ಅಯೋಧ್ಯೆಯ ರಾಮನಿಗೆ ಅಮಿತಾಭ್​ ವಿಶೇಷ ಆಭರಣ ಗಿಫ್ಟ್​- ಪೂಜೆ ಸಲ್ಲಿಕೆ: ವಿಡಿಯೋ ವೈರಲ್​

Published : Feb 10, 2024, 12:00 PM ISTUpdated : Feb 12, 2024, 11:34 AM IST
ಅಯೋಧ್ಯೆಯ ರಾಮನಿಗೆ ಅಮಿತಾಭ್​ ವಿಶೇಷ ಆಭರಣ ಗಿಫ್ಟ್​- ಪೂಜೆ ಸಲ್ಲಿಕೆ: ವಿಡಿಯೋ ವೈರಲ್​

ಸಾರಾಂಶ

ಅಯೋಧ್ಯೆಗೆ ಭೇಟಿ ಕೊಟ್ಟಿದ್ದ ನಟ ಅಮಿತಾಭ್​ ಬಚ್ಚನ್​ ಅವರು ರಾಮಲಲ್ಲಾಗೆ ವಿಶೇಷ ಆಭರಣ ಗಿಫ್ಟ್​ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.  

ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆದು ಮೂರನೇ ವಾರದಲ್ಲಿಯೇ ಬಾಲಿವುಡ್​​ ಬಿಗ್​-ಬಿ ಅಮಿತಾಭ್​ ಬಚ್ಚನ್​ ಪುನಃ ಭೇಟಿ ಕೊಟ್ಟಿದ್ದಾರೆ. ಪ್ರಾಣಪ್ರತಿಷ್ಠೆ ದಿನವೂ ವಿಶೇಷ ಆಹ್ವಾನದ ಮೇರೆಗೆ ಅಯೋಧ್ಯೆಯಲ್ಲಿದ್ದ ಅಮಿತಾಭ್​ ಬಚ್ಚನ್​ ಅವರು ಇದೀಗ ಪುನಃ ಎರಡನೆಯ ಬಾರಿ ಭೇಟಿ ಕೊಟ್ಟಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರ ವಿಡಿಯೋಗಳು ವೈರಲ್​ ಆಗಿವೆ. ಇದೇ ವೇಳೆ ನಟ ರಾಮ ಮಂದಿರಕ್ಕೆ ವಿಶೇಷ ಆಭರಣಗಳನ್ನು ನೀಡಿರುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. 

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಅಮಿತಾಭ್​ ಬಚ್ಚನ್​ ಅವರು ಭಾರಿ ಭದ್ರತೆಯೊಂದಿಗೆ ಅಯೋಧ್ಯೆಗೆ ಆಗಮಿಸುತ್ತಿರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಅವರು ಕೇಸರಿ ಶಾಲನ್ನು ಧರಿಸಿದ್ದರು.  ಕುರ್ತಾ-ಪೈಜಾಮದಲ್ಲಿ ಕಾಣಿಸಿಕೊಂಡಿರುವ ಬಿಗ್​-ಬಿ ಶ್ರೀರಾಮನ ಸನ್ನಿಧಿಯಲ್ಲಿ  ಕೈ ಮುಗಿದು ನಿಂತಿರುವುದು ಹಾಗೂ ಪೂಜೆ ಸಲ್ಲಿಸಿರುವವುದನ್ನು ನೋಡಬಹುದು. ಇದೇ ವೇಳೆ ಅಲ್ಲಿಯ ಅರ್ಚಕರಿಗೆ ಬೆಲೆ ಬಾಳುವ ಆಭರಣಗಳನ್ನು ನೀಡಿರುವುದನ್ನೂ ನೋಡಬಹುದು. ಇದು ಬಹು ಆಕೃತಿಯ ಚಿನ್ನದ ಸರ ಎಂದು ಹೇಳಲಾಗುತ್ತಿದೆ. 

