ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು; ಚೇತನಾ ಸಾವಿಗೆ ಕಾರಣ ವೈದ್ಯನ ವಿರುದ್ಧ ರಾಖಿ ಗರಂ

By Suvarna NewsFirst Published May 19, 2022, 4:35 PM IST
Highlights

ಚೇತನಾ ರಾಜ್‌ ಜೀವನ ತೆಗೆದುಕೊಂಡು ಸರ್ಜರಿ ಯಾವುದು ನನಗೆ ಗೊತ್ತಾಗಬೇಕು ಎಂದ ಬಾಲಿವುಡ್ ನಟಿ.

ಗೀತಾ (Geetha), ದೊರೆಸಾನಿ, ರಾಮಚಾರಿ (Ramachari) ಸೇರಿದಂತೆ ಅನೇಕ ಕನ್ನಡ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ ಚೇತನಾ ರಾಜ್‌ (Chetana Raj) ಮೇ 16ರಂದು ರಾಜಾಜಿ ನಗರದಲ್ಲಿರುವ ಪ್ರೈವೇಟ್ ಆಸ್ಪತ್ರೆಯಲ್ಲಿ ಫ್ಯಾಟ್ ಬರ್ನರ್‌ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರರಂಗದ ನಟಿಯರು ಅಕ್ಷರಶಃ ಶಾಕ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳು ಬಣ್ಣದ ಜರ್ನಿಯಲ್ಲಿ ಎದುರಿಸುವ ಬಾಡಿ ಶೇಮಿಂಗ್ ಮತ್ತು ಬ್ಯೂಟಿ ಸ್ಟಾಂಡರ್ಡ್ಸ್‌ಗಳ ಬಗ್ಗೆ ದನಿಯೆತ್ತುತ್ತಿದ್ದಾರೆ. 

ಚೇತನಾ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಬಾಲಿವುಡ್ ಕಾಂಟ್ರವರ್ಸಿ ಕಮ್ ಬೋಲ್ಡ್‌ ನಟಿ ರಾಖಿ ಸಾವಂತ್ (Rakhi Sawant) ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ 21 ವರ್ಷದ ಹುಡುಗಿ ಸರ್ಜರಿ ಮಾಡುವುದಕ್ಕೆ ಮುಂದಾದ ವೈದ್ಯರ ತಂಡದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

'21 ವರ್ಷದ ಕನ್ನಡದ ನಟಿ ಚೇತನಾ ರಾಜ್ ವಿಚಾರ ಕೇಳಿ ನನಗೆ ಶಾಕ್ ಅಗಿದೆ. ಪ್ಲಾಸ್ಟಿಕ್ ಸರ್ಜರಿಯಿಂದ ಸಾವನ್ನಪ್ಪಿದ ಸುದ್ದಿ ಕೇಳಿ ನಾನು ಇನ್ನೂ ಶಾಕ್‌ ನಲ್ಲಿದ್ದೀನಿ. ಚೇತನಾ ರಾಜ್ ಸಾವಿಗೆ ಕಾರಣವಾದ ಆಸ್ಪತ್ರೆ ಯಾವುದು ನನಗೆ ಗೊತ್ತಾಗಬೇಕು, ವೈದ್ಯರು ಯಾರು ಅಂತ ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ. ಅವಳಿಗೆ ಸರ್ಜರಿ ಮಾಡಲು ನಿಮಗೆ ಹೇಗೆ ಮನಸ್ಸು ಬಂತು ಆಕೆಯ ಜೀವ ತೆಗೆದ ಸರ್ಜರಿ ಯಾವುದು ಎಂಬುದು ಕೂಡ ನನಗೆ ಗೊತ್ತಾಗಬೇಕಿದೆ. ಅದೆಲ್ಲಾ ಬಿಡಿ ಆ ವೈದ್ಯರಿಗೆ ಡಾಕ್ಟರ್ ಡಿಗ್ರಿ ಕೊಟ್ಟಿದ್ದು ಯಾರು? ಈಗಿನ ಕಾಲದಲ್ಲಿ ಯಾರು ಬೇಕಿದ್ದರೂ ಡಾಕ್ಟರ್‌ ಆಗಬಹುದು. ಯಾರು ಬೇಕಾದರೂ ನರ್ಸ್ ಆಗಬಹುದು. ಯಾರು ಬೇಕಾದರೂ ಪ್ಲಾಸ್ಟಿಕ್ ಸರ್ಜರಿ ಮಾಡಬಹುದು' ಎಂದು ರಾಖಿ ವಿಡಿಯೋದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ನಟಿಯರ ದೇಹದ ಬಗ್ಗೆ ಟೀಕಿಸಬೇಡಿ: ಪ್ರಿಯಾಂಕಾ ಉಪೇಂದ್ರ

'ಸರಿಯಾದ ವೈದ್ಯರ ಸಂಪರ್ಕ ಬೇಕು ಅಂದ್ರೆ ನೀವು ಬಾಲಿವುಡ್‌ನಲ್ಲಿರುವ ದೊಡ್ಡ ಸ್ಟಾರ್‌ಗಳನ್ನು ಕೇಳಿ ಅಥವಾ ನನ್ನನ್ನು ಕೇಳಿ. ಯಾವ ಡಾಕ್ಟರ್‌ ಬೆಸ್ಟ್‌ ಅಂತ ನಾವು ಗೈಡ್‌ ಮಾಡುತ್ತೇವೆ. ಯಾರ್ ಯಾರೋ ಮಾತನ್ನು ಕೇಳಿ ನಂಬಿ ಆಪರೇಷನ್‌ ಥಿಯೇಟರ್‌ಗೆ ಹೋಗಬೇಡಿ. ಇದು ಖಂಡಿತ ಸರಿಯಲ್ಲ' ಎಂದು ರಾಖಿ ಹೇಳಿದ್ದಾರೆ. 

