ಬೆಂಗಳೂರಿನಲ್ಲಿಯೇ ನಟಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆರಿಗೆ ಆಗಲಿದೆಯೆ? ಏನಿದು ಹೊಸ ವಿಷ್ಯ?
ಬಾಲಿವುಡ್ ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ದೀಪಿಕಾ ಅವರಿಗೆ ಎರಡು ತಿಂಗಳು ಎನ್ನಲಾಗುತ್ತಿದೆ. ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪಠಾಣ್, ಜವಾನ್ ಸಕ್ಸಸ್ ಆದರೆ ಫೈಟರ್ನಲ್ಲಿ ಅಶ್ಲೀಲ ಎಂಬಂತೆ ಕಾಣಿಸಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಮಗುವಿನ ಸುದ್ದಿ ನೀಡಿದ್ದಾರೆ.
ಇದೀಗ ಮತ್ತೊಂದು ಅಪ್ಡೇಟ್ ಹೊರಕ್ಕೆ ಬಂದಿದೆ. ಅದೇನೆಂದರೆ, ದೀಪಿಕಾ ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ. ಅಷ್ಟಕ್ಕೂ ದೀಪಿಕಾ ಕರ್ನಾಟಕ ಮೂಲದವರು ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯ. ಮಂಗಳೂರು ಮೂಲದವರಾಗಿರುವ ಪಡುಕೋಣೆಯವರ ಮಾತೃಭಾಷೆ ಕೊಂಕಣಿ ಆಗಿದೆ. ಆದರೆ ದೀಪಿಕಾ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದರು. ನಂತರ ಅವನು ತನ್ನ ಹೆತ್ತವರೊಂದಿಗೆ ಭಾರತಕ್ಕೆ ಬಂದರು. ಆದರೆ ಮೂಲ ಮಾತ್ರ ಕರ್ನಾಟಕ. ಇದೇ ಹಿನ್ನೆಲೆಯಲ್ಲಿ, ದೀಪಿಕಾ ಮಗು ಕೂಡ ಕರ್ನಾಟದಲ್ಲಿಯೇ ಜನಿಸಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರುಗಳ ನೆರವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
ಲೈಂಗಿಕ ದೌರ್ಜನ್ಯ ಆರೋಪಿ ಜೊತೆ ಮಗು ಬಯಸಿದ್ದ ದೀಪಿಕಾ: ಹಳೆಯ ವಿಡಿಯೋದಲ್ಲಿ ನಟಿ ಹೇಳಿದ್ದೇನು?
ಇನ್ನೂ ಒಂದು ಇಂಟರೆಸ್ಟಿಂಗ್ ವಿಷಯ ಏನೆಂದರೆ, ಬೆಂಗಳೂರಿನ ಇಂದಿರಾ ನಗರದಲ್ಲಿ ದೀಪಿಕಾ ಪಡುಕೋಣೆ ಮನೆಯಿದೆ. ಆದ್ದರಿಂದ ಬೆಂಗಳೂರಿನಲ್ಲಿಯೇ ಸ್ವಲ್ಪ ಸಮಯ ನೆಲೆಸಲಿದ್ದಾರೆ ಎನ್ನಲಾಗಿದೆ. ಇದಾಗಲೇ ನಟಿ ಸಂದರ್ಶನವೊಂದರಲ್ಲಿ ಬೆಂಗಳೂರಿನ ತಮ್ಮ ಇಷ್ಟದ ಜಾಗಗಳಲ್ಲಿ ಓಡಾಡಲಿದ್ದಾರೆ. ಬೆಂಗಳೂರಿನ ಇಷ್ಟದ ಜಾಗಗಳು ಹಾಗೂ ಹೋಟೆಲ್ಗಳ ಬಗ್ಗೆ ವಿವರಿಸಿದ್ದರು. ಗೀತಾ ಸ್ಟೋರ್ಸ್, ಮೇಘನಾ, ವಿದ್ಯಾರ್ಥಿ ಭವನ್, ಸಿಟಿಆರ್ ಇನ್ನಿತರೆ ಹೋಟೆಲ್ಗಳಿಗೆ ಭೇಟಿ ನೀಡಿರುವ ಬಗ್ಗೆ ಹಾಗೂ ಬೆಂಗಳೂರಿನ ಅನ್ನ ಹಾಗೂ ರಸಂ ತಮಗೆ ಬಹಳ ಇಷ್ಟವೆಂದ ಬಗ್ಗೆ ತಿಳಿಸಿದ್ದರು.
