ಶಾರುಖ್ ಖಾನ್ ಅವರ ಲಾಸ್ ಏಂಜಲಸ್ನಲ್ಲಿರುವ ಆರು ಬೆಡ್ರೂಮ್ನ ರಹಸ್ಯವೊಂದು ಈಗ ಬಯಲಾಗಿದೆ. ಒಂದು ದಿನಕ್ಕೆ 2 ಲಕ್ಷ ಪಡೆಯುತ್ತಿದ್ದಾರೆ ನಟ, ಏನಿದು?
2017ರಲ್ಲಿ ಬಿಡುಗಡೆಯಾದ ನಟ ಶಾರುಖ್ ಖಾನ್ ಮತ್ತು ನಟಿ ಅನುಷ್ಕಾ ಶರ್ಮಾ ಅಭಿನಯದ ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರೀಕರಣದ ಸಮಯದಲ್ಲಿ ಶಾರುಖ್ ಒಮ್ಮೆ ಒಂದು ಲಾಸ್ ಏಂಜಲೀಸ್‌ನಲ್ಲಿರುವ ಬೆವರ್ಲಿ ಹಿಲ್ಸ್ ಮಹಲು ತಂಗಿದ್ದರು. ಅಂದಿನಿಂದ ಇಂದಿನವರೆಗೂ ಅವರು ತಮಗೆ ಬೇಕಾದವರ ಜೊತೆ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ, ಹಲವು ದಿನಗಳನ್ನು ಇಲ್ಲಿ ಕಳೆಯುತ್ತಾರೆ. ಅಂದಹಾಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಈ ವಿಲ್ಲಾ ಕೂಡ ಶಾರುಖ್ ಅವರಿಗೇ ಸೇರಿದ್ದು. ಅವರ ಅತ್ಯಂತ ಹಲವಾರು ಅದ್ಭುತ ಆಸ್ತಿಗಳಲ್ಲಿ ಇದು ಒಂದಾಗಿದೆ, ಆರು ಮಲಗುವ ಕೋಣೆಗಳ ಐಷಾರಾಮಿ ಕೋಟೆ ಎಂದರೂ ತಪ್ಪಾಗಲಿಕ್ಕಿಲ್ಲ!
ಇದೀಗ ಈ ವಿಲ್ಲಾದ ಕುರಿತು ಕುತೂಹಲದ ಮಾಹಿತಿಯೊಂದು ಬಹಿರಂಗಗೊಂಡಿದೆ. ಅಷ್ಟಕ್ಕೂ ಶಾರುಖ್ ಖಾನ್ ಅವರ ಪಟ್ಟಿಯಲ್ಲಿ ದಶಕಗಳ ಸೂಪರ್‌ಸ್ಟಾರ್‌ಡಮ್ ಇದೆ, ಇದು ಸಿನಿಮಾ ಪ್ರಪಂಚವನ್ನು ಮೀರಿ ತಮಗಾಗಿ ಒಂದು ಸಾಮ್ರಾಜ್ಯವನ್ನು ನಿರ್ಮಿಸಲು ಕೂಡ ಸಹಾಯ ಮಾಡಿದೆ. ಪ್ರಪಂಚದಾದ್ಯಂತದ ಶಾರುಖ್ ಖಾನ್ ಅವರ ರಿಯಲ್ ಎಸ್ಟೇಟ್ ಆಸ್ತಿಗಳು ಲೆಕ್ಕವಿಲ್ಲದಷ್ಟಿದೆ. ಅವರ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಈ ಲಾಸ್ ಏಂಜಲೀಸ್‌ನಲ್ಲಿರುವ ಬೆವರ್ಲಿ ಹಿಲ್ಸ್ ಮಹಲು ಒಂದು. ಇದು ಈಗ Airbnb ಮೂಲಕ ಖರೀದಿಗೆ ಲಭ್ಯವಿದೆ. ಆದರೆ ಇಲ್ಲಿ ಯಾರಾದರೂ ಉಳಿಯಲು ಇಷ್ಟಪಟ್ಟರೆ, ಒಂದು ದಿನದ ಬಾಡಿಗೆ ಎಷ್ಟು ಗೊತ್ತಾ? ಐಷಾರಾಮಿಯನ್ನು ಪಡೆಯಲು ಬಯಸಿದರೆ ಅಂಥವರು ತಲಾ 1,96,891 ರೂಪಾಯಿಗಳನ್ನು ಅಂದರೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ನಟನಿಗೆ ನೀಡಬೇಕಾಗುತ್ತದೆ!
