
ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ(Rajamouli) ಸಾರಥ್ಯದಲ್ಲಿ ಮೂಡಿಬಂದ ಆರ್ ಆರ್ ಆರ್(RRR) ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈ ವರ್ಷದ ಆರಂಭದಲ್ಲಿ ಬಂದ ಆರ್ ಆರ್ ಆರ್ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಜೂ.ಎನ್ ಟಿ ಆರ್(Jr. NTR) ಮತ್ತು ರಾಮ್ ಚರಣ್(Ram Charan) ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗು ಪ್ರೇಕ್ಷಕರು ಮಾತ್ರವಲ್ಲದೇ ಎಲ್ಲಾ ಭಾಷೆಯ ಅಭಿಮಾನಿಗಳು ಸಹ ಆರ್ ಆರ್ ಆರ್ ಸಿನಿಮಾವನ್ನು ಹಾಡಿ ಹೊಗಳಿ ಅಪ್ಪಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿರುವ ಆರ್ ಆರ್ ಆರ್ ಸದ್ಯ ಒಟಿಟಿಯಲ್ಲೂ(OTT) ಲಭ್ಯವಿದೆ. ಮೇ 20ರಿಂದ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭ ಮಾಡಿದೆ.
ಒಟಿಟಿ ಮೂಲಕ ಆರ್ ಆರ್ ಆರ್ ವಿಶ್ವದ ಮತ್ತಷ್ಟು ಪ್ರೇಕ್ಷಕರನ್ನು ತಲುಪಿದೆ. ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಆರ್ ಆರ್ ಆರ್ ಸಿನಿಮಾ ಕೂಡ ಇದೆ. ಅಂದಹಾಗೆ ಈ ಸಿನಿಮಾ ಇಬ್ಬರು ಕ್ರಾಂತಿಕಾರಿ ಹೋರಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೊಮರಾಮ್ ಭೀಮ್ ಅವರ ಕಥೆಯಾಗಿದೆ. ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಕೊಮರಾಮ್ ಭೀಮ್ ಪಾತ್ರದಲ್ಲಿ ಜೂ,ಎನ್ ಟಿ ಆರ್ ನಟಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ಸಿನಿಮಾ ಪಾಶ್ಚಿಮಾತ್ಯ ದೇಶಗಳಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಇದೀಗ ಈ ಸಿನಿಮಾದ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ.
ಟಾಲಿವುಡ್‌ನಲ್ಲಿ ಶುರು ಹೊಸ ಭಯ; ರಾಜಮೌಳಿ ಜೊತೆ ಸಿನಿಮಾ ಮಾಡಿ ಗೆದ್ದವ್ರು ಮತ್ತೆ ಕಾಣಲಿಲ್ಲ ಗೆಲುವು
ಪಾಶ್ಚಿಮಾತ್ಯ ನೆಟ್ಟಿಗರು RRR ಸಿನಿಮಾ ಸಲಿಂಗಕಾಮಿ ಪ್ರೇಮ ಕಥೆ ಎಂದು ಹೇಳುತ್ತಿದ್ದಾರೆ. ಇಬ್ಬರ ಸ್ಟಾರ್ ಪಾತ್ರ ಸಲಿಂಗಕಾಮಿ ಆಕರ್ಷಣೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಆರ್ ಆರ್ ಆರ್ ಸಿನಿಮಾವನ್ನು ವೀಕ್ಷಿಸಿದ ಭಾರತೀಯರು ಯಾರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ ವಿದೇಶದ ಕೆಲವು ಭಾಗದ ಜನರು ಈ ರೀತಿಯ ವಿಶ್ಲೇಷಣೆ ಮಾಡುತ್ತಿದ್ದಾರೆ.
ಭಾರತೀಯರು ಆರ್ ಆರ್ ಆರ್ ಸಿನಿಮಾವನ್ನು ಇಬ್ಬರು ಕ್ರಾಂತಿಕಾರಿ ಸ್ನೇಹಿತರ ಕುರಿತಾದ ಸಿನಿಮಾ ಎಂದು ವೀಕ್ಷಿಸಿದ್ದಾರೆ. ಹಾಗಾಗಿ ಭಾರತೀಯರಿಗೆ ಪಾಶ್ಚಿಮಾತ್ಯರ ಹೇಳಿಕೆ ಅಚ್ಚರಿ ಮೂಡಿಸಿದೆ. ಈ ಸಿನಿಮಾದಲ್ಲಿ ಸಲಿಂಗಕಾಮದ ಬಗ್ಗೆ ನಿರ್ದೇಶಕ ರಾಜಮೌಳಿ ಉಲ್ಲೇಖ ಮಾಡಿಲ್ಲ, ತಪ್ಪಾಗಿ ಅರ್ಥೈಸಲಾಗಿದೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
21 ವರ್ಷಗಳ ಕೆರಿಯರ್‌ನಲ್ಲಿ Rajamouli ಅವರು ಒಂದೇ ಒಂದು ಸಿನಿಮಾ ಫ್ಲಾಪ್ ಆಗಲಿಲ್ಲ!
ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರ್ ಆರ್ ಆರ್ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಕ್ಸಸ್ ಎಂಜಾಯ್ ಮಾಡುತ್ತಿದೆ. ಅಲ್ಲದೆ ಸ್ಟಾರ್ ನಟರು ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.