ಮಾಜಿ ಭುವನ ಸುಂದರಿಗೆ ಭಾರೀ ಹಾರ್ಟ್ ಅಟ್ಯಾಕ್; ಹೃದಯದಿಂದ ಬಂದವು ಗೋಲ್ಡನ್ ಟಿಪ್ಸ್!

By Shriram Bhat  |  First Published Jan 24, 2024, 4:33 PM IST

ಕೆಲವರು ಈಗ ಹೇಳಬಹುದು, ನೋಡಿ ಆಕೆಗೆ ಜಿಮ್‌ನಿಂದ ಏನೂ ಸಹಾಯವಾಗಿಲ್ಲ. ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸಿದರೂ ಹಾರ್ಟ್‌ ಅಟ್ಯಾಕ್ ಆಯಿತು ಅಂತ. ಆದರೆ, ಹೃದಯಾಘಾತ ಆಗುವುದಕ್ಕೆ ಬಹಳಷ್ಟು ಕಾರಣಗಳಿರುತ್ತವೆ. 


ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್‌ಗೆ ಭಾರೀ ಪ್ರಮಾಣದ ಹೃದಯಾಘಾತವಾಗಿದ್ದು ಗೊತ್ತೇ ಇದೆ. ಅದರಿಂದ ಸುಶ್ಮಿತಾ ಸೇನ್ (Sushmita Sen) ಬಚಾವಾಗಿ ಬಂದು ಇಂದು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ  ಸುಶ್ಮಿತಾ ಸೇನ್ ಏನು ಹೇಳಿದ್ದಾರೆ ಎಂಬುದನ್ನು ತಿಳಿದರೆ ನಿಜವಾಗಿಯೂ ಅಚ್ಚರಿ ಹಾಗೂ ಖುಷಿಯಾಗುತ್ತದೆ. ಹಲವರಿಗೆ ಧೈರ್ಯ-ಸ್ಥೈರ್ಯ ತುಂಬುವ ಮಾತನ್ನಾಡಿದ್ದಾರೆ, ನಗುನಗುತ್ತ ದುರಂತವನ್ನು ಎದುರಿಸಿದ್ದಾರೆ. 

'ನಾನು ತುಂಬಾ ದೊಡ್ಡ ಮಟ್ಟದ ಹಾರ್ಟ್‌ ಅಟ್ಯಾಕ್‌ನಿಂದ (Heart Attack) ಬದುಕುಳಿದು ಬಂದಿದ್ದೇನೆ. ಅದು ಅತಿಂಥ ಹೃದಯಾಘಾತವಲ್ಲ. ಶೇ. 95ರಷ್ಟು ನನ್ನ ಹೃದಯದ ಮುಖ್ಯ ಆರ್ಟರಿ ಬ್ಲಾಕೇಜ್ ಆಗಿತ್ತು. ಆದರೆ, ಅದೃಷ್ಟವಶಾತ್ ನಾನು ದುರಂತವನ್ನು ದಾಟಿಕೊಂಡು ಬಂದೆ. ಹೆಣ್ಣುಮಕ್ಕಳೇ, ದಯವಿಟ್ಟು ನಾನೊಂದು ಮಾತು ಹೇಳುತ್ತೇನೆ ಕೇಳಿ, ಇದು ಹಾರ್ಟ್ ಅಟ್ಯಾಕ್ ಎನ್ನುವುದು ಪುರುಷರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ. ಇದು ಮಹಿಳೆಯರೂ ಸೇರಿದಂತೆ ಯಾರಿಗೆ ಬೇಕಾದರೂ ಆಗಬಹುದು.

Tap to resize

Latest Videos

ದೇವತೆಯಂಥ ನಟಿ ಸುಧಾರಾಣಿ ಬಾಳಲ್ಲಿ ಯಾಕೆ ಬರಬೇಕಿತ್ತು ಅಂಥ ಭಯಾನಕ ಬಿರುಗಾಳಿ!

