ಆಲಿಯಾ ಇನ್ನೊಬ್ಬರ ಜೊತೆ ರೋಮ್ಯಾನ್ಸ್ ಮಾಡಿದ್ರೂ‌ ರಣಬೀರ್‌ಗೆ ಕಾಡಲ್ಲ ಭಯ

By Roopa Hegde  |  First Published Jul 29, 2024, 12:33 PM IST

ಬಿ ಟೌನ್ ಜೋಡಿ ಆಲಿಯಾ ಮತ್ತು ರಣಬೀರ್ ಕಪೂರ್ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಜನರ ಗಮನ ಸೆಳೆಯುತ್ತಾರೆ. ಆಲಿಯಾ ಬೇರೆ ನಟರ ಜೊತೆ ರೋಮ್ಯಾನ್ಸ್ ಮಾಡಿದ್ರೆ ಟೆನ್ಷನ್ ಇಲ್ಲ ಎನ್ನುವ ರಣಬೀರ್, ಹತ್ತು ವರ್ಷದ ಹಿಂದೆ ಹೀಗಿರಲಿಲ್ಲ ಎಂದಿದ್ದಾರೆ.
 


ಬಾಲಿವುಡ್ ನ ಪ್ರಸಿದ್ಧ ಯಂಗ್ ಜೋಡಿಯಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸೇರಿದ್ದಾರೆ. ಮದುವೆಯಾಗಿ ಒಂದು ಮುದ್ದಾದ ಮಗುವನ್ನು ಹೊಂದಿರುವ ಈ ಜೋಡಿ ಅನೇಕ ವಿಷ್ಯದಲ್ಲಿ ಆಗಾಗ ಚರ್ಚೆಯಲ್ಲಿರ್ತಾರೆ. ಬೇರೆ ನಟರ ಜೊತೆ ಸಿನಮಾದಲ್ಲಿ ಪತ್ನಿ ಆಲಿಯಾ ಭಟ್ ರೋಮ್ಯಾನ್ಸ್ ಮಾಡಿದ್ರೆ ಏನನ್ನಿಸುತ್ತೆ ಎಂಬುದನ್ನು ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಹೇಳಿದ್ದಾರೆ. ಅಭದ್ರತೆ ವಿಷ್ಯದ ಬಗ್ಗೆ ಮನಸ್ಸು ಬಿಚ್ಚಿ ರಣಬೀರ್ ಕಪೂರ್ ಮಾತನಾಡಿದ್ದಾರೆ.

ನಿಖಿಲ್ ಕಾಮತ್ ಪ್ರೋಡ್ಕಾಸ್ಟ್ ನಲ್ಲಿ ಮಾತನಾಡಿದ ರಣಬೀರ್ ಕಪೂರ್ (Ranbir Kapoor), ಹತ್ತು ವರ್ಷದ ಹಿಂದೆ ಹೇಗಿದ್ದೆ, ಈಗ ಹೇಗಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಅವರ ಮಾತಿನ ಪ್ರಕಾರ, ಹತ್ತು ವರ್ಷದ ಹಿಂದೆ ರಣಬೀರ್ ಆಲೋಚನೆಯಲ್ಲಿ ಮೆಚ್ಯುರಿಟಿ (Maturity) ಇರಲಿಲ್ಲ. ಕೆಲಸ ಹಾಗೂ ಸಂಗಾತಿ ಎರಡರ ಬಗ್ಗೆಯೂ ಅಸುರಕ್ಷತೆ ಇತ್ತು. ಆದ್ರೀಗ ಎಲ್ಲವೂ ಬದಲಾಗಿದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

Tap to resize

Latest Videos

undefined

ದರ್ಶನ್ ನನಗೆ ಫೋನ್ ಮಾಡಿ ಮೈಸೂರಿನ ಫಾರಂ ಹೌಸ್‌ಗೆ ಕರೆಸಿಕೊಂಡರು; ಹಿಂದೆ ನಡೆದ ಘಟನೆ ಬಿಚ್ಚಿಟ್ಟ ರಾಜವರ್ಧನ್

ನಾನೀಗ ಇನ್ಸೆಕ್ಯೂರ್ ಪಾರ್ಟನರ್ (Partner) ಅಲ್ಲ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಹತ್ತು ವರ್ಷದ ಹಿಂದೆ ಇದ್ದ ಹಾಗೆ ನಾನೀಗ ಇಲ್ಲ. ನನ್ನ ಕೆಲಸದಲ್ಲೂ ನಾನು ಅಸುರಕ್ಷತೆ ಅನುಭವಿಸೋದಿಲ್ಲ. ನನ್ನ ಕೆಲಸ ಹಾಗೂ ಕಲೆ ಎರಡರ ಮೇಲೂ ತುಂಬ ಭರವಸೆ ಇದೆ. ನಾನೀಗ ಬದಲಾಗಿದ್ದೇನೆ. ಆಲಿಯಾ ವಿಷ್ಯದಲ್ಲಿ ಕೂಡ ಅಷ್ಟೆ. ಆಲಿಯಾ, ಬೇರೆ ವ್ಯಕ್ತಿಗಳ ಜೊತೆ ಸಿನಿಮಾಗಳಲ್ಲಿ ರೋಮ್ಯಾನ್ಸ್ ಮಾಡಿದ್ದಾರೆ. ಅವಳನ್ನು ನೋಡಿ ಇನ್ ಸೆಕ್ಯೂರ್ ಫೀಲ್ ಆಗಿಲ್ಲ. ಹತ್ತು ವರ್ಷದ ಹಿಂದೆ, ನನ್ನ ಸಂಗಾತಿ ಹೀಗೆ ಮಾಡಿದ್ರೆ ನಾನು ಅಭದ್ರತೆ ಅನುಭವಿಸುತ್ತಿದ್ದೆ. ನಾನೀಗ ದೊಡ್ಡವನಾಗಿದ್ದೇನೆ. ನಾನು ಜೀವನವನ್ನು ಅರ್ಥ ಮಾಡಿಕೊಂಡು ಬದುಕುತ್ತಿದ್ದೇನೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. 