ಫ್ಯಾನ್ಸ್​ ಅಂದ್ರೆ ಸುಮ್ಮನೇನಾ? ಎದ್ದೆನೋ, ಬಿದ್ದೆನೋ ಎಂದು ಓಡಿ ಹೋದ ನಟಿ ಅನುಷ್ಕಾ ಶೆಟ್ಟಿ

ಅಯೋಧ್ಯೆಯಲ್ಲಿ, ಆಭರಣ ಮಳಿಗೆಯೊಂದನ್ನು ಇದೇ ವೇಳೆ ನಟ ಉದ್ಘಾಟಿಸಿದ್ದಾರೆ. ಉದ್ಘಾಟನೆಗೂ ಮುನ್ನ ರಾಮ ಮಂದಿರಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ, ಆಭರಣ ಗಿಫ್ಟ್​ ಮಾಡಿದ್ದಾರೆ. ಸುಮಾರು ಅರ್ಧಗಂಟೆ ಅವರು ಅಲ್ಲಿಯೇ ಇದ್ದರು. ಆ ಬಳಿಕ ಅಯೋಧ್ಯೆಯ ಅಧಿಕಾರಗಳ ಜೊತೆ ಮಧ್ಯಾಹ್ನದ ಭೋಜನ ಮಾಡಿದ್ದಾರೆ. ಅಯೋಧ್ಯೆಯ ಕಮಿಷನರ್ ಗೌರವ್ ದಯಾಳ್ ಮನೆಯಲ್ಲಿ ಈ ಭೋಜನಕೂಟ ನಡೆದಿದೆ ಎಂದು ತಿಳಿದು ಬಂದಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 10 ಸಾವಿರ  ಚದರ ಅಡಿಯ ಭೂಮಿ ಖರೀದಿ ಮಾಡಿದ್ದಾರೆ. ಇದರ ಬೆಲೆ 14.5 ಕೋಟಿ ರೂಪಾಯಿ ಇದೆ. ಈ ಭೂಮಿ ಖರೀದಿಯ ಬಳಿಕ ಇದರ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದ ಅಮಿತಾಭ್​,  ಇಲ್ಲಿ ಮನೆಯೊಂದನ್ನು ನಿರ್ಮಿಸಲು ಯೋಚಿಸಿದ್ದೇನೆ ಎಂದಿದ್ದರು.  “ಅಯೋಧ್ಯೆಯ ಕಾಲಾತೀತ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭೌಗೋಳಿಕ ಗಡಿಗಳನ್ನು ಮೀರಿದ ಭಾವನಾತ್ಮಕ ಸಂಪರ್ಕವನ್ನು ಬೆಸೆದಿದೆ. ಇದು ಅಯೋಧ್ಯೆಯ ಆತ್ಮಕ್ಕೆ ಹೃತ್ಪೂರ್ವಕ ಪ್ರಯಾಣದ ಪ್ರಾರಂಭವಾಗಿದೆ, ಅಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯು ಒಟ್ಟಿಗೆ ಅಸ್ತಿತ್ವದಲ್ಲಿದೆ, ಇದು ನನ್ನೊಂದಿಗೆ ಅನುರಣಿಸುವ ಭಾವನಾತ್ಮಕ ಬಾಂಧವ್ಯವನ್ನು ಸೃಷ್ಟಿಸುತ್ತದೆ” ಎಂದು ಹೇಳಿದ್ದರು. 

ಈ ಹಿಂದೆ, ಅಮಿತಾಭ್​ ಅವರು,  ಕೈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಸಂದರ್ಭದಲ್ಲಿ  ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ವಿಚಾರಿಸಿದ್ದರು. ಇದರ ಫೋಟೋಗಳು  ವೈರಲ್ ಆಗಿದ್ದವು. ಇದಾದ ಬಳಿಕ ರಾಮಲಲ್ಲಾ ಪ್ರತಿಷ್ಠಾಪನೆಯ ಸಂದರ್ಭದಲ್ಲಿಯೂ ಅಮಿತಾಭ್​ ಅವರಿಗೆ ಇತರ ಕೆಲವು ಬಾಲಿವುಡ್​ ಸೆಲೆಬ್ರಿಟಿಗಳ ಜೊತೆ ವಿಶೇಷ ಆಹ್ವಾನ ನೀಡಲಾಗಿತ್ತು. 

'ಉರಿ'ಯಲ್ಲಿ ಪ್ರೀತಿ, 'ಆರ್ಟಿಕಲ್​ 370'ಯಲ್ಲಿ ಗರ್ಭಿಣಿ! ಫೇರ್​ ಅಂಡ್​ ಲವ್ಲಿ ಬ್ಯೂಟಿ ಯಾಮಿ ಗೌತಮ್​ ಗುಡ್​​ ನ್ಯೂಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?