
ಬಾಲಿವುಡ್ (Bollywood) ಚಿತ್ರರಂಗದ ಸೂಪರ್ ಮಾಮ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಟಿ, ನಿರೂಪಕಿ ಹಾಗೂ ನಿರ್ದೇಶಕಿ ನೇಹಾ ಧೂಪಿಯಾ (Neha Dhupia) ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಟೋಬರ್ 3ರಂದು ಮುಂಬೈನ (Mumbai) ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ನೇಹಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ನೇಹಾ ಪತಿ ಅಂಗದ್ (Angad bedi) ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ' ಮೇಹರ್ (Mehr) ಈಗ ಬೇಬಿ ಟೈಟಲ್ ಅನ್ನು ಪುಟ್ಟ ತಮ್ಮನಿಗೆ ನೀಡಿದ್ದಾಳೆ. ಆ ದೇವರು ಇಂದು ನಮಗೆ ಒಂದು ಗಂಡು ಮಗುವನ್ನು ಕೊಟ್ಟು ಆಶೀರ್ವಾದ ಮಾಡಿದ್ದಾನೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಬೇಡಿ ಬಾಯ್ (Bedi Boy) ಈಗ ಬಂದಿದ್ದಾನೆ. ವಹೇಗುರು ಮೆಹರ್ ಕರೇ (Waheguru mehr kare), ನೇಹಾ ಈ ಸಮಯದಲ್ಲಿ ವಾರಿಯರ್ ಆಗಿ ನಿಂತಿದ್ದಳು. ಈಗ ನಾವು ನಾಲ್ಕು ಜನರಾದ ಕಾರಣ ಈ ಜರ್ನಿ ಇನ್ನೂ ಮೆಮೋರಬಲ್ ಮಾಡೋಣ' ಎಂದಿದ್ದಾರೆ ಅಂಗದ್.
ಕಳೆದ ಎರಡು ತಿಂಗಳ ಹಿಂದೆ ಫೋಟೋಶೂಟ್ (Photoshoot) ಮಾಡಿಸುವ ಮೂಲಕ ಹೊಸ ಕಂದಮ್ಮನ ಆಗಮನದ ಬಗ್ಗೆ ಹಂಚಿಕೊಂಡಿತ್ತು ಈ ಜೋಡಿ. ' ಶೀಘ್ರದಲ್ಲಿಯೇ ಹೊಸ ಹೋಮ್ ಪ್ರೊಡಕ್ಷನ್ (New Home Production)..ವಹೇಗುರು ಮೆಹರ್ ಕರೇ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡು,' ಎಂದು ಫೋಟೋಗಳನ್ನು ಹಂಚಿಕೊಂಡಿದ್ದರು.
ನೇಹಾ ಎರಡನೇ ಬಾರಿ ಗರ್ಭಿಣಿ (Pregnant) ಎಂಬ ವಿಚಾರ ರಿವೀಲ್ ಆಗುತ್ತಿದ್ದಂತೆ, ಬಾಲಿವುಡ್ ಸ್ನೇಹಿತರೆಲ್ಲಾ ಆರಂಭದಿಂದಲೇ ಪ್ಯಾಂಪರ್ (Pamper) ಮಾಡಲು ಆರಂಭಿಸಿದ್ದರು. ಅಲ್ಲದೇ ನೇಹಾ ಪತಿ ಜೊತೆ ಸೇರಿಕೊಂಡು ಸರ್ಪ್ರೈಸ್ ಬೇಬಿ ಶವರ್ (Baby shower) ಸಹ ಆಯೋಜಿಸಿದ್ದರು. ಪ್ರೆಗ್ನೆನ್ಸಿ ರಿವೀಲ್ ಮಾಡಿದ ನಂತರ ನೇಹಾ ಎಲ್ಲೆಡೆ ಓಡಾಡಲು ಆರಂಭಿಸಿದ್ದರು, ಪ್ಯಾಪರಾಜಿಗಳಿಗೆ ( Paparazzi) ಬೇಬಿ ಬಂಪ್ ಜೊತೆ ಪೋಸ್ ಕೊಡುವುದಕ್ಕೂ ಶುರು ಮಾಡಿದ್ದರು.
