ನಟಿ ಚಾರು ಅಸೋಪಾ ಆರ್ಥಿಕ ಸಂಕಷ್ಟಕ್ಕೆ ಪ್ರತಿಕ್ರಿಯಿಸಿದ ಮಾಜಿ ಪತಿ

ಸುಷ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಮಾಜಿ ಪತ್ನಿ ನಟಿಯೂ ಆಗಿರುವ ಚಾರು ಅಸೋಪಾ ಆರ್ಥಿಕ ಸಂಕಷ್ಟಕ್ಕೀಡಾಗಿ ಬಗ್ಗೆ ಹಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತುಆದರೆ ಆಕೆಯ ಮಾಜಿ ಪತಿ ಇದನ್ನು ನಿರಾಕರಿಸಿದ್ದಾರೆ

Charu Asopa Financial Struggles: Rajiv Sen Breaks Silence

ನವದೆಹಲಿ: ಸುಷ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಮಾಜಿ ಪತ್ನಿ ನಟಿಯೂ ಆಗಿರುವ ಚಾರು ಅಸೋಪಾ ಆರ್ಥಿಕ ಸಂಕಷ್ಟಕ್ಕೀಡಾಗಿ ಆನ್‌ಲೈನ್ ಬಟ್ಟೆ ವ್ಯಾಪಾರ ಶುರು ಮಾಡಿದ್ದಾರೆ ಎಂಬ ಬಗ್ಗೆ ಹಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲೂ ಸಂಚಲನ ಸೃಷ್ಟಸಿತ್ತು.  ಆರ್ಥಿಕ ಸಂಕಷ್ಟಕ್ಕೀಡಾಗಿರುವ ಚಾರು ಮುಂಬೈ ಬಿಟ್ಟು ತಮ್ಮ ಮೂಲ ಊರಾದ ರಾಜಸ್ಥಾನದ ಬಿಕನೇರ್‌ನಲ್ಲಿ ತಮ್ಮ ಮಗಳು ಜೀಯಾನ ಜೊತೆ ವಾಸ ಮಾಡುತ್ತಿದ್ದು,  ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು, ಹೀಗಾಗಿ ಅನೇಕರು ನಟಿಯಾಗಿದ್ದ ಚಾರು ಅಸೋಪಾ ಅವರ ಈಗಿನ ಸ್ಥಿತಿ ನೆನೆದು ಮರುಗಿದ್ದರು. ಆದರೆ ಚಾರು ಅಸೋಪಾ ಆರ್ಥಿಕ ಸಂಕಷ್ಟಕ್ಕೀಡಾಗಿಲ್ಲ, ಆಕೆ ಕ್ರೂಸಿ ಶಿಪ್ ರೈಡ್ ಮಾಡುವಷ್ಟು ಶ್ರೀಮಂತಳಿದ್ದಾಳೆ ಎಂದು ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿಯೂ ಆಗಿರುವ ರಾಜೀವ್ ಸೇನ್ ಪ್ರತಿಕ್ರಿಯಿಸಿದ್ದಾರೆ.

ಚಾರುವಿನ ವೃತ್ತಿ ಹಾಗೂ ಆಕೆ ಹೇಗೆ ಮಗಳನ್ನು ತನ್ನಿಂದ ದೂರವಿಟ್ಟಿದ್ದಾಳೆ ಎಂಬ ಬಗ್ಗೆ ರಾಜೀವ್ ಸೇನ್ ಮಾತನಾಡಿದ್ದಾರೆ. ನನ್ನ ಮಗಳನ್ನು ನನ್ನಿಂದ ದೂರವಿಡುವ ಕಲೆಯನ್ನು ಚಾರು ಕರಗತ ಮಾಡಿಕೊಂಡಿದ್ದಾಳೆ. ಆದರೆ ಜಿಯಾನಾ ಬಗ್ಗೆ ನನಗೆ ನಿಜವಾಗಿಯೂ ಬೇಸರವಾಗುತ್ತಿದೆ ಏಕೆಂದರೆ ಅವಳು ನಿಜವಾಗಿಯೂ ಕಷ್ಟ ಅನುಭವಿಸುತ್ತಿರುವವಳು. ನಾನು ಕೊನೆಯ ಬಾರಿಗೆ ಜಿಯಾನಾಳನ್ನು ಭೇಟಿಯಾದದ್ದು ಈ ಜನವರಿಯಲ್ಲಿ. ನಾನು ಅವಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೋ ಅಷ್ಟೇ ಅವಳು ಕೂಡ ನನ್ನನ್ನು ಮಿಸ್ ಮಾಡಿಕೊಳ್ಳುತ್ತಾಳೆ ಎಂದು ರಾಜೀವ್ ಅಂಗ್ಲ ಮಾಧ್ಯಮ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ. 

