ಬೆತ್ತಲಾಗಲು ಪೈಪೋಟಿಗೆ ಬಿದ್ದ ನಟಿ ದೀಪಿಕಾಗೆ 'ಫೈಟರ್'​ ಶಾಕ್- ದೇಶಭಕ್ತಿ ಚಿತ್ರಕ್ಕೆ UA ಪ್ರಮಾಣಪತ್ರ!

By Suvarna News  |  First Published Jan 24, 2024, 8:46 PM IST

ದೇಶಭಕ್ತಿ ಮೆರೆವ ಫೈಟರ್​ ಚಿತ್ರದಲ್ಲಿಯೂ ಅಶ್ಲೀಲತೆ ತೋರಿಸಿರುವ ಫೈಟರ್​ ಚಿತ್ರತಂಡಕ್ಕೆ ಈಗ ಶಾಕ್​ ಎದುರಾಗಿದೆ. ಆಗಿದ್ದೇನು? 
 


ಅನಿಮಲ್​ ಚಿತ್ರದಲ್ಲಿ ರಶ್ಮಿಕಾ ಮಂದಣ್ಣನವರ ಅರೆ ಬೆತ್ತಲೆ, ನಟಿ ತೃಪ್ತಿ ಡಿಮ್ರಿಯ ಪೂರ್ಣ ಬೆತ್ತಲೆಯ ವಿಷಯ ಇನ್ನು ಚರ್ಚೆಗೆ ಗ್ರಾಸವಾಗುತ್ತಿರುವ ನಡುವೆಯೇ, ದೀಪಿಕಾ ಪಡುಕೋಣೆ ಮತ್ತು ಹೃತಿಕ್​ ರೋಷನ್​ ಅಭಿನಯದ ಫೈಟರ್​ ನಾಳೆ ರಿಲೀಸ್​ ಆಗಲಿದೆ.  ನಟಿಯರು ಪೈಪೋಟಿಗೆ ಬಿತ್ತವರಂತೆ ಬೆತ್ತಲಾಗುತ್ತಿದ್ದಾರಾ ಎನ್ನುವ ಪ್ರಶ್ನೆ ಈ ಚಿತ್ರದ ಟೀಸರ್​ ನೋಡಿ ಚರ್ಚೆಗೆ ಗ್ರಾಸವಾಗಿತ್ತು.  ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್​ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಹೃತಿಕ್ ರೋಷನ್​ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್​ಫೋರ್ಸ್​ ಆಫೀಸರ್​ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕಿದ್ದರು. ಹೇಳಿ ಕೇಳಿ ಫೈಟರ್​ ದೇಶಭಕ್ತಿ ಮೆರೆಯುವ ಚಿತ್ರ. ಇದರಲ್ಲಿಯೂ ಈ ರೀತಿ ಮುಕ್ಕಾಲಂಶ ದೇಹ ಪ್ರದರ್ಶನ ಮಾಡುವುದು ಬೇಕಾ ಎಂದು ಸಕತ್​ ಟೀಕೆಗೆ ಒಳಗಾಗುತ್ತಿದೆ. ಇನ್ನೊಂದಿಷ್ಟು ಮಂದಿ ಇದೇ ವೇಳೆ ಬಾಯಿ ಚಪ್ಪರಿಸಿಕೊಂಡು ಬೆತ್ತಲಾದರೆ ಏನು ಎಂದೂ ಕೇಳುತ್ತಿದ್ದಾರೆ. 

ಆದರೆ ಇದೀಗ ಹೊಸ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಪಠಾಣ್​ ರೀತಿಯಲ್ಲಿಯೇ ದೀಪಿಕಾ ಇಲ್ಲಿ ಹೃತಿಕ್​ ರೋಷನ್​ ಜೊತೆ ತೀರಾ ಅಶ್ಲೀಲ ಎನ್ನುವ ರೀತಿಯಲ್ಲಿ ಹಾಡೊಂದರಲ್ಲಿ ಪೋಸ್​ ಕೊಟ್ಟಿದ್ದಾರೆ. ದೇಶಭಕ್ತಿ ಎಂದು ಮಕ್ಕಳಿಗೆ ಈ ಚಿತ್ರವನ್ನು ತೋರಿಸಲಾಗದಷ್ಟು ಕೆಟ್ಟದ್ದಾಗಿ ಅವರು ಕಾಣಿಸಿಕೊಂಡಿದ್ದಾರೆ. ಅಶ್ಲೀಲತೆಯ ಪರಮಾವಧಿ ಇದು ಎಂದು ಸೋಷಿಯಲ್​  ಮೀಡಿಯಾದಲ್ಲಿಯೂ ಸಾಕಷ್ಟು ಚರ್ಚೆ ಆಗುತ್ತಿದೆ. ಬೆತ್ತಲಾದರೆ ಮಾತ್ರ ಬಾಲಿವುಡ್​ನಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ರಣವೀರ್ ಸಿಂಗ್​ ಪತ್ನಿ ದೀಪಿಕಾ ಅಂದುಕೊಂಡಂತಿದೆ. ಅದಕ್ಕಾಗಿಯೇ ಪಠಾಣ್​ ಚಿತ್ರದಲ್ಲಿಯೂ ಇದೇ ರೀತಿ ಅಶ್ಲೀಲವಾಗಿ ಕಾಣಿಸಿಕೊಂಡಿದ್ದರು. ಪಠಾಣ್​ನ  ‘ಬೇಷರಮ್ ರಂಗ್’ ಒಂದೇ ಹಾಡಿಗೆ 10 ಕಟ್​ಗಳನ್ನು ಸೂಚಿಸಲಾಗಿತ್ತು. ಅದೇ ರೀತಿ ಇದೀಗ ಫೈಟರ್​ನ ಈ ಅಶ್ಲೀಲ ಹಾಡಿನಲ್ಲಿ ಎರಡು ಕಡೆ ಕತ್ತರಿ ಹಾಕುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (Central Board of Film Certification- CBFC) ಆದೇಶಿಸಿದೆ.  

