ಆಸ್ಕರ್ ಗೆದ್ದು ಭಾರತಕ್ಕೆ ಬರುತ್ತಿದ್ದಂತೆ ಕೇಂದ್ರ ಸಚಿವ ಅಮಿತ್ ಶಾ ಭೇಟಿಯಾದ ರಾಮ್ ಚರಣ್

Published : Mar 18, 2023, 10:31 AM IST
ಆಸ್ಕರ್ ಗೆದ್ದು ಭಾರತಕ್ಕೆ ಬರುತ್ತಿದ್ದಂತೆ ಕೇಂದ್ರ ಸಚಿವ ಅಮಿತ್ ಶಾ ಭೇಟಿಯಾದ ರಾಮ್ ಚರಣ್

ಸಾರಾಂಶ

ಆಸ್ಕರ್ ಗೆದ್ದು ಭಾರತಕ್ಕೆ ಬಂದ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. 

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಆಸ್ಕರ್ ಗೆದ್ದ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ರಾಮ್ ಚರಣ್ ಆರ್ ಆರ್ ಆರ್ ಸಿನಿಮಾ ನಾಟು ನಾಟು ಹಾಡಿಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆಸ್ಕರ್ ಗೆದ್ದ ಬಳಿಕ ರಾಮ್ ಚರಣ್ ಭಾರತಕ್ಕೆ ವಾಪಾಸ್ ಆಗಿದ್ದು ಅದ್ದೂರಿ ಸ್ವಾಗತ ಸಿಕ್ಕಿದೆ. ಪುತ್ರನನ್ನು ವೆಲ್‌ಕಮ್ ಮಾಡಲು ಚಿರಂಜೀವಿ ಕೂಡ ದೆಹಲಿಗೆ ತೆರಳಿದ್ದರು. ರಾಮ್ ಚರಣ್ ಆಗಮಿಸಿದ ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಆಸ್ಕರ್ ಗೆದ್ದು ಬಂದಿರುವ ರಾಮ್ ಚರಣ್ ಅವರನ್ನು ಕೇಂದ್ರ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದರು. ಶಾಲು ಹೊದಿಸಿ ಸನ್ಮಾನಿಸಿದರು. ರಾಮ್ ಚರಣ್ ಜೊತೆ ಚಿರಂಜೀವಿ ಕೂಡ ಇದ್ದರು. 

ರಾಮ್ ಚರಣ್ ಮತ್ತು ಚಿರಂಜೀವಿ ಇಬ್ಬರೂ ಅಮಿತ್ ಶಾ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಇಬ್ಬರೂ ಭಾರತೀಯ ಸಿನಿಮಾರಂಗದ ಇಬ್ಬರು ಲೆಜೆಂಡ್ ಎಂದು ಬರೆದುಕೊಂಡಿದ್ದಾರೆ.  'ಭಾರತೀಯ ಸಿನಿಮಾರಂಗದ ಇಬ್ಬರು ಲೆಜೆಂಡ್ ಗಳಾದ ರಾಮ್ ಚರಣ್ ಮತ್ತು ಚಿರಂಜೀವಿ ಅವರ ಜೊತೆ ಸಂತೋಷದ ಮೀಟಿಂಗ್. ತೆಲುಗು ಚಲನಚಿತ್ರೋದ್ಯಮ ಭಾರತದ ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದೆ. ನಾಟು ನಾಟು.. ಹಾಡಿಗಾಗಿ ಆಸ್ಕರ್ ಪ್ರಶಸ್ತಿ ಮತ್ತು 'RRR' ಅದ್ಭುತ ಯಶಸ್ಸಿಗೆ ರಾಮ್ ಚರಣ್ ಅವರನ್ನು ಅಭಿನಂದನೆ' ಎಂದು ಟ್ವೀಟ್ ಮಾಡಿದ್ದಾರೆ. 

ಅಮಿತ್ ಶಾ ಅವರ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿ, 'ಗೃಹಸಚಿವರನ್ನು ಭೇಟಿ ಮಾಡಿದ್ದು ತುಂಬಾ ಸಂತಸವಾಗಿದೆ. ಆರ್ ಆರ್ ಆರ್ ತಂಡದ ಪ್ರಯತ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ಆಸ್ಕರ್ ಗೆದ್ದು ಭಾರತಕ್ಕೆ ವಾಪಾಸ್ ಆದ ರಾಮ್ ಚರಣ್‌ ನೋಡಲು ಮುಗಿಬಿದ್ದ ಫ್ಯಾನ್ಸ್

ಇನ್ನು ನಟ ಚಿರಂಜೀವಿ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 'ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಅಮಿತ್ ಶಾ ಅವರೆ. ರಾಮ್ ಚರಣ್ ಮೊದಲ ಬಾರಿಗೆ ಆಸ್ಕರ್ ಮನೆಗೆ ತರುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಜೊತೆ ಇರುವುದಕ್ಕೆ ಸಂತೋಷವಾಯಿತು'  ಎಂದು ಹೇಳಿದರು.

ಭಾರತ ಆಸ್ಕರ್‌ಗೆ ತಪ್ಪಾದ ಸಿನಿಮಾಗಳನ್ನು ಕಳುಹಿಸುತ್ತಿದೆ; ಎಆರ್ ರಹಮಾನ್ ಅಸಮಾಧಾನ

ಆಸ್ಕರ್ 2023 ಸಮಾರಂಭದಲ್ಲಿ 'ಆರ್ ಆರ್ ಆರ್' ತಂಡ ಭಾಗಿಯಾಗಿತ್ತು. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ ಸಮಾರಂಭದ ಬಳಿಕ ಭಾರತಕ್ಕೆ ಬಂದ ರಾಮ್ ಚರಣ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ದೆಹಲಿ ಏರ್ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಆರ್ ಆರ್ ಆರ್ ಸ್ಟಾರ್ ನೋಡಲು ಅಭಿಮಾನಿಗಳು ಮುಗಿಬಿದ್ದಿರು. ರಾಮ್ ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುತ್ತಿಕೊಂಡಿದ್ದರು. ರಾಮ್ ಚರಣ್ ಕಾರ್ ಮೇಲೆ ನಿಂತು ಅಭಿಮಾನಿಗಳತ್ತಾ ಕೈ ಬೀಸುತ್ತಾ ಹೊರಟರು. ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ ಆರ್ ಆರ್ ಮತ್ತು ರಾಮ್ ಚರಣ್ ಅವರಿಗೆ ಅಭಿಮಾನಿಗಳು ಅಭಿನಂದನೆಗಳ ಮಹಾಪೂರ ಬರುತ್ತಿದೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?