ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!

By Suchethana D  |  First Published Nov 9, 2024, 12:52 PM IST

ಬಂಧನದ ಭೀತಿ ಎದುರಿಸುತ್ತಿರುವ ನಟಿ ರಾಖಿ ಸಾವಂತ್​ ದುಬೈಗೆ ಹಾರಿದ್ದು, ಅಲ್ಲಿ ನನ್ನ ಸ್ಥಿತಿ ಭಿಕ್ಷುಕಿಯಂತೆ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. ನಟಿ ಹೇಳಿದ್ದೇನು? 
 


ಬಂಧನ ಭೀತಿ ಎದುರಿಸುತ್ತಿರುವ ಬಾಲಿವುಡ್​ ನಟಿ,  ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಭಾರತದಿಂದ ಓಡಿ ಹೋಗಿದ್ದು, ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.  ಭಾರತದಲ್ಲಿ ಕಾಣಿಸಿಕೊಂಡರೆ ಅವರಿಗೆ ಬಂಧಿಸೋ ಸಾಧ್ಯತೆ ಇದೆ ಎನ್ನೋ ಕಾರಣಕ್ಕೆ ಓಡಿಹೋಗಿದ್ದಾರೆ.  ಏಕೆಂದರೆ ಹೈಕೋರ್ಟ್​ ಆದೇಶದ ಪ್ರಕಾರ ಅವರು ಸರೆಂಡರ್​ ಆಗಬೇಕಿದೆ. ಏಕೆಂದ್ರೆ ಅವರು ಬಂಧನದ ಭೀತಿ  ಎದುರಿಸುತ್ತಿದ್ದಾರೆ.  ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.  ಪತಿ ಆದಿಲ್​ ಖಾನ್​ ದುರ್ರಾನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಂದಿದೆ.  ಆದಿಲ್ ಅವರ  ಖಾಸಗಿ ವಿಡಿಯೋವನ್ನು ರಾಖಿ ವೈರಲ್ ಮಾಡಿದ್ದರು. ಈ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ರಾಖಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಯಾವ ಕ್ಷಣದಲ್ಲಾದರೂ ರಾಖಿ ಬಂಧನಕ್ಕೆ ಒಳಗಾಗುತ್ತಾರಾ ಎಂಬ ಚರ್ಚೆಗಳು ಎದ್ದಿವೆ. ರಾಖಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

ಇದೀಗ ಮೀಡಿಯಾ ಮುಂದೆ ಬಂದು ಕಣ್ಣೀರು ಹಾಕಿರುವ ರಾಖಿ ಸಾವಂತ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್ ಸೇರಿದಂತೆ ಸ್ಟಾರ್​ ನಟರು ಒಂದು ಕ್ಷಣದಲ್ಲಿ ನನಗೆ ಬೇಲ್​ ಕೊಡಿಸುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಆದರೆ ನಾನು ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡುವ ಸ್ಥಿತಿ ಉಂಟಾಗಿದೆ. ನಾನು ಯಾರ ಸಹಾಯವೂ ಕೇಳುವುದಿಲ್ಲ. ಭಿಕ್ಷೆ ಬೇಡುವ ರೀತಿಯಲ್ಲಿ ಯಾರ ನೆರವನ್ನೂ ಪಡೆಯುವುದು ಇಷ್ಟವಿಲ್ಲ.  ಭಾರತದ ಕೋರ್ಟ್​  ಮೇಲೆ ನನಗೆ ನಂಬಿಕೆ ಇದೆ. ಏಕೆಂದರೆ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನನಗೆ ಶಿಕ್ಷೆ ಆಗುವುದಿಲ್ಲ. ಆದರೆ ಸದ್ಯದ ಸ್ಥಿತಿಯಲ್ಲಿ ಕೋರ್ಟ್​  ಆದೇಶದಿಂದಾಗಿ ಅಲೆಯುವಂತಾಗಿದೆ, ಅಕ್ಷರಶಃ ನನ್ನ ಪಾಡು ಭಿಕ್ಷುಕಿಯಂತೆ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. 

Tap to resize

Latest Videos

undefined

ಚಿತ್ರರಂಗದ ಅಪಶಕುನ ನಟಿ! 'ಪನೌತಿ' ಕುರಿತು ಓಪನ್ನಾಗಿ ಮಾತನಾಡಿದ ವಿದ್ಯಾ ಬಾಲನ್​...

ಅಷ್ಟಕ್ಕೂ, ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿಯ ವಿಷಯ ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಒಂದಾದ ಮೇಲೊಂದರಂತೆ ನಾಟಕೀಯ ಬೆಳವಣಿಗೆಗಳು ಈ ಜೋಡಿಯ ನಡುವೆ ನಡೆಯುತ್ತಲೇ ಇದೆ.  ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರುವ ನಟಿ ರಾಖಿ ಸಾವಂತ್​ (Rakhi Sawant) ಮತ್ತು ಆದಿಲ್​ ಖಾನ್​ ದುರ್ರಾನಿ ಅವರ  ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು  ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

 
ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಇದ್ದಕ್ಕಿದ್ದಂತೆಯೇ ಕಣ್ಮರೆಯಾದರು.  ಮರಾಠಿ ಬಿಗ್​ಬಾಸ್​ ಮನೆಯಲ್ಲಿಯೂ ಕಾಣಿಸಿಕೊಂಡರು. ಈ ಹಿಂದೆ ಕೂಡ  ದುಬೈನಿಂದಲೇ ಸಂದರ್ಶನ ನೀಡಿದ್ದ ನಟಿ, ನಾನು ಏನೂ ತಪ್ಪು ಮಾಡಲಿಲ್ಲ. ಮಾಡದ ತಪ್ಪಿಗೆ ಹೈಕೋರ್ಟ್​ ಸರೆಂಡರ್​ ಆಗುವಂತೆ ಹೇಳುತ್ತಿದೆ. ನಾನು ನಿರಪರಾಧಿ ಎಂದು ತಿಳಿಸುವ ಎಲ್ಲಾ ಸಾಕ್ಷ್ಯಾಧಾರಗಳೂ ನನ್ನ ಬಳಿ ಇವೆ. ಆದರೂ ಯಾಕೋ ನನ್ನನ್ನು ಸಿಲುಕಿಸುತ್ತಿದ್ದಾರೆ. ನಾನು ಮರಾಠಿ ಬಿಗ್​ಬಾಸ್​ಗೆ ಕದ್ದುಮುಚ್ಚಿ ಹೋಗಿ ಶೂಟಿಂಗ್​ ಮಾಡಿ ಮತ್ತೆ ವಾಪಸ್​ ಬರ್ತೇನೆ. ನನ್ನನ್ನು ವಿನಾಕಾರಣ ನೋಯಿಸಲಾಗುತ್ತಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದಿದ್ದರು. 
 

ಬೆದರಿಕೆ ಸಲ್ಮಾನ್​ ರಕ್ಷಣೆಗೆ 70 ಸಿಬ್ಬಂದಿ, 4 ಲೇಯರ್​ ಭದ್ರತೆ: ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

click me!