Tap to resize

Latest Videos

ದೇಶಭಕ್ತಿ ಮೆರೆವ ಚಿತ್ರಕ್ಕೂ ನಟರು ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್'​ ಟೀಸರ್ ನೋಡಿ ಛೀ ಅಂತಿದ್ದಾರೆ ನೆಟ್ಟಿಗರು!

ಈ ಹಾಡಿನಲ್ಲಿ ದೀಪಿಕಾ ಬಹುತೇಕ ಅಂಗಗಳನ್ನು ಕಾಣಿಸಿದ್ದರೆ, ನಟ ಹೃತಿಕ್​ ರೋಷನ್​ ಷರ್ಟ್​ ಬಿಚ್ಚಿದ್ದಾರೆ. ಸಿಕ್ಸ್ ಪ್ಯಾಕ್​ ಪ್ರದರ್ಶಿಸಿದ್ದಾರೆ. ಇದಕ್ಕೆ CBFC UA ಸರ್ಟಿಫಿಕೇಟ್​ ನೀಡಿದೆ. UA ಎಂದರೆ  12 ವರ್ಷದೊಳಗಿನ ಮಕ್ಕಳಿಗೆ ಈ ಚಿತ್ರವನ್ನು ತಮ್ಮ ವಿವೇಚನೆ ಬಳಸಿ ಪೋಷಕರು ತೋರಿಸಬೇಕು ಎನ್ನುವುದು.  ಕುತೂಹಲದ ಸಂಗತಿ ಎಂದರೆ ಪಠಾಣ್ ಮತ್ತು ಫೈಟರ್​ ಎರಡನ್ನೂ ನಿರ್ದೇಶಿಸಿರುವುದು ಸಿದ್ಧಾರ್ಥ್ ಆನಂದ್ .

 ಯುಎ ಸರ್ಟಿಫಿಕೇಟ್​ ಹಾಗೂ ಕತ್ತರಿ ಪ್ರಯೋಗದ ಬಗ್ಗೆ ಮಾತನಾಡಿರುವ  ಸಿದ್ಧಾರ್ಥ್ ಆನಂದ್, ಇಂಥವುಗಳಿಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇಂಥ ದೃಶ್ಯಗಳನ್ನು ನೋಡುವ ದೊಡ್ಡ ವರ್ಗವೇ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ ಅವರು,  ಸಿನಿಮಾದ ಜಯಕ್ಕೆ ಇವೆಲ್ಲಾ ಅಡ್ಡಿ ಬರುವುದೇ ಇಲ್ಲ ಎಂದಿದ್ದಾರೆ. ಅಷ್ಟಕ್ಕೂ ತಾವೇನು ಬಲವಂತವಾಗಿ ಇಂಥ ದೃಶ್ಯ ತುರುಕಿಲ್ಲ.  ಈ ದೃಶ್ಯ, ಹಾಡು ನನ್ನ ಸಿನಿಮಾಕ್ಕೆ ಅವಶ್ಯಕತೆ ಇದೆ ಎಂದಾಗ ಅದನ್ನು ಬಿಡದೆ ಮಾಡಿದ್ದೇನೆ. ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್​ಸಿಗೆ ಕೆಲವು ಗೈಡ್​ಲೈನ್​ಗಳಿವೆ ಅದನ್ನು ಅವರು ಪಾಲಿಸಲೇಬೇಕು, ಅದರ ಅರಿವು ನಮಗೂ ಇದೆ ಎಂದಿದ್ದಾರೆ.

ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಹಾಟ್​ ಬ್ಯೂಟಿ ನೋರಾ ಫತೇಹಿ ! ಏನಿದು ಹೊಸ ವಿಷ್ಯ?
 

click me!