲಿದೆ 200 ಕೋಟಿಯ ಸಿನಿಮಾ!
'ದಿ ಲೇಡಿ ಕಿಲ್ಲರ್' ಚಿತ್ರಕ್ಕೆ ಸ್ಟಾರ್‌ಗಳು ಮತ್ತು ನಿರ್ದೇಶಕರು ಪ್ರಚಾರವನ್ನೂ ಮಾಡಲಿಲ್ಲ. ಈ ವಿಲಕ್ಷಣ ಬಿಡುಗಡೆಯ ತಂತ್ರಕ್ಕೆ ಕಾರಣವೆಂದರೆ ಚಿತ್ರದ ತಯಾರಕರ ಒಪ್ಪಂದದ ಬಾಧ್ಯತೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಚಿತ್ರದ OTT ಬಿಡುಗಡೆಯ ಗಡುವು (ಇದಕ್ಕಾಗಿ ಈಗಾಗಲೇ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ) ಡಿಸೆಂಬರ್ ಅಂತ್ಯವಾಗಿತ್ತು. ಇದರ ಅರ್ಥವೇನೆಂದರೆ, ನಿಗದಿತ 4-6 ವಾರಗಳ ಥಿಯೇಟ್ರಿಕಲ್ ರಿಲೀಸ್ ವಿಂಡೋಗಾಗಿ ನವೆಂಬರ್ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕಾಗಿತ್ತು. ಡಿಜಿಟಲ್ ಹಕ್ಕುಗಳ ಆದಾಯವು ನಿರ್ಮಾಪಕರಿಗೆ ಮುಖ್ಯವಾದ ಕಾರಣ, ಅವರು ಚಿತ್ರವನ್ನು ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರು, ಇದು ಚಿತ್ರದ ನೀರಸ ಪ್ರದರ್ಶನಕ್ಕೆ ಕಾರಣವಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.