ಇನ್ನು ಇತ್ತೀಚಿನ ದಿನಗಳಲ್ಲಿನ ದೀಪಿಕಾ ವಿಷಯಕ್ಕೆ ಬರುವುದಾದರೆ, ಪಠಾಣ್ನಲ್ಲಿ ಇವರ ಡ್ರೆಸ್ ಸಾಕಷ್ಟು ವಿವಾದಕ್ಕೆ ಈಡು ಮಾಡಿತ್ತು. ಇದಾದ ಬಳಿಕ ಜವಾನ್ನಲ್ಲಿ ಭರ್ಜರಿ ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಹೃತಿಕ್ ರೋಷನ್ ಅಭಿನಯದ ಫೈಟರ್ ಚಿತ್ರದಲ್ಲಿ ದೀಪಿಕಾ ಮತ್ತೆ ಅತ್ಯಂತ ಕನಿಷ್ಠ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ವಿವಾದಕ್ಕೆ ಈಡಾದರು. ಏರ್‌ಫೋರ್ಸ್ ಆಫೀಸರ್ ಪಾತ್ರಗಳಲ್ಲಿ ನಟಿಸಿದ್ದರೂ ಹೃತಿಕ್ ರೋಷನ್ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡು ಕೇಸನ್ನೂ ದಾಖಲಿಸಿಕೊಂಡರು. ಚಿತ್ರದಲ್ಲಿ ವಾಯುಪಡೆಯ ಸಮವಸ್ತ್ರವನ್ನು ಧರಿಸಿ ಲಿಪ್‌ಕಿಸ್ ಮಾಡುತ್ತಿರುವುದು ವಾಯುಪಡೆಗೆ ಅವಮಾನ ಮಾಡಿದೆ. ಜೊತೆಗೆ ವಾಯುಪಡೆಯ ಘನತೆಗೆ ಧಕ್ಕೆ ತಂದಿದೆ. ಪಡೆಯ ಅಸಂಖ್ಯಾತ ಅಧಿಕಾರಿಗಳಿಗೆ ಅವಮಾನವಾಗಿದೆ ಎಂದು ಲೀಗಲ್ ನೋಟಿಸ್ ನೀಡಲಾಗಿತ್ತು. ಈಗ ಸದ್ಯ ನಟಿ, ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಅನ್ನು ಬಹುತೇಕ ಮುಗಿಸಿದ್ದರಿಂದ ಈ ಚಿತ್ರದ ಮೇಲೆ ಇವರ ಗರ್ಭಾವಸ್ಥೆ ಪ್ರಭಾವ ಬೀರುವುದಿಲ್ಲ. ಆದರೆ ‘ಸಿಂಘಂ ಅಗೇನ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ದೀಪಿಕಾ ಇದರ ಚಿತ್ರೀಕರಣ ಪೂರ್ಣ ಮಾಡುತ್ತಾರೆಯೇ ಎಂಬ ಸಂದೇಹವಿದೆ. ಏಕೆಂದರೆ ಇದರ ಶೂಟಿಂಗ್ ಈಗಷ್ಟೇ ಶುರುವಾಗಿದ್ದು, ಚಿತ್ರತಂಡಕ್ಕೆ ತಲೆಬಿಸಿ ತಂದಿದೆ ಎನ್ನಲಾಗುತ್ತಿದೆ.
ಪಾರ್ಟಿಯಲ್ಲಿ ಡ್ಯಾನ್ಸ್ ಮಾಡ್ತಿದ್ದಾಗ್ಲೇ ರಣವೀರ್ ಪ್ಯಾಂಟ್ ನಡುವೆ ಹರಿದೇ ಹೋಯ್ತು! ದೀಪಿಕಾ ಮಾಡಿದ್ದೇನು?