ಭೀಕರ ರಸ್ತೆ ಅಪಘಾತದ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಟ ಸಾಯಿ ಧರ್ಮ ತೇಜ್!

Suvarna News   | Asianet News
Published : Oct 04, 2021, 11:31 AM ISTUpdated : Oct 04, 2021, 11:37 AM IST
ಭೀಕರ ರಸ್ತೆ ಅಪಘಾತದ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಟ ಸಾಯಿ ಧರ್ಮ ತೇಜ್!

ಸಾರಾಂಶ

ಆಘಾತದ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದ ನಟ ಸಾಯಿ ಧರ್ಮ್. ಅಭಿಮಾನಿಗಳಲ್ಲಿ ಆತಂಕ ದೂರ....

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅಳಿಯ ಸಾಯಿ ಧರ್ಮ್ ತೇಜ್ (Sai Dharam Tej) ಸೆ.10ರಂದು ಭೀಕರ ರಸ್ತೆ ಅಪಘಾತದಿಂದ (Road accident) ಕೋಮಾಗೆ ಜಾರಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಕೋಮಾದಿಂದ (Coma) ಹೊರ ಬರಬೇಕು ಎಂದೆಲ್ಲಾ ಮಾತುಗಳು ಟಾಲಿವುಡ್‌ನಿಂದ ಕೇಳಿ ಬರುತ್ತಿತ್ತು. ಅಭಿಮಾನಿಗಳು ಹಾಗೂ ಸಿನಿ ಆಪ್ತರ ಆತಂಕ ದೂರ ಮಾಡಲು ಸಾಯಿ ಟ್ಟೀಟ್‌ ಮಾಡಿದ್ದಾರೆ. ಚೇತರಿಸಿಕೊಂಡಿರುವ ವಿಚಾರ ತಿಳಿದು ಅಭಿಮಾನಿಗಳು ಹಾಗೂ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. 

ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸಾಯಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.  'ನನ್ನ ಮೇಲೆ ಮತ್ತು ನನ್ನ ರಿಪಬ್ಲಿಕ್ (Republic) ಸಿನಿಮಾದ ಮೇಲೆ ನೀವೆಲ್ಲರೂ ತೋರಿಸುತ್ತಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಧನ್ಯವಾದಗಳು, ಎಂದು ಹೇಳಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ತುಂಬಾ ಚಿಕ್ಕದಾಗಿ ಬಿಡುತ್ತದೆ. ಶೀಘ್ರದಲ್ಲಿಯೇ ನಿಮ್ಮೆಲ್ಲರನ್ನೂ ನಾನೂ ನೋಡುವೆ,' ಎಂದು ಬರೆದುಕೊಂಡಿದ್ದಾರೆ. 

ಕೆಲವು ದಿನಗಳ ಹಿಂದೆ ಸಾಯಿ ಧರ್ಮ್ ತೇಜ್ ನಟನೆಯ ರಿಪಬ್ಲಿಕ್ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಐಎಎಸ್ (IAS) ಅಧಿಕಾರಿ ಪಂಜಾ ಅಭಿರಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವ ಕಟ್ಟ ಬಂಡವಾಳ ಹಾಕಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ನಟಿಸಿದ್ದಾರೆ. ರಾಹುಲ್ ರಾಮಕೃಷ್ಣ, ಜಗಪತಿ ಬಾಬು (Jagapathy Babu),ರಮ್ಯಾ ಕೃಷ್ಣ (Ramya Krishna), ಸುಬ್ಬರಾಜು ಸೇರಿದಂತೆ ಅನೇಕರನ್ನು ಪೋಷಕ ಪಾತ್ರದಲ್ಲಿ ನೋಡಬಹುದು. ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡಿರುವ ಹಾಡುಗಳು ಸೂಪರ್ ಹಿಟ್ ಆಗಿದೆ. 

ಬೈಕ್ ಅಪಘಾತ: 16 ದಿನವಾದರೂ ಕೋಮಾದಿಂದ ಹೊರ ಬಂದಿಲ್ಲ ಸಾಯಿ ಧರ್ಮ್ ತೇಜ್!

ಕಳೆದ ವರ್ಷ ಸಾಯಿ ಧರ್ಮ್ ತೇಜ್ ನಟನೆಯ ಸೋಲೋ ಬ್ರದುಕೆ ಸೋ ಬೆಟರ್ (Solo Brathuke So Better) ಸಿನಿಮಾ ರಿಲೀಸ್ ಆಗಿತ್ತು. ಆದರೆ ಒಂದು ವಾರವೂ ಚಿತ್ರಮಂದಿಗಳಲ್ಲಿ ಉಳಿಯಲಿಲ್ಲ. ಈಗ ರಿಪಬ್ಲಿಕ್ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವುದು ಸಾಯಿ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ನೀಡಲಿ ಎನ್ನಬಹುದು. 

ಸಾಯಿ ತೇಜ್  ಆರೋಗ್ಯದ ಬಗ್ಗೆ ಆಘಾತಕಾರಿ ಮಾಹಿತಿ  ಕೊಟ್ಟ ಪವನ್ ಕಲ್ಯಾಣ್

ಆಸ್ಪತ್ರೆ ಬಟ್ಟೆಯಲ್ಲಿ Thumbs up ತೋರಿಸಿರುವ ಸಾಯಿ ಧರ್ಮ ತೇಜ್‌ ಅವರೇ ಮುಖ ತೋರಿಸಿ , ಆರೋಗ್ಯ ಹೇಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಅವರ ಅಪ್ಪಟ ಫ್ಯಾನ್ ಪೇಜ್‌ಗಳು ಶೀಘ್ರದಲ್ಲಿಯೇ ನಟನೊಂದಿಗೆ ಲೈವ್ ಬರುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಸಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಅನ್ನೋದೆ ಎಲ್ಲರಿಗೂ ಖುಷಿ.

ಮೆಗಾಸ್ಟಾರ್‌ ಕುಟುಂಬದ ಸಾಯಿಧರ್ಮ ತೇಜ ನಟನೆಯ ‘ರಿಪಬ್ಲಿಕ್‌’ ಸಿನಿಮಾ ಅಕ್ಟೋಬರ್‌ 1ರಂದು ತೆರೆಗೆ ಬಂದಿದೆ. ಈ ತೆಲುಗು ಸಿನಿಮಾ ಕನ್ನಡಿಗ ಡಿ ಕೆ ರವಿ ಅವರನ್ನು ನೆನಪಿಸಿಕೊಂಡಿದೆ. ‘ಥಾಂಕ್ಯೂ ಕಲೆಕ್ಟರ್‌’ ಎನ್ನುವ ಸಾಲುಗಳೊಂದಿಗೆ ಈ ಚಿತ್ರವನ್ನು ಐಎಎಸ್‌ ಅಧಿಕಾರಿ ಆಗಿದ್ದ ದಿ.ಡಿ ಕೆ ರವಿ ಅವರಿಗೆ ಅರ್ಪಿಸಿದೆ ಚಿತ್ರತಂಡ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?
2025ರಲ್ಲಿ ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್ ನಟಿಯರು ಯಾರು? ಇಬ್ಬರಿಗೆ ಮೂರು ಡಿಸಾಸ್ಟರ್!