ಕುಂಕುಮ ಭಾಗ್ಯ ನಿರ್ದೇಶಕರಿಂದ ಮೂರು ಕೆಲಸ ಕಳೆದುಕೊಂಡೆ: ನಟಿ ನೈನಾ ಸಿಂಗ್

Suvarna News   | Asianet News
Published : Jan 27, 2022, 02:39 PM IST
ಕುಂಕುಮ ಭಾಗ್ಯ ನಿರ್ದೇಶಕರಿಂದ ಮೂರು ಕೆಲಸ ಕಳೆದುಕೊಂಡೆ: ನಟಿ ನೈನಾ ಸಿಂಗ್

ಸಾರಾಂಶ

 ಬಿಗ್ ಬಾಸ್‌ನಿಂದ ಹೊರ ಬಂದ ನಂತರ ನಟಿ ನೌನಾ ಸಿಂಗ್ ಕುಂಕುಮ ಭಾಗ್ಯ ನಿರ್ದೇಶಕರ ಮೇಲೆ ಆರೋಪ ಮಾಡಿದ್ದಾರೆ. ಪ್ರಾಜೆಕ್ಟ್‌ ಕಳೆದುಕೊಳ್ಳಲು ಕಾರಣವೇನು ಎಂದು ತಿಳಿಸಿದ್ದಾರೆ. 

ಹಿಂದಿ ಜನಪ್ರಿಯ ಧಾರಾವಾಹಿ ಕುಂಕುಮ ಭಾಗ್ಯದಲ್ಲಿ ನಟಿಸಿರುವ ನೈನಾ ಸಿಂಗ್ ಬಿಗ್ ಬಾಸ್ ಸೀಸನ್ 14ರಲ್ಲಿ ಕಾಣಿಸಿಕೊಂಡ ನಂತರ ಯಾವ ಪ್ರಾಜೆಕ್ಟ್‌ಗಳನ್ನೂ ಒಪ್ಪಿಕೊಂಡಿಲ್ಲ, ಎಂದು ಎಲ್ಲೆಡೆ  ಸುದ್ದಿ ಹರಿದಾಡುತ್ತಿದೆ. ಆದರೆ ಹಲವರು ನೈನಾ ಸಿಂಗ್ ಅವರನ್ನು ನಿರಾಕರಿಸುತ್ತಿಲ್ಲ. ಬದಲಿಗೆ ಈ ನಡೆ ಹಿಂದೆ ಯಾರೋ ಏನೋ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. 

ಇ-ಟೈಮ್ಸ್‌ ಜೊತೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿ ನೈನಾ ಸಿಂಗ್, ಕುಂಕುಮಾ ಭಾಗ್ಯ, ಬಿಗ್ ಬಾಸ್ ಮತ್ತು ಸ್ಪ್ಲಿಟ್ಸ್ವಿಲ್ಲಾ ಸ್ಪರ್ಧಿಗಳಾದ ಬಸೀಲ್ ಅಲಿ ಮತ್ತು ದಿವ್ಯಾ ಅಗರ್ವಾಲ್ ಬಗ್ಗೆ ಹೇಳಿದ್ದಾರೆ. ತಮ್ಮ ಜೀವನದಲ್ಲಿ ಮರೆಯಲಾಗದ ಕೆಟ್ಟ ವರ್ಷ ಅಂದ್ರೆ 2021 ಎಂದು ಹೇಳಿಕೊಂಡಿದ್ದಾರೆ. 

