ಸದ್ಯ ಹಾಲಿವುಡ್ನಲ್ಲಿ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ನ ಆರಂಭಿಕ ದಿನಗಳಲ್ಲಿ ಅನುಭವಿಸಿರುವ ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಬಾಡಿ ಶೇಮಿಂಗ್ (Body Shaming) ಎನ್ನುವುದು ಸಾಮಾನ್ಯ ಜನರಷ್ಟೇ ಅಲ್ಲ, ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳನ್ನೇ ಬಿಟ್ಟಿಲ್ಲ. ಉದ್ದವಿದ್ದರೂ ಕಷ್ಟ, ಗಿಡ್ಡವಿದ್ದರೂ ತೊಂದರೆ... ತುಂಬಾ ಬೆಳ್ಳಗಿದ್ದರೂ ಕಷ್ಟ, ಕಪ್ಪಗಿದ್ದರೂ ಆಡಿಕೊಳ್ಳುವವರೇ ಹೆಚ್ಚು, ದಪ್ಪ ಇದ್ದರಂತೂ ಮುಗಿದೇ ಹೋಯ್ತು, ಇನ್ನು ತೀರಾ ಸಣ್ಣಗಿದ್ದರೆ ಇಲ್ಲದ್ದನ್ನು ಹೇಳಿ ತಮಾಷೆ ಮಾಡುತ್ತಾರೆ... ಇಂಥ ಬಾಡಿ ಶೇಮಿಂಗ್ ದಿನನಿತ್ಯವೂ ಹಲವರು ಅನುಭವಿಸುತ್ತಲೇ ಇರುತ್ತಾರೆ. ಕೆಲವರು ಇದನ್ನು ತಾತ್ಸಾರ ಮಾಡಿದರೆ, ಇನ್ನು ಕೆಲವರು ಡಿಪ್ರೆಷನ್ಗೆ (Depresion) ಹೋಗುವುದೂ ಇದೆ. ಇನ್ನು ಸೆಲೆಬ್ರಿಟಿಗಳು ಅದರಲ್ಲಿಯೂ ಸಿನಿಮಾ ತಾರೆಯರು ಹೀಗೆಯೇ ಇರಬೇಕು ಎಂದು ಬಯಸುವವರೇ ಹೆಚ್ಚು. ತೆಳ್ಳಗೆ, ಬೆಳ್ಳಗೆ, ಬಳಕುವ ಬಳ್ಳಿಯಂತೆ ಇರಬೇಕು ಎಂದು ಬಯಸಿದರೆ ಅವರ ದೇಹ ಸೌಂದರ್ಯ ಎದ್ದು ಕಾಣುವಂತಿರಬೇಕು ಎಂದೂ ಬಯಸುತ್ತಾರೆ. ಅದೇ ಕಾರಣಕ್ಕೆ ನಟಿಯರು ಏನೆಲ್ಲಾ ಚಿಕಿತ್ಸೆಗಳ ಮೊರೆ ಹೋಗುವುದೂ ಉಂಟು.
ತಾವು ಅನುಭವಿಸಿರುವ ಬಾಡಿ ಶೇಮಿಂಗ್ ಕುರಿತು ಇದಾಗಲೇ ಹಲವು ನಟಿಯರು ಮನಬಿಚ್ಚಿ ಮಾತನಾಡಿದ್ದು, ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಮಾತನಾಡಿದ್ದಾರೆ. ತಾವು ಬಾಡಿ ಶೇಮಿಂಗ್ ಎದುರಿಸಿದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ದಕ್ಷಿಣ ಏಷ್ಯಾಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಸಿನಿಮಾದಲ್ಲಿ ಮಹಿಳೆಯರ ವಿಚಾರದ ಕುರಿತು ಚರ್ಚೆ ನಡೆದಿದೆ. ಈ ವೇಳೆ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಏಷ್ಯಾಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಸಿನಿಮಾದಲ್ಲಿ ಮಹಿಳೆಯರ ವಿಚಾರದ ಕುರಿತು ಚರ್ಚೆ ನಡೆದಿದೆ. ಈ ವೇಳೆ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಾತನಾಡಿದ್ದಾರೆ.
Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್ಲಾಕ್ ಅನುಭವ
ಈಗ ದೊಡ್ಡ ಸೆಲೆಬ್ರಿಟಿ (Celebrity) ಎನಿಸಿಕೊಂಡರೂ ಆರಂಭದಲ್ಲಿ ಹಾಗಿರಲಿಲ್ಲ. ತಾವು ಬಹಳಷ್ಟು ಸಂದರ್ಭಗಳಲ್ಲಿ ನೋವು, ಅವಮಾನ ಅನುಭವಿಸಿದ್ದುದಾಗಿ ಅವರು ನೆನಪಿಸಿಕೊಂಡಿದ್ದಾರೆ. 'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ' ಎಂದಿದ್ದಾರೆ. ಮೈಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು ಎಂದು ಅವರು ವೇದಿಕೆಯಲ್ಲಿ ಹೇಳಿದ್ದಾರೆ. 'ನಾನು ಅಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಂಬಿದವಳು. ಆದರೆ ನನ್ನ ಚರ್ಮದ ಬಣ್ಣದಿಂದ ತುಂಬಾ ಹಿಂಸೆ ಅನುಭವಿಸಿದೆ' ಎಂದಿದ್ದಾರೆ. ಈ ಮೂಲಕ ನಟನಾ ವೃತ್ತಿಯ ಆರಂಭದ ದಿನಗಳಲ್ಲಿ ಅನುಭವಿಸಿದ ಬಾಡಿ ಶೇಮಿಂಗ್ ಕುರಿತು ಹೇಳಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್ನಲ್ಲಿ (Hollywood) ಬ್ಯುಸಿಯಾಗಿದ್ದಾರೆ. ಗಾಯಕ ನಿಕ್ ಜೋನಸ್ ಮದುವೆ ಆದ ಬಳಿಕ ಅವರು ಅಮೆರಿಕದಲ್ಲಿಯೇ ಇದ್ದಾರೆ. ಮಗಳು ಮಾಲ್ತಿ ಮೇರಿ ಇವರು ಖುಷಿಯಾಗಿದ್ದಾರೆ. ಸದ್ಯ ಇವರು ನಟಿಸಿರುವ `ಸಿಟಾಡೆಲ್’ ಫಸ್ಟ್ ಲುಕ್ ರಿವೀಲ್ ಆಗಿದೆ. ಟ್ರೈಲರ್‌ನ ಸಣ್ಣ ತುಣುಕನ್ನ ನಟಿ ಹಂಚಿಕೊಂಡಿದ್ದಾರೆ. ಸಿಟಾಡೆಲ್‌ನಲ್ಲಿ ಪ್ರಿಯಾಂಕಾ ಖಡಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಅವತಾರದಲ್ಲಿರುವ ಪಿಗ್ಗಿ ನ್ಯೂ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನೂ ಸದ್ಯದಲ್ಲೇ ಚಿತ್ರದ ಟ್ರೈಲರ್ ಕೂಡ ರಿವೀಲ್ ಆಗಲಿದೆ. ಸಿಟಾಡೆಲ್ ವೆಬ್ ಸರಣಿಯನ್ನು ಭಾರತದಲ್ಲೂ ನಿರ್ಮಾಣ ಮಾಡಲಾಗುತ್ತಿದೆ. ಇಂಡಿಯನ್ ವರ್ಷನ್‌ನಲ್ಲಿ ಸಮಂತಾ (Samantha) ಅವರು ನಟಿಸುತ್ತಿದ್ದಾರೆ. ಅವರು ಕೂಡ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಕ್ಕಳು ಬೇಕು... ಹುಡುಗನನ್ನು ಹುಡುಕಿ ಕೊಡಿ ಎಂದ ನಟಿ Parineeti Chopra!