
ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಚಿತ್ರವು 14 ಫೆಬ್ರವರಿ 2025ರಂದು ಬಿಡುಗಡೆ ಅಗಿದೆ. ಈ ಚಿತ್ರವು ಸಿನಿಮಾ ಪ್ರೇಕ್ಷಕರು ಹಾಗೂ ವಿಮಿರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ಗಳಿಕೆಯು ಒಂದೇ ವಾರದಲ್ಲಿ ಸಾಕಷ್ಟು ಏರಿತ್ತಾದ್ದರಿಂದ, ಈ ಚಿತ್ರವು 500 ಕೋಟಿ ಗಡಿ ದಾಟುವ ನಿರೀಕ್ಷೆ ಇತ್ತು, ಅದರಂತೆ, ಛಾವಾ ಚಿತ್ರವು ಹಿಂದಿ ಭಾಷೆಯ ಮಾರ್ಕೆಟ್‌ನಲ್ಲಿ 66ನೆಯ ದಿನಕ್ಕೆ ಬರೋಬ್ಬರಿ 600 ಕೋಟಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.
ಈ ಮೊದಲು ಸ್ತ್ರೀ (Stree) ಹಾಗೂ ಪುಷ್ಪ 2 (Pushpa 2) ಚಿತ್ರವು ಈ ಮಟ್ಟದ ಯಶಸ್ಸು ಪಡೆದು 500 ಕೋಟಿಯ ಗಡಿ ದಾಟಿದ್ದವು. ಇದೀಗ ಛಾವಾ ಸರದಿ. ಈ 600 ಕೋಟಿ ಗಳಿಕೆ ಕೇವಲ ಹಿಂದಿ ಬಾಕ್ಸ್ ಆಫೀಸ್‌ನದು ಎಂಬುದು ವಿಶೇಷ. ಹೌದು, ವಿಕ್ಕಿ ಕೌಶಲ್ ವೃತ್ತಿ ಜೀವನದಲ್ಲಿ ಈ ಚಿತ್ರವು ಕಮಾಲ್ ಮಾಡಿದೆ, ಭಾರಿ ದಾಖಲೆ ಗಳಿಕೆ ಮಾಡಿ ಅವರಿಗೆ ಹೊಸ ಇಮೇಜು ತಂದು ಕೊಟ್ಟಿದೆ. ಆದರೆ, ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಈಗಾಗಲೇ ಆ ದಾಖಲೆ ಮಾಡಿಯಾಗಿತ್ತು. ಹೀಗಾಗಿ ನಟಿ ರಶ್ಮಿಕಾ ಅವರಿಗೆ ಇದು ಇನ್ನೊಂದು ಸೂಪರ್ ಹಿಟ್ ಚಿತ್ರವಷ್ಟೇ ಆಗಿದೆ.
ಪೋಸ್ಟ್ ಲೈಕ್ ಮಾಡಿ ಹೊಸ ಚರ್ಚೆ ಹುಟ್ಟುಹಾಕಿದ ಸಮಂತಾ; ಪುರುಷರು ಗರಂ ಆದ್ರಾ..!?
ಈ ಮೊದಲೂ ಕೂಡ ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. ಅದೇನೇ ಇರಲಿ, ಮರಾಠಾ ಸಾಮ್ರಾಜ್ಯದ ಹುಲಿ ಎಂದೇ ಖ್ಯಾತಿ ಪಡೆದಿರುವ ಶಿವಾಜಿ ಅವರ ಮಗ ಸಂಭಾಜಿ ಜೀವನಾಧಾರಿತ ಕಥೆ ಈ ಛಾವಾ ಚಿತ್ರದ್ದಾಗಿದೆ. ನಟ ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಕೇವಲ ನಟನೆ ಮಾಡಿಲ್ಲ, ಜೀವಿಸಿದ್ದಾರೆ ಎಂಬ ಅಭಿಪ್ರಾಯ ಹೊಗಳಿಕೆ ಪ್ರೇಕ್ಷಕರ ಕಡೆಯಿಂದ ವ್ಯಕ್ತವಾಗಿದೆ. ಅಷ್ಟರಮಟ್ಟಿಗೆ ಈ ಚಿತ್ರದ ನಟನೆಯಲ್ಲಿ ವಿಕ್ಕಿ ಕೌಶಲ್ ಅವರು ಪ್ರಭುತ್ವ ತೋರಿಸಿದ್ದಾರೆ.
ಈ ಮೊದಲು ತೆರೆಗೆ ಬಂದಿದ್ದ ವಿಕ್ಕಿ ನಟನೆಯ ಎಲ್ಲಾ ಸಿನಿಮಾದಲ್ಲಿ ಕೂಡ ಅವರ ನಟನೆ ಚೆನ್ನಾಗಿದ್ದರೂ ಸಹ ಸಿನಿಮಾ ಈ ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ವಿಕ್ಕಿ ಕೌಶಲ್ ನಟನೆ ಜನರಿಗೆ ತಲುಪಿರಲಿಲ್ಲ ಎನ್ನಬಹುದು. ಆದರೆ, ಛಾವಾ ಸೂಪರ್ ಹಿಟ್ ಆಗಿದೆ, ಜನರು ವಿಕ್ಕಿ ಕೌಶಲ್ ನಟನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರನ್ನು ಉತ್ತರ-ದಕ್ಷಿಣ ಎಂಬ ಬೇಧವಿಲ್ಲದೇ ಎಲ್ಲಾ ಭಾಷೆಯ ಚಿತ್ರರಂಗಗಳು ಒಪ್ಪಿಕೊಂಡಿವೆ.
ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!
ರಶ್ಮಿಕಾರ ನಟನೆ ಛಾವಾದಲ್ಲಿ ಈ ಮೊದಲಿಗಿಂತ ಇನ್ನೊಂದು ಹಂತ ಮೇಲೆ ಇದೆ ಎನ್ನಲಾಗುತ್ತಿದೆ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದಾರೆ. ಅವರ ಈ ಬೆಳವಣಿಗೆ ಹಿಂದೆ ಸಿನಿಮಾ ಪ್ರೀತಿ, ಪರಿಶ್ರಮ ಹಾಗೂ ಅದೃಷ್ಟ ಎಲ್ಲವೂ ಇದೆ. ಒಟ್ಟನಲ್ಲಿ, ನಟಿ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸಿನಿಮಾ ಸೋತರೂ ಕೂಡ ಛಾವಾ ಗೆಲುವು ಪಡೆದಿರುವ ಮೂಲಕ ಅವರ ಬೇಡಿಕೆಗೆ ಯಾವುದೇ ಧಕ್ಕೆ ಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.