
ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಲಲಿತ್ ಮೋದಿ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುಶ್ಮಿತಾ ಸದ್ದು ಮಾಡುತ್ತಿದ್ದಾರೆ. ಲಲಿತ್ ಮೋದಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗ ಪಡಿಸಿ ಫೋಟೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಇದರ ಬೆನ್ನಲ್ಲೇ ಇದೀಗ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ದಾಂಪತ್ಯ ಜೀವನದ ರಾದ್ದಾಂತ ಬಹಿರಂಗವಾಗಿದೆ. ರಾಜೀವ್ ಮತ್ತು ಪತ್ನಿ ಚಾರು ಅಸೋಪ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಈಗಾಗಲೇ ಇಬ್ಬರು ದೂರ ದೂರ ಆಗಿದ್ದಾರೆ. ಅಲ್ಲದೆ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸುತ್ತಿದ್ದಾರೆ.
2019 ರಲ್ಲಿ ಚಾರು ಅಸೋಪಾ ಮತ್ತು ರಾಜೀವ್ ಸೇನ್ ಅದ್ದೂರಿಯಾಗಿ ವಿವಾಹವಾದರು. ಬಾಲಿವುಡ್‌ನ ದೊಡ್ಡ ವಿವಾಹಗಳಲ್ಲಿ ಇದು ಕೂಡ ಒಂದಾಗಿತ್ತು. ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ರಾಜೀವ್ ಮತ್ತು ಚಾರು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾಗಿ ಕೆಲವೇ ತಿಂಗಳಿಗೆ ಇಬ್ಬರು ದೂರ ಆದರು. ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವ ಮುಂಚೆಯೇ, ರಾಜೀವ್ ಸೇನ್ ಜೋಡಿ ಪ್ರತ್ಯೇಕವಾಗಿ ವಾಸಿಸುವ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಎಲ್ಲಿಯೂ ಬಹಿರಂದ ಪಡಿಸಿರಲಿಲ್ಲ. ಎಲ್ಲವೂ ಚೆನ್ನಾಗಿದೆ ಎನ್ನುವ ಹಾಗೆ ಇದ್ದರು. ಮತ್ತೆ ಒಂದಾಗಿದ್ದ ಈ ಜೋಡಿ 2020ರಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಮಗಳು ಜನಿಸಿದ ಬಳಿಕ ದಾಂಪತ್ಯ ಕಲಹ ಮತ್ತಷ್ಟು ಜೋರಾಗಿತ್ತು. ಆದರೀಗ ರಾಜೀವ್ ಮತ್ತು ಚಾರು ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದು ಇವರ ದಾಂಪತ್ಯ ಕಲಹ ಈಗ ಜಗಜ್ಜಾಹೀರಾಗಿದೆ.
ರಾಜೀವ್ ಪತ್ನಿಚಾರು ಅಸೋಪಾ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ. ಚಾರು ಮೊದಲ ಮದುವೆ ಬಗ್ಗೆ ಹೇಳಿರಲಿಲ್ಲ, ರಹಸ್ಯವಾಗಿ ಇಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ. ಇದೀಗ ನಟಿ ಚಾರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.
ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ, ಲಂಚ ಬೇಕಿಲ್ಲ, ಟ್ರೋಲ್‌ಗೆ ತಿರುಗೇಟು ನೀಡಿದ ಲಲಿತ್ ಮೋದಿ!
ನಾನು ಇನ್ನು ನನ್ನ ಜೀವನದಲ್ಲಿ ಏನು ಕಳೆದುಕೊಳ್ಳಲು ಇಷ್ಟಪಡಲ್ಲ, ಅವನೇ ಕೊನೆಯವು ನನ್ನ ಜೀವನದಲ್ಲಿ ನಾನು ಕಳೆದುಕೊಳ್ಳುತ್ತಿರುವುದು ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ನಟಿ ಚಾರು 'ನಮ್ಮ ಸಂಬಂಧದಲ್ಲಿ ಏನೂ ಉಳಿದಿಲ್ಲ. ಹಾಗಾಗಿ ನಾವು ಸೌಹಾರ್ದಯುತವಾದ ದೂರ ಆಗುತ್ತಿದ್ದೀವೆ. ಈಗಾಗಲೇ ನಾನು ಅವರಿಗೆ ನೊಟೀಸ್ ಕಳುಹಿಸಿದ್ದೇನೆ. ನನ್ನ ಮಗಳು ಅಂಥ ಕೆಟ್ಟ ಮತ್ತು ದ್ವೇಷಪೂರಿತ ವಾತಾವರಣದಲ್ಲಿ ಬೆಳೆಯಲು ನಾನು ಬಯಸುವುದಿಲ್ಲ. ಜನರು ಪರಸ್ಪರ ನಿಂದಿಸುವುದನ್ನು ಅವಳು ನೋಡಬೇಕೆಂದು ನಾನು ಬಯಸುವುದಿಲ್ಲ' ಎಂದು ಹೇಳಿದ್ದಾರೆ. ತನ್ನ ಮಗಳನ್ನು ತಾನೆ ಬೆಳೆಸುವುದಾಗಿ ಹೇಳಿದ್ದಾರೆ.
ಅವಳು ಹಣಕ್ಕೆ ಮಾರಾಟವಾಗಿದ್ದಾಳೆ; ಸುಶ್ಮಿತಾ ಸೇನ್ ವಿರುದ್ಧ ಹರಿಹಾಯ್ದ ತಸ್ಲೀಮಾ ನಸ್ರೀನ್
ಇದೇ ಸಮಯದಲ್ಲಿ ಚಾರು ಅಸೋಪಾ ಮೊದಲ ಮದುವೆ ಬಗ್ಗೆಯೂ ಬಹಿರಂಗ ಪಡಿಸಿದರು. 'ನನ್ನ ಮೊದಲ ಮದುವೆ 2007 ಫ್ಬರ್ವರಿಯಲ್ಲಿ ನಡೆಯಿತು. ಆಗ ನನಗೆ 18 ವರ್ಷ. 2016ರಲ್ಲಿ ನಾವು ಬೇರೆ ಬೇರೆ ಆದೆವು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಬರದ ಕಾರಣ ಬೇರೆ ಆದೆವು. ರಜೀವ್ ನನ್ನನ್ನು ಕೆಟ್ಟ ತಾಯಿ ಎಂದು ಕರೆದರು. ನನಗೆ ನನ್ನ ಮಗಳು ಅಂತ ಮನಸ್ಥಿತಿ ಇರುವ ವ್ಯಕ್ತಿಗಳ ಜೊತೆ ಬೆಳೆಯಲು ಇಷ್ಟವಿಲ್ಲ' ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.