ಶಾರುಖ್ ಖಾನ್ ಪತ್ನಿ ವಿರುದ್ಧ FIR ದಾಖಲು; ಹಣ ಪಡೆದರೂ ಅಮಾಯಕರ ಮನೆ ಮೇಲೆ ಕಣ್ಣಾಕಿರುವ ಗೌರಿ?

By Vaishnavi Chandrashekar  |  First Published Mar 2, 2023, 12:12 PM IST

ಸ್ಟಾರ್ ಡಿಸೈನರ್ ಗೌರಿ ಖಾನ್ ವಿರುದ್ಧ ಎಫ್‌ಐಆರ್‌ ದಾಖಲು. 86 ಲಕ್ಷ ರೂಪಾಯಿ ವಸೂಲಿ ಮಾಡಿದ್ರೂ ಈ ಕಥೆನಾ?


ಬಾಲಿವುಡ್ ಕಿಂಗ್ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ವಿರುದ್ಧ ಮುಂಬೈ ನಿವಾಸಿ ಜಸ್ವಂತ್ ಶಾ ದೂರು ದಾಖಲಿಸಿದ್ದಾರೆ. ಇಂಡಿಯನ್ ಪೀನಲ್ ಕೋಲ್ಡ್‌ನ ಅಡಿಯಲ್ಲಿ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ದಾಖಲಿಸಲಾಗಿದೆ. ಕೋಟಿಗಟ್ಟಲೆ ಆಸ್ತಿ ಮಾಡಿರುವ ಗೌರಿ ಖಾನ್‌ಗೂ ಈ ಆಸ್ತಿಗೂ ಏನು ಸಂಬಂಧ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. 

ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ ಏರಿಯಾದಲ್ಲಿರುವ ತುಳಸಿಯಾನಿ ಗಾಲ್ಫ್ ವ್ಯೂ ಫ್ಲಾಟ್‌ಗಳಿಗೆ ಗೌರಿ ಖಾನ್‌ ರಾಯಭಾರಿ ಆಗಿದ್ದರು. ಗೌರಿಯಿಂದಾಗಿ ತುಂಬಾ ಫ್ಲ್ಯಾಟ್‌ಗಳ ಮಾರಾಟವಾಯ್ತು. ಸುಮಾರು 80 ಲಕ್ಷದಿಂದ 4 ಕೋಟಿ ರೂಪಾಯಿ ಬೆಲೆ ಬಾಳುವ ಫ್ಲ್ಯಾಟ್‌ಗಳು ಈ ಕಟ್ಟಡದಲ್ಲಿದೆ. ಅದರಲ್ಲಿ ಒಂದು ಫ್ಲ್ಯಾಟ್‌ಗೆ ಕೋಟಿ ರೂಪಾಯಿ ಕೊಟ್ಟು ಮುಂಬೈ ಉದ್ಯಮಿ ಜಸ್ವಂತ್ ಶಾ ಖರೀದಿಸಿದ್ದಾರೆ. ಆದರೆ ಇಲ್ಲಿ ಕಿರಿಕ್ ಮಾಡುತ್ತಿರುವುದು ಗೌರಿ ಖಾನ್‌ ಎಂದು ಜಸ್ವಂತ್ ಶಾ ದೂರು ದಾಖಲಿಸಿದ್ದಾರೆ. 

Tap to resize

Latest Videos

ಅಬ್ಬಾ..! ಶಾರುಖ್ ಮನೆಯ ನಾಮಫಲಕ ಡೈಮಂಡ್‌ದಾ? ನೆಟ್ಟಿಗರ ಪ್ರಶ್ನೆಗೆ ಗೌರಿ ಖಾನ್ ಉತ್ತರ

ಉದ್ಯಮಿ ಜಸ್ವಂತ್ ಶಾ ಮತ್ತು ತುಳಸಿಯಾನಿ ಕನ್‌ಸ್ಟ್ರಕ್ಷನ್ ಅಂಡ್ ಡೆವಲಪ್‌ಮೆಂಟ್ ಲಿಮಿಟೆಡ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಅನಿಕುಮ್ ತುಳಿಸಿಯಾನಿ ಮತ್ತು ನಿರ್ದೇಶಕರಾದ ಮಹೇಶ್ ತುಳಸಿಯಾನಿ ಕೂಡ ದೂರು ದಾಖಲು ಮಾಡಿದ್ದಾರೆ. ಜಸ್ವಂತ್ ಶಾ ಖರೀದಿ ಮಾಡಿರುವ ಫ್ಲ್ಯಾಟ್‌ನ ಗೌರಿ ಖಾನ್ ಬಿಟ್ಟು ಕೊಡುತ್ತಿಲ್ಲ. ರಾಯಭಾರಿ ಆಗುವುದಕ್ಕೆ ಲಕ್ಷಗಟ್ಟಲೆ ಹಣ ಪಡೆದುಕೊಂಡು ಈಗ ನಾನು ಖರೀದಿ ಮಾಡಿರುವ ಮನೆಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಜಸ್ವಂತ್ ಹೇಳಿದ್ದಾರೆ. ಈಗಾಗಲೆ ಆ ಮನೆ ಮೇಲೆ ಜಸ್ವಂತ್ 86 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಗೌರಿ ಹಣ ನೀಡಬೇಕು ಇಲ್ಲ ಆ ಫ್ಲ್ಯಾಟ್‌ನ ನನಗೆ ಬಿಟ್ಟು ಕೊಡಬೇಕು ಎಂದು ಜಸ್ವಂತ್ ಹೇಳುತ್ತಿದ್ದಾರೆ. 

