Dhanush About Sara Ali Khan: ಸಾರಾಗಿಂತ ಸೋನಂ ಬೆಸ್ಟ್ ಕೋಸ್ಟಾರ್ ಎಂದ ಧನುಷ್, ನಟಿಯ ರಿಯಾಕ್ಷನ್ ಇದು

Suvarna News   | Asianet News
Published : Dec 23, 2021, 10:42 AM ISTUpdated : Dec 23, 2021, 11:00 AM IST
Dhanush About Sara Ali Khan: ಸಾರಾಗಿಂತ ಸೋನಂ ಬೆಸ್ಟ್ ಕೋಸ್ಟಾರ್ ಎಂದ ಧನುಷ್, ನಟಿಯ ರಿಯಾಕ್ಷನ್ ಇದು

ಸಾರಾಂಶ

ಸೌತ್ ಸ್ಟಾರ್ ಧನುಷ್(Dhanush) ಸಾರಾ ಅಲಿ ಖಾನ್‌ನನ್ನು ಸೋನಂ ಕಪೂರ್‌ಗೆ(Sonam Kapoor) ಹೋಲಿಸಿ ಮಾತನಾಡಿದ್ದು ಸೋನಂ ಬೆಸ್ಟ್ ಅಂತ ಹೇಳಿದ್ದಾರೆ. ಯಾಕಂತೆ ಬೆಸ್ಟ್ ? ಸಾರಾ ಏನ್ ಮಾಡಿದ್ರು ?

ಧನುಷ್, ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್(Sara Ali Khan) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅಟ್ರಾಂಗಿ ರೇ(Atrangi Rey) ಸಿನಿಮಾ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಸಾರಾ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಸೋಲೋ ಸಾಂಗ್ ಕೂಡಾ ಮಾಡಿದ್ದಾರೆ. ಧನುಷ್ ಹಾಗೂ ಅಕ್ಷಯ್ ಜೊತೆಗಿನ ಶೂಟಿಂಗ್ ಎಂಜಾಯ್ ಮಾಡಿರೋ ಸಾರಾ ಸಿನಿಮಾ ಕುರಿತು ಉತ್ಸುಕರಾಗಿದ್ದಾರೆ. ಆದರೆ ಈಗ ಧನುಷ್ ಸಾರಾ ಅಲಿ ಖಾನ್ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಸಾರಾ ಅಲಿ ಖಾನ್ ಬೆಸ್ಟ್ ಕೋಸ್ಟಾರ್ ಅಲ್ವಾ ? ಅವರ ಜೊತೆ ಕೆಲಸ ಮಾಡೋದು ಅಂದ್ರೆ ಕಷ್ಟನಾ ? ಧನುಷ್ ಏನ್ ಹೇಳಿದ್ದಾರೆ ಗೊತ್ತೇ ?

ಇತ್ತೀಚೆಗೆ ಧನುಷ್ ಹಾಗೂ ಸಾರಾ ಕರಣ್ ಜೋಹರ್(Karan Johar) ಜೊತೆಗೆ ಚಾಟ್ ಶೋನಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಧನುಷ್ ಅವರಲ್ಲಿ ಕರಣ್ ಒಂದು ಪ್ರಶ್ನೆ ಕೇಳಿದ್ದರು. ಸಾರಾ ಅಲಿ ಖಾನ್ ಹಾಗೂ ಸೋನಂ ಕಪೂರ್(Sonam Kapoor) ಮಧ್ಯೆ ಯಾರು ಬೆಸ್ಟ್ ಕೋಸ್ಟಾರ್ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಒಂದು ಸೆಕೆಂಡ್ ಕೂಡಾ ಯೋಚಿಸಿದೆ ಧನುಷ್ ತಟ್ಟನೆ ಸೋನಂ ಕಪೂರ್ ಎಂದು ಉತ್ತರ ಕೊಟ್ಟಿದ್ದಾರೆ. ಸೋನಂ ಕಪೂರ್ ಧನುಷ್‌ನ ಮೊದಲ ಬಾಲಿವುಡ್(Bollywood) ಸಿನಿಮಾ ರಾಂಝಾನಾದಲ್ಲಿ ಸಹನಟಿಯಾಗಿದ್ದರು. ಇದನ್ನು ಆನಂದ್ ಎಲ್ ರೈ ಅವರೇ ನಿರ್ದೇಶನ ಮಾಡಿದ್ದು ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. 2013ರ ಬಿಗ್ಗೆಸ್ಟ್ ಸಕ್ಸಸ್ ಸಿನಿಮಾ ಆಗಿತ್ತದು.

