ಸಾಯಿ ಪಲ್ಲವಿ(Sai Pallavi) ಅವರು ಶ್ಯಾಮ್ ಸಿನ್ಹಾ ರಾಯ್ ಸಿನಿಮಾ ಕೆಲಸದಲ್ಲಿ ಬ್ಯಸಿಯಾಗಿದ್ದಾರೆ. ನಟಿ ಈ ಹಿಂದೆ ಕಿಸ್ಸಿಂಗ್ ಹಾಗೂ ಇಂಟಿಮೇಟ್ ಸೀನ್‌ಗಳ ಬಗ್ಗೆ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ಕಿಸ್ಸಿಂಗ್ ಸೀನ್(Kissing Scene) ಬಗ್ಗೆ ಪ್ರೇಮಂ ನಟಿ ಮಾತನಾಡಿದ್ದು, ಸಂದರ್ಶಕಿ ಪ್ರಶ್ನೆಗೆ ನಗುತ್ತಲೇ ಉತ್ತರ ಕೊಟ್ಟಿದ್ದಾರೆ. ನಟಿ ಸಾಯಿ ಪಲ್ಲವಿ ತಮ್ಮ ಮುಂಬರುವ ತೆಲುಗು ಚಿತ್ರ ಶ್ಯಾಮ್ ಸಿನ್ಹಾ ರಾಯ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಮುಖ ತೆಲುಗು ಚಾನೆಲ್‌ಗೆ ನೀಡಿದ ಸಂದರ್ಶನದ ಕ್ಲಿಪ್‌ನಲ್ಲಿ, ಸಾಯಿ ಪಲ್ಲವಿ ತನ್ನ ಸಹ-ನಟರಾದ ನಾನಿ ಮತ್ತು ಕೃತಿ ಶೆಟ್ಟಿಗೆ ಅಹಿತಕರ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಪತ್ರಕರ್ತರಿಗೆ ತಿರುಗಿ ಪ್ರಶ್ನೆ ಕೇಳಿದ್ದಾರೆ.
ರಾಹುಲ್ ಸಂಕೃತ್ಯನ್ ನಿರ್ದೇಶಿಸಿದ, ಶ್ಯಾಮ್ ಸಿಂಘ ರಾಯ್ ಸಿನಿಮಾದಲ್ಲಿ ನಾನಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಧುನಿಕ-ದಿನದ ಚಲನಚಿತ್ರ ನಿರ್ಮಾಪಕ ಮತ್ತು 1950 ರ ದಶಕದಲ್ಲಿ ಬಂಗಾಳ ಮೂಲದ ಕಾಲ್ಪನಿಕ ಪಾತ್ರ ಶ್ಯಾಮ್ ಸಿಂಘ ರಾಯ್ ಆಗಿ ನಾನಿ ನಟಿಸುತ್ತಿದ್ದಾರೆ.
ಮುಗುಳು ನಗುವಲ್ಲೇ ನಾನಿಯ ಮನವ ಗೆದ್ದ ಸಾಯಿ ಪಲ್ಲವಿ
ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್‌ನಲ್ಲಿ ನಾನಿ ಮತ್ತು ಕೃತಿ ಚುಂಬನದ ದೃಶ್ಯವಿದೆ. ಈ ದೃಶ್ಯವನ್ನು ಮಾಡುತ್ತಿರುವ ಇಬ್ಬರಲ್ಲಿ ಯಾರು ಹೆಚ್ಚು ಆರಾಮದಾಯಕ ಮತ್ತು ಯಾರು ಅಲ್ಲ ಎಂದು ಪತ್ರಕರ್ತರು ಕೇಳಿದಾಗ, ಸಾಯಿ ಪಲ್ಲವಿ ಮಧ್ಯಪ್ರವೇಶಿಸಿ ಅಂತಹ ಅಹಿತಕರ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಪತ್ರಕರ್ತೆಗೆ ಮರು ಪ್ರಶ್ನೆ ಇಟ್ಟಿದ್ದಾರೆ.
