ಅಮ್ಮನಾಗಲು ಎರಡೇ ತಿಂಗಳು ಬಾಕಿ: ನಟಿ ದೀಪಿಕಾ ಪಡುಕೋಣೆ ಸೀಮಂತದ ಫೋಟೋಗಳು ವೈರಲ್​ ?

By Suchethana D  |  First Published Jul 29, 2024, 4:41 PM IST

ಎಂಟನೆಯ ತಿಂಗಳ ಹೊಸ್ತಿಲಿನಲ್ಲಿ ಇರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಗಿದೆ ಎನ್ನಲಾಗಿದ್ದು, ಅದರ ಫೋಟೋಗಳು ವೈರಲ್​ ಆಗಿವೆ.
 


 ಪಠಾಣ್​, ಜವಾನ್​ ಬೆಡಗಿ ದೀಪಿಕಾ ಪಡುಕೋಣೆ ಅಮ್ಮನಾಗಲು ಇನ್ನೆರಡೇ ತಿಂಗಳು ಬಾಕಿ ಇದೆ.  ಬರುವ ಸೆಪ್ಟೆಂಬರ್​ನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್​ಗಳನ್ನೂ ಮುಗಿಸಿ ಭೇಷ್​ ಅನ್ನಿಸಿಕೊಂಡಿದ್ದಾರೆ ನಟಿ. ಎಂಟನೆಯ ತಿಂಗಳಿನಲ್ಲಿ ಹೊಸ್ತಿಲಿನಲ್ಲಿರುವ ದೀಪಿಕಾ ಅವರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಗಿದೆ. ಇದರ ಫೋಟೋಗಳು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಆದರೆ ಹೀಗೆ ವೈರಲ್​ ಆಗುತ್ತಿರುವ ಫೋಟೋಗಳು ಅಸಲಿಯದ್ದೋ ಅಥವಾ ನಕಲಿಯದ್ದೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಸೀಮಂತ ಶಾಸ್ತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಇದನ್ನು ಮಾಡುವುದರಿಂದ ಹುಟ್ಟುವ ಮಗು ಶಕ್ತಿ ಪಡೆಯುತ್ತದೆ. ಈ ಸಮಯದಲ್ಲಿ, ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಅನೇಕ ಮಂತ್ರಗಳಿಂದ ಸಂಸ್ಕಾರ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಆ ಮಗುವು ಗ್ರಹ ಹೊಂದಾಣಿಕೆಯನ್ನು ಪಡೆಯುತ್ತದೆ ಮತ್ತು ಯಾವುದಾದರೂ ಅಶುಭ ಯೋಗವುಂಟಾದರೆ ಅದರ ಪರಿಣಾಮವೂ ದೂರಾಗುತ್ತದೆ ಎನ್ನಲಾಗುತ್ತದೆ.
 
ಅಂದಹಾಗೆ,  ದೀಪಿಕಾ ಇತ್ತೀಚೆಗಷ್ಟೇ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆಯ ಸಂಭ್ರಮದಲ್ಲಿ ಗರ್ಭಿಣಿ   ಕಾಣಿಸಿಕೊಂಡಿದ್ದರು.  ಝಗಮಗ ಡ್ರೆಸ್​ ಹಾಕಿಕೊಂಡಿದ್ದ  ನಟಿಯ ಹೊಟ್ಟೆ ಒಂದು ದೊಡ್ಡದಾಗಿರುವುದು ಬಿಟ್ಟರೆ,  ಅದೇ ಫಿಗರ್​ ಮೆಂಟೇನ್​ ಮಾಡಿರುವುದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು.  ಸಾಮಾನ್ಯವಾಗಿ ಗರ್ಭಧರಿಸಿದ ಮೇಲೆ ಹೆಣ್ಣುಮಕ್ಕಳು ತೂಕ ಹೆಚ್ಚಿಸಿಕೊಳ್ಳುವುದು ಮಾಮೂಲು.  ಆದರೆ ದೀಪಿಕಾ ಹೊಟ್ಟೆ ಮಾತ್ರ ಬಂದಿರುವುದು ಬಿಟ್ಟರೆ, ಮೊದಲಿನ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದರು. ಇದರ ಸೀಕ್ರೇಟ್​ ಏನು ಎಂದು ಫ್ಯಾನ್ಸ್​ ಪ್ರಶ್ನಿಸಿದ್ದರು.  

ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!

Tap to resize

Latest Videos

ಇದೇ ವೇಳೆ, ದೀಪಿಕಾ ಚಿತ್ರರಂಗದಿಂದ ದೂರ  ಆಗ್ತಾರಾ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ತಲೆ ಕೆಡಿಸಿದೆ. ಇದಕ್ಕೆ ಕಾರಣವೂ ಇದೆ. ರಣವೀರ್​ ಸಿಂಗ್​ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು.  ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮದುವೆಯಾದ ಮೇಲೆ ಚಿತ್ರರಂಗ ತೊರೆಯಲಿಲ್ಲ. ಆದರೆ ಮಗುವಾದ ಮೇಲೆ ಚಿತ್ರರಂಗ ತೊರೆಯುವುದಾಗಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಈಗ ವೈರಲ್​ ಆಗುತ್ತಿದೆ.   

ಅಷ್ಟಕ್ಕೂ ಈ ಮಾತನ್ನು ದೀಪಿಕಾ  ಅವರು ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುವಾಗ ಹೇಳಿದ್ದರು. ಸಾಂಸಾರಿಕ ಜೀವನದ ಸಂತೋಷಕ್ಕಾಗಿ ಮದುವೆಯಾಗಿ ಮಗುವಾದ ಮೇಲೆ ಚಿತ್ರರಂಗ ತೊರೆಯುತ್ತೇನೆ ಎಂದು ಹೇಳಿದ್ದರು. ಅವರು ಇದಾಗಲೇ ತಮ್ಮ ಕೈಯಲ್ಲಿ ಇರುವ ಎಲ್ಲಾ ಚಿತ್ರಗಳ ಶೂಟಿಂಗ್​ ಮುಗಿಸಿದ್ದು, ಸದ್ಯ ಯಾವುದೇ ಪ್ರಾಜೆಕ್ಟ್​ಗಳಿಗೆ ಸಹಿ ಹಾಕಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಗುವಾದ ಮೇಲೆ ದೀಪಿಕಾ ಚಿತ್ರರಂಗ ತೊರೆಯಲಿದ್ದಾರೆಯೇ ಎನ್ನುವ ಅನುಮಾನ ಬಂದಿದೆ. ಇದರಿಂದ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್​ ಕೂಡ ತಲ್ಲಣಗೊಂಡಿದೆ.

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್​ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್​...

click me!