ಸಾರಾಳನ್ನು ನೋಡಿ ಚಕಾ ಚಕ್ ಆಂಟಿ ಅಂತಿದ್ದಾರೆ ಫ್ಯಾನ್ಸ್

ಅಟ್ರಾಂಗಿ ರೇ ಸಿನಿಮಾ ಪ್ರಮೋಷನ್ ಭಾಗವಾಗಿ ಕಾಫಿ ವಿತ್ ಕರಣ್‌ನಲ್ಲಿ ಧನುಷ್ ಹಾಗೂ ಸಾರಾ ಭಾಗವಹಿಸಿದ್ದು ರಾಪಿಡ್ ಫೈರ್ ರೌಂಡ್‌ನಲ್ಲಿ ಇಬ್ಬರು ನಟಿಯರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಧನುಷ್ ಅವರಿಗೆ ಕೇಳಲಾಗಿತ್ತು. ಧನುಷ್ ಸೋನಂ ಕಪೂರ್ ಹೆಸರನ್ನು ಆರಿಸಿಕೊಂಡಾಗ ಸಾರಾ ಅಲಿ ಖಾನ್ ಪ್ರತಿಕ್ರಿಯಿಸಿ, ವಾವ್ ಇದು ಇದು ಆಕ್ಷೇಪಾರ್ಹ ಅಲ್ಲ, ನಾನು ನನ್ನ ಅಡೆ ತಡೆ ಎಲ್ಲ ಕಳೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ತನ್ನ ಆಯ್ಕೆಗೆ ಸ್ಪಷ್ಟನೆ ಕೊಟ್ಟ ಧನುಷ್ ಸೋನಂ ಕಪೂರ್ ನನಗೆ ಯಾವಾಗಲೂ ಸ್ಪೆಷಲ್. ಬಾಲಿವುಡ್‌ನಲ್ಲಿ ನನ್ನ ಮೊದಲ ಕೋಸ್ಟಾರ್ ಅವರು. ಸಾರಾ ಅವರ ಕರುಣೆ, ಸ್ವೀಟ್ನೆಸ್, ಫನ್ ಎಲ್ಲವೂ ಸೆಟ್‌ನಲ್ಲಿ ಚೆನ್ನಾಗಿತ್ತು. ಇದನ್ನು ಕಡೆಗಣಿಸುತ್ತಿಲ್ಲ. ಆದರೆ ಸೋನಂ ಕಪೂರ್ ತುಂಬಾ ಸ್ಪೆಷಲ್. ಸೋನಂ ನನಗೆ ಹಿಂದಿ ಸಿನಿಮಾದಲ್ಲಿ ಮೊದಲ ಕೋಸ್ಟಾರ್. ಸೌತ್‌ನಿಂದ ಬಂದ ಒಬ್ಬ ಹುಡುಗನಾಗಿ ಅವರು ನನಗೆ ತುಂಬಾ ಕಂಫರ್ಟ್ ಆಗುವಂತೆ ನೋಡಿಕೊಂಡಿದ್ದರು. ನನ್ನ ಬಗ್ಗೆ ಕರುಣೆ ಇತ್ತು. ನಾನದಕ್ಕೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಧನುಷ್ ಅವರು ಅಟ್ರಾಂಗಿ ರೇ ಚಿತ್ರದಲ್ಲಿ ಸಾರಾ ರಿಂಕು ಪಾತ್ರವನ್ನು ನಿರ್ವಹಿಸಬಹುದೇ ಎಂದು ಚಿಂತಿತರಾಗಿದ್ದರು ಎಂದು ಒಪ್ಪಿಕೊಂಡಿದ್ದಾರೆ. ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಸ್ವಲ್ಪ ಚಿಂತಿತನಾಗಿದ್ದೆ. ಇದು ತುಂಬಾ ದೊಡ್ಡ ಪಾತ್ರ ಮತ್ತು ನಿರ್ವಹಿಸಲು ತುಂಬಾ ಕಷ್ಟಕರವಾದ ಪಾತ್ರವಾಗಿದೆ. ನಾನು ಆನಂದ್ ಜಿ ಅವರನ್ನು ಕೇಳಿದೆ, ಸಾರಾ ಎಷ್ಟು ಚಿತ್ರಗಳನ್ನು ಮಾಡಿದ್ದಾಳೆ?’ ಅವರು ಆ ಸಮಯದಲ್ಲಿ ನನಗೆ 2 ಅಥವಾ 3 ಚಿತ್ರಗಳನ್ನು ಹೇಳಿದರು. ನಾನು, 'ಅವಳು ಈ ಪಾತ್ರ ಮಾಡಬಹುದೇ ಎಂದು ಕೇಳಿದ್ದೆ ಎಂದು ಅವರು ಒಪ್ಪಿಕೊಂಡರು. ಆದರೆ, ನಿರ್ದೇಶಕ ಆನಂದ್ ಎಲ್ ರೈ ಧನುಷ್ ಗೆ ಧೈರ್ಯ ತುಂಬಿದ್ದರು ಎಂದಿದ್ದಾರೆ. ಆಟ್ರಾಂಗಿ ರೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯನ್ನು ಬಿಟ್ಟು ನೇರವಾಗಿ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?