Samantha Ruth Prabhu Trolled: ಜಂಟಲ್‌ಮ್ಯಾನ್‌ನಿಂದ 50 ಕೋಟಿ ದೋಚಿದ್ರಾ ಸಮಂತಾ ?

By Suvarna News  |  First Published Dec 22, 2021, 12:41 PM IST

ಸಮಂತಾ ದರೋಡೆ ಮಾಡಿದ್ದಾರಾ ? ಜಂಟಲ್‌ಮ್ಯಾನ್ ಕೈಯಿಂದ 50 ಕೋಟಿ ದೋಚಿದ್ಯಲ್ಲಾ ಎಂದ ನೆಟ್ಟಿಗರು ? ಅಸಲಿಯತ್ತೇನು ? ನಟಿ ಹಿಗ್ಗಾಮುಗ್ಗ ಟ್ರೋಲ್


ಸಮಂತಾ ರುಥ್‌ ಪ್ರಭು ಅವರು ವಿಚ್ಚೇದನೆ ನಂತರ ಬರೀ ಟ್ರೋಲ್ ಎದುರಿಸುತ್ತಿದ್ದಾರೆ. ನಾಗ ಚೈತನ್ಯ ಬಗ್ಗೆ ಅಂತಹ ರಗಳೆ ಇಲ್ಲದಿದ್ದರೂ ನೆಟ್ಟಿಗರು ಸಮಂತಾ ಹಿಂದೆ ಬಿದ್ದಿರೋದ್ಯಾಕೋ ಗೊತ್ತಾಗ್ತಿಲ್ಲ. ಆದರೆ ಸಮಂತಾ ಪ್ರತಿ ಹಂತದಲ್ಲೂ ಟ್ರೋಲ್ ಆಗುತ್ತಾ, ಟಾರ್ಗೆಟ್ ಆಗುತ್ತಲೇ ಇದ್ದಾರೆ. ನಟಿ ಈ ಬಗ್ಗೆ ಪ್ರತಿಕ್ರಿಯೆಗಳನ್ನೂ ಕೊಟ್ಟಿದ್ದಾರೆ. ಅಕ್ಟೋಬರ್‌ನಲ್ಲಿ ವಿಚ್ಚೇದಿತರಾದ ಜೋಡಿ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದ್ದರು. ಇನ್ನು ಇವರ ವಿಚ್ಚೇದನೆಗೆ ಬಹಳಷ್ಟು ಕಾರಣಗಳ ಬಗ್ಗೆ ಚರ್ಚಿಸಲಾಯಿತು. ನಟಿಯ ಬೋಲ್ಡ್ ಸೀನ್ಸ್, ಪ್ರೆಗ್ನೆನ್ಸಿ, ನಟಿಗೆ ಬೇರೆ ರಿಲೇಷನ್‌ಶಿಪ್ ಇದೆ ಹೀಗೆ ಹತ್ತು ಹಲವು ಕಾರಣ ಸುದ್ದಿಯಾಯಿತು. ಆದರೆ ಕೆರಿಯರ್‌ಗಾಗಿ ಅನಿವಾರ್ಯವಾಗಿ ಬೇರೆಯಾದ ಜೋಡಿ ತಮ್ಮ ವಿಚ್ಚೇದನೆಗೆ ಕಾರಣವನ್ನು ಬಹಿರಂಗಪಡಿಸಿಲ್ಲ ಎನ್ನುವುದು ವಾಸ್ತವ.

ಸಮಂತಾ ಪ್ರಸ್ತುತ ಪುಷ್ಪಾ ಚಿತ್ರದ ಚೊಚ್ಚಲ ಐಟಂ ಸಾಂಗ್ ಊ ಅಂತಾವಾ ಕುರಿತು ಮಾತನಾಡುತ್ತಿದ್ದಾಗ, ಟ್ವಿಟರ್ ಬಳಕೆದಾರರು ಅವರ ಮೇಲೆ ಅಸಹ್ಯವಾದ ಕಾಮೆಂಟ್‌ಗಳನ್ನು ನೀಡಿದ್ದಾರೆ. ಬಳಕೆದಾರರು ಸಮಂತಾ ಅವರನ್ನು 'ವಿಚ್ಛೇದಿತ ಸೆಕೆಂಡ್ ಹ್ಯಾಂಡ್ ಐಟಂ' ಎಂದು ಕರೆದಿದ್ದಾರೆ. ಜಂಟಲ್‌ಮ್ಯಾನ್‌ನಿಂದ 50 ಕೋಟಿ ರೂ.ಗಳನ್ನು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಟಿ 200 ಕೋಟಿ ಜೀವನಾಂಶ ಬೇಡ ಎಂದು ತಿರಸ್ಕರಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

Tap to resize

Latest Videos

undefined

ಸಮಂತಾ ಡ್ಯಾನ್ಸ್ ವಿರುದ್ಧ ಪುರುಷರ ಸಂಘದಿಂದ ಕೇಸ್

ಸಮಂತಾ ಅವರು ತಮ್ಮ ಟ್ವೀಟ್‌ನಿಂದ ಗಮನ ಸೆಳೆದರು. ಬಳಕೆದಾರರಿಗೆ ಅತ್ಯಂತ ಗೌರವಯುತವಾದ ಉತ್ತರದೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕಮರಾಲಿ ದುಕಂದರ್ ದೇವರು ನಿಮ್ಮ ಆತ್ಮವನ್ನು ಆಶೀರ್ವದಿಸಲಿ ಎಂದು ಬಳಕೆದಾರರಿಗೆ ಉತ್ತರಿಸಿದ್ದಾರೆ. ಅಂತೂ ತುಂಬಾ ಕೋಲ್ಡ್ ರಿಯಾಕ್ಷನ್ ಕೊಟ್ಟಿದ್ದಾರೆ ಸಮಂತಾ.

