ಟೆರರಿಸ್ಟ್​ ಎಂದು ಬಂಧಿಸಿದ್ರು, ರೇ* ಮಾಡಿದ್ರು, ವಾಂತಿ ಮಾಡಿಕೊಂಡೆ: ಘನಘೋರ ಘಟನೆ ತೆರೆದಿಟ್ಟ ನಟಿ ದಿಯಾ

Published : Apr 22, 2025, 06:48 PM ISTUpdated : Apr 23, 2025, 10:18 AM IST
ಟೆರರಿಸ್ಟ್​ ಎಂದು ಬಂಧಿಸಿದ್ರು, ರೇ* ಮಾಡಿದ್ರು, ವಾಂತಿ ಮಾಡಿಕೊಂಡೆ: ಘನಘೋರ ಘಟನೆ ತೆರೆದಿಟ್ಟ ನಟಿ ದಿಯಾ

ಸಾರಾಂಶ

ದಿಯಾ ಮಿರ್ಜಾ "ಕಾಫೀರ್" ವೆಬ್‌ಸರಣಿಯ/ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಭಯೋತ್ಪಾದಕಿ ಎಂದು ಆರೋಪಿಸಲ್ಪಟ್ಟ ಪಾಕಿಸ್ತಾನಿ ಮಹಿಳೆಯಾಗಿ ನಟಿಸಿದ ಅವರು, ಚಿತ್ರೀಕರಣದ ವೇಳೆ ಅತ್ಯಾಚಾರದ ದೃಶ್ಯಗಳು ಮಾನಸಿಕ ಮತ್ತು ದೈಹಿಕವಾಗಿ ತುಂಬಾ ಕಠಿಣವಾಗಿದ್ದವು ಎಂದು ಹೇಳಿದ್ದಾರೆ. ಅನುಭವವು ತೀವ್ರವಾಗಿತ್ತು ಮತ್ತು ವಾಂತಿ ಮಾಡಿಕೊಳ್ಳುವಂತಾಯಿತು ಎಂದು ವಿವರಿಸಿದ್ದಾರೆ.

ನನ್ನನ್ನು ಟೆರರಿಸ್ಟ್​ ಎಂದು ಬಂಧಿಸಿದ್ರು, ನನ್ನ ಮೇಲೆ ಅತ್ಯಾ*ರ ಆಯ್ತು... ಆಮೇಲೆ ವಾಂತಿ ಮಾಡಿಕೊಳ್ಳುವ ಹಾಗಾಯ್ತು, ಅದು ಭಯಾನಕ, ಘನಘೋರ ದಿನಗಳು ಎನ್ನುತ್ತಲೇ ಅಂದು ನಡೆದ ಇಂಚಿಂಚು ಮಾಹಿತಿ ನೀಡಿದ್ದಾರೆ ಬಾಲಿವುಡ್​ ನಟಿ ದಿಯಾ ಮಿರ್ಜಾ. ಅಂದಹಾಗೆ ನಟಿ ಹೇಳಿದ್ದು ತಮ್ಮ ಕಾಫೀರ್​ ಎಂಬ ವೆಬ್​ ಸೀರಿಸ್​ ಕುರಿತು. (ಮುಸ್ಲಿಮೇತರರನ್ನು ಕಾಫೀರ್​ ಎಂದು ಕರೆಯಲಾಗುತ್ತದೆ). ಈ ಚಿತ್ರದಲ್ಲಿ ನಟಿ ಕೈನಾಜ್ ಎನ್ನುವ ಪಾತ್ರವನ್ನು ಮಾಡಿದ್ದಾರೆ. ಇದರ ಶೂಟಿಂಗ್​ ವೇಳೆ, ಅದರಲ್ಲಿಯೂ ಶೂಟಿಂಗ್​ ಸಮಯದಲ್ಲಿ ನಡೆದ ರೇ* ದೃಶ್ಯಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಮಾನಸಿಕ ಮತ್ತುಶಾರೀರಿಕವಾಗಿ ತಾವು ಹೇಗೆ ಈ ಶೂಟಿಂಗ್​ ಬಳಿಕ ಜರ್ಜರಿತರಾದೆ ಎನ್ನುವ ಬಗ್ಗೆ ಅವರು ಭಯಾನಕ ದಿನಗಳನ್ನು ಕಳೆದಿರುವುದಾಗಿ ಹೇಳಿದ್ದಾರೆ. 

