ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ; ನಟ ಸೂರ್ಯ ಶಾಕಿಂಗ್ ಹೇಳಿಕೆ!

Published : Nov 09, 2024, 12:50 PM ISTUpdated : Nov 09, 2024, 12:59 PM IST
ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ; ನಟ ಸೂರ್ಯ ಶಾಕಿಂಗ್ ಹೇಳಿಕೆ!

ಸಾರಾಂಶ

ತಮಿಳು ನಟ ಸೂರ್ಯ ಅವರು ನಿಜವಾಗಿಯೂ ಯಾಕೆ ತಮಿಳುನಾಡು ಬಿಟ್ಟು ಮುಂಬೈ ಸೇರಿಕೊಂಡಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು ಎಂಬುದು ಹಲವರಿಗೆ ಅರ್ಥವಾಗಿಲ್ಲ. ಬೇರೆಯವರು ಆ ಬಗ್ಗೆ ಊಹೆ ಮಾಡಬಹುದು, ಕಲ್ಪನೆ ಮಾಡಿಕೊಂಡು ಏನೇನೋ ಹೇಳಬಹುದು..

ತಮಿಳು ಸ್ಟಾರ್ ನಟ ಸೂರ್ಯ (Suriya) ಅವರು ಪ್ರಪಂಚದ ಬಹುತೇಕ ಕಡೆಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿರುವ ನಟ ಸೂರ್ಯ ಹಾಗೂ ಜ್ಯೋತಿಕಾ (Jyothika) ಅವರು, ಸದ್ಯ ಚೆನ್ನೈ ತೊರೆದು ಮುಂಬೈನಲ್ಲಿ ನೆಲೆಸಿದ್ದಾರೆ. ಯಾಕೆ ಈ ಕಪಲ್ಸ್‌ ಚೆನ್ನೈ ಬಿಟ್ಟು ಹೋಗಿದ್ದು? ಯಾಕೆ ಮುಂಬೈ ಸೇರಿಕೊಂಡು ಅಲ್ಲಿ ಜೀವನ ನಡೆಸುತ್ತಿರುವುದು ಎಂದು ಹಲವರು ಹುಬ್ಬೇರಿಸಿದ್ದಾರೆ. ಈ ಬಗ್ಗೆ ಹಲವರು ಟೀಕೆ ಸಹ ಮಾಡಿದ್ದಾರೆ. 

ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಈ ಕುರಿತು 'ಸ್ಟಾರ್ ನಟರಾಗಿರುವ ಸೂರ್ಯ ಅವರಿಗೆ ತಮಿಳುನಾಡು ಹಾಗೂ ಚೆನ್ನೈ ಎಲ್ಲವನ್ನೂ ಕೊಟ್ಟಿದೆ. ಆದರೆ ಅವರು ಈ ನಲೆವನ್ನೇ ಬಿಟ್ಟು ಮುಂಬೈಗೆ ಶಿಫ್ಟ್ ಆಗಿ ತಾಯ್ನೆಲಕ್ಕೇ ದ್ರೋಹವೆಸಗಿದ್ದಾರೆ' ಎಂದು ಕುಟುಕಿದ್ದಾರೆ. ಇನ್ನೂ ಕೆಲವರು ಅವರು ತಮಿಳು ಸಿನಿಮಾರಂವನ್ನೇನೂ ಬಿಟ್ಟಿಲ್ಲ. ಆದರೆ, ಮನೆಯನ್ನು ಮುಂಬೈಗೆ ಶಿಫ್ಟ್ ಮಾಡಿದ್ದಾರೆ ಅಷ್ಟೇ. ಅದರಲ್ಲೇನು ಪ್ರಾಬ್ಲಂ..?' ಎಂದು ನಟ ಸೂರ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ. 

