ಬಾಲಿವುಡ್ ನಟಿಯರ ಎದೆ, ಸೊಂಟದ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳೋ ​​​​​​​ಓರ್ರಿ ದಿನಕ್ಕೆ ಗಳಿಸೋ ಆದಾಯ ಇಷ್ಟೊಂದಾ?

Published : Mar 17, 2024, 09:12 AM ISTUpdated : Mar 17, 2024, 09:19 AM IST
ಬಾಲಿವುಡ್ ನಟಿಯರ ಎದೆ, ಸೊಂಟದ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳೋ ​​​​​​​ಓರ್ರಿ  ದಿನಕ್ಕೆ ಗಳಿಸೋ ಆದಾಯ ಇಷ್ಟೊಂದಾ?

ಸಾರಾಂಶ

ಎಲ್ಲಾ ಸೆಲೆಬ್ರಿಟಿ, ವಿಐಪಿಗಳ ಜೊತೆಯೂ ಅಂಗರಕ್ಷಕರು ಇರುತ್ತಾರೆ. ಆದರೆ ಇವರೆಲ್ಲರ ಜೊತೆಗೆ ಈತ ಮಾತ್ರ ತುಂಬಾ ಕ್ಲೋಸಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾನೆ. ಖುಲ್ಲಂಖುಲ್ಲ ಬಾಲಿವುಡ್ ನಟರ ಹೆಗಲ ಮೇಲೆ, ನಟಿಯರ ಎದೆ, ಸೊಂಟದ ಮೇಲೆ ಕೈಯಿಟ್ಟು ನಗು ಬೀರುತ್ತಾನೆ. ಈತನ ದಿನದ ಆದಾಯವೇ ಅಬ್ಬಬ್ಬಾ ಎನ್ನುವಂತಿದೆ.

ಬಾಲಿವುಡ್ ನಟ-ನಟಿಯರು ಓಡಾಡುವಾಗ ಹಿಂದೆ ಮುಂದೆ ಬಾಡಿಗಾರ್ಡ್ಸ್‌ಗಳ ದಂಡೇ ಇರುತ್ತದೆ. ಅಂಬಾನಿ ಫ್ಯಾಮಿಲಿ ಮನೆಯಿಂದ ಹೊರಟಾಗಂತೂ ಕಾರುಗಳು ಸಾಲು ಸಾಲಾಗಿ ಬೆಂಗಾವಲಾಗಿ ಜೊತೆಗೆ ಬರುತ್ತವೆ. ಹೀಗೆ ಎಲ್ಲಾ ಸೆಲೆಬ್ರಿಟಿ, ವಿಐಪಿಗಳ ಜೊತೆಯೂ ಅಂಗರಕ್ಷಕರು ಇರುತ್ತಾರೆ. ಆದರೆ ಇವರೆಲ್ಲರ ಜೊತೆಗೆ ಈತ ಮಾತ್ರ ತುಂಬಾ ಕ್ಲೋಸಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾನೆ. ಖುಲ್ಲಂಖುಲ್ಲ ಬಾಲಿವುಡ್ ನಟರ ಹೆಗಲ ಮೇಲೆ, ನಟಿಯರ ಎದೆ, ಸೊಂಟದ ಮೇಲೆ ಕೈಯಿಟ್ಟು ನಗು ಬೀರುತ್ತಾನೆ. ಆತ ಮತ್ಯಾರೂ ಅಲ್ಲ ಓರ್ರಿ ಅಕಾ ಒರ್ಹಾನ್ ಅವತ್ರಮಣಿ.

ಅಂಬಾನಿ ಮನೆ ಕಾರ್ಯಕ್ರಮವಿರಲಿ, ಬಾಲಿವುಡ್ ದಿವಾಗಳ ಪಾರ್ಟಿಯಿರಲಿ, ವಿದೇಶದಲ್ಲಿ ನಡೆಯೋ ಸಿನಿ ಸಮಾರಂಭವಿರಲಿ- ಅಲ್ಲೆಲ್ಲ ಓರಿ ಇರಲೇಬೇಕು.  ಆತ ಎಲ್ಲ ನಟಿಯರು, ಅಂಬಾನಿ ಮನೆಯ ಹುಡುಗಿಯರು ಸೇರಿದಂತೆ ಎಲ್ಲರ ಎದೆ ಮೇಲೆ ಕೈ ಇಟ್ಟು ಓರೆ ನೋಟ ನೀಡುವ ಪೋಸ್‌ನಲ್ಲಿ ಫೋಟೋ ತೆಗೆದುಕೊಳ್ಳಬೇಕು. ಈ ಓರಿ ಯಾರು ಏನು ಎಂಬುದು ಅಷ್ಟಾಗಿ ಬಹಿರಂಗವಾಗದಿದ್ದರೂ ಎಲ್ಲ ನಟಿಯರಿಗೂ ಆತ ಕ್ಲೋಸ್ ಎಂಬುದಂತೂ ಪಕ್ಕಾ. ಹೆಣ್ಣುಮಕ್ಕಳ ಮೈ ಮೇಲೆ ಕೈಯಿಟ್ಟು ಪೋಸ್ ಕೊಡುವ ಈ ಓರಿ ದಿನವೊಂದಕ್ಕೆ ಗಳಿಸೋದು ಲಕ್ಷ ಲಕ್ಷ.