ಕಾಫಿರ್" ಚಿತ್ರದಲ್ಲಿ, ಆಕಸ್ಮಿಕವಾಗಿ ಗಡಿ ದಾಟಿದ ನಂತರ ಪಾಕಿಸ್ತಾನಿ ಮಹಿಳೆ ಕೈನಾಜ್​ ಆಗಿದ್ದಾರೆ ದಿಯಾ.  ಅವರನ್ನು ಭಯೋತ್ಪಾದಕಿ ಎಂದು ಆರೋಪಿಸಿ ಭಾರತದಲ್ಲಿ ತಪ್ಪಾಗಿ ಬಂಧಿಸಲಾಯಿತು. ಇದರಲ್ಲಿನ ಮನೋಜ್ಞ ಅಭಿನಯಕ್ಕೆ ನಟಿ ಸಾಕಷ್ಟು ಪ್ರಶಂಸೆ ಗಳಿಸಿದರೂ, ಅದರ ಶೂಟಿಂಗ್​ ಬಳಿಕ ನಡೆದ ಕಠಿಣ ದಿನಗಳನ್ನು ನಟಿ ನೆನಪಿಸಿಕೊಂಡಿದ್ದಾರೆ.  ಭಾವನಾತ್ಮಕವಾಗಿ ಇದು ನನ್ನನ್ನು ಛಿದ್ರಗೊಳಿಸಿತು ಎಂದಿದ್ದಾರೆ. "ನಾವು ಅತ್ಯಾ*ರ ದೃಶ್ಯಗಳ ಶೂಟಿಂಗ್​ ಮಾಡಿದಾಗ  ಅದು ತುಂಬಾ ಕಷ್ಟಕರವಾಗಿತ್ತು. ಆ ದೃಶ್ಯದ ಚಿತ್ರೀಕರಣ ಮುಗಿದ ನಂತರ ನಾನು ದೈಹಿಕವಾಗಿ ನಡುಗುತ್ತಿದ್ದೆ. ನನಗೆ ವಾಂತಿ ಬಂದಿತ್ತು.  ಆ ಸಂಪೂರ್ಣ ಸರಣಿಯನ್ನು ಚಿತ್ರೀಕರಿಸಿದ ನಂತರ ನಾನು ವಾಂತಿ ಮಾಡಿದೆ. ಆ ಸನ್ನಿವೇಶಗಳು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಎಷ್ಟು ಕಷ್ಟಕರವಾಗಿದ್ದವು. ನೀವು ನಿಮ್ಮ ಇಡೀ ದೇಹವನ್ನು ಆ ಕ್ಷಣದ ಸತ್ಯಕ್ಕೆ ತೆಗೆದುಕೊಂಡಾಗ, ನೀವು ಅದನ್ನು ಅನುಭವಿಸುತ್ತೀರಿ. ನೀವು ಅದನ್ನು ಅದರ ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೀರಿ. ಒಂದು ಪಾತ್ರದಲ್ಲಿ ಮುಳುಗಿದಾಗ ನಿಜಕ್ಕೂ ಅದು ಭಯಾನಕವಾಗಿತ್ತು ಎಂದು ದಿಯಾ ಹೇಳಿದ್ದಾರೆ. 

Reality Check: ಗುಟ್ಟಾಗಿ ಮದ್ವೆಯಾಗಿ ದುಬೈಗೆ ಹಾರಿದ ಹಾರ್ದಿಕ್​ ಪಾಂಡ್ಯ- ರಶ್ಮಿಕಾ ಮಂದಣ್ಣ?
 
