
31 ವರ್ಷದ ಸುಂದರಿ ರಾಶಿ ಖನ್ನಾ ಹಿಂದಿ ವೆಬ್ ಸೀರಿಸ್ ರುದ್ರಾ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅಜಯ್ ದೇವಗನ್‌ಗೆ ಟಫ್ ಫೈಟ್ ಕೊಟ್ಟಿರುವ ಚೆಲುವ 9 ವರ್ಷಗಳ ನಂತರ ಬಾಲಿವುಡ್ ಚಿತ್ರರಂಗಕ್ಕೆ ಯೋಧ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡು ಆನಂತರ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಭಾವನೆ, ಲಿಂಗಭೇದಭಾವ ಮತ್ತು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ.
stereotyped ಬಗ್ಗೆ ರಾಶಿ ಖನ್ನಾ ಮಾತು:
'ನಾನು ಎಂದೂ stereotyped ಆಗಿಲ್ಲ ಆಗುವುದೂ ಇಲ್ಲ ಏಕೆಂದರೆ ನಾನು ದಕ್ಷಿಣ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿರುವೆ. ಅಲ್ಲಿ ನಾಯಕಿಯರಿಗೆ ಮಾಡಲು ಏನೂ ಇರುವುದಿಲ್ಲ ಆದರೆ ಚೆನ್ನಾಗಿ ಕಾಣಿಸಬೇಕು. ತಮಿಳು ಮತ್ತು ತೆಲುಗು ಲವ್ ಸ್ಟೋರಿಗಳಲ್ಲಿ ಅಭಿನಯಿಸಿರುವೆ ನನಗೆ ಒಳ್ಳೆಯ ಕ್ಯಾರೆಕ್ಟರ್ ಕೊಟ್ಟಿದೆ. ಮಲಯಾಳಂ ಚಿತ್ರರಂಗದಲ್ಲಿ ನಟನೆಗೆ ಪ್ರಾಮುಖ್ಯತೆ ಇದೆ. ಬೆಸ್ಟ್ ವಿಚಾರ ಏನೆಂದರೆ ನಾನು ಸೌತ್ ಚಿತ್ರರಂಗದಲ್ಲಿದ್ದ stereotypನ ಬ್ರೇಕ್ ಮಾಡಿರುವೆ. ಈಗ ರುದ್ರಾ ಸೀರಿಸ್ ನಂತರ ನೀವು ಪ್ರಶ್ನೆ ಮಾಡುವಂತಿಲ್ಲ ಬಿಡಿ' ಎಂದು ರಾಖಿ ಇಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸೋಷಿಯಲ್ ಮೀಡಿಯಾ:
'ನಾನು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇರುವೆ ನನಗೆ ಈ ನೆಗೆಟಿವಿಟಿ ತೊಂದರೆ ಕೊಡುವುದಿಲ್ಲ. ನಾನು ತುಂಬಾ ಸ್ಪಿರಿಚುಯಲ್ ವ್ಯಕ್ತಿ. ಜನರು ಏನಕ್ಕೆ ಇಂಥ ಕೆಲಸ ಮಾಡುತ್ತಾರೆಂದು ಗೊತ್ತಿಲ್ಲ ಅವರು ನಿರಾಶೆಗೊಂಡರಬೇಕು. ಅವರು ನೆಗೆಟಿವ್ ಬರೆಯುವುದೇ ನಮ್ಮ ಗಮನ ಸೆಳೆಯುವುದಕ್ಕೆ. ಕಲಾವಿದರು ಅಂದ್ಮೇಲೆ ನಮಗೆ ಜನರಿಂದ ನಿಂದ, ಕೆಟ್ಟ ಕಾಮೆಂಟ್ ಎಲ್ಲಾ ಬರುತ್ತೆ ಆದರೆ ಅದು ಒಂದು ರೀತಿ ನಮಗೆ ಸಹಾಯ ಮಾಡುತ್ತದೆ. ಚಿತ್ರರಂಗಕ್ಕೆ ಕಾಲಿಟ್ಟ ಸಮಯದಿಂದಲ್ಲೂ ನನಗೆ ನನ್ನ ಲಿಮಿಟೇಷನ್ ಬಗ್ಗೆ ಗೊತ್ತು, ಪಾಸಿಟಿವ್ ಮತ್ತು ನೆಗೆಟಿವ್ ಸೈಡ್ ಬಗ್ಗೆ ಗೊತ್ತು. ಹೀಗಾಗಿ ಇವೆಲ್ಲಾ ನನಗೆ ಮ್ಯಾಟರ್ ಆಗುವುದಿಲ್ಲ' ಎಂದು ರಾಖಿ ಹೇಳಿದ್ದಾರೆ.