worst ra lucha pic.twitter.com/R4VJ7r48AN
— 𝚂 𝙰 𝙸 (@NameisSai_)ನಾನು ಈ ಪ್ರಶ್ನೆಯನ್ನು ತುಂಬಾ ಅಹಿತಕರವೆಂದು ಭಾವಿಸುತ್ತೇನೆ. ಅವರು ದೃಶ್ಯವನ್ನು ಚರ್ಚಿಸಿದ ನಂತರ, ಪರಸ್ಪರ ಆರಾಮವಾಗಿ ಮತ್ತು ಕಥೆಯ ಸಲುವಾಗಿ ಅದನ್ನು ಮಾಡಿದರು. ನಿಸ್ಸಂಶಯವಾಗಿ, ನೀವು ಅದರ ಬಗ್ಗೆ ಅವರನ್ನು ಕೇಳಿದಾಗ, ಅವರು ಅನ್‌ಕಂರ್ಫರ್ಟಬಲ್ ಆಗುತ್ತಾರೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಚಿತ್ರದಲ್ಲಿ ಒಂದೇ ಒಂದು ರೊಮ್ಯಾಂಟಿಕ್ ದೃಶ್ಯವಿದೆಯೇ ಎಂದು ಪತ್ರಕರ್ತರು ಕೇಳುವುದನ್ನು ಮುಂದುವರಿಸಿದಾಗ, ಪಲ್ಲವಿ ಪತ್ರಕರ್ತೆಯನ್ನು ಮತ್ತೊಮ್ಮೆ ಮಧ್ಯಪ್ರವೇಶಿಸಿ ತಡೆದಿದ್ದಾರೆ. ನೀವು ಅದೇ ಪ್ರಶ್ನೆಯನ್ನು ಕೇಳುವುದು ಅನ್ಯಾಯ ಎಂದಿದ್ದಾರೆ. ನಾನಿ ಪ್ರತಿಕ್ರಿಯಿಸಿ ಒಮ್ಮೆ ನಾವು ಕಥೆಯ ಸಲುವಾಗಿ ಏನನ್ನೂ ಮಾಡಲು ನಿರ್ಧರಿಸಿದರೆ, ನಮಗೆ ಯಾವುದೇ ನಿರ್ಬಂಧಗಳಿಲ್ಲ. ವೃತ್ತಿಪರ ನಟರಾಗಿ, ನಾವು ದೃಶ್ಯದಿಂದ ಅತ್ಯುತ್ತಮ ಪರಿಣಾಮವನ್ನು ಸೃಷ್ಟಿಸಿದ್ದೇವೆ ಎಂದಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ (Nani) 'ಶ್ಯಾಮ್ ಸಿಂಗಾ ರಾಯ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಟ್ರೇಲರ್ (Trailer) ಈಗಾಗಲೇ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ನಾನಿ ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು, ಸಿನಿರಸಿಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇದೀಗ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. 'ಮುಗುಳು ನಗುವಲ್ಲೇ' (Mugulu Naguvalle) ಎಂಬ ಸಾಂಗ್ ಸರಿಗಮ ಕನ್ನಡ ಯೂಟ್ಯೂಬ್ (Youtube) ಚಾನೆಲ್‌ನಲ್ಲಿ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ಹೆಸರಾಂತ ಗೀತ ರಚನೆಕಾರ ಕವಿರಾಜ್ (Kaviraj) ಅವರು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.
'ಮುಗುಳು ನಗುವಲ್ಲೇ' ಹಾಡಿಗೆ ಮಿಕ್ಕಿ ಜೆ ಮೆಯರ್ (Mickey J Meyer) ಸಂಗೀತ ಸಂಯೋಜಿಸಿದ್ದು, ಗಾಯಕ ಅನುರಾಗ್ ಕುಲಕರ್ಣಿ (Anurag Kulkarni) ದನಿಯಾಗಿದ್ದಾರೆ. ಈ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ನಾಯಕಿ ಸಾಯಿ ಪಲ್ಲವಿ ಅದ್ಭುತವಾಗಿ ನೃತ್ಯ ಮಾಡಿದ್ದು, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಹಾಗೂ ಸಿನಿಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಹಿಂದೆ ಚಿತ್ರದ ಮೊದಲ ಲಿರಿಕಲ್ ಸಾಂಗ್ 'ತಿಳಿ ಗಾಳಿಯ ಪಿಸು ಮಾತಿನ' (Thili Gaaliya) ಎಂಬ ಲವ್ ಸಾಂಗ್ ರಿಲೀಸ್ ಆಗಿ ಮೆಚ್ಚುಗೆಯನ್ನು ಪಡೆದಿತ್ತು. ಮುಖ್ಯವಾಗಿ ಇತ್ತೀಚೆಗೆ ನಿಧನರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳು (Sirivennela Seetharama Sastry) ಕೊನೆಯದಾಗಿ ಈ ಹಾಡಿನ ತೆಲುಗಿನ ವರ್ಷನ್‌ಗೆ ಸಾಹಿತ್ಯ ಬರೆದಿದ್ದರು.