ಹನಿಮೂನ್​ ಬೆಡ್​ರೂಮ್​ ಫೋಟೋ ಶೇರ್​ ಮಾಡಿ ಹಲ್​ಚಲ್​ ಸೃಷ್ಟಿಸಿದ್ದ ನಟಿಯಿಂದ 2ನೇ ಗಂಡನಿಗೂ ಡಿವೋರ್ಸ್​?

By Suvarna News  |  First Published Feb 10, 2024, 3:42 PM IST

ಹನಿಮೂನ್​ ಬೆಡ್​ರೂಮ್​ ಫೋಟೋ ಶೇರ್​ ಮಾಡಿ ಹಲ್​ಚಲ್​ ಸೃಷ್ಟಿಸಿದ್ದ ನಟಿಯಿಂದ 2ನೇ ಗಂಡನಿಗೂ ಡಿವೋರ್ಸ್​ ಕೊಟ್ರಾ? ಏನಿ ವಿಷ್ಯ? 
 


ಬಿಗ್​ಬಾಸ್​ ಹಿಂದಿಯ ಕಳೆದ ಸೀಸನ್​ ಅಂದ್ರೆ ಸೀಸನ್​ 16ರಲ್ಲಿನ  ಸ್ಪರ್ಧಿ ಶಾಲಿನ್​ ಭಾನೋಟ್​ ಅವರ ಮಾಜಿ ಪತ್ನಿ,  ಕಿರುತೆರೆ ನಟಿ ದಲ್ಜಿತ್ ಕೌರ್ ಅವರು ಇದೀಗ ಎರಡನೆಯ ಪತಿಗೂ ಡಿವೋರ್ಸ್​ ಕೊಟ್ರಾ ಎನ್ನುವ ಶಂಕೆ ಉಂಟಾಗಿದೆ. ಹಲವು ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ದಲ್ಚಿತ್​ ಕೌರ್​, ಶಾಲಿನ್​ ಅವರಿಂದ ಡಿವೋರ್ಸ್​ ಪಡೆದ ಬಳಿಕ, 2023ರ ಮಾರ್ಚ್​ನಲ್ಲಿ ಬ್ರಿಟನ್​ ಉದ್ಯಮಿ ನಿಖಿಲ್ ಪಟೇಲ್ ಅವರನ್ನು ಮದುವೆಯಾಗಿದ್ದರು. ಆದರೆ ಇದೀಗ ತಮ್ಮ ಸೋಷಿಯಲ್​ ಮೀಡಿಯಾದಿಂದ ಮದುವೆ ಫೋಟೋಗಳನ್ನು ಡಿಲೀಸ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೊದಲ ಪತಿಯ ವಿಚ್ಛೇದನದ ಬಳಿಕ ಎರಡನೆಯ ಪತಿಯ ಸರ್​ ನೇಮ್​ ಅನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದ ನಟಿ, ಇದೀಗ ಆ ಸರ್​ನೇಮ್​  ಕೂಡ ಡಿಲೀಟ್​ ಮಾಡಿದ್ದು ಡಿವೋರ್ಸ್​ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. 


ಈಕೆ ತಮ್ಮ ಇನ್​ಸ್ಟಾಗ್ರಾಮ್​  ಖಾತೆಯಿಂದ  ಫೋಟೋಗಳನ್ನು  ಡಿಲೀಟ್ ಮಾಡಿದ್ದನ್ನು ಫ್ಯಾನ್ಸ್​ ಗಮನಿಸಿದ ಬಳಿಕ ವಿಷಯ ಬಹಿರಂಗಗೊಂಡಿದೆ. ಈ ಬಗ್ಗೆ ಜೋಡಿ  ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ. ಆದರೆ ಮದ್ವೆಯಾಗಿ ವರ್ಷದೊಳಗೇ ಈ ರೀತಿ ಏಕಾಏಕಿ ಫೋಟೋಗಳನ್ನು ಹಾಗೂ ಸರ್​ನೇಮ್​ ಡಿಲೀಟ್​ ಮಾಡಿರುವ ಕಾರಣ, ಸಕತ್​ ಚರ್ಚೆಯಾಗುತ್ತಿದೆ.  ಮದುವೆಯಾಗಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವ ಮೊದಲೇ ಈ ಘಟನೆ ನಡೆದಿದ್ದ ಬಗ್ಗೆ ಫ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಏಕೆ ಹೀಗಾಯ್ತು ಎಂದು ಕಮೆಂಟ್​ನಲ್ಲಿ ನಟಿಗೆ ಒಂದೇ ಸಮನೆ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.