ಪರ್ಸನಲ್ ಲೈಫ್:
'ನನ್ನ ಪರ್ಸನಲ್ ಲೈಫ್ ಬಗ್ಗೆ ಕೇಳಿದರೆ ನಾನು ಉತ್ತರ ಕೊಡುವುದಿಲ್ಲ.ನನಗೆ ಮದ್ವೆ ಆದಾಗ ಅಥವಾ ಮಕ್ಕಳು ಆದಾಗ ನಿಮಗೆ ಗೊತ್ತಾಗುತ್ತದೆ. ನನ್ನ ಪರ್ಸನಲ್ ಲೈಫ್ ನನ್ನದು ಅದಿಕ್ಕೆ ಅದನ್ನು ಪರ್ಸನಲ್ ಎಂದು ಕರೆಯವುದು. ಬಾಲಿವುಡ್ ಮಾತ್ರವಲ್ಲ ಸೌತ್ ಚಿತ್ರರಂಗದಲ್ಲೂ ನಾನು ಹೀಗೆ ಇದ್ದೆ. ನನ್ನ ಫ್ಯಾಮಿಲಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದರೆ ಮಾತ್ರ ರಿಯಾಕ್ಟ್ ಮಾಡ್ತೀನಿ ಇಲ್ಲ ಅಂದ್ರೆ ಏನೂ ಹಂಚಿಕೊಳ್ಳುವುದಿಲ್ಲ' ಎಂದಿದ್ದಾರೆ.
ಸೌತ್ ಸಿನಿ ಜರ್ನಿ:
'ನನಗೆ ಈ ಲಿಂಗಭೇದಭಾವ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ ಆದರೆ ಚೆನ್ನಾಗಿರುವುದಕ್ಕೆ ಕೆಲವೊಂದು ಒಳ್ಳೆ ಪಾತ್ರಗಳನ್ನು ಮಿಸ್ ಮಾಡಿಕೊಂಡಿರುವೆ. ನಾವು ಮತ್ತೊಬ್ಬರಿಗೆ ಸಪೋರ್ಟ್ ಮಾಡಬೇಕು. ನನ್ನ ಜರ್ನಿ ಆರಂಭದಲ್ಲಿ ಅನೇಕ ಮಹಿಳೆಯರು ಸಾಥ್ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ನೀವು ಒಂದು ಗ್ಲಾಮರ್ ಗೊಂಬೆ ಆಗಿರಬೇಕು ಇಲ್ಲ ಗ್ರೇಟ್ ಆಕ್ಟರ್ ಆಗಿರಬೇಕು. 'ನೀವು ಈ ಪಾತ್ರಕ್ಕೆ ಸೂಟ್ ಆಗುವುದಿಲ್ಲ ತುಂಬಾನೇ ಚೆನ್ನಾಗಿದ್ದೀರಾ ನಮಗೆ ಸೂಟ್ ಆಗುವುದಿಲ್ಲ' ಎಂದು ಹೇಳಿದ್ದಾರೆ ಆಗ ನಾನು ಅವರಿಗೆ ಹೇಳಿದ್ದೀನಿ ನನ್ನ ಆಡಿಷನ್ ತೆಗೆದುಕೊಂಡು ಪ್ರತಿಭೆ ನೋಡಿ ಆನಂತರ ಗ್ಲಾಮರ್ ಬಗ್ಗೆ ಮಾತನಾಡಿದೆ ಎಂದಿರುವೆ. ಸೌತ್ ಚಿತ್ರರಂಗದಲ್ಲಿ ಜನರು ನನ್ನನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ರುದ್ರಾ ಸೀರಿಸ್ ನಂತರ ಆದರೂ ನನ್ನನ್ನು ನೋಡುವ ರೀತಿ ಬದಲಾಗಲಿ' ಎಂದು ರಾಶಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.