ಇದೇ 20ರಂದು ಉರ್ಫಿಯಿಂದ ಎಲ್ಲರಿಗೂ ಭರ್ಜರಿ ಉಡುಗೊರೆ! ವಿಡಿಯೋ ವೈರಲ್​- ಬಿಸಿಬಿಸಿ ಚರ್ಚೆ ಶುರು!

By Suvarna News  |  First Published Mar 16, 2024, 5:45 PM IST

ಇದೇ 20ರಂದು ಎಲ್ಲರಿಗೂ ಭರ್ಜರಿ ಉಡುಗೊರೆ ಕೊಡುವುದಾಗಿ ನಟಿ ಉರ್ಫಿ ಜಾವೇದ್​ ಘೋಷಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು  ಬಿಸಿಬಿಸಿ ಚರ್ಚೆ ಶುರುವಾಗಿದೆ. 
 


ಚಿತ್ರ ವಿಚಿತ್ರ ಡ್ರೆಸ್​ಗಳಿಂದಲೇ ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆಗಿದ್ದಾರೆ ನಟಿ ಉರ್ಫಿ ಜಾವೇದ್​. ಇದೀಗ ನಟಿ ಏಕ್ತಾ ಕಪೂರ್ ಅವರ ‘ಲವ್ ಸೆಕ್ಸ್ ಔರ್ ಧೋಕಾ-2’ ಚಿತ್ರದಲ್ಲಿ ಉರ್ಫಿ ಕಾಣಿಸಿಕೊಳ್ಳಲಿದ್ದಾರೆ.  ಇಂಟರ್ನೆಟ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಒಂದು ನೋಟವನ್ನು ನೀಡಲಿರುವ ಈ ಚಿತ್ರದಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಉರ್ಫಿಗೆ ಯೋಗ್ಯ ಎಂಬುದನ್ನು ಅರಿತು ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರವನ್ನು ದಿಬಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉರ್ಫಿ ಅವರ ಅಭಿಮಾನಿಗಳು ಈ ಚಿತ್ರವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಇದರ ನಡುವೆಯೇ ಪಾಪರಾಜಿಗಳನ್ನು ಉದ್ದೇಶಿಸಿ ನಟಿ 20ನೇ ತಾರೀಖು ಬಹುದೊಡ್ಡ ಗಿಫ್ಟ್​ ಕೊಡುತ್ತೇನೆ ಎಲ್ಲರೂ ತಪ್ಪದೇ ಬನ್ನಿ ಎಂದಿದ್ದಾರೆ.

20ರಂದು ಎಲ್ಲರಿಗೂ ಉಡುಗೊರೆ ನೀಡುತ್ತೇನೆ. ಎಲ್ಲರೂ ಬನ್ನಿ, ಎಲ್ಲರೂ ಬರಲೇಬೇಕು ಎಂದು ಮೊದಲೇ ಹೇಳುತ್ತಿದ್ದೇನೆ ನೋಡಿ. ಏಕೆಂದರೆ ಕೆಲವರು ಕೊನೆಯದಾಗಿ ಬರುತ್ತಾರೆ ಮತ್ತು ಕೆಲವರು ಬರುವುದಿಲ್ಲ ಮತ್ತು 20 ರಂದು ಎಲ್ಲರಿಗೂ ಆಶ್ಚರ್ಯ ಕಾದಿದೆ.  ನಾನು ಎಲ್ಲರಿಗೂ ಒಳ್ಳೆಯ ಉಡುಗೊರೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.  ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ಈಕೆ ಇಲ್ಲಿಯವರೆಗೆ ಹಾಕಿರುವ ಡ್ರೆಸ್​ಗಳನ್ನು ಎಲ್ಲರಿಗೂ ನೀಡಲಿದ್ದಾಳೆ ಇರಬೇಕು ಎಂದು ಕೆಲವರು ತಮಾಷೆ ಮಾಡಿದ್ದರೆ, ಇನ್ನು ಕೆಲವರು ಏನಿಲ್ಲ, ಹೊಸ ಚಿತ್ರದ ಬಗ್ಗೆ ಹೇಳಲಿದ್ದಾರೆ ಅಷ್ಟೇ ಎಂದಿದ್ದಾರೆ. ಮತ್ತೆ ಕೆಲವರು ಎಲ್ಲರನ್ನೂ ನಟಿ ಮೂರ್ಖಳನ್ನಾಗಿ ಮಾಡುತ್ತಿದ್ದಾರೆ ಎಂದಿದ್ದಾರೆ. 