'ನನ್ನ ಅಭಿಪ್ರಾಯ ಹೇಳುವುದರಲ್ಲಿ ನಾನು ತುಂಬಾನೇ ಓಪನ್ ವ್ಯಕ್ತಿ ಎಂದು ಎಲ್ಲರಿಗೂ ಗೊತ್ತಿದೆ. ನಾನು ಯಾವತ್ತೂ ಹೆದರಿಕೊಂಡಿಲ್ಲ. ನಾನು ನೋಡಿಕೊಂಡು ಮಾತನಾಡಬೇಕು ಎಂದು ಜನರು ನನಗೆ ಈ ಹಿಂದೆಯೂ ಹೇಳಿದ್ದಾರೆ. ನನಗೆ ಯಾವತ್ತೂ diplomacyಯಲ್ಲಿ ಬದುಕಲು ಕಲಿತಿಲ್ಲ. ನನ್ನ ಬಾಯಿಗೆ ಬಂದಿದ್ದನ್ನು ನಾನು ಹೇಳುವೆ. ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿರುವೆ. ಆದರೀಗ ಸತ್ಯ ಬಹಿರಂಗ ಮಾಡುವ ಸಮಯ ಬಂದಿದೆ,' ಎಂದು ನೈನಾ ಅವರ ನಡೆದ ಕೆಲವು ಷಡ್ಯಂತ್ರಗಳನ್ನು ಬಹಿರಂಗಗೊಳಿಸಿದ್ದಾರೆ. 

'ನಾನು ಇದನ್ನು ಹೇಳುವುದರಿಂದ ಯಾರಿಗೂ ಏನೂ ಉಪಯೋಗವಿಲ್ಲ. ಹಾಗೇ ಏನೂ ಬದಲಾಗುವುದಿಲ್ಲ. ಆದರೆ ಇದು ನನ್ನ ವೃತ್ತಿ ಜೀವನದ ಕೊನೆಯಲ್ಲಿ ನಿಲ್ಲುವುದು ನಾವೇ. ನಾನೇ ಆಡಿಷನ್ ಕೊಡಬೇಕು, ನಾನು ಕೆಲಸ ಮಾಡಿ ಜೀವನ ಸಾಗಿಸಬೇಕು. ನಾನು ಕುಂಕುಮ ಭಾಗ್ಯ ಧಾರಾವಾಹಿ ಬಿಟ್ಟಾಗ, ಇನ್ನು ಮುಂದೆ ನನಗೆ ಯಾವುದೇ ಕೆಲಸ ಸಿಗದಂತೆ ಮಾಡುತ್ತೇನೆಂದು, ನಿರ್ದೇಶಕರು ಎಚ್ಚರಿಸಿದ್ದರು. ಹೀಗಾಗಿ ನನ್ನನ್ನು ಮೂರು ವೆಬ್‌ ಸೀರಿನ್‌ನಿಂದ ಹೊರ ಹಾಕಿದ್ದರು. ಮಾಡಿರುವ ಸೀರಿನ್‌ನಲ್ಲಿ ನನ್ನ ದೃಶ್ಯ ಡಿಲೀಟ್ ಮಾಡಿದ್ದಾರೆ. ನಾನು ತುಂಬಾ ಶ್ರಮದಿಂದ ಕೆಲಸ ಗಿಟ್ಟಿಸಿಕೊಳ್ಳುತ್ತಿರುವೆ. ಆದರೆ ಯಾರೋ ಒಬ್ಬರು ನನ್ನನ್ನು ಅಲ್ಲಿಂದ ಒದ್ದು ಹಾಕುತ್ತಿದ್ದಾರೆ. ನನಗೆ ಜೀವನ ತುಂಬಾ ಕಷ್ಟವಾಗಿದೆ. ಧಾರಾವಾಹಿಯಿಂದ ಹೊರ ಬಂದ ನಂತರ ನಾನು ಕೆಲಸ ಮಾಡೇ ಇಲ್ಲ,' ಎಂದು ನೈನಾ ನೋವು ತೋಡಿಕೊಂಡಿದ್ದಾರೆ.

Kumkum Bhagya 2K episode: ನಿರ್ಮಾಪಕಿ ಏಕ್ತಾ ಕಪೂರ್ ಸಂಭ್ರಮ!