ಕೆಲವರು ಈಗ ಹೇಳಬಹುದು, ನೋಡಿ ಆಕೆಗೆ ಜಿಮ್‌ನಿಂದ (Gym) ಏನೂ ಸಹಾಯವಾಗಿಲ್ಲ. ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸಿದರೂ ಹಾರ್ಟ್‌ ಅಟ್ಯಾಕ್ ಆಯಿತು ಅಂತ. ಆದರೆ, ಹೃದಯಾಘಾತ ಆಗುವುದಕ್ಕೆ ಬಹಳಷ್ಟು ಕಾರಣಗಳಿರುತ್ತವೆ. ನಾನು ವಿಜ್ಞಾನಿಯಲ್ಲ, ಡಾಕ್ಟರ್ ಅಲ್ಲ, ನನಗೆ ಅದರ ಬಗ್ಗೆ ಸರಿಯಾದ ಮಾಹಿತಿಗಳಿಲ್ಲ. ಆದರೆ. ನನ್ನ ಹೃದಯ ಸರಿಯಾದ ಸ್ಥಳದಲ್ಲಿ ಇದೆ ಎಂಬುದು ಮಾತ್ರ ಈಗ ಮನದಟ್ಟಾಗಿದೆ. ಜಿಮ್ ನನ್ನ ಹೃದಯಾಘಾತ ತಪ್ಪಿಸಲು ನೆರವಾಗದಿದ್ದರೂ ನನ್ನ ಆಕ್ಟಿವ್ ಲೈಫ್‌ ಸ್ಟೈಲ್ ನನಗೆ ದಿನನಿತ್ಯದ ಅಗತ್ಯ ಶಕ್ತಿಗೆ ನೆರವಾಗಿದೆ.

ದುಬೈನಿಂದ ಬೆಂಗಳೂರಿಗೆ ಬಂದ 'ಕೃಷ್ಣ ಸುಂದರಿ' ಮಾಲಾಶ್ರೀ ಮೀಟ್ ಆಗಿದ್ರು; ಮೂಡುತ್ತಿದ್ಯಾ 'ಹೊಸ ಬೆಳಕು'..!? 

ನಾನು ಅನುಭವಿಸಿದ ಹೃದಯಾಘಾತ ಈಗ ಇತಿಹಾಸದ ಪುಟ ಸೇರಿದೆ. ಆದರೆ, ಅಂದು ನನಗೆ ನನ್ನ ಫ್ಯಾಮಿಲಿ, ಅಭಿಮಾನಿಗಳು, ಸಂಬಂಧಿಕರು ಹಾಗೂ ಇಡೀ ಜಗತ್ತು ನನಗೆ ತೋರಿಸಿದ ಸಹೃದಯ ಪ್ರೀತಿಗೆ ನಾನೆಂದೂ ಚಿರಋಣಿ. ದಯವಿಟ್ಟು, ಯಾರೂ ಹಾರ್ಟ್ ಅಟ್ಯಾಕ್‌ ಬಗ್ಗೆ ಹೆದರಿಕೊಳ್ಳಬೇಡಿ, ಧೈರ್ಯದಿಂದಿರಿ. ಏಕೆಂದರೆ, ನಮ್ಮನಮ್ಮ ಹಾರ್ಟ್‌ನ್ನು ನಾವು ಮಾನಿಟರ್ ಮಾಡಲು ಸಾಧ್ಯವಿಲ್ಲ. ಪ್ರೀತಿ ಹಂಚೋಣ, ಪ್ರೀತಿ ಪಡೆಯೋಣ' ಎಂದಿದ್ದಾರೆ ಸುಶ್ಮಿತಾ ಸೇನ್. 

ಮಾಲಾಶ್ರೀ ಜತೆ ಬಡಿದಾಡಿದ್ದ ನಟ ಅರ್ಧ ಸೆಂಚುರಿಗೂ ಮೊದಲೇ ಯಾಕೆ ವಿಧಿವಶರಾಗ್ಬಿಟ್ರು!

click me!