ದುಡ್ಡಿಲ್ಲದೆ ಪೇಟೆ ಖಾಲಿ ಮಾಡಿ, ಹಳ್ಳಿಯಲ್ಲಿ ಬಟ್ಟೆ ಮಾರಾಟ ಮಾಡ್ತಿರೋ ಖ್ಯಾತ ನಟಿ!

Latest Videos

ನಾನು ಕೆಲಸದ ನಿಮಿತ್ತ ದೆಹಲಿಯಲ್ಲಿದ್ದಾಗ, ಜಿಯಾನಾಳನ್ನು ಭೇಟಿಯಾಗಲು ಬಿಕ್ನೇರ್‌ಗೆ ಬರಬಹುದೇ ಎಂದು ಚಾರುಗೆ ಕರೆ ಮಾಡಿದೆ, ಆದರೆ ಆಕೆ ನನ್ನ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ ಈಗ ಆಕೆ ಎಲ್ಲರಿಗೂ 'ಅವನು ಬಿಕ್ನೇರ್‌ಗೆ ಬರಲು ಸ್ವಾಗತ ಮತ್ತು ಅವನಿಗೆ ಅವಳನ್ನು(ಮಗಳನ್ನು) ಭೇಟಿಯಾಗಲು ಎಲ್ಲಾ ಹಕ್ಕುಗಳಿವೆ ಎಂದು ಹೇಳುತ್ತಿದ್ದಾಳೆ. ದುಃಖಕರವೆಂದರೆ, ನನಗೆ ಹಕ್ಕಿದೆ ಎಂದು ನನಗೆ ಅನಿಸುತ್ತಿಲ್ಲ, ವಿಶೇಷವಾಗಿ ನಾನು ಪ್ರಯತ್ನಕ್ಕೆ ಪ್ರತಿಯಾಗಿ ಮೌನವನ್ನು ಪಡೆದಾಗ ನಾನು ಇನ್ನೇನು ಮಾಡಬಹುದು? ಎಂದು ರಾಜೀವ್ ಸೇನ್ ಪ್ರತಿಕ್ರಿಯಿಸಿದ್ದಾರೆ.

ಚಾರು ಅಸೋಪಾ ಅವರ ಆನ್‌ಲೈನ್ ಬಟ್ಟೆ ವ್ಯವಹಾರದ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಕೇಳಿದಾಗ, ಪ್ರತಿಕ್ರಿಯಿಸಿದ ರಾಜೀವ್ ಸೇನ್ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಹಣ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನನ್ನು ನೋಡಿ ಸಂತೋಷವಾಗಿದೆ ಎಂದು ರಾಜೀವ್ ಸೇನ್ ಹೇಳಿದ್ದಾರೆ. ಆದರೆ ತಮ್ಮ ಮಾಜಿ ಪತ್ನಿಯ ಆರ್ಥಿಕ ದುಸ್ಥಿತಿಯನ್ನು ಅವರು ನಿರಾಕರಿಸಿದ್ದಾರೆ. ಅವರು ತಮ್ಮ ಸಹೋದರ ಮತ್ತು ಅವರ ಪತ್ನಿಯೊಂದಿಗೆ ಕ್ರೂಸಿ ಶಿಪ್ ಪ್ರವಾಸ ಮಾಡಬಲ್ಲರು, ಕ್ರೂಸಿ ಶಿಪ್ ಟೂರ್ ತುಂಬಾ ದುಬಾರಿಯಾಗಿದೆ.  ಮತ್ತು ಅಸೋಪಾ ಅವರೇ ಎಲ್ಲರ ಟಿಕೆಟ್‌ಗೆ ಹಣ ಪಾವತಿಸಿದ್ದಾರೆ. ಹೀಗಿರುವಾಗ. ಈ ಆರ್ಥಿಕ ತೊಂದರೆ ಎಲ್ಲಿಂದ ಬರುತ್ತದೆ ಎಂದು ರಾಜೀವ್ ಸೇನ್ ಪ್ರಶ್ನಿಸಿದ್ದಾರೆ. 