40 ವರ್ಷದ ನೇಹಾ ಎರಡು ಮಗು ಆಗಿದ್ದು, ಕೆಲವರಿಗೆ ಶಾಕ್ ಆಗಿದೆ. ಇನ್ನೂ ಕೆಲವು ವಯಸ್ಸು ಮೀರಿ ಆಗಿತ್ತು ಆದರೂ ಮಗು ಆಗಿದೆ ಗ್ರೇಟ್ ಎಂದರು ಕೊಂಕಾಗಿ ಕಾಮೆಂಟ್ ಮಾಡಿದ್ದಾರೆ. 2018ರಲ್ಲಿ ನೇಹಾ ಮತ್ತು ಅಂಗದ್ ದಾಂಪತ್ಯ ಜೀವನಕ್ಕೆ (Married LIfe) ಕಾಲಿಟ್ಟರು. ತುಂಬಾ ಗೌಪ್ಯವಾಗಿ ಮದುವೆ ಕಾರ್ಯಕ್ರಮಗಳು ನಡೆದಿತ್ತು. ಹಾಗೆಯೇ ಹೆಚ್ಚಾಗಿ ಫೋಟೋಗಳನ್ನು ರಿವೀಲ್ ಮಾಡಿರಲಿಲ್ಲ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಮದುವೆ ಸಮಯದಲ್ಲಿ ನೇಹಾ ಗರ್ಭಿಣಿ ಆಗಿದ್ದರು, ಎಂದು ಕೆಲವು ತಿಂಗಳ ನಂತರ ಬಹಿರಂಗವಾಗಿತ್ತು. ಈಗಲೂ ಮೊದಲನೇ ಪುತ್ರಿ ಮಹಿರ್‌ನ ಹೆಚ್ಚಾಗಿ ಎಲ್ಲಿಯೂ ತೋರಿಸುವುದಿಲ್ಲ. ಅಪ್ಪಿತಪ್ಪಿ ಪ್ಯಾಪರಾಜಿಗಳು ಕಣ್ಣಿಗೆ ಬಿದ್ದರೂ ಕನ್ನಡಕ, ಮಾಸ್ಕ್ (Mask) ಅಥವಾ ಟೋಪಿ ಹಾಕಿ ಮುಖ ಕವರ್ ಮಾಡಿ ಬಿಡುತ್ತಾರೆ.
ನೇಹಾ ಮತ್ತು ಅಂಗದ್ ಮೊದಲು ಭೇಟಿ ಆಗಿದ್ದು ಜಿಮ್‌ನಲ್ಲಿ (Gym). ನೇಹಾ 20 ವರ್ಷದವರಾಗಿದ್ದಾಗಲೇ ಅಂಗದ್ ಹೋಗಿ ತಾಲ್ ಪರಿಚಯ ಮಾಡಿಕೊಂಡಿದ್ದಾರಂತೆ. ಆ ನಂತರ ಆಕಸ್ಮಿಕವಾಗಿ ಸ್ನೇಹಿತರ ಬರ್ತಡೇ ಪಾರ್ಟಿಯಲ್ಲಿ ಭೇಟಿ ಆಗಿದ್ದು. ಇಬ್ಬರೂ ಲೈಮ್ ಲೈಟ್‌ನಲ್ಲಿರುವ ಕಾರಣ ಕೆಲಸದ ಮೇಲೆ ಮುಂಬೈಗೆ ಬಂದರು. ಅಂಗದ್ ಮನೆ ಊಟ (Home Food) ಮಿಸ್ ಮಾಡಿಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕೆ ನೇಹಾ ಮನೆಯಲ್ಲಿ ಮಾಡಿದ ಆಹಾರ ತೆಗೆದುಕೊಂಡು ಹೊಗುತ್ತಿದ್ದರಂತೆ. ಈ ನಡುವೆ ನೇಹಾ ತಮ್ಮ ಮಾಜಿ ಪ್ರಿಯಕರನ ಜೊತೆ ಬ್ರೇಕಪ್ (Breakup) ಮಾಡಿಕೊಂಡಿದ್ದರು. ಅಂಗದ್ ಜೊತೆ ಸ್ನೇಹ ಗಟ್ಟಿಯಾಗಿ, ಪ್ರೀತಿಗೆ ತಿರುಗಿತ್ತು. ಒಟ್ಟಿನಲ್ಲಿ ಮನಯೂಟದಿಂದ ಚಿಗುರಿದ ಪ್ರೀತಿಗೆ ಈಗ ಎರಡು ಮಕ್ಕಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.