ಅಂದಹಾಗೆ ಈ ವೆಬ್​ ಸೀರಿಸ್​ 2019ರಲ್ಲಿ ಬಿಡುಗಡೆಯಾಗಿತ್ತು.  ಈ ಸರಣಿಯನ್ನು ಸೋನಂ ನಾಯರ್ ಅವರು ನಿರ್ದೇಶನ ಮಾಡಿದ್ದರು. ಈ ಸರಣಿ ಈಗ ಸಾಕಷ್ಟು ಎಡಿಟಿಂಗ್ ಬಳಿಕ ಸಿನಿಮಾ ರೂಪದಲ್ಲಿ ಹೊರ ಬರುತ್ತಿದೆ. ಇದರ ಕಥೆ ಎಂದರೆ ಪಾಕಿಸ್ತಾನದ ಮಹಿಳೆ ಕೈನಾಜ್ ಅಖ್ತರ್  ಭಾರತದ ಗಡಿ ದಾಟಿ ಗೊತ್ತಿಲ್ಲದೇ ಬಂದು ಸಿಲುಕಿ ಬೀಳುತ್ತಾಳೆ.  ಆಕೆಯ ಮೇಲೆ ಭಯೋತ್ಪಾದನೆಯ ಆರೋಪ ಬರುತ್ತದೆ. ನಿಜಕ್ಕೂ ಆಕೆ ಭಯೋತ್ಪಾದಕಿಯಾ? ಅವಳ ಮೇಲೆ ಈ ಆರೋಪ ಬಂದಿದ್ದು ಹೇಗೆ ಎಂಬುದನ್ನು ಸಿನಿಮಾ ವಿವರಿಸುತ್ತದೆ. ಆಕೆಯ ಮೇಲೆ ನಡೆಯುವ ಲೈಂ*ಕ ದೌರ್ಜನ್ಯದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ. ರೇ* ದೃಶ್ಯಗಳನ್ನು  ಮಾಡಿದಾಗ ನಾನು ಪಾತ್ರದಲ್ಲಿ  ಮುಳುಗಿ ಹೋಗಿದ್ದೆ.  ಆಗ ನಿಜಕ್ಕೂ ನನ್ನ ಮೇಲೆ  ಅತ್ಯಾಚಾ* ಆಗುತ್ತಿದೆ ಎಂಬ ರೀತಿಯ ಭಾವನೆ ಕಾಡಿತು. ಇದರಿಂದ   ಮನಸ್ಸಿಗೆ ಘಾಸಿ ಆಯಿತು. ಆದರೆ, ನಟನೆಗೆ ಸಂಪೂರ್ಣ ನ್ಯಾಯ ಒದಗಿಸಿದ ಭಾವನೆ ಇದೆ ಎಂದಿದ್ದಾರೆ.

ಈ ಸರಣಿಯು ಸದ್ಯ ಸಿನಿಮಾ  ರೂಪದಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ.  ಸಿನಿಮಾ  ಅನೇಕ ಹೃದಯವಿದ್ರಾವಕ ದೃಶ್ಯಗಳನ್ನು ಹೊಂದಿದೆ. ಈ ಸಿನಿಮಾದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ದಿಯಾ ಮಿರ್ಜಾ ಅತ್ಯದ್ಭುತವಾಗಿ ಈ ಸಿನಿಮಾದಲ್ಲಿ ನಟಿಸಿ, ವಿಮರ್ಶಕರಿಂದ ಪ್ರಶಂಸೆ ಕೂಡ ಪಡೆದಿದ್ದಾರೆ. 

ರಕ್ಷಿತ್​ ಶೆಟ್ಟಿ ಜೊತೆಗಿನ ಆ ವಿಷ್ಯ ಮಾತ್ರ ಕನ್ನಡದಲ್ಲಿ ಕೇಳ್ಬಾರ್ದಂತೆ! ಅಲೆಲೆ... ರಶ್ಮಿಕಾ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!