ದಾಂಪತ್ಯ ಮುರೀತು, ಪ್ರೀತಿ ಇರುತ್ತೆ: ನೋಟ್​ ಬರೆದು ನಟಿ ಚಾರುಗೆ ಡಿವೋರ್ಸ್​ ಕೊಟ್ಟ ಸುಷ್ಮಿತಾ ಸೇನ್​ ತಮ್ಮ

ಆಕೆ ಬಿಕ್ನೇರ್‌ನಲ್ಲಿ ಮನೆ ಖರೀದಿಸಲು ನೋಡುತ್ತಿದ್ದಾರೆ ಅಥವಾ ಈಗಾಗಲೇ ಮನೆ ಖರೀದಿಸಿರಬಹುದು.- ಇದಕ್ಕೂ ಸಾಕಷ್ಟು ಹಣ ಬೇಕಾಗುತ್ತದೆ. ಸಾಲ ಪಡೆದಿದ್ದರೂ ಸಹ, ಆಸ್ತಿಯನ್ನು ಖರೀದಿಸುವುದು ಸುಲಭವಲ್ಲ. ಜೊತೆಗೆ, ಅವರು ಕ್ರೂಸ್‌ ಪ್ರವಾಸ ಸೇರಿದಂತೆ ನಿಯಮಿತವಾಗಿ ಶಾಪಿಂಗ್ ಮಾಡುತ್ತಾರೆ.  ಅವರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿಲ್ಲ ಎಂಬುದು ಅವರ ವ್ಲಾಗ್‌ಗಳಿಂದ ಸ್ಪಷ್ಟವಾಗಿ ಕಾಣುತ್ತದೆ. ನಿಜವಾಗಿಯೂ ಆರ್ಥಿಕ ಒತ್ತಡದಲ್ಲಿರುವ ಯಾರಾದರೂ ಆಸ್ತಿಯನ್ನು ಖರೀದಿಸುವ ಕನಸು ಕೂಡ ಕಾಣುವುದಿಲ್ಲ ಎಂದು ಅವರು ಹೇಳಿದರು.

ತಮ್ಮ ಜೀವನವನ್ನು ಸಾರ್ವಜನಿಕ ಪ್ರದರ್ಶನ ಮಾಡಿದ್ದಕ್ಕಾಗಿ ಚಾರು ಅವರನ್ನು ಟೀಕಿಸಿದ ರಾಜೀವ್, ನನ್ನ ಮತ್ತು ಚಾರು ನಡುವಿನ ವ್ಯತ್ಯಾಸವೆಂದರೆ ನಾನು ಪ್ರತಿದಿನ ಮಾಧ್ಯಮಗಳಿಗೆ ಕರೆ ಮಾಡಿ ಮಧ್ಯವಯಸ್ಸಿನ ಬಿಕ್ಕಟ್ಟಿನ ಬಗ್ಗೆ ಅಳುವುದಿಲ್ಲ. ನಾನು ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಯಾರಿಗೂ ತೋರಿಸುವುದಿಲ್ಲ ಅಥವಾ ಯಾರು ಏನು ಕೊಟ್ಟರು ಎಂದು ಚರ್ಚಿಸುವುದಿಲ್ಲ. ಹಣವನ್ನು ಎಂದಿಗೂ ಸಾರ್ವಜನಿಕವಾಗಿ ಚರ್ಚಿಸಬಾರದು, ಆದರೆ ಅವಳು ಅದನ್ನು  YouTube ನ ವಿಷಯವಾಗಿ ಪರಿವರ್ತಿಸಿದ್ದಾಳೆ. ನನಗೆ ಅವಳ ಬಗ್ಗೆ ನಿಜವಾಗಿಯೂ ವಿಷಾದವಿದೆ  ಎಂದು ಹೇಳಿದ್ದಾರೆ. 