Tap to resize

Latest Videos

ಇಂಟರ್​ನೆಟ್​ ಸೆನ್ಸೇಷನ್​ ಉರ್ಫಿ ಜಾವೇದ್​ ಬಾಲಿವುಡ್​ನಲ್ಲಿ ಮಿಂಚಿಂಗ್​! ಮುಂದಿನ ತಿಂಗಳೇ ಚಿತ್ರ ರಿಲೀಸ್​...

ಅಷ್ಟಕ್ಕೂ, ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ  ಅರೆಬರೆ ಡ್ರೆಸ್​ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.

  ಉರ್ಫಿ ಜಾವೇದ್ ಈ ಹಿಂದೆಯೂ ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.  'ಫೆರೋ ಕಿ ಹೇರಾ ಫೆರಿ', 'ಬೇಪನ್ನಾಹ್', 'ದಯಾನ್', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ', 'ಬಡೇ ಭಯ್ಯಾ', 'ಏ ಮೇರೆ ಹಮ್ಸಫರ್', 'ಚಂದ್ರ ನಂದಿನಿ' ಮತ್ತು 'ಮೇರಿ ದುರ್ಗಾ' ಸೇರಿದಂತೆ ಹಲವು ಸೀರಿಯಲ್​ಗಳ ಮೂಲಕ ಮನೆಮಾತಾದವರೇ. ಅದರೆ ಈಗೀಗ ಅವೆಲ್ಲವನ್ನೂ ಬಿಟ್ಟು ಹುಚ್ಚು ಡ್ರೆಸ್​ಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಟ್ರೋಲ್​ಗಳ ಮೂಲಕವೇ ಸಾಕಷ್ಟು ಖ್ಯಾತಿ, ಕುಖ್ಯಾತಿ ಎರಡನ್ನೂ ಪಡೆಯುತ್ತಿದ್ದಾರೆ.  ಅಂದಹಾಗೆ ಲವ್​ ಸೆಕ್ಸ್​ ದೋಖಾ ಚಿತ್ರದ ಪಾರ್ಟ್​-1 2010ರಲ್ಲಿಯೇ ಬಿಡುಗಡೆಯಾಗಿ ಸಕತ್​ ಸದ್ದು ಮಾಡಿತ್ತು. ಇದೀಗ ಬಹಳ ವರ್ಷಗಳ ಗ್ಯಾಪ್​ನಲ್ಲಿ ಪಾರ್ಟ್​-2 ಬರಲಿದೆ. ಪಾರ್ಟ್​-1ನ ಮುಂದುವರೆದ ಭಾಗ ಇದು ಎಂದು ಇದಾಗಲೇ ಏಕ್ತಾ ಕಪೂರ್​ ಘೋಷಿಸಿದ್ದಾರೆ. ಮೊದಲ ಪಾರ್ಟ್​ನಲ್ಲಿ  ರಾಜ್​ಕುಮಾರ್​ ರಾವ್, ನುಸ್ರತ್ ಭರುಚಾ ಮತ್ತು ಅಂಶುಮಾನ್ ಝಾ ಅವರಂತಹ ತಾರೆಯರು ನಟಿಸಿದ್ದರು.  ಚಿತ್ರವು ಸಕತ್​ ಹಿಟ್ ಆಗಿತ್ತು. ಅದನ್ನು ನೋಡಿದವರು ಈಗ ಪಾರ್ಟ್​-2 ನೋಡಲು ಕಾಯುತ್ತಿದ್ದಾರೆ. ಅದರಲ್ಲಿ ಉರ್ಫಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವೂ ಇದೆ. 

ಉರ್ಫಿಯ ಮತ್ತೊಂದು ರೂಪಕ್ಕೆ ಫ್ಯಾನ್ಸ್‌ ಭಾವುಕ! ದುಡ್ಡಿಗೆ ಬೆತ್ತಲಾಗುವರ ಮುಂದೆ ನಿಮಗೊಂದು ಸಲಾಂ ಎಂದ ನೆಟ್ಟಿಗರು

click me!