Tap to resize

Latest Videos

ಶೆರ್ಲಿನ್​ ಬರ್ತ್​ಡೇ ಆಚರಿಸಿಕೊಂಡದ್ದು ಹೀಗೆ- ಹುಟ್ಟುಡುಗೆಯಲ್ಲಿ ಬರೋದೊಂದೇ ಬಾಕಿ ಎಂದ ನೆಟ್ಟಿಗರು!

ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ದಲ್ಜಿತ್ ಕೌರ್ ಮತ್ತು ನಿಖಿಲ್ ಪಟೇಲ್ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ಮೊದಲು, ಇಬ್ಬರೂ ಸಾಮಾನ್ಯ ಸ್ನೇಹಿತರಾಗಿದ್ದರು. ನಂತರ ಗೆಳೆತನ ಪ್ರೀತಿಗೆ ತಿರುಗಿ ಇಬ್ಬರೂ ಮದುವೆ ಆಗಿದ್ದಾರೆ.   ಇಬ್ಬರಿಗೂ ಇದು 2ನೇ ಮದುವೆ. ದಲ್ಜಿತ್ ಕೌರ್​ಗೆ ಈಗಾಗಲೇ ಜೇಡನ್ ಎಂಬ ಮಗನಿದ್ದಾನೆ. ಜೇಡನ್ ಟಿವಿ ನಟರಾದ ಶಲೀನ್ ಭಾನೋಟ್ ಮತ್ತು ದಲ್ಜಿತ್ ಅವರ ಮಗ. ಶಲೀನ್​ನಿಂದ ಬೇರ್ಪಟ್ಟ ನಂತರ, ದಿಲ್ಜಿತ್ ಮಗ ಜೇಡನ್ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಂತರ ನಿಖಿಲ್​ ಜೊತೆ 2ನೇ ಮದುವೆ ಆಗಿದ್ದಾರೆ. ಇನ್ನೂ ನಿಖಿಲ್ ಕುರಿತು ಹೇಳುವುದಾದರೆ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿಖಿಲ್ ಮತ್ತು ದಲ್ಜೀತ್ ಅವರಿಗೆ ಈಗ ಮೂವರು ಮಕ್ಕಳಿದ್ದಾರೆ. ಅವರು ದೊಡ್ಡ ಕುಟುಂಬವನ್ನು ಹೊಂದಿದ್ದಾರೆ.  

 ಅಂದಹಾಗೆ ಈ ಜೋಡಿ ಅಂದರೆ  ದಲ್ಜಿತ್ ಕೌರ್ ಮತ್ತು  ನಿಖಿಲ್ ಪಟೇಲ್ ಅವರ ಸುದ್ದಿ ಸಕತ್​ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಮದುವೆಯಾದ ಬಳಿಕ ಜೋಡಿ ಸಿಂಗಪುರಕ್ಕೆ ಹನಿಮೂನ್​ಗೆ ಹೋಗಿತ್ತು. ಹನಿಮೂನ್​ಗೆ ಹೋಗುವುದು, ಜೋಡಿ ಜೊತೆಯಾಗಿ ಫೋಟೋ ತೆಗೆಸಿಕೊಳ್ಳುವುದು, ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವುದು ಹೊಸತೇನಲ್ಲ. ಆದರೆ ಈ ಜೋಡಿ ಮಾತ್ರ ಫೋಟೋಗಳಿಂದ ಸಕತ್​ ಸದ್ದು ಮಾಡಿತ್ತು. ಅದಕ್ಕೆ ಕಾರಣ, ದಲ್ಜಿತ್ ಕೌರ್  ಹನಿಮೂನ್​ನಲ್ಲಿ ತಮ್ಮ ಬೆಡ್​ರೂಂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಒಟ್ಟಿಗೇ ಮಲಗಿರುವ ದೃಶ್ಯಗಳನ್ನೂ ಹಂಚಿಕೊಂಡಿದ್ದರು.  

ಕಾರ್ತಿಕ್​ ಲೈಫ್​ ಪಾರ್ಟನರ್​ ಇವ್ರೇನಾ? 'ಎಸ್'​ ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್​
 

click me!