ಶಾರುಖ್, ಆಮೀರ್ ಖಾನ್ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?
ಇನ್ನು ಈ ಮಹಲಿನ ಕುರಿತು ಹೇಳುವುದಾದರೆ, ಮೊದಲೇ ಹೇಳಿದಂತೆ ಇದು, ಶಾರುಖ್ ಖಾನ್ ಅವರ ಅದ್ಭುತ ಆಸ್ತಿಗಳಲ್ಲಿ ಒಂದಾಗಿದೆ, ಆರು ಮಲಗುವ ಕೋಣೆಗಳ ಐಷಾರಾಮಿ ಕೋಟೆ, ತಾಳೆ ಮರಗಳು ಮತ್ತು ದೊಡ್ಡ ಈಜುಕೊಳದಿಂದ ಆವೃತವಾಗಿದೆ. ಇದರ ಒಂದು ನೋಟವನ್ನು ನಟ ಸ್ವತಃ ನಟನೇ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ಲಾಸ್ ಏಂಜಲಿಸ್ನ ಈ ಮನೆ ಸಾಂತಾ ಮೋನಿಕಾ, ರೋಡಿಯೊ ಡ್ರೈವ್ ಮತ್ತು ವೆಸ್ಟ್ ಹಾಲಿವುಡ್ ಬಳಿ ಇದೆ ಮತ್ತು ಈಗ Airbnb ಮೂಲಕ ಬಾಡಿಗೆಗೆ ಲಭ್ಯವಿದೆ. ಈ ಮನೆಯಲ್ಲಿ ಐಷಾರಾಮಿ ಖಾಸಗಿ ಕ್ಯಾಬಾನಾಗಳಿವೆ, ಇವು ಭವ್ಯವಾದ ಈಜುಕೊಳ ಮತ್ತು ಟೆನಿಸ್ ಕೋರ್ಟ್ ಬಳಿ ಇವೆ. ಇನ್ನು ಏನೇನೋ ವ್ಯವಸ್ಥೆಗಳಿವೆ.
ಇದರ ಬಗ್ಗೆ ಹಿಂದೊಮ್ಮೆ ಶಾರುಖ್, "ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಳಿಸಲು ಮತ್ತು ತಮ್ಮವರೊಂದಿಗೆ ಸ್ವಲ್ಪ ಸಮಯ ಕಳೆಯಲು ಇದಕ್ಕಿಂತ ಬೇರೆ ಸ್ಥಳವಿಲ್ಲ. ನಗರದಿಂದ ಹಲವಾರು ಸಾವಿರ ಮೈಲುಗಳಷ್ಟು ದೂರದಲ್ಲಿ ಇದು ಇದು, ವೇಗದ ಜೀವನಶೈಲಿಯಿಂದ ದೂರವಿರಲು ಸಾಧ್ಯವಾಗಿಸಿ ಉಲ್ಲಾಸಕರ ಅನುಭವ ನೀಡುತ್ತದೆ ಎಂದಿದ್ದರು. ನೀವು ಕೂಡ ಶಾರುಖ್ ಖಾನ್ ಅವರಂತೆಯೇ ಐಷಾರಾಮಿ ಅನುಭವವನ್ನು ಅನುಭವಿಸಲು ಬಯಸಿದರೆ, ಅವರ ಜೀವನವನ್ನು ಹತ್ತಿರದಿಂದ ಅನುಭವಿಸಲು ಬಯಸಿದರೆ, ದಿನವೊಂದಕ್ಕೆ ಎರಡು ಲಕ್ಷ ನೀಡಲು ರೆಡಿಯಾಗಿ!
ಅಲ್ಹಾನ ದಯೆಯಿಂದ 4ನೇ ಮದ್ವೆನೂ ಆಗಬಲ್ಲೆ ಎಂದು ಪತ್ನಿ ಎದುರೇ ಹೇಳಿ ಪೇಚಿಗೆ ಸಿಲುಕಿದ ಖ್ಯಾತ ನಟ ಡ್ಯಾನಿಷ್!