ಸೆಕ್ಸ್ ಕುರಿತು ಮಾತನಾಡಿದ್ದ 'ಕಿರಾತಕ' ಬೆಡಗಿ ಫುಲ್​ ಟೈಟಾಗಿ ಯುವಕರಿಗೆ ಬಿಟ್ಟಿ ಸಲಹೆ ಕೊಟ್ಟಿದ್ದು ಹೀಗೆ...

By Suchethana D  |  First Published Jul 29, 2024, 12:50 PM IST

ಪಕ್ಕದಲ್ಲಿ ಮದ್ಯದ ಗ್ಲಾಸ್​ ಇಟ್ಟುಕೊಂಡು ನಾನ್​ವೆಜ್​ ಸೇವನೆ ಮಾಡುತ್ತಾ ಕಿರಾತಕ ಬೆಡಗಿ ಓವಿಯಾ ಯುವಕರಿಗೆ ಹೀಗೆ ಬಿಟ್ಟಿ ಸಲಹೆ ಕೊಟ್ಟಿದ್ದಾರೆ. ಏನದು? 
 


ರಾಕಿಂಗ್​ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಮಲಯಾಳಂ ನಟಿ ಓವಿಯಾ,  ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಸಲಿಂಗಕಾಮದ ವಿಷಯ ಮಾತನಾಡಿ ಹಲ್​ಚಲ್​ ಸೃಷ್ಟಿಸಿದ್ದರು.  ನನಗೆ ಗಂಡನ ಅವಶ್ಯಕತೆಯಿಲ್ಲ. ನಾನು ಮದುವೆಯಾಗಲ್ಲ ಎಂದಿದ್ದ ಬೆಡಗಿ, ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ನೀವಂದುಕೊಂಡಂತೆ ಲೆಸ್ಬಿಯನ್‌ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮದುವೆಯೆಂದರೆ ಅಲರ್ಜಿ ಎನ್ನುತ್ತಿದ್ದ ನಟಿಗೆ ನೀವು ಸಲಿಂಗಕಾಮಿಯೇ ಎಂಬ ಪ್ರಶ್ನೆ ಎದುರಾಗಿತ್ತು. ಆಗ ಅವರು ಈ ಸ್ಪಷ್ಟನೆ ನೀಡಿದ್ದರು. "ನಾನು ಮದುವೆ ಆಗಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕಾಮೆಂಟ್‌ಗಳು ಬರುವುದು ಸಹಜ. ಈ ರೀತಿಯ ಪ್ರಶ್ನೆಗಳು ನನಗೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಒಬ್ಬ ನಟಿಯಾಗಿ ಈ ರೀತಿಯ ಗಾಸಿಪ್‌ಗಳು, ಕೆಟ್ಟ ಮಾತುಗಳು ಬರುವುದು ಸರ್ವೇ ಸಾಮಾನ್ಯ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಅವರು ಹಾಗೇ ಹೇಳಿದ ಮಾತ್ರಕ್ಕೆ ನಾನು ಸಲಿಂಗಕಾಮಿಯಲ್ಲ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


ಇದೀಗ ಓವಿಯಾ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶ ಇಲ್ಲದಿದ್ದರೂ ಸೋಷಿಯಲ್​ ಮೀಡಿಯಾದಲ್ಲಿ ಆಗಾಗ್ಗೆ ಫೋಟೋ ಶೇರ್​ ಮಾಡಿ ಪ್ರಚಾರದಲ್ಲಿ ಇರಲು ಬಯಸುವ ನಟಿ ಈಕೆ. ಇದೀಗ  ಗ್ರಿಲ್ಡ್ ಏಡಿಯನ್ನು ಸೈಡ್ ಡಿಶ್ ಆಗಿ ತಿನ್ನುತ್ತಾ, ಪಕ್ಕದಲ್ಲಿ ಮದ್ಯದ ಬಾಟಲಿ ಇಟ್ಟುಕೊಂಡು ಫುಲ್​ ಟೈಟ್​ ಆಗಿರುವಂತೆ ಕಾಣುತ್ತಿರುವ ನಟಿ, ಯುವಕರಿಗೆ ಕುಡಿತವು ಆರೋಗ್ಯಕ್ಕೆ ಹಾನಿಕರ ಎನ್ನುವ ಶೀರ್ಷಿಕೆ ಕೊಟ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ತಾವು ಖುದ್ದು ಕುಡಿಯುತ್ತಲೇ ಇದೀಗ ಬಿಟ್ಟಿ ಸಲಹೆ ಕೊಟ್ಟಿದ್ದಾರೆ. 

