ಚೆನ್ನೈ(ಜ.27): ನಟ ಧನುಷ್‌ರಿಂದ ತಮ್ಮ ಪುತ್ರಿ ಐಶ್ವರ್ಯಾ(Aishwarya) ವಿವಾಹ ವಿಚ್ಛೇದನ ಪಡೆಯುವ ನಿರ್ಧಾರದಿಂದಾಗಿ ನಟಿ ರಜನೀಕಾಂತ್(Rajinikanth) ತೀವ್ರ ನೊಂದಿದ್ದಾರೆ. ಹೀಗಾಗಿ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಪುತ್ರಿ ಮತ್ತು ಅಳಿಯನ ಮನವೊಲಿಕೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಜನೀಕಾಂತ್ ಈವರೆಗೆ ಮಗಳ ಬೇರ್ಪಡಿಕೆಯ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಧನುಷ್-ಐಶ್ವರ್ಯಾ ಇಬ್ಬರ ಬೇರ್ಪಡಿಕೆಯ ಕಾರಣಗಳಿನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಧನುಷ್ ಕೆಲಸದ ಗೀಳು ಮನಸ್ತಾಪಕ್ಕೆ ಕಾರಣ ಎನ್ನಲಾಗಿತ್ತು. ಧನುಷ್ ತಂದೆ ನಿರ್ಮಾಪಕ ಕಸ್ತೂರಿರಾಜಾ ವಿಚ್ಛೇದನದ ಸುದ್ದಿಯನ್ನು ಅಲ್ಲಗಳೆದಿದ್ದರು. ಮನಸ್ತಾಪ ಬಗೆಹರಿಸಿ ಒಂದಾಗಲು ಇಬ್ಬರಿಗೂ ಸಲಹೆ ನೀಡಿದ್ದೇನೆ ಎಂದಿದ್ದರು.
ಒಂದೇ ಹೋಟೆಲ್‌ನಲ್ಲಿದ್ದಾರೆ ಧನುಷ್-ಐಶ್ವರ್ಯಾ
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರ ವಿಚ್ಚೇದನೆ ಅವರ ಎರಡೂ ಕುಟುಂಬಗಳಿಗೆ ಆಘಾತವನ್ನುಂಟು ಮಾಡಿದೆ. ದಂಪತಿಗಳು ತಮ್ಮ 18 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ರಜನಿಕಾಂತ್ ಅವರು ತಮ್ಮ ಮಗಳ ವಿಚ್ಚೇದನೆಯಿಂದ ತುಂಬಾ ಆಳವಾಗಿ ಪ್ರಭಾವಿತರಾಗಿದ್ದಾರೆ, ಅವರಿನ್ನೂ ವಾಸ್ತವಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.
undefined
ರಜನಿ ಸರ್ ತಮ್ಮ ಮಗಳ ವಿಚ್ಚೇದನೆಯಿಂದ ತುಂಬಾ ತೀವ್ರವಾಗಿ ಬಾಧಿತರಾಗಿದ್ದಾರೆ. ಈ ಬೇರ್ಪಡುವಿಕೆ ತಾತ್ಕಾಲಿಕ ಎಂದೇ ಹೇಳುತ್ತಿದ್ದಾರೆ. ಅವರು ತಮ್ಮ ಮಗಳ ವೈವಾಹಿಕ ಜೀವನ ಸರಿಪಡಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಕುಟುಂಬಗಳು ದಂಪತಿಯನ್ನು ರಾಜಿ ಮಾಡಿಕೊಳ್ಳಲು ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
'ಧನುಷ್-ಐಶ್ವರ್ಯಾಗೆ ಡಿವೋರ್ಸ್ ಆಗಿಲ್ಲ, ಗಂಡ-ಹೆಂಡ್ತಿ ಜಗಳ ಅಷ್ಟೆ'
ಸದ್ಯ ಧನುಷ್ ಐಶ್ವರ್ಯಾ ಇಬ್ಬರೂ ತಮ್ಮ ಕೆಲಸದ ನಿಮಿತ್ತ ಹೈದರಾಬಾದಿನಲ್ಲಿ ಒಂದೇ ಹೊಟೇಲಿನಲ್ಲಿ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಧನುಷ್ ತಮ್ಮ ಚಿತ್ರದ ಶೂಟಿಂಗ್ ನಡೆಸುತ್ತಿದ್ದರೆ, ಐಶ್ವರ್ಯಾ ಪ್ರೇಮಿಗಳ ದಿನಕ್ಕಾಗಿ ಮ್ಯೂಸಿಕ್ ವಿಡಿಯೋವನ್ನು ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.
ದಂಪತಿಗಳ ನಡುವಿನ ಜಗಳಗಳು ಸಾಮಾನ್ಯವಲ್ಲ. ಧನುಷ್ ಮತ್ತು ಐಶ್ವರ್ಯಾ ನಡುವೆ ಭಾರೀ ಭಿನ್ನಾಭಿಪ್ರಾಯವಿತ್ತು. ಆದರೆ ಹೇಗಾದರೂ ರಜನಿಕಾಂತ್ ಯಾವಾಗಲೂ ಅವರನ್ನು ಒಟ್ಟಿಗೆ ಇರಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ರಜನಿಕಾಂತ್ ಇನ್ನೂ ಮಗಳು ಅಳಿಯನ ಬೇರ್ಪಡುವಿಕೆ ಬಗ್ಗೆ ಸಾರ್ವಜನಿಕ ಹೇಳಿಕೆಯನ್ನು ನೀಡಿಲ್ಲ.
ಕೆಲವು ದಿನಗಳ ಹಿಂದೆ, ಧನುಷ್ ಅವರ ತಂದೆ ವಿಚ್ಚೇದನೆಯಾಗುವುದಿಲ್ಲ. ಇದು ಕೇವಲ ಕೌಟುಂಬಿಕ ಕಲಹ ಎಂದು ಹೇಳಿದ್ದರು. ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ. ಇದು ಕೇವಲ ಭಿನ್ನಾಭಿಪ್ರಾಯದಿಂದ ಅವರ ನಡುವೆ ಜಗಳವಾಗಿದೆ. ಹಾಗಾಗಿ ಇದು ಮಾಮೂಲಿ ಕುಟುಂಬ ಜಗಳವಾಗಿದೆ. ಪ್ರಸ್ತುತ ಇಬ್ಬರೂ ಊರಿನಿಂದ ಹೊರಗಿದ್ದಾರೆ. ಹೈದರಾಬಾದ್‌ನಲ್ಲಿದ್ದಾರೆ. ನಾನು ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದೇನೆ. ಅವರಿಗೂ ಸಲಹೆ ನೀಡಿದೆ ಎಂದಿದ್ದರು. ಆದರೆ ಯಾವುದೂ ಫಲ ನೀಡುವ ಸೂಚನೆ ಕಾಣುತ್ತಿಲ್ಲ.
ಧನುಷ್ (Dhanush) ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ದೂರದೂರವಾಗಿದ್ದಾರೆ. ರಜನೀಕಾಂತ್ (Rajinikanth) ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್ ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media) ಮೂಲಕ ತಿಳಿಸಿದ್ದಾರೆ. ದಂಪತಿಗೆ ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯ ಪೂರೈಸಿದ್ದರು.
ರಜನಿ ಮಗಳ ಜತೆಗಿನ ಬಾಂಧವ್ಯ ಅಂತ್ಯಗೊಳಿಸಿದ ಧನುಷ್
18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. . ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ವಿ. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.