ನಾವೆಲ್ಲರೂ ಜಿಯಾನಾ ಬಗ್ಗೆ ಚಿಂತಿತರಾಗಿದ್ದೇವೆ. ಚಾರು ಪ್ರತಿದಿನ ಮಾಧ್ಯಮಗಳೊಂದಿಗೆ ಮಾತನಾಡದೆ ಸ್ಥಿರವಾದ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯಲ್ಲಿರಬೇಕೆಂದು ನಾವು ಬಯಸುತ್ತೇವೆ. ನೀವು ನೋಡಿದ್ದೀರಿ ಆಕೆ ದುಬೈನಲ್ಲಿರುವಂತೆ ಅವಳು ನನ್ನೊಂದಿಗೆ ಪ್ರವಾಸಗಳಲ್ಲಿ ಸಂತೋಷವಾಗಿರುತ್ತಾಳೆ ಮತ್ತು ನಂತರ ಇದ್ದಕ್ಕಿದ್ದಂತೆ ಬದಲಾಗುತ್ತಾಳೆ. ಅವಳು ನಾನು ಕೆಟ್ಟ ತಂದೆ ಅಥವಾ ಕೆಟ್ಟ ಮನುಷ್ಯ ಎಂದು ಭಾವಿಸಿದರೆ, ಹಾಗೆಯೇ ಇರಲಿ. ನನಗೆ ಅದು ಮುಖ್ಯವಲ್ಲ. ನನ್ನನ್ನು ನಿಜವಾಗಿಯೂ ತಿಳಿದಿರುವ ಜನರಿಗೆ ನಾನು ಏನೆಂದು ತಿಳಿದಿದೆ. ಜೀವನದಲ್ಲಿ ತುಂಬಾ ಇದ್ದರೂ ಅವಳು ತನ್ನ ಸ್ವಂತ ಇಮೇಜ್‌ಗೆ ಹಾನಿ ಮಾಡಿಕೊಳ್ಳುತ್ತಿದ್ದಾಳೆ ಎಂದು ರಾಜೀವ್ ಸೇನ್ ತಮ್ಮ ಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ ತಾನು ಚಾರು ಅಸೋಪಾ ಅವರನ್ನು ಮತ್ತೆ ಭೇಟಿಯಾಗಲು ಪ್ರೋತ್ಸಾಹಿಸಿದ್ದನ್ನು ಕೂಡ ಅವರು ನೆನಪಿಸಿಕೊಂಡಿದ್ದಾರೆ. ಕಳೆದ ತಿಂಗಳು ಕೂಡ ನಾನು ಅವಳಿಗೆ ಹೇಳಿದ್ದೆ - ಮನೆಗೆ ಬಾ, ನಮ್ಮ ಮಗುವಿಗೆ ಒಂದು ಅವಕಾಶ ಕೊಡು. ನಾವು ಮತ್ತೆ ಮದುವೆಯಾಗಬೇಕು ಅಂತ ಅಲ್ಲ, ಆದರೆ ಕನಿಷ್ಠ ಅವಳಿಗೆ ಸ್ವಂತ ಮನೆ, ಸ್ವಂತ ಜಾಗ ಇರಬೇಕು. ಆದರೆ ಅವಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ಬಹುಶಃ ತುಂಬಾ ಜನರು ಅವಳ ಮೇಲೆ ಪ್ರಭಾವ ಬೀರುತ್ತಿರಬಹುದು, ಆದರೆ ಒಂದು ಹಂತದಲ್ಲಿ, ಅವಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಅವಳಿಗೆ ಮತ್ತು ಜಿಯಾನಾಗೆ ನಿಜವಾಗಿಯೂ ಯಾವುದು ಉತ್ತಮ ಎಂಬುದರ ಕುರಿತು ದೀರ್ಘಕಾಲ ಯೋಚಿಸಬೇಕು ಎಂದು ಹೇಳಿದ್ದಾರೆ. ಚಾರು ಅಸೋಪಾ 2019 ರಲ್ಲಿ ರಾಜೀವ್ ಸೇನ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧದಲ್ಲಿ ಶೀಘ್ರದಲ್ಲೇ ವಿರಸ ಕಾಣಿಸಿಕೊಂಡು ಅಂತಿಮವಾಗಿ ವಿಚ್ಛೇದನದಲ್ಲಿ ಕೊನೆಗೊಂಡಿತು.

vuukle one pixel image
click me!