Tap to resize

Latest Videos

ಸ್ನಾನದ ವಿಡಿಯೋ ಲೀಕ್​ ಆಗಿದ್ದು ಹೇಗೆ? ಕೊನೆಗೂ ಮೌನ ಮುರಿದ ನಟಿ ಊರ್ವಶಿ ರೌಟೇಲಾ

ಅಂದಹಾಗೆ ನಟಿ, ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲೂ ನಟಿಸಿದ್ದಾರೆ.  ತಮಿಳು ಸಿನಿಮಾ ಅವಕಾಶಗಳು ಕಡಿಮೆಯಾದ ನಂತರ ಬಿಗ್ ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕೆಲವೇ ದಿನಗಳಲ್ಲಿ  ಪ್ರಾಮಾಣಿಕತೆಯಿಂದ ಹಲವಾರು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆದರೆ,  ಆರವ್ ನನ್ನು ಪ್ರೀತಿಸಿ ಆತನಿಂದ ಮೋಸ ಹೋಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಓವಿಯಾ, ತನಗೆ ಬಯೋ ಪೋಲಾರ್ ಡಿಸಾರ್ಡರ್ ಎಂಬ ಸಮಸ್ಯೆ ಇದೆ ಎಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ಹೇಳಿದ್ದರು. ಹಠಾತ್ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಕಾರಣ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿತ್ತು.  

  ಓವಿಯಾ ಇದೀಗ ವೇಶ್ಯಾವಾಟಿಕೆಯ ಕಾನೂನುಬದ್ಧತೆ ಮತ್ತು ಲೈಂಗಿಕ ಶಿಕ್ಷಣದ  ಕುರಿತು ಮುಕ್ತವಾಗಿ ಮಾತನಾಡಿದ್ದರು.   ಕಿರಾತಕ ಚಿತ್ರದ ಬಳಿಕ  ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬೆಡಗಿ, ಈಗ ವೇಶ್ಯಾವಾಟಿಕೆಯ ಕುರಿತು ಓಪನ್​ ಸ್ಟೇಟ್​ಮೆಂಟ್​ ನೀಡಿ ಸುದ್ದಿಯಾಗಿದ್ದರು. ಅತ್ಯಾಚಾರ ಕುರಿತಂತೆ ಮಾತನಾಡಿರುವ ಓವಿಯಾ, ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಅವರು ಮಾತನಾಡಿದ್ದರು. ಇದರ ಜೊತೆಗೆ ಸೆಕ್ಸ್​ ಎಜುಕೇಷನ್​ ಕುರಿತು ಹೇಳಿದ್ದ ನಟಿ,  ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಆಸೆಗಳಿರುತ್ತವೆ. ಹಾಗೆಯೇ ಹಾರ್ಮೋನುಗಳು ಸಹ ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಅದು ಸತ್ಯವೂ ಹೌದು. ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಹೇಳಿದ್ದಾರೆ.

ಇವತ್ತು ರಾತ್ರಿಯ ಮಜಾ... ಎನ್ನುತ್ತಲೇ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​! ಸೈಜ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

 

 
 
 
 
 
 
 
 
 
 
 
 
 
 
 

A post shared by Oviya (@happyovi)

click me!