Besham Rang: ಮೊದಲ ಬಾರಿಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ

Published : Mar 02, 2023, 10:04 AM IST
Besham Rang: ಮೊದಲ ಬಾರಿಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ

ಸಾರಾಂಶ

ಪಠಾಣ್‌ ಚಿತ್ರ ಬಿಡುಗಡೆಗೆ ಮುನ್ನ  ಬೇಷರಂ ರಂಗ್‌ ಹಾಡಿನ ಕುರಿತು ಭಾರಿ ವಿವಾದ ಎದ್ದಿದ್ದರೂ  ತಾವು ಮೌನವಾಗಿದ್ದು ಏಕೆ ಎನ್ನುವ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ ನಟಿ ದೀಪಿಕಾ ಪಡುಕೋಣೆ   

ಪಠಾಣ್‌ (Pathaan) ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ವಿವಾದ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿತ್ರದಲ್ಲಿ ಕೇಸರಿ ಬಿಕಿನಿ ತೊಟ್ಟು ನಟಿ ದೀಪಿಕಾ ಪಡುಕೋಣೆ ಬೇಷರಂ ರಂಗ್‌ ಹಾಡಿಗೆ ಸ್ಟೆಪ್‌ ಹಾಕಿ, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಪಠಾಣ್‌ ಬೈಕಾಟ್‌ ಟ್ರೆಂಡ್‌ (Boycott trend) ಶುರುವಾಗಿತ್ತು. ಇದರ ಬಳಿಕ ಕೇಸರಿ ಬಿಕಿನಿ ಬದಲು ಕೇಸರಿ ಲುಂಗಿ ತೊಟ್ಟು ರೀಶೂಟ್‌ ಮಾಡಲಾಗಿತ್ತು. ಇವೆಲ್ಲವೂ ಈಗ ಹಳೆಯ ಸುದ್ದಿ. ಇವೆಲ್ಲವುಗಳ ಹೊರತಾಗಿಯೂ ಪಠಾಣ್‌ ಮಕಾಡೆ ಮಲಗಿದ್ದ ಬಾಲಿವುಡ್‌ ಅನ್ನು ಮತ್ತೆ ಚಿಗುರಿಸಿದೆ. ಹಲವಾರು ದಾಖಲೆಗಳನ್ನು ಮುರಿದು ಇನ್ನೂ ಮುನ್ನುಗ್ಗುತ್ತಿದೆ. ಇದರ ನಡುವೆಯೇ ಆಗಾಗ ಬೇಷರಂ ರಂಗ್‌ ಸದ್ದು ಮಾಡುತ್ತಲೇ ಇದ್ದು, ಹಲವು ಗಣ್ಯರು ಇದರ ಬಗ್ಗೆ ಕಿಡಿ ಕಾರುತ್ತಲೇ ಇದ್ದಾರೆ. ಇಷ್ಟೆಲ್ಲಾ ಗಲಾಟೆಯಾಗಿದ್ದರೂ ನಟಿ ದೀಪಿಕಾ ಪಡುಕೋಣೆ ಮಾತ್ರ ಇದುವರೆಗೆ ಇದರ ಬಗ್ಗೆ ಮೌನದಿಂದ ಇದ್ದರು. ಶಾರುಖ್‌ ಖಾನ್‌ (Shah Rukh Khan) ಕೂಡ ಇದರ ಬಗ್ಗೆ ಬಹಿರಂಗವಾಗಿ ಏನೂ ಹೇಳಿಕೆ ಕೊಟ್ಟಿರಲಿಲ್ಲ. ಬೇಷರಂ ರಂಗ್‌ ಕುರಿತು ಅವರು ಎಲ್ಲಿಯೂ ಮಾತನಾಡಿರಲಿಲ್ಲ. ಚಿತ್ರದ ಬೈಕಾಟ್‌ ಟ್ರೆಂಡ್‌ ಶುರುವಾದಾಗಲೂ ಏನೂ ಹೇಳಿರಲಿಲ್ಲ.

