ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಕಿಸ್ಸಿಂಗ್ ಫೋಟೋ ಒಂದು ಲೀಕ್ ಆಗಿದೆ. ಇದರ ಬೆನ್ನಲ್ಲೇ ಇವರ ಸೀಕ್ರೆಟ್ ಡೇಟಿಂಗ್ ಕುರಿತು ಅನುಮಾನಗಳು ಹೆಚ್ಚಾಗಿದೆ. ಅಷ್ಟಕ್ಕೂ ಫೋಟೋ ಲೀಕ್ ಆಗಿದ್ದು ಎಲ್ಲಿ?
ಮುಂಬೈ(ಏ.12) ನಟಿ ಅನುಪಮಾ ಪರಮೇಶ್ವರನ್ ಹಾಗೂ ತಮಿಳು ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ್ ವಿಕ್ರಮ್ ಸೀಕ್ರೆಟ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಗುಸು ಗುಸು ಮಾತು ಕೇಳಿಬರುತ್ತಲೇ ಇತ್ತು. ಇದೀಗ ಇವರಿಬ್ಬರದ್ದು ಎನ್ನಲಾದ ಫೋಟೋ ಒಂದು ಲೀಕ್ ಆಗಿದೆ. ಇಬ್ಬರ ಸಿಹಿ ಮುತ್ತಿನ ಫೋಟೋ ಒಂದು ಸ್ಪಾಟಿಫೈ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ಲೀಕ್ ಆಗಿದೆ. ಪ್ಲೇಲಿಸ್ಟ್‌ನಲ್ಲಿ ಹಂಚಿಕೊಂಡ ಪ್ರೋಫೈಲ್ ಇಮೇಜ್ ಇದಾಗಿದೆ. ತಕ್ಷಣವೇ ಅಭಿಮಾನಿಗಳು ಇಬ್ಬರ ಬ್ಲೂ ಮೂನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪರಿಶೀಲಿಸಿ ಭರ್ಜರಿ ಕಮೆಂಟ್ ಮಾಡಿದ್ದಾರೆ. ಈ ವೇಳೆ ಈ ಫೋಟೋವನ್ನು ಪ್ರೈವೇಟ್ ಮಾಡಲಾಗಿದ್ದು, ಡೇಟಿಂಗ್ ಅನುಮಾನ ಬಲಗೊಳಿಸಿದೆ.
ಸ್ಟಾಟಿಫೈ ಮೂಲಕ ಫೋಟೋ ಬಹಿರಂಗ
ಸ್ಪಾಟಿಫೈ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲೂ ಮೂನ್ ಹೆಸರಿನಲ್ಲಿ ಪ್ಲೇ ಲಿಸ್ಟ್ ಹಂಚಿಕೊಳ್ಳಲಾಗಿದೆ. ಆದರೆ ಇವರ ಪ್ರೊಫೈಲ್ ಪಿಕ್ ಕಿಸ್ಸಿಂಗ್ ಫೋಟೋ ಇದೆ. ಈ ಫೋಟೋ ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಅವರದ್ದು ಎನ್ನಲಾಗಿದೆ. ಇದು ಇಬ್ಬರು ಮುತ್ತಿಕ್ಕುವ ಫೋಟೋ ಆಗಿದೆ.
ಸ್ಲೀವ್‌ಲೆಸ್ ಬ್ಲೌಸ್‌ನಲ್ಲಿ ಮಹಾನಟಿನೇ; 'ನಟಸಾರ್ವಭೌಮಾ' ಸುಂದರಿ ಅನುಪಮಾ ಫೋಟೋ ವೈರಲ್!
ವೈರಲ್ ಬೆನ್ನಲ್ಲೆ ಪ್ರೈವೇಟ್
ಸ್ಪಾಟಿಫೈ ಮೂಲಕ ಈ ಫೋಟೋ ಲೀಕ್ ಆಗುತ್ತಿದ್ದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಯಾಗುತ್ತಿದ್ದಂತೆ, ಈ ಹಂಚಿಕೊಂಡಿದ್ದ ಪ್ಲೇಲಿಸ್ಟ್ ಪ್ರೈವೇಟ್ ಮಾಡಲಾಗಿದೆ. ಇದು ಅಭಿಮಾನಿಗಳ ಅನುಮಾನ ಹೆಚ್ಚಿಸಿದೆ.