ಓರಿ ಜೊತೆ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಗರ್ಭಾ ಡ್ಯಾನ್ಸ್; ಜನ ಮೆಚ್ಚಿದ ವಿಡಿಯೋ ಇಲ್ಲಿದೆ

ಜಸ್ಟ್ ಒಂದು ಇವೆಂಟ್‌ಗೆ 15ರಿಂದ 30 ಲಕ್ಷ ರೂ. ಪಡೆಯುವ ಓರ್ರಿ
ಓರ್ರಿ ಈಗ ಹಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಲ್ಲದೆ ಒರ್ರಿಯ ಲಕ್ಸುರಿಯಸ್ ಲೈಫ್‌ಸ್ಟೈಲ್ ಎಲ್ಲರ ಗಮನ ಸೆಳೆಯುತ್ತದೆ. ಜನರು ಅವರ ಆದಾಯದ ಮೂಲದ ಬಗ್ಗೆ ಆಗಾಗ ಆಶ್ಚರ್ಯ ಪಡುತ್ತಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ  ಆದಾಯದ ಪ್ರಾಥಮಿಕ ಮೂಲವನ್ನು ಬಹಿರಂಗಪಡಿಸಲು ಕೇಳಿದಾಗ, ಓರಿ ಮಾಹಿತಿ ನೀಡಿದರು.

'ಸದ್ಯಕ್ಕೆ, ನನ್ನ ಗಮನವು ಸಂತೋಷದ ಸಂದೇಶವನ್ನು ಹರಡುವುದಾಗಿದೆ. ಇದು ನನಗೆ ಸಂತೋಷವನ್ನು ತರುವ ಕಾರ್ಯಕ್ರಮಗಳಿಗೆ ಹಾಜರಾಗಲು ನನಗೆ ಅನುವು ಮಾಡಿಕೊಡುತ್ತದೆ. ಇದುವೇ ನನ್ನ ಆದಾಯದ ಮೂಲವಾಗಿದೆ' ಎಂದು ಓರಿ ಹೇಳುತ್ತಾರೆ. ಇಂಥಾ ಕಾರ್ಯಕ್ರಮಗಳಿಗೆ ಹಾಜರಾಗಲು 15ರಿಂದ 30 ಲಕ್ಷ ರೂಪಾಯಿ ಪಡೆಯುವುದಾಗಿ ಓರಿ ಹೇಳಿಕೊಂಡಿದ್ದಾರೆ. 'ಜನರು ನನ್ನನ್ನು ಮದುವೆಗೆ ಕರೆಯುತ್ತಾರೆ. ನನಗೆ 15ರಿಂದ 30 ಲಕ್ಷ ರೂಪಾಯಿಗಳ ನಡುವೆ ಪಾವತಿಸುತ್ತಾರೆ' ಎಂದು ತಿಳಿಸಿದ್ದಾರೆ.

ಹುಡುಗಿಯರ ಎದೆ ಮೇಲೆ ಕೈ ಇಟ್ಟು ಓರೆ ನೋಟ ಬೀರುವ ಓರಿಯ ಟಚ್‌ಗೆ ವಿವರಣೆ ನೀಡಿದ ರಣವೀರ್ ಸಿಂಗ್! ಫನ್ನಿ ವಿಡಿಯೋ

ಈ ಹಿಂದೆ, ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ 17' ನಲ್ಲಿ ಕಾಣಿಸಿಕೊಂಡಾಗ, ಒರ್ರಿ ಅವರು ಕೇವಲ ಚಿತ್ರಗಳಿಗೆ ಪೋಸ್ ನೀಡಲು ಸುಮಾರು 20 ರಿಂದ 30 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಬಹಿರಂಗಪಡಿಸಿದರು. "ಈವೆಂಟ್‌ಗಳಲ್ಲಿ ನಾನು ಮಾಡುವ ಪೋಸ್‌ನೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ಅವುಗಳನ್ನು ಪೋಸ್ಟ್ ಮಾಡಲು ನನಗೆ ಹಣ ಸಿಗುತ್ತದೆ. ಈ ಚಿತ್ರಗಳಿಗಾಗಿ ನಾನು ಒಂದೇ ರಾತ್ರಿಯಲ್ಲಿ ಸುಮಾರು 20-30 ಲಕ್ಷ ರೂಪಾಯಿ ಗಳಿಸುತ್ತೇನೆ" ಎಂದು ಅವರು ಹೇಳಿದರು. ಅವರ ಬಹಿರಂಗಪಡಿಸುವಿಕೆಯು ಸಲ್ಮಾನ್ ಖಾನ್‌ಗೆ ಶಾಕ್‌ ಉಂಟು ಮಾಡಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?