ಮೊದಲ ಚಿತ್ರ ಸೋತಿದ್ದಕ್ಕೆ ಬೇಸರವಾಗಿಲ್ಲ : ಸಂದರ್ಶನದಲ್ಲಿ ರಣಬೀರ್ ಕಪೂರ್ ತಮ್ಮ ಚಿತ್ರಗಳ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ. ರಣಬೀರ್ ಕಪೂರ್ ಮೊದಲ ಚಿತ್ರ ಸಾವರಿಯಾ. ಅದು ಅಭಿಮಾನಿಗಳನ್ನು ಸೆಳೆದಿರಲಿಲ್ಲ. ಈ ಬಗ್ಗೆ ಹೇಳಿದ ರಣಬೀರ್ ಕಪೂರ್, ನಾನು ಸಾವರಿಯಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೆ. ಈ ಚಿತ್ರ ಸೋತಿತ್ತು. ಆದ್ರೆ ನನಗೆ ಅದು ಹೆಚ್ಚು ಬೇಸರ ನೀಡಲಿಲ್ಲ. ಯಾಕೆಂದ್ರೆ ನಾನು ಜೀವನದಲ್ಲಿ ಸಾಕಷ್ಟು ಏರುಪೇರನ್ನು ನೋಡಿದ್ದೆ. ಇಂಥ ವಿಷ್ಯವನ್ನು ಹೇಗೆ ಡೀಲ್ ಮಾಡ್ಬೇಕು ಎನ್ನುವುದು ನನಗೆ ಗೊತ್ತಿತ್ತು ಎಂದು ರಣಬೀರ್ ಹೇಳಿದ್ದಾರೆ.

ರಾಣಿ ಪಾತ್ರಕ್ಕಾಗಿ ನಟಿ ಧರಿಸಿದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜು!

ಮದುವೆ ನಂತ್ರ ಬದಲಾದ ಆಲಿಯಾ : ಆಲಿಯಾ ಭಟ್ ಬಗ್ಗೆ ರಣಬೀರ್ ಕಪೂರ್ ಹೊಗಳಿದ್ದಾರೆ. ಮದುವೆ ಆದ್ಮೇಲೆ ಪತಿಯ ಬಗ್ಗೆ ಆಲೋಚನೆ ಮಾಡುವ ಆಲಿಯಾ ತಮ್ಮ ಸ್ವಭಾವವನ್ನು ಬದಲಿಸಿಕೊಂಡಿದ್ದಾರೆ. ರಣಬೀರ್ ಆರಾಮವಾಗಿರಲು ಪ್ರಯತ್ನ ಮಾಡ್ತಾರೆ. ನಾನು ಏನಾದ್ರೂ ಆಕೆಗೆ ಮಾಡ್ಬೇಕೆಂದು ಬಯಸ್ತೇನೆ. ಇನ್ನೂ ಏನು ಮಾಡಿಲ್ಲ ಎಂದ ರಣಬೀರ್, ಆಲಿಯಾ ದೊಡ್ಡದಾಗಿ ಮಾತನಾಡ್ತಿದ್ದರು. ನನಗೆ ಈ ದೊಡ್ಡ ಧ್ವನಿ ತೊಂದರೆ ನೀಡ್ತಾಯಿತ್ತು. ನನ್ನ ತಂದೆ ದೊಡ್ಡದಾಗಿ ಮಾತನಾಡ್ತಿದ್ದರು. ಅದು ನನಗೆ ಹಿಂಸೆಯಾಗ್ತಿತ್ತು. ಈ ಬಗ್ಗೆ ತಿಳಿದ ಆಲಿಯಾ, ನನಗಾಗಿ ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದಾರೆ. 30 ವರ್ಷದಿಂದ ಬಂದ ಸ್ವಭಾವ, ಜೀವನ ಶೈಲಿಯನ್ನು ಬದಲಿಸಿಕೊಳ್ಳೋದು ಸುಲಭವಲ್ಲ. ಆದ್ರೆ ಆಲಿಯಾ ಇದನ್ನು ಮಾಡಿದ್ದಾರೆ ಎಂದು ರಣಬೀರ್ ಹೇಳಿದ್ದಾರೆ. ಆಲಿಯಾ ಹಾಗೂ ರಣಬೀರ್ 2022, ಏಪ್ರಿಲ್ 14ರಂದು ಮದುವೆ ಆಗಿದ್ದಾರೆ. ಅವರಿಗೆ ರಾಹಾ ಹೆಸರಿನ ಎರಡು ವರ್ಷದ ಮುದ್ದಾದ ಮಗಳಿದ್ದಾಳೆ. 

click me!