2 ನಿಮಿಷ ಮಗನೊಂದಿಗೆ ಶಾರುಖ್ ಮಾತು, ಕೊಟ್ರು ಆ ಒಂದು ಸಲಹೆ!

Published : Oct 04, 2021, 01:01 PM ISTUpdated : Oct 04, 2021, 03:13 PM IST
2 ನಿಮಿಷ ಮಗನೊಂದಿಗೆ ಶಾರುಖ್ ಮಾತು, ಕೊಟ್ರು ಆ ಒಂದು ಸಲಹೆ!

ಸಾರಾಂಶ

* ಎನ್‌ಸಿಬಿ ಬಂಧನದಲ್ಲಿ ಶಾರುಖ್ ಮಗ ಆರ್ಯನ್ * ಮಗನೊಂದಿಗೆ ಎರಡು ನಿಮಿಷ ಮಾತನಾಡಿದ ಬಾಲಿವುಡ್‌ ಬಾದ್‌ಶಾ * ಮಾತುಕತೆ ಮಧ್ಯೆ ಮಗನಿಗೆ ಕೊಟ್ಟಿದ್ದು ಅದೊಂದೇ ಸಲಹೆ

ಮುಂಬೈ(ಅ.04): ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್(Aryan Khan) ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ(Drugs party) ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಕಿಲಾ ಕೋರ್ಟ್‌ ಆರ್ಯನ್‌ನನ್ನು ಒಂದು ದಿನದ ಕಸ್ಟಡಿಗೆ ಕಳುಹಿಸಿದೆ. ಈ ಮಧ್ಯೆ ಶಾರುಖ್ ಖಾನ್ ತಮ್ಮ ವಕೀಲರ ಮೂಲಕ ಮಗ ಆರ್ಯನ್ ಜೊತೆ ಮಾತನಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಮಯದಲ್ಲಿ, ಶಾರುಖ್ ಆರ್ಯನ್ ಜೊತೆ 2 ನಿಮಿಷಗಳ ಕಾಲ ಮಾತನಾಡಿದದ್ದಾರೆ. ಇನ್ನು ತಂದೆಯೊಂದಿಗೆ ಮಾತನಾಡುವಾಗ ಆರ್ಯನ್ ಭಾವುಕರಾಗಿದ್ದಾರೆನ್ನಲಾಗಿದೆ. .

"

ಮಗನೊಂದಿಗಿಗೆ ಮಾತನಾಡಿದ ಶಾರುಖ್ ಖಾನ್(Shah Rukh Khan) ಆರ್ಯನ್‌ಗೆ ತಾಳ್ಮೆಯಿಂದಿರಲು ಸಲಹೆ ನೀಡಿದ್ದಾರೆ. ಭಾನುವಾರ, ಆರ್ಯನ್ ಖಾನ್ ಅವರ ವಕೀಲ ಸತೀಶ್ ಮನೆಶಿಂಡೆ ಅವರು ಸೋಮವಾರ ಸಾಮಾನ್ಯ ನ್ಯಾಯಾಲಯದಲ್ಲಿ ಆರ್ಯನ್ ಜಾಮೀನಿಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು. NCB (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ತಂಡವು ದಾಳಿ ಮಾಡುವಾಗ 8 ಜನರನ್ನು ವಶಕ್ಕೆ ಪಡೆದಿತ್ತು ಎಂಬುವುದು ಉಲ್ಲೇಖನೀಯ. ಇವರಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ವಿಚಾರಣೆಯ ನಂತರ ಬಂಧಿಸಲಾಗಿದೆ.

ಒಂದೆಡೆ ವಕೀಲ ಸತೀಶ್ ಮನ್ಶಿಂಡೆ ಆರ್ಯನ್ ಖಾನ್ ಜಾಮೀನಿಗೆ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ಆರ್ಯನ್ ಕಸ್ಟಡಿಯನ್ನು ಹೆಚ್ಚಿಸಲು ಎನ್‌ಸಿಬಿ ಕೂಡ ಮನವಿ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. NCB ಇನ್ನೂ ಆರ್ಯನ್‌ನನ್ನು ಹೆಚ್ಚು ವಿಚಾರಣೆ ಮಾಡಲು ಬಯಸುತ್ತಿದೆ. ಆರ್ಯನ್ ಖಾನ್ ಅವರ ಚಾಟ್‌ನಿಂದ ಕೆಲವು ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಎನ್‌ಸಿಬಿ ಹೇಳಿದೆ. ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಎಲ್ಲರೂ ಮೊದಲೇ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಎನ್‌ಸಿಬಿ ಹೇಳಿಕೊಂಡಿದೆ.

ಆರ್ಯನ್ ಖಾನ್ ಅವರ ವಾಟ್ಸಾಪ್ ಚಾಟ್‌ನಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆರ್ಯನ್ ಕೆಲವು ಡ್ರಗ್ ಪೆಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಮೂವರು ಆರೋಪಿಗಳು (ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ) 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಎಂಡಿಎಂಎ ಮಾತ್ರೆಗಳನ್ನು ಹೊಂದಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರ ವಿರುದ್ಧ ಸೆಕ್ಷನ್ 8 ಸಿ, 20 ಬಿ, 27, 35 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!