ಫ್ಯಾಟ್ ಬರ್ನರ್‌ ಸರ್ಜರಿ ಮಾಡಿಸಿಕೊಳ್ಳುವ ವೇಳೆ ಚೇತನಾಳ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ಒಂದು ಬಾರಿ ಹೃದಯಾಘಾತ ಕೂಡ ಆಗಿದೆ. ಈ ಆಸ್ಪತ್ರೆಯಲ್ಲಿ ಐಸಿಯು ಇಲ್ಲದ ಕಾರಣ ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಾರ್ಗ ಮಧ್ಯೆ ಚೇತನಾ ಪ್ರಾಣ ಕಳೆದುಕೊಂಡಿದ್ದಾಳೆ. ಆಸ್ಪತ್ರೆ ಅಂದ ಮೇಲೆ ಐಸಿಯು ಇರಬೇಕು, ಈ ರೀತಿ ಸಮಸ್ಯೆ ಆದರೆ ಚೆಕ್ ಮಾಡುವುದಕ್ಕೆ ವೈದ್ಯರು ಇರಬೇಕು ಇದು ಆಸ್ಪತ್ರೆ ನಿರ್ಲಕ್ಷ್ಯ ಕಾರಣ ಎಂದು ಚೇತನಾ ದೊಡ್ಡ ಮಾಧ್ಯಮಗಳಲ್ಲಿ ಹೇಳಿದ್ದರು. 

ಸ್ನೇಹಿತರ ಜೊತೆ ಹೋಗಿ ಫ್ಯಾಟ್ ಬರ್ನ್‌ ಸರ್ಜರಿ ಮಾಡಿಸಿಕೊಂಡ ಚೇತನಾ ಬಗ್ಗೆ ತಂದೆ ಮಾತು

ಚೇತನಾ ಘಟನೆ ಬಗ್ಗೆ ರಮ್ಯಾ ರಿಯಾಕ್ಷನ್:

‘ಚಿತ್ರರಂಗದಲ್ಲಿ ನಟಿಯರಿಗೆ ಅವಾಸ್ತವಿಕ ಬ್ಯೂಟಿ ಸ್ಟಾಂಡರ್ಡ್‌ ವಿಧಿಸಲಾಗಿದೆ. ನಟಿಯರು ಹೀಗಿದ್ರೇ ಚಂದ ಅನ್ನೋ ಮಾನದಂಡವನ್ನು ಹೇರಲಾಗುತ್ತಿದೆ. ಪಾದದಲ್ಲಿದ್ದ ಗಡ್ಡೆ ತೆಗೆಸಿದ ಬಳಿಕ ನಾನೂ ತೂಕ ಇಳಿಸಲು ಒದ್ದಾಡುತ್ತಿದ್ದೇನೆ. ಆದರೆ ಸರಿಯಾದ ಕ್ರಮದಲ್ಲಿ, ಆರೋಗ್ಯದ ದೃಷ್ಟಿಯಿಂದ ತೂಕ ಇಳಿಸುತ್ತಿದ್ದೇನೆ. ಈ ಮಾನದಂಡ ನಟರಿಗೆ ಅನ್ವಯ ಆಗೋದಿಲ್ಲ. ಅವರು 65 ವರ್ಷ ದಾಟಿದರೂ ಕೂದಲುದುರಿದ ತಲೆಗೆ ವಿಗ್‌ ಧರಿಸಿ ಹೀರೋ ಆಗಿಯೇ ನಟಿಸಬಹುದು. ಮಹಿಳೆಯರು ಕೊಂಚ ದಪ್ಪ ಆದರೂ ಅಜ್ಜಿ, ಆಂಟಿ ಅಂತೆಲ್ಲ ಕರೆಯುತ್ತಾರೆ. ಈ ಪಕ್ಷಪಾತದ ವಿರುದ್ಧ ಮಹಿಳೆಯರು ದನಿ ಎತ್ತಬೇಕು. ಮಹಿಳೆಯರು ನಾವು ನಾವಾಗಿಯೇ ಇರಬೇಕು. ನೀನು ಹೀಗಿರಬೇಕು, ಹಾಗಿರಬಾರದು ಅನ್ನೋದನ್ನು ಜಗತ್ತು ನಮಗೆ ನಿರ್ದೇಶಿಸಲು ಅವಕಾಶ ನೀಡಬಾರದು. ಈ ನಿಯಮಗಳನ್ನು ಬದಲಿಸುವ ಸಮಯ ಬಂದಿದೆ’ ಎಂದು ನಟಿ ರಮ್ಯಾ ಗುಡುಗಿದ್ದಾರೆ.

click me!