ಗೌರಿ ಸಿರಿವಂತೆ?

ಪವರ್‌ಫುಲ್‌ ಕಪಲ್‌ ಶಾರುಖ್ ಖಾನ್, ಗೌರಿ ಖಾನ್ 1991ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಗೌರಿ ದೇಶದ ಪ್ರಮುಖ ಇಂಟಿರೀಯರ್‌ ಡಿಸೈನರ್ಸ್‌ನಲ್ಲಿ ಒಬ್ಬರು. ಮುಖೇಶ್ ಅಂಬಾನಿ, ರಾಬರ್ಟೊ ಕವಾಲ್ಲಿ, ರಾಲ್ಫ್ ಲಾರೆನ್ ಮತ್ತು ಅನೇಕರ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿಲ್ಲೀಸ್ ಎಂಟರ್ಟೈನ್ಮೆಂಟ್ ಎಂಬ ಪ್ರೊಡಕ್ಷನ್ ಹೌಸ್ ಹೊಂದಿರುವ ಗೌರಿ ಖಾನ್‌ 2018ರಲ್ಲಿ, ಫಾರ್ಚೂನ್ ಮ್ಯಾಗ್‌ಜೀನ್‌ನ '50 ಮೊಸ್ಟ್‌ ಪವರ್‌ಫುಲ್‌ ವಿಮೆನ್‌' ಪಟ್ಟಿಯಲ್ಲಿ ಒಬ್ಬರಾಗಿದ್ದರು.ಗೌರಿ ಮತ್ತು ಎಸ್‌ಆರ್‌ಕೆ ಅವರ ವಾರ್ಷಿಕ ಆದಾಯ ಸುಮಾರು 256 ಕೋಟಿ ರೂ. ಶಾರುಖ್ ಖಾನ್ ನಿವ್ವಳ ಮೌಲ್ಯ 5100 ಕೋಟಿ ರೂ ಹಾಗೂ ಗೌರಿ ಖಾನ್‌ರ ಆಸ್ತಿ ಮೌಲ್ಯ ಸುಮಾರು 1600 ಕೋಟಿ ರೂ.

ಪ್ಯಾರಿಸ್‌ ಬದಲು ಡಾರ್ಜಿಲಿಂಗ್‌ಗೆ ಹನಿಮೂನ್‌ ಕರೆದುಕೊಂಡು ಹೋದ ಕಿಂಗ್‌ ಖಾನ್‌

ಭವ್ಯ ಬಂಗ್ಲೆ 'ಮನ್ನತ್'‌:

ಕೋಟಿ ಆಸ್ತಿ ಒಡತಿ ಗೌರಿ ಖಾನ್ ಮತ್ತೊಬ್ಬರ ಫ್ಲ್ಯಾಟ್‌ ಮೇಲೆ ಕಣ್ಣು ಹಾಕಿದ್ದಾರೆ ಅಂದ್ರೆ ನಂಬಲಾಗದ ವಿಚಾರ. ಏಕೆಂದರೆ ಅಂಬಾನಿ ನಂತರ ಭವ್ಯ ಬಂಗಲೆ ಹೊಂದಿರುವು ಶಾರುಖ್ ಕುಟುಂಬ. ಗೌರಿ ಖಾನ್ ತಮ್ಮ ಮನೆಗೆ ಮನ್ನತ್ ಎಂದು ನಾಮಕರಣ ಮಾಡಿದ್ದಾರೆ. ಮನ್ನತ್‌ನ ವಿಶೇಷತೆ ಗಣಪತಿ ಮೂರ್ತಿ ಹಾಗೂ ಕುರಾನ್ ಎರಡು ಒಟ್ಟಿಗೆ ಕಾಣಸಿಗುತ್ತದೆ. ಇದರ ಪೋಟೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕಾಗಿ ಅಭಿಮಾನಿಗಳು ಶಾರುಖ್‌ರನ್ನು ತುಂಬಾ ಹೊಗಳಿದ್ದರು. ಆರು ಸಾವರ ಚದುರಡಿಯ ಈ ಬಂಗಲೆಯನ್ನು ನಾಲ್ಕು ವರ್ಷಗಳ ಕಾಲ ರಿನೋವೇಟ್ ಮಾಡಲಾಗಿದೆ. ನಂತರ ಬಂಗಲೆಗೆ ಮನ್ನತ್ ಎಂಬ ಹೆಸರಿಡಲಾಗಿತ್ತು. ಐದು ಬೆಡ್‌ ರೂಮ್‌, ಅನೇಕ ಲೀವಿಂಗ್‌ ರೂಮ್‌ಗಳು, ಜಿಮ್ ಮತ್ತು ಲೈಬ್ರರಿ ಹೊಂದಿದ್ದು, ಖಾಸಗಿ ಪ್ರದೇಶವನ್ನೂ  ಹೊಂದಿದೆ. ಇಂಟಿರೀಯರ್‌ ಜೊತೆ ಸ್ಟೈಲಿಂಗ್ ಕೆಲಸವನ್ನು ಗೌರಿ ಸ್ವತಃ ಮಾಡಿದ್ದು, ಇದಕ್ಕಾಗಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರು. 

click me!