ಆದರೆ ಇದೀಗ ದೀಪಿಕಾ ಮೌನ ಮುರಿದಿದ್ದಾರೆ. ಇಷ್ಟು ತಿಂಗಳು ಇದರ ಬಗ್ಗೆ ಏಕೆ ಮೌನ ತಾಳಿದ್ದೆ ಎಂಬ ಬಗ್ಗೆಯೂ ಮಾತನಾಡಿದ್ದಾರೆ. ಬೇಷರಂ ರಂಗ್‌ (Besharam Rang)  ವಿವಾದದ ಸಮಯದಲ್ಲಿ ಏಕೆ ಮೌನವಾಗಿರಲು ನಿರ್ಧರಿಸಿದೆ ಎಂದು ನಟಿ ವಿವರಿಸಿದ್ದಾರೆ. ಇಂಡಿಯಾ ಟುಡೆ ಜೊತೆಗೆ ನಡೆದ ಸಂದರ್ಶನದ ವೇಳೆ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಜೊತೆ ಶಾರುಖ್‌ ಖಾನ್‌ ಅವರೂ ಏಕೆ ಮೌನವಾಗಿದ್ದರು ಎಂಬ ಬಗ್ಗೆ ತಿಳಿಸಿದ್ದಾರೆ. ‘ನಾನು ಮತ್ತು ಶಾರುಖ್ ಬದ್ಧತೆ, ಕಠಿಣ ಪರಿಶ್ರಮ ಮತ್ತು ವಿನಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತೇವೆ. ನಾವು  ಕ್ರೀಡಾ ಹಿನ್ನೆಲೆಯಿಂದ ಬಂದವರು, ಇದರಿಂದಾಗಿ  ಸಂಯಮದ ಬಗ್ಗೆ ಸಾಕಷ್ಟು ಕಲಿತಿದ್ದೇವೆ‘ ಎಂದು ದೀಪಿಕಾ ಹೇಳಿದ್ದಾರೆ. ‘ಬೈಕಾಟ್‌ ಟ್ರೆಂಡ್‌ ಶುರುವಾದಾಗ  ಅದನ್ನು ಎದುರಿಸಲು ನಮಗೆ ಬೇರೆ ಮಾರ್ಗಗಳು ತಿಳಿದಿರಲಿಲ್ಲ. ನಮ್ಮ ಕುಟುಂಬ ನಮ್ಮನ್ನು ಚೆನ್ನಾಗಿ ಬೆಳೆಸಿದೆ ಎಂದಷ್ಟೇ ಹೇಳಬಲ್ಲೆ‘ ಎಂದಿದ್ದಾರೆ.

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ
 
‘ನಾನು ಕನಸುಗಳನ್ನು ಹೊತ್ತು ಹೊಸ  ಆಕಾಂಕ್ಷೆಗಳೊಂದಿಗೆ ಒಂಟಿಯಾಗಿ ಮುಂಬೈಗೆ (Mumbai) ಬಂದಿದ್ದೇನೆ. ನನಗೆ ಬದ್ಧತೆ , ಕಠಿಣ ಪರಿಶ್ರಮ ಮತ್ತು ನಮ್ರತೆಯ ಬಗ್ಗೆ ತಿಳಿದಿದೆ. ಅದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಪ್ರಬುದ್ಧವಾಗಿರುವುದು ನನಗೆ ತಿಳಿದಿದೆ. ನಾವಿಬ್ಬರೂ  ಕ್ರೀಡಾಪಟುಗಳು. ತಂದೆ ಪ್ರಕಾಶ್ ಪಡುಕೋಣೆ (Praksh Padukone) ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯರಾಗಿದ್ದಾರೆ ಅವರು ಎಲ್ಲಾ ಸಮಯದಲ್ಲೂ ತಾಳ್ಮೆ ಹಾಗೂ ಶಾಂತಂತೆಗೆ ಗೌರವ ನೀಡುತ್ತಿದ್ದರು. ಶಾರುಖ್‌  ಶಾಲೆ ಮತ್ತು ಕಾಲೇಜಿನಲ್ಲಿ ಕ್ರೀಡೆಗಳನ್ನು ಆಡುತ್ತಿದ್ದರು ಎಂದು ನನಗೆ ತಿಳಿದಿದೆ. ಕ್ರೀಡೆಯು  ಸಾಕಷ್ಟು ತಾಳ್ಮೆಯನ್ನು ಕಲಿಸುತ್ತದೆ ಎಂದರು.

 ಇನ್ನು ಶಾರುಖ್‌ ಮತ್ತು ತಮ್ಮ ಸಂಬಂಧದ ಕುರಿತು ಮಾತನಾಡಿದ ದೀಪಿಕಾ, ‘15 ವರ್ಷಗಳ ಹಿಂದೆ ಶಾರುಖ್‌ ಸೂಪರ್‌ ಸ್ಟಾರ್‌ (Superstar) ಪಟ್ಟದಲ್ಲಿದ್ದರು. ನನಗೆ ಚಿತ್ರರಂಗದಲ್ಲಿ ಅಷ್ಟೊಂದು ಅನುಭವ ಇರಲಿಲ್ಲ.  ಚಿತ್ರರಂಗಕ್ಕೆ ಯಾವುದೇ ಸಂಬಂಧವೂ ಇರಲಿಲ್ಲ. ಅಂಥ  ಹೊಸಬಳ  ಮೇಲೆ ಅವರು ಅಚಲ ನಂಬಿಕೆ ಇಟ್ಟರು. ನಾನು ಅವರ ಎದುರು ದ್ವಿಪಾತ್ರದಲ್ಲಿ ಆಡಿಷನ್ ಕೂಡ ಮಾಡದೆ ನಟಿಸಿದ್ದೆ. ನಮ್ಮ ಸಂಬಂಧ ಅಂಥದ್ದು. ನಮ್ಮ ಸಂಬಂಧದ ಅತ್ಯಂತ ಸುಂದರವಾದ ಭಾಗವೆಂದರೆ ಹಸ್ತಲಾಘವ ಅಥವಾ ಅಪ್ಪುಗೆ‘ ಎಂದು ದೀಪಿಕಾ ಹೇಳಿದರು.

Kantara ಸಿಂಗಾರ ಸಿರಿಯೇ ಹಾಡಿನಲ್ಲಿರುವ 'ಕೊಂಗಾಟ' ಪದಕ್ಕೇನರ್ಥ? ಪ್ರಮೋದ್ ಹೇಳ್ತಾರೆ ಕೇಳಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?