'ಬಿಗ್ ಬಾಸ್‌ನಲ್ಲೂ ಹೀಗೆ ಆಗಿತ್ತು. ಎರಡು ವಾರಕ್ಕೆ ಎಲಿಮಿನೇಟ್ ಆಗುವಂಥ ಸ್ಪರ್ಧಿ ನಾನಾಗಿರಲಿಲ್ಲ. ನಾನು ಎರಡು ರಿಯಾಲಿಟಿ ಶೋ ಮಾಡಿರುವೆ. ಒಂದರಲ್ಲಿ ನಾನು ಗೆದ್ದಿರುವೆ. ಬಿಗ್ ಬಾಸ್‌ಗೆ ಹೋಗಿ ನನ್ನ ಜೀವನ ಇನ್ನೂ ಹಾಳಾಗಿದೆ. ಕುಂಕುಮ ಭಾಗ್ಯ ಮಾಡಿದ್ದಕ್ಕೆ ನಾನು Regret ಮಾಡುವುದಿಲ್ಲ. ಆದರೆ ಬಿಗ್ ಬಾಸ್ ಮಾಡಿ ರಿಗ್ರೆಟ್ ಮಾಡುವೆ. ನಾನು ಎಂದೂ ಬಿಗ್ ಬಾಸ್ ನೋಡಿಲ್ಲ. ಸಿದ್ಧಾರ್ತ್ ಶುಕ್ಲಾ ಇದ್ದ ದೃಶ್ಯಗಳನ್ನು ಮಾತ್ರ ನೋಡಿರುವೆ. ಕೊರೋನಾ ಸಮಯ ಬಂದಾಗ ಪ್ರಾಜೆಕ್ಟ್‌ ಒಪ್ಪಿಕೊಳ್ಳೋಣ ಎಂದು ಇದನ್ನು ಆಯ್ಕೆ ಮಾಡಿಕೊಂಡಿದ್ದು. ಮೊದಲು ನಾನು ವೈಲ್ಡ್‌ ಕಾರ್ಡ್‌ ಸ್ಪರ್ಧಿ ಎಂದು ಹೇಳಿದ್ದ.ರು ಆನಂತರ ನನ್ನನ್ನು ಮೂರು ವಾರ ಕ್ವಾರಂಟೈನ್ ಮಾಡಿದ್ದರು. ಆಮೇಲೆ ಎರಡನೇ ವಾರಕ್ಕೆ ಹೊರ ಹಾಕಿದ್ದರು. ಬಿಗ್ ಬಾಸ್ ಮನೆಗಿಂತಲೂ ಹೆಚ್ಚಿಗೆ ಕ್ವಾರಂಟೈನ್‌ನಲ್ಲಿ ಹೆಚ್ಚಿನ ಸಮಯ ಕಳೆದೆ,'  ಎಂದಿದ್ದಾರೆ ನೈನಾ. 

ಎರಡು ಜನಪ್ರಿಯ ಧಾರಾವಾಹಿಯಿಂದ ಹೊರ ಬಂದ ನಟಿ ಸುಪ್ರಿಯಾ ಶುಕ್ಲಾ!

'ಕೆಲವು ದಿನಗಳ ಹಿಂದೆ ನನ್ನ ತಾಯಿ ಕೇಳಿದ್ದರು 'ನೀನು ಅಂದುಕೊಂಡಿದ್ದನ್ನು ಮಾಡಲು ಆಗುತ್ತಾ?' ಎಂದು. 'ಈಗ ನಾನು ಪ್ಲ್ಯಾನಿಂಗ್ ಮಾಡುತ್ತಿರುವೆ. ಮುಂದೇನಾಗುತ್ತದೋ ನೋಡೋಣ,' ಎಂದು ಹೇಳಿದೆ. Splitsvilla ಸಮಯದಲ್ಲಿ ನಾನು ಮಾಡಿದ್ದ ಜಗಳಕ್ಕೆ ಸರಿಯಾದ ಕಾರಣವಿದೆ. ಬಿಗ್ ಬಾಸ್‌ನಲ್ಲಿ ಎಲ್ಲವೂ ಪ್ಲ್ಯಾನ್ ಮಾಡುತ್ತಾರೆ. ಸುಮ್ಮನೆ ಯಾರೂ ಏನೂ ಮಾಡುವುದಿಲ್ಲ. ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ನನ್ನನ್ನು ಟಿವಿಯಲ್ಲಿ ಹೆಚ್ಚಾಗಿ ತೋರಿಸಿಲ್ಲ ಎಂದು ಗೊತ್ತಾಯಿತು. ಇದಕ್ಕೆಲ್ಲಾ ಕಾರಣ ಕುಂಕುಮ ಭಾಗ್ಯ ಮೇಕರ್ಸ್‌,' ಎಂದು ನೈನಾ ಆರೋಪ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?