Kamarali Dukandar God bless your soul . https://t.co/IqA1feO9K1

— Samantha (@Samanthaprabhu2)

ಮಾಜಿ ಗಂಡನಿಂದ ಸಿಗಲಿದ್ದ 200 ಕೋಟಿ ಪರಿಹಾರ ಬೇಡ ಎಂದ ಸಮಂತಾ

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್‌ಫುಲ್ ಆಗಿ ಓಡುತ್ತಿದೆ. ಸಮಂತಾ ರುತ್ ಪ್ರಭು ತನ್ನ ಮೊದಲ ಐಟಂ ನಂಬರ್ ಓ ಅಂತಾವಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪುರುಷರಿಗೆ ಕಾಮಪ್ರಚೋದಕ ಬಿಂಬಿಸುವ ಹಾಡಿನ ಸಾಹಿತ್ಯದಲ್ಲಿ ಬೋಲ್ಡ್ ಲುಕ್‌ಗಳು ಟ್ರೋಲ್‌ ಆಗಿತ್ತು. ಚಿತ್ರ ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿಸಿದ್ದ ಹಾಡಿನ ಬಗ್ಗೆ ಕೆಲವು ವರ್ಗದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿನ ಗದ್ದಲದಿಂದ ಸಮಂತಾ ವಿಚಲಿತರಾಗಲಿಲ್ಲ.

ವಿಚ್ಚೇದನೆ ನಂತ್ರ ಸಮಂತಾ ಮಾಜಿ ಪತಿಯ ಮೊದಲ ಪೋಸ್ಟ್, ಎಲ್ಲವೂ ಪ್ರೀತಿ ಬಗ್ಗೆ

ಈ ಹಿಂದೆ, ಸಮಂತಾ ಆನ್‌ಲೈನ್ ಟ್ರೋಲಿಂಗ್ ಅನ್ನು ಉದ್ದೇಶಿಸಿ, ನಾನು ಎಲ್ಲರೂ ನನ್ನನ್ನು ಒಪ್ಪಿಕೊಳ್ಳಬೇಕೆಂದು ಬಯಸುವುದಿಲ್ಲ.ನಾನು ಜನರನ್ನು ವಿಭಿನ್ನ ಅಭಿಪ್ರಾಯಗಳನ್ನು ಹೊಂದಲು ಪ್ರೋತ್ಸಾಹಿಸುತ್ತೇನೆ. ಆದರೆ ಟೀಕೆಯನ್ನೂ ಸಹಾನುಭೂತಿ ರೀತಿಯಲ್ಲಿ ವ್ಯಕ್ತಪಡಿಸಬಹುದು. ನಿರಾಶೆಯನ್ನು ಹೆಚ್ಚು ಸುಸಂಸ್ಕೃತ ರೀತಿಯಲ್ಲಿ ಹೇಳಬಹುದು ಎಂದಿದ್ದರು.

ಸಮಂತಾ- ನಾಗಚೈತನ್ಯ ಡೈವೋರ್ಸ್‌ಗೆ ಆ ಸ್ಟಾರ್‌ ನಟನೇ ಕಾರಣವಂತೆ!

ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಸಮಂತಾ ಅವರ ವೃತ್ತಿಜೀವನವು ಗಗನಕ್ಕೇರುತ್ತಿದೆ. ಎರಡು ಬ್ಯಾಕ್-ಟು-ಬ್ಯಾಕ್ ದ್ವಿಭಾಷಾ ಚಿತ್ರಗಳಿಗೆ ಟೈಟಲ್ ನೀಡುವುದರಿಂದ ಹಿಡಿದು ತನ್ನ ಮೊದಲ ವಿದೇಶಿ ಚಿತ್ರಕ್ಕೆ ಸಹಿ ಹಾಕುವವರೆಗೆ, ನಟಿ ಎಲ್ಲದರಲ್ಲೂ ಸಕ್ಸಸ್‌ಫುಲ್ ಆಗಿ ಸಾಗುತ್ತಿದ್ದಾರೆ. ನಟಿಯ ಮೊದಲ ವಿದೇಶಿ ಸಿನಿಮಾ, ಅರೇಂಜ್‌ಮೆಂಟ್ಸ್ ಆಫ್ ಲವ್(Arrangements of Love) ಎಂಬ ಶೀರ್ಷಿಕೆಯು ಅದೇ ಹೆಸರಿನ ಕಾದಂಬರಿಯ ರೂಪಾಂತರವಾಗಿದೆ. ಇದನ್ನು ಭಾರತೀಯ ಲೇಖಕ ಟೈಮೆರಿ ಎನ್ ಮುರಾರಿ ಬರೆದಿದ್ದಾರೆ. ನಟಿ ಪತ್ತೇದಾರಿ ಏಜೆನ್ಸಿಯನ್ನು ನಡೆಸುತ್ತಿರುವ ಬಲವಾದ ಮನಸ್ಸಿನ ಉಭಯಲಿಂಗಿ ತಮಿಳು ಮಹಿಳೆಯಾಗಿ ಇದರಲ್ಲಿ ನಟಿಸಲಿದ್ದಾರೆ.

click me!