OMG. Are Anupama Parameswaran and Dhruv Vikram dating?
byu/Nish916 inKollyGossips
ಇಬ್ಬರು ಹಂಚಿಕೊಂಡ ಪ್ಲೇಲಿಸ್ಟ್‌ನಲ್ಲಿ ಇಡಿ ಶರೀನ್, ಜಸ್ಟಿನ್ ಹರ್ವಿಟ್ಜ್, ರ್ಯಾನ್ ಗೊಸ್ಲಿಂಗ್ ಸೇರಿದಂತೆ ಹಲವು ಹಾಡುಗಳಿವೆ. ಈ ಫೋಟೋ ಲೀಕ್ ಆಗಿ ವೈರಲ್ ಆಗುವ ವರೆಗೆ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಅವರ ಪ್ರೊಫೈಲ್ ಪಬ್ಲಿಕ್ ಆಗಿತ್ತು. ಆದರೆ ಯಾವಾಗ ಸೋಶಿಯಲ್ ಮೀಡಿಯಾ, ರೆಡ್ಡಿಟ್ ಸೇರಿದಂತೆ ಎಲ್ಲಾ ತಾಣಗಳಲ್ಲಿ ಕಿಸ್ ಪೋಟೋ ವೈರಲ್ ಆಗುತ್ತಿದ್ದಂತೆ ಪ್ರೋಫೈಲ್ ಪ್ರೈವೇಟ್ ಮಾಡಲಾಗಿದೆ.
ಬಿಸನ್ ಮೂಲಕ ಇವರಿಬ್ಬರು ಆತ್ಮೀಯ
ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಇಬ್ಬರು ಬಿಸನ್ ಸಿನಿಮಾ ಮೂಲಕ ಆತ್ಮೀಯರಾಗಿದ್ದಾರೆ. ಮುಂಬರುವ ಬಹುನಿರೀಕ್ಷಿತ ಚಿತ್ರ ಇದಾಗಿದೆ. ಮಾರಿ ಸೆಲ್ವರಾಜ್ ನಿರ್ದೇಶನದ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟ್ ಮಾರ್ಚ್ 7 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಧ್ರುವ್ ವಿಕ್ರಮ್ ಜೊತೆ ಅನುಪಮಾ ಪರಮೇಶ್ವರನ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್‌ನಿಂದ ಆತ್ಮೀಯರಾಗಿರುವ ಅನುಪಮಾ ಹಾಗೂ ಧ್ರುವ್ ವಿಕ್ರಮ್ ಇದೀಗ ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ರೆಡ್ಡಿಟ್‌ನಲ್ಲಿ ಡೇಟಿಂಗ್ ಚರ್ಚೆ
ರೆಡ್ಡಿಟ್ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋಟೋಗಳು ಹರಿದಾಡಿದೆ. ಹಲವರು ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಇವರಿಬ್ಬರು ಮುತ್ತಿಕ್ಕಿರುವ ಈ ಫೋಟೋ ಹಂಚಿಕೊಂಡು, ನಟಿ ಅನುಪಮಾ ಪರಮೇಶ್ವರನ್ ಡೇಟಿಂಗ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಿಲೇಶನ್‌ಶಿಪ್, ಡೇಟಿಂಗ್ ಕುರಿತು ಹಲವು ಗಾಸಿಪ್ ಇದ್ದರೂ ಅಧಿಕೃತವಾಗಿರಲಿಲ್ಲ. ಇದೀಗ ಫೋಟೋ ಬಹಿರಂವಾಗುತ್ತಿದ್ದಂತೆ ಅಭಿಮಾನಿಗಳು ನಟಿ ಅನುಪಮಾ ಡೇಟಿಂಗ್‌ನಲ್ಲಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಲವರು ಶೀಘ್ರದಲ್ಲೇ ಇವರ ಡೇಟಿಂಗ್ ಅಧಿಕೃತಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಇದೀಗ ನಟಿ ಪರಮೇಶ್ವರನ್ ಇನ್‌ಸ್ಟಾ ಸೇರಿದಂತೆ ಇತರ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
ಸಾಯಿ ಪಲ್ಲವಿ, ರಶ್ಮಿಕಾ, ಶ್ರೀಲೀಲಾ, ಅನುಪಮಾ, ರಿತು ಕನಸಿನ ಪಾತ್ರ ಯಾವುದು ಗೊತ್ತಾ?