Luxurious car 1 ಕೋಟಿ ರೂ ಮೌಲ್ಯದ BMW X5 ಕಾರು ಖರೀದಿಸಿದ ರಾಘವ್ ಜುಯಾಲ್!

By Suvarna News  |  First Published Jun 6, 2022, 4:03 PM IST
  • ಟಿವಿ ನಿರೂಪಣೆ ಬಳಿಕ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಡ ನಟ
  • ಭರ್ಜರಿ ಯಶಸ್ಸಿನ ಅಲೆಯಲ್ಲಿರುವ ರಾಘವ್ ಜುಯಾಲ್‌ಗೆ ಹೊಸ ಕಾರು
  • ಐಷಾರಾಮಿ BMW X5 ಕಾರು ಖರೀದಿಸಿದ ರಾಘವ್ ಜುಯಾಲ್
     

ಮುಂಬೈ(ಜೂ.06): ಡ್ಯಾನ್ಸಿಂಗ್ ಮೂಲಕ ಕರಿಯರ್ ಆರಂಭಿಸಿ ಬಳಿಕ ನಿರೂಪಣೆಯಿಂದಲೂ ಯಶಸ್ಸುಗಳಿಸಿದ ರಾಘವ್ ಜುಯಾಲ್ ಇದೀಗ ನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಒಂದರ ಮೇಲೊಂದರಂತೆ ಯಶಸ್ಸು ಗಳಿಸುತ್ತಿರುವ ರಾಘವ್ ಜುಯಾಲ್ ಇದೀಗ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ರಾಘವ್ ಜುಯಾಲ್ ಹೊಚ್ಚ ಹೊಸ BMW X5 ಕಾರು ಖರೀದಿಸಿದ್ದಾರೆ.

ಕಿಂಗ್ ಆಫ್ ಸ್ಲೋಮೋಶನ್ ಎಂದೇ ಗುರುತಿಸಿಕೊಂಡಿರುವ ರಾಘಲ್ ಜುಯಾಲ್ 1 ಕೋಟಿ ರೂಪಾಯಿ ಮೌಲ್ಯದ BMW X5 ಕಾರು ಖರೀದಿಸಿದ್ದಾರೆ. ಕಾರು ಶೋರೂಂನಿಂದ ಸಂತಸದಿಂದ ಕಾರು ಡೆಲಿವರಿ ಪಡೆದುಕೊಂಡ ರಾಘವ್ ಜುಯಾಲ್‌ಗೆ ಹೂವಿನ ಗುಚ್ಚ ನೀಡಿ BMW ಕುಟುಂಬಕ್ಕೆ ಸ್ವಾಗತಿಸಲಾಯಿತು.

Latest Videos

undefined

777 Charlie ಚಾರ್ಲಿ-ಧರ್ಮನ ಕಥೆ ಕಂಡು ಕಣ್ಣೀರಾಕಿದ ದೆಹಲಿ ಜನರು

ರಾಘಲ್ ಜುಯಾಲ್ ಖರೀದಿಸಿದ ಕಾರು 3.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು.  335bhp ಪವರ್ ಹಾಗೂ  450Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂಂದಿದೆ.  ಒಂದು ಲೀಟರ್ ಪೆಟ್ರೋಲ್‌ಗೆ ಈ ಕಾರು 11.24 kmpl ಮೈಲೇಜ್ ನೀಡಲಿದೆ. 2998 ಸಿಸಿ ಎಂಜಿನ್ ಹೊಂದಿದೆ. ಎಸ್‌ಯುವಿ ಕಾರಾಗಿದ್ದು 5 ಸೀಟಿಂಗ್ ಕೆಪಾಸಿಟಿ ಹೊಂದಿದೆ. ಇನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಇದು 6 ಸಿಲಿಂಡರ್ ಸಾಮರ್ಥ್ಯ ಕಾರಾಗಿದೆ.

ರಾಘಲ್ ಜುಯಾಲ್ ಶೀಘ್ರದಲ್ಲೇ ನಟನಾಗಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಕಬಿ ಈದ್ ಕಬಿ ದಿವಾಲಿ ಚಿತ್ರದಲ್ಲಿ ರಾಘವ್ ಜುಯಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 30, 2022ರಲ್ಲಿ ಈ ಚಿತ್ರ ತೆರೆಗೆ ಬರಲಿದೆ. ರಾಘವ್ 2014ರಲ್ಲಿ ಸೋನಾಲಿ ಕೇಬಲ್ ಅನ್ನೋ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು.

ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ರಾಘವ್ ವೃತ್ತಿಬದುಕು ಆರಂಭಗೊಂಡಿತ್ತು. ಡ್ಯಾನ್ಸಿಂಗ್ ಸ್ಟಾರ್ ಆಗಿ ಮಿಂಚಿದ ರಾಘವ್, ಸ್ಲೋ ಮೋಶನ್ ಡ್ಯಾನ್ಸ್ ಮೂಲಕ ಎಲ್ಲರ ಗಮನಸೆಳೆದಿದ್ದರು. ಹಲವು ಡ್ಯಾನ್ಸ್ ರಿಯಾಲಿಟೋ ಶೋಗಳ ನಿರೂಪಕನಾಗಿಯೂ ಗಮನಸೆಳೆದಿದ್ದಾರೆ.

ಶಾರುಖ್‌, ಕತ್ರೀನಾ, ಫಡ್ನವೀಸ್‌ಗೆ ಕೋವಿಡ್‌ ದೃಢ: 4ನೇ ಅಲೆ ಭೀತಿ, ಗಣ್ಯರಿಗೆ ಸೋಂಕು!

ಬಿಎಂಡಬ್ಲ್ಯೂ ಎಕ್ಸ್‌ 5
ಸ್ಪೋಟ್ಸ್‌ರ್‍ ಕಾರಿನ ಲುಕ್‌, ಡೀಸೆಲ್‌ ಹಾಗೂ ಪೆಟ್ರೋಲ್‌ ವೇರಿಯೆಂಟ್‌ಗಳಲ್ಲಿ ಬಿಎಂಡಬ್ಲ್ಯೂ ಎಕ್ಸ್‌ 5 ಲಕ್ಸುರಿ ಕಾರಾಗಿದೆ. 5.8 ಸೆಕೆಂಡ್‌ಗಳಲ್ಲಿ 100ರ ವೇಗ ಪಡೆದುಕೊಳ್ಳೋ ಈ ಕಾರಿನ ಗರಿಷ್ಠ ಟಾರ್ಕ್ 450Nm ಎನ್‌ಎಂ. 2 ಲೀಟರ್‌ನ 6 ಸಿಲಿಂಡರ್‌ಗಳ ಪೆಟ್ರೋಲ್‌ ಎಂಜಿನ್‌  335bhp ಪವರ್‌ ಉತ್ಪಾದಿಸುತ್ತದೆ. ಅಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ನಲ್ಲಿ6 ಸ್ಪೀಡ್‌ ಗೇರ್‌ಗಳಿವೆ. ಡ್ರೈವಿಂಗ್‌ಅನ್ನು ಮಾನಿಟರ್‌ ಮಾಡುವ ವ್ಯವಸ್ಥೆಯೂ ಇದರಲ್ಲಿದೆ.ಬಿಎಂಡಬ್ಲ್ಯೂ ಲೇಸರ್‌ ಲೈಟ್‌ ಹಾಗೂ ಎಲ್‌ಇಡಿ ಹೆಡ್‌ಲೈಟ್‌ ಇದರಲ್ಲಿದೆ. 3ಡಿ ನ್ಯಾವಿಗೇಶನ್‌, 12.3 ಇಂಚಿನ ಡಿಜಿಟಲ್‌ ಡಿಸ್‌ಪ್ಲೇ ಹಾಗೂ 10.25 ಇಂಚಿನ ಕಂಟ್ರೋಲ್‌ ಡಿಸ್‌ಪ್ಲೇ ಇದರಲ್ಲಿದೆ. ಕಾರಿನ ನಿಯಂತ್ರಣಕ್ಕೂ ಇದರಲ್ಲಿ ಒಂದಿಷ್ಟುಆಯ್ಕೆಗಳಿವೆ. ಎಫಿಶಿಯಂಟ್‌, ಸ್ಪೋಟ್ಸ್‌ರ್‍, ಸ್ಪೋಟ್ಸ್‌ರ್‍ ಪ್ಲಸ್‌ ಎಂಬ ಮೂರು ಮೋಡ್‌ಗಳು ಈ ಕಾರಿನಲ್ಲಿವೆ. ಬೋಲ್ಡ್‌ ಲುಕ್‌ನಲ್ಲಿ ಗಮನಸೆಳೆಯುವಂಥಾ ಡಿಸೈನ್‌ ಇರುವ ಈ ಕಾರಿನ ಒಳಭಾಗವೂ ವೈಭವೋಪೇತವಾಗಿದೆ.

click me!