ನನ್ನ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ, ಅಮೆರಿಕಾದಲ್ಲಿ ಸರ್ಜರಿ ಆಗಲಿದೆ: ಶಿವರಾಜ್‌ಕುಮಾರ್

ಆದರೆ, ತಮಿಳು ನಟ ಸೂರ್ಯ ಅವರು ನಿಜವಾಗಿಯೂ ಯಾಕೆ ತಮಿಳುನಾಡು ಬಿಟ್ಟು ಮುಂಬೈ ಸೇರಿಕೊಂಡಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತು ಎಂಬುದು ಹಲವರಿಗೆ ಅರ್ಥವಾಗಿಲ್ಲ. ಬೇರೆಯವರು ಆ ಬಗ್ಗೆ ಊಹೆ ಮಾಡಬಹುದು, ಕಲ್ಪನೆ ಮಾಡಿಕೊಂಡು ಏನೇನೋ ಹೇಳಬಹುದು. ಆದರೆ ಸತ್ಯ ಸಂಗತಿ ಗೊತ್ತಿರೋದು ಶಿಫ್ಟ್ ಆಗಿರುವ ಅವರಿಗೆ ಮಾತ್ರ ಅಲ್ಲವೇ? ಹೀಗಾಗಿ ಆ ಬಗ್ಗೆ ಅವರನ್ನೇ ಕೇಳುವುದು ಒಳ್ಳೆಯದು ಎಂದು ಯಾಕೆ ಹಲವರಿಗೆ ಅನ್ನಿಸಿಲ್ಲ ಎಂಬುದೇ ಯಕ್ಷಪ್ರಶ್ನೆ...!

ಆದರೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ಒಬ್ಬರು ಕೇಳಿರುವ ಪ್ರಶ್ನೆಗೆ ಸ್ವತಃ ಸ್ಟಾರ್ ನಟ ಸೂರ್ಯ ಅವರೇ ಉತ್ತರಿಸಿದ್ದಾರೆ. '25 ವರ್ಷದ ಹಿಂದೆ ಅವಳು (ಜ್ಯೋತಿಕಾ) ನನಗೋಸ್ಕರ ತನ್ನ ಕೆರಿಯರ್, ಫ್ರಂಡ್ಸ್‌ ಮತ್ತು ಸಂಬಂಧಿಕರನ್ನು ಬಿಟ್ಟು ನನಗೋಸ್ಕರ ಮುಂಬೈನಿಂದ ಚೆನ್ನೈಗೆ ಬಂದಳು. ಈಗ ನಾನು ಅವಳಿಗೋಸ್ಕರ ಚೆನ್ನೈ ಬಿಟ್ಟು ಮುಂಬೈಗೆ ಶಿಫ್ಟ್ ಆಗಿದ್ದೇನೆ...' ಎಂದಿದ್ದಾರೆ ತಮಿಳು ಸ್ಟಾರ್ ನಟ ಸೂರ್ಯ. 

ಬ್ಯಾಡ್ ನ್ಯೂಸ್, ರಾಮ್‌ಚರಣ್ ಜೊತೆಗಿನ ಸಿನಿಮಾ ಮುಂದಕ್ಕೆ ಹಾಕಿದ ಶಿವರಾಜ್‌ಕುಮಾರ್!

ಅಲ್ಲಿಗೆ, ನಟ ಸೂರ್ಯ ಅವರು ತಮ್ಮ ಪತ್ನಿ ಜ್ಯೋತಿಕಾ ಆಸೆಯಂತೆ ಚೆನ್ನೈ ಬಿಟ್ಟು ಮುಂಬೈಗೆ ತಮ್ಮ ವಾಸ ಬದಲಿಸಿದ್ದಾರೆ ಎಂಬುದು ಖಾತ್ರಿ ಆದಂತಾಯಿತು. ಇನ್ನಾದರೂ ಏನೇನೋ ಊಹಿಸಿ ಮಾತನಾಡುವ ಬಾಯಿಗಳು ಬಂದ್ ಆದರೆ ಒಳ್ಳೆಯದು ಅಂತಿದಾರೆ ನಟ ಸೂರ್ಯ ಹಾಗು ಜ್ಯೋತಿಕಾ ಫ್ಯಾನ್ಸ್‌! ಅದೇನೇ ಇರಲಿ, ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಅವರದು ಲವ್ ಮ್ಯಾರೇಜ್ ಎಂಬುದು ಹಲವರಿಗೆ ಗೊತ್ತು. ಕುಟುಂಬದ ಆಕ್ಷೇಪವನ್ನು ಬಿದಿಗಿಟ್ಟು ಅವರಿಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಈಗ ಎರಡು ಮಕ್ಕಳ ಅಪ್ಪ